Coconut Water: ದಿನದ ಯಾವ ಸಮಯದಲ್ಲಿ ಎಳನೀರು ಕುಡಿದರೆ ದೇಹಕ್ಕೆ ಆರೋಗ್ಯ ಪ್ರಯೋಜನ ಸಿಗುತ್ತದೆ?

ಎಳನೀರಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇರುತ್ತವೆ. ಹಾಗಾಗಿ ಇದನ್ನು ಎಲ್ಲಾ ಸೀಸನ್ ನಲ್ಲಿ ಮತ್ತು ಕಾಯಿಲೆ ಇರುವವರು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಎಳನೀರಿನಲ್ಲಿ ನೈಸರ್ಗಿಕ ಕಿಣ್ವಗಳು ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳು ಸಮೃದ್ಧವಾಗಿವೆ. ಸರಿಯಾದ ಸಮಯದಲ್ಲಿ ತೆಂಗಿನ ನೀರನ್ನು ಸೇವಿಸುವುದು ಡಬಲ್ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿರ್ಜಲೀಕರಣ (Dehydration) ತಪ್ಪಿಸಲು ಮತ್ತು ದೇಹವನ್ನು (Body) ಹೈಡ್ರೀಕರಿಸಲು ಸಾಕಷ್ಟು ನೀರಿನಂಶ (Water) ಇರುವ ಆಹಾರ ಪದಾರ್ಥಗಳನ್ನು (Food Ingredients) ಸೇವನೆ ಮಾಡುವುದು ತುಂಬಾ ಮುಖ್ಯ. ಪ್ರತೀ ಸೀಸನ್ ನಲ್ಲೂ ದೇಹವನ್ನು ಹೈಡ್ರೀಕರಿಸುವುದು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ನಿಮ್ಮನ್ನು ಹೈಡ್ರೀಕರಿಸುವುದು ಬಹಳ ಪ್ರಮುಖವಾಗುತ್ತದೆ. ಹಾಗಾಗಿ ಅಂತಹ ಸ್ಥಿತಿಯಲ್ಲಿ ಬೇಸಿಗೆಯಲ್ಲಿ ತೆಂಗಿನ ನೀರು ಕುಡಿಯುವುದು ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಬೇಸಿಗೆಯ ಶಾಖ ಕಡಿಮೆ ಮಾಡಲು ಮತ್ತು ಶಕ್ತಿ ಹೆಚ್ಚಿಸಲು ಎಳನೀರು ಅತ್ಯಂತ ಪ್ರಮುಖ ಪದಾರ್ಥ ಹಾಗೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

    ತೆಂಗಿನ ನೀರಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇರುತ್ತವೆ. ಹಾಗಾಗಿ ಇದನ್ನು ಎಲ್ಲಾ ಸೀಸನ್ ನಲ್ಲಿ ಮತ್ತು ಕಾಯಿಲೆ ಇರುವವರು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಎಳನೀರಿನಲ್ಲಿ ನೈಸರ್ಗಿಕ ಕಿಣ್ವಗಳು ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳು ಸಮೃದ್ಧವಾಗಿವೆ. ಸರಿಯಾದ ಸಮಯದಲ್ಲಿ ತೆಂಗಿನ ನೀರನ್ನು ಸೇವಿಸುವುದು ಡಬಲ್ ಪ್ರಯೋಜನ ನೀಡುತ್ತದೆ.

    ಹಾಗಾದರೆ ಇಂದು ನಾವು ಇಲ್ಲಿ ದಿನದ ಯಾವ ಸಮಯದಲ್ಲಿ ತೆಂಗಿನ ನೀರನ್ನು ಸೇವಿಸುವುದು ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಹಕಾರಿ ಎಂದು ತಿಳಿಯೋಣ.

    ಇದನ್ನೂ ಓದಿ: ಮಧುಮೇಹಿಗಳಿಗೆ ಈ ಚಹಾ ವರದಾನವಾಗಿದೆ! ಪ್ರತಿನಿತ್ಯ ಸೇವಿಸಿ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ!

    ಎಳನೀರು ಸೇವಿಸಲು ಸರಿಯಾದ ಸಮಯ ಯಾವುದು?

    ನೀವು ಯಾವಾಗ ಬೇಕಾದರೂ ತೆಂಗಿನ ನೀರನ್ನು ಸೇವಿಸಬಹುದು. ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಕುಡಿಯಬಹುದು. ಆದರೆ ನಿರ್ದಿಷ್ಟ ಸಮಯದಲ್ಲಿ ಎಳನೀರು ಕುಡಿಯುವುದರಿಂದ ಅದರ ಪ್ರಯೋಜನ ಸಂಪೂರ್ಣವಾಗಿ ಪಡೆಯಬಹುದು.

    ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸುವುದು

    ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರನ್ನು ಸೇವಿಸುವುದರಿಂದ ಹಲವಾರು ಪ್ರಯೋಜನ ಪಡೆಯಬಹುದು. ಲಾರಿಕ್ ಆಸಿಡ್ ತೆಂಗಿನ ನೀರಿನಲ್ಲಿ ಕಂಡು ಬರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಚಯಾಪಚಯ ಹೆಚ್ಚಿಸುತ್ತದೆ. ಮತ್ತು ತೂಕ ಕಡಿಮೆ ಮಾಡುತ್ತದೆ.

    ತೆಂಗಿನ ನೀರಿನ ಸೇವನೆಯು ಗರ್ಭಿಣಿಯರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ನಿರ್ಜಲೀಕರಣ ಮತ್ತು ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತದೆ. ಜೊತೆಗೆ ಗರ್ಭಾವಸ್ಥೆಯ ಬೆಳಗಿನ ಬೇನೆ ಮತ್ತು ಎದೆಯುರಿ ಮುಂತಾದ ಸಮಸ್ಯೆ ನಿವಾರಿಸುತ್ತದೆ.

    ತಾಲೀಮು ಮೊದಲು ಮತ್ತು ನಂತರ ಎಳನೀರು ಸೇವನೆ

    ತೆಂಗಿನ ನೀರನ್ನು ಅತ್ಯುತ್ತಮ ನೈಸರ್ಗಿಕ ಪಾನೀಯ ಆಗಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಮತ್ತು ವ್ಯಾಯಾಮದ ಮೊದಲು ಎಳನೀರು ಸೇವನೆ ಮಾಡುವುದು ಶಕ್ತಿ ಹೆಚ್ಚಿಸುತ್ತದೆ. ವ್ಯಾಯಾಮದ ನಂತರ, ತೆಂಗಿನ ನೀರು ತೀವ್ರವಾದ ವ್ಯಾಯಾಮದ ನಂತರ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಮರುಸ್ಥಾಪಿಸುತ್ತದೆ.

    ತೆಂಗಿನ ನೀರನ್ನು ಕುಡಿಯುವುದು ಆಯಾಸ ಮತ್ತು ಬಳಲಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಶಕ್ತಿ ಹೆಚ್ಚಿಸುತ್ತದೆ.

    ಆಹಾರ ಸೇವಿಸುವ ಮುನ್ನ ಎಳನೀರು ಸೇವನೆ

    ಆಹಾರ ಸೇವಿಸುವ ಮುನ್ನ ತೆಂಗಿನ ನೀರು ಕುಡಿದರೆ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ತೆಂಗಿನ ನೀರನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡುತ್ತದೆ. ಆಹಾರ ಸೇವಿಸಿದ ನಂತರ ಉಂಟಾಗುವ ಉಬ್ಬುವಿಕೆ ತಪ್ಪಿಸಬಹುದು. ತೆಂಗಿನ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

    ರಾತ್ರಿ ಮಲಗುವ ಮುನ್ನ ಎಳನೀರು ಸೇವನೆ

    ತೆಂಗಿನಕಾಯಿ ನೀರು ಮನಸ್ಸನ್ನು ಶಾಂತಗೊಳಿಸುತ್ತದೆ. ಆತಂಕ ಮತ್ತು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ರಾತ್ರಿ ಮಲಗುವ ಮುನ್ನ ತೆಂಗಿನ ನೀರನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗಿರುತ್ತದೆ.

    ರಾತ್ರಿ ಮಲಗುವಾಗ ತೆಂಗಿನಕಾಯಿ ನೀರು ಕುಡಿದರೆ ಮೂತ್ರದ ಮೂಲಕ ದೇಹದ ಎಲ್ಲಾ ವಿಷಗಳು ಹೊರ ಬರುತ್ತವೆ. ಇದರಿಂದ ಮೂತ್ರನಾಳದ ಸೋಂಕು ಮತ್ತು ಕಿಡ್ನಿ ಸಂಬಂಧಿತ ಸಮಸ್ಯೆ ತಡೆಯಲು ಸಹಕಾರಿ. ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ತೆಂಗಿನ ನೀರಿನಲ್ಲಿದ್ದು, ಆರೋಗ್ಯ ನೀಡುತ್ತದೆ.

    ಇದನ್ನೂ ಓದಿ: ಮಧುಮೇಹ ಮೂತ್ರಪಿಂಡ ಕಾಯಿಲೆ ಯಾರಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ? ಇದರ ಲಕ್ಷಣಗಳು ಹೀಗಿವೆ

    ಹ್ಯಾಂಗೊವರ್‌ಗೆ ಪ್ರಯೋಜನಕಾರಿ ಚಿಕಿತ್ಸೆ ಎಳನೀರು

    ನೀವು ಹ್ಯಾಂಗೊವರ್ ತಪ್ಪಿಸಲು ಬಯಸಿದರೆ, ತೆಂಗಿನ ನೀರು ಸೇವಿಸಿ. ಆಲ್ಕೋಹಾಲ್ ಸೇವನೆ ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡುತ್ತದೆ. ಬೆಳಿಗ್ಗೆ ಎದ್ದಾಗ ತಲೆನೋವಿನ ಸಮಸ್ಯೆ ಇರುತ್ತದೆ. ತೆಂಗಿನ ನೀರು ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.
    Published by:renukadariyannavar
    First published: