• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Dragon Fruit: ಹೇಗೆಂದರೆ ಹಾಗೆ ತಿನ್ನೋದಲ್ಲ ಡ್ರ್ಯಾಗನ್ ಫ್ರೂಟ್ಸ್! ಸರಿಯಾಗಿ ತಿನ್ನುವುದು ಹೇಗೆ ತಿಳಿದುಕೊಳ್ಳಿ

Dragon Fruit: ಹೇಗೆಂದರೆ ಹಾಗೆ ತಿನ್ನೋದಲ್ಲ ಡ್ರ್ಯಾಗನ್ ಫ್ರೂಟ್ಸ್! ಸರಿಯಾಗಿ ತಿನ್ನುವುದು ಹೇಗೆ ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕರ ಆಹಾರದಲ್ಲಿ ಡ್ರ್ಯಾಗನ್ ಹಣ್ಣ ಸೇರಿಸುವುದು ಮುಖ್ಯ. ಕೆಲವರು ಡ್ರ್ಯಾಗನ್ ಹಣ್ಣಿನ ತಿರುಳನ್ನು ತೆಗೆದು ತಿನ್ನುತ್ತಾರೆ. ಕೆಲವರು ಅದನ್ನು ಕಿವಿ, ಪೈನಾಪಲ್ ಮತ್ತು ಬೆರ್ರಿ ಜೊತೆ ಸೇರಿಸಿ ಸಲಾಡ್ ರೂಪದಲ್ಲಿ ತಿನ್ನುತ್ತಾರೆ. ಹಾಗಾದ್ರೆ ಡ್ರ್ಯಾಗನ್ ಫ್ರೂಟ್ ತಿನ್ನುವ ಸರಿಯಾದ ಕ್ರಮ ಯಾವುದು?

ಮುಂದೆ ಓದಿ ...
 • Share this:

  ಚಳಿಗಾಲದಲ್ಲಿ (Winter) ಹೆಚ್ಚು ಹಣ್ಣು ಮತ್ತು ತರಕಾರಿಗಳು (Fruits And Vegetables) ಸಿಗುತ್ತವೆ. ಈ ದಿನಗಳಲ್ಲಿ ವಿವಿಧ ಹಣ್ಣುಗಳ ಸಲಾಡ್ (Salad) ಸೇವನೆಯ ಪ್ರಮಾಣವೂ ಹೆಚ್ಚು. ಹಳದಿ, ಗುಲಾಬಿ ಮತ್ತು ಕೆಂಪು ಹಾಗೂ ನೀಲಿ ಹಣ್ಣುಗಳು ಆರೋಗ್ಯ ಪ್ರಯೋಜನ (Health Benefits) ನೀಡುತ್ತವೆ. ಅದರಲ್ಲಿ ಡ್ರ್ಯಾಗನ್ ಹಣ್ಣುಗಳು (Dragon Fruits) ತುಂಬಾ ಪ್ರಯೋಜನಕಾರಿ. ಡ್ರ್ಯಾಗನ್ ಹಣ್ಣು ನೋಡಲು ಗುಲಾಬಿ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಭಾರತೀಯ ಹಣ್ಣಲ್ಲ. ಈ ಡ್ರ್ಯಾಗನ್ ಹಣ್ಣನ್ನು ಮುಖ್ಯವಾಗಿ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ವಿಯೆಟ್ನಾಂನಲ್ಲಿ ಬೆಳೆಯುತ್ತಾರೆ. ಡ್ರ್ಯಾಗನ್ ಹಣ್ಣು ನಿರ್ದಿಷ್ಟ ರೀತಿಯ ಕಳ್ಳಿಯ ಮೇಲೆ ಬೆಳೆಯಲಾಗುತ್ತದೆ.


  ಡ್ರ್ಯಾಗನ್ ಹಣ್ಣು ಮತ್ತು ಆರೋಗ್ಯ


  1990 ರ ನಂತರದಲ್ಲಿ ಭಾರತದ ಕೆಲವು ಪ್ರದೇಶಗಳಲ್ಲಿಯೂ ಇದನ್ನು ಬೆಳೆಯಲಾಗುತ್ತಿದೆ. ಇದು ಅದರ ಆರೋಗ್ಯ ಪ್ರಯೋಜನಗಳು ಮತ್ತು ವಿಶಿಷ್ಟ ರುಚಿಯಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯತೆ ಪಡೆದಿದೆ.


  ಈ ಹಣ್ಣನ್ನು ಸರಿಯಾಗಿ ತಿನ್ನುವುದು ಮುಖ್ಯ. ಡ್ರ್ಯಾಗನ್ ಹಣ್ಣು ತಿನ್ನಲು ಉತ್ತಮ ಮಾರ್ಗ ಯಾವುದು ಅಂತಾ ನೋಡೋಣ.


  ಡ್ರ್ಯಾಗನ್ ಹಣ್ಣು ತಿನ್ನುವ ಸರಿಯಾದ ಮಾರ್ಗ ಯಾವುದು?


  ಈ ಹಣ್ಣನ್ನು ಆರೋಗ್ಯಕರ ರೀತಿಯಲ್ಲಿ ಆಹಾರದಲ್ಲಿ ಸೇರಿಸಿ. ಆರೋಗ್ಯಕರ ಆಹಾರದಲ್ಲಿ ಡ್ರ್ಯಾಗನ್ ಹಣ್ಣ ಸೇರಿಸುವುದು ಮುಖ್ಯ.  ಕೆಲವರು ಡ್ರ್ಯಾಗನ್ ಹಣ್ಣಿನ ತಿರುಳನ್ನು ತೆಗೆದು ತಿನ್ನುತ್ತಾರೆ, ಕೆಲವರು ಅದನ್ನು ಕಿವಿ, ಪೈನಾಪಲ್ ಮತ್ತು ಬೆರ್ರಿ ಜೊತೆ ಸೇರಿಸಿ ಸಲಾಡ್ ರೂಪದಲ್ಲಿ ತಿನ್ನುತ್ತಾರೆ.
  ಇದನ್ನು ಸ್ಟ್ರಾಬೆರಿ ಜೊತೆಗೆ ಮಿಕ್ಸ್ ಮಾಡಿ ತಿನ್ನುವುದುಂಟು. ಇದರ ಸ್ಮೂಥಿ ಸೇವನೆ ಮಾಡಬಹುದು. ಮಕ್ಕಳು ಇದನ್ನು ಮೊಸರು ಅಥವಾ ಐಸ್ ಕ್ರೀಂ ಜೊತೆ ತಿನ್ನುತ್ತಾರೆ. ಸಲಾಡ್ ಅಥವಾ ಚಾಟ್ ರೂಪದಲ್ಲಿ ತಿನ್ನುತ್ತಾರೆ.


  ಖಾಲಿ ಹೊಟ್ಟೆಯಲ್ಲಿ ಡ್ರ್ಯಾಗನ್ ಹಣ್ಣು ತಿನ್ನಬಹುದೇ?


  ಒಂದು ವರದಿಯ ಪ್ರಕಾರ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫೈಬರ್‌ ಹಾಗೂ ಖನಿಜಗಳು ಡ್ರ್ಯಾಗನ್ ಫ್ರೂಟ್‌ನಲ್ಲಿ ಇವೆ. ಕಡಿಮೆ ಕ್ಯಾಲೋರಿ ಮತ್ತು ಜೀರೋ ಕೊಬ್ಬನ್ನು ಹೊಂದಿರುವ ಇದು ತೂಕ ನಷ್ಟಕ್ಕೂ ಸಹಕಾರಿ ಆಗಿದೆ.


  ಇದು ಉರಿಯೂತ ಗುಣಲಕ್ಷಣ ಹೊಂದಿದೆ. ಡ್ರ್ಯಾಗನ್ ಹಣ್ಣು ಪ್ರಿಬಯಾಟಿಕ್ ಫೈಬರ್ ಸಮೃದ್ಧವಾಗಿದೆ. ಇದರ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ.


  ಸಿಟ್ರಸ್ ಹಣ್ಣುಗಳಂತೆ ಆಮ್ಲ ಹೊಂದಿರುವುದಿಲ್ಲ. ಹಾಗಾಗಿ ಡ್ರ್ಯಾಗನ್ ಹಣ್ಣನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು.


  ರಾತ್ರಿ ಡ್ರ್ಯಾಗನ್ ಫ್ರೂಟ್ ತಿನ್ನಬಹುದಾ?


  ಹೆಚ್ಚಿನ ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಬೆಳಿಗ್ಗೆ. ಯಾಕಂದ್ರೆ ಪೌಷ್ಟಿಕಾಂಶ ವ್ಯವಸ್ಥೆಯು ಹಣ್ಣುಗಳಲ್ಲಿ ಇರುವ ಸಕ್ಕರೆಯನ್ನು ತ್ವರಿತವಾಗಿ ಒಡೆಯುತ್ತದೆ. ಈ ಕಡಿಮೆ ಕ್ಯಾಲೋರಿ ಹಣ್ಣನ್ನು ದೈನಂದಿನ ಉಪಹಾರದಲ್ಲಿ ಸೇರಿಸಿ. ರಾತ್ರಿ ತಿಂದರೆ ಉತ್ತಮ ನಿದ್ರೆ ಬರುತ್ತದೆ.


  ಸಾಂದರ್ಭಿಕ ಚಿತ್ರ


  ಇದು ಉರಿಯೂತದ ಗುಣಲಕ್ಷಣ ಹೊಂದಿದೆ. ಇನ್ಸುಲಿನ್ ಪ್ರತಿರೋಧ ಮತ್ತು ಕೊಬ್ಬಿನ ಪಿತ್ತಜನಕಾಂಗ ಸಮಸ್ಯೆ ಕಡಿಮೆ ಮಾಡುತ್ತದೆ. ಅತಿಯಾಗಿ ತಿಂದರೆ ಕರುಳಿನ ಆರೋಗ್ಯ ಸಮಸ್ಯೆ ಉಂಟಾಗುತ್ತೆ.


  ಡ್ರ್ಯಾಗನ್ ಹಣ್ಣನ್ನು ಮಿತವಾಗಿ ತಿನ್ನಬೇಕು. ಎರಡಕ್ಕಿಂತ ಹೆಚ್ಚು ಡ್ರ್ಯಾಗನ್ ಹಣ್ಣು ಸೇವಿಸಿದರೆ ಕರುಳಿನ ಆರೋಗ್ಯ ಹಾಳು ಮಾಡುತ್ತದೆ. ವಾಂತಿ, ಭೇದಿ ಸಮಸ್ಯೆ ಉಂಟಾಗುತ್ತದೆ. ಡ್ರ್ಯಾಗನ್ ಹಣ್ಣನ್ನು ಮಿತವಾಗಿ ಸೇವಿಸಿದರೆ ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗುತ್ತದೆ. ಚಯಾಪಚಯ ಉತ್ತಮವಾಗಿಸುತ್ತದೆ.


  ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ


  ಕೆಂಪು ಡ್ರ್ಯಾಗನ್ ಹಣ್ಣು ಪ್ರಯೋಜನಕಾರಿ


  ಕೆಂಪು ಡ್ರ್ಯಾಗನ್ ಹಣ್ಣು ವಿಟಮಿನ್ ಸಿ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ. ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮ ಮತ್ತು ಕೂದಲು ಎರಡಕ್ಕೂ ಪ್ರಯೋಜನಕಾರಿ.

  Published by:renukadariyannavar
  First published: