ಇಂದಿನ ಕಾಲದಲ್ಲಿ ಎಲ್ಲರೂ ಧಾವಂತದ ಜೀವನವನ್ನೇ (Life) ಎದುರಿಸುತ್ತಿದ್ದಾರೆ. ಓಡೋಡಿ ಆಫೀಸಿಗೆ (Office) ಹೋಗುವುದು, ಓಡೋಡಿ ಮನೆಗೆ (Home) ಬರುವುದು, ಕೌಟುಂಬಿಕ ಜವಾಬ್ದಾರಿ (Responsibility), ಬಾಸ್ ಹೇಳುವ ಟಾರ್ಗೆಟ್ ಗಳು ಹೀಗೆ ನೂರೆಂಟು ಕೆಲಸ, ತಾಪತ್ರಯಗಳು ಜನರನ್ನು ಒತ್ತಡ ಹಾಗೂ ಆತಂಕ ಎದುರಿಸುವಂತೆ ಮಾಡುತ್ತವೆ. ಅಯ್ಯೋ .. ತಲೆ ಕೆಟ್ಟು ಹೋಗಿದೆ, ಒಂದು ಸ್ಟ್ರಾಂಗ್ ಕಾಫಿ, ಇಲ್ಲ ಟೀ (Tea) ಕೊಡು ಎಂದು ಹೇಳಿ ತಮ್ಮ ಸ್ಟ್ರೆಸ್ ನ್ನು ರಿಲೀಫ್ ಮಾಡಿಕೊಳ್ಳಲು ನೋಡುತ್ತಾರೆ. ಯಾರಲ್ಲೂ ಹೆಚ್ಚು ಹೊತ್ತು ಎಲ್ಲಿಯೋ ಸಮಯ ವ್ಯಯ ಮಾಡಲು ಸಮಯವಿಲ್ಲ. ಮಲಗುವ ಒಂದು ನಿಮಿಷ ಮೊದಲು, ನೀವು ನಿಮ್ಮ ತಲೆಯಲ್ಲಿ ಕಚೇರಿ ಕೆಲಸ ಅಥವಾ ಮೊಬೈಲ್ ನೋಡುತ್ತ ಕಳೆಯುವುದು ನಿಮಗೆ ರೂಢಿಯಾಗಿರುತ್ತದೆ.
ತಾಜಾ ಮತ್ತು ಒತ್ತಡ ಮುಕ್ತವಾಗಿರಲು ಆರೋಗ್ಯಕರ ಚಹಾ ಸೇವನೆ ಮಾಡಿ
ಇದು ನಿಮ್ಮ ಮನಸ್ಸನ್ನು ಉದ್ವಿಗ್ನಗೊಳ್ಳುವಂತೆ ಮಾಡುತ್ತದೆ. ಮತ್ತು ದಿನದ ಆರಂಭದಲ್ಲೇ ದಣಿವು ನಿಮ್ಮನ್ನು ಕಾಡುತ್ತದೆ. ಹೀಗಾಗಿ ಕೆಲವರು ಬೆಳಗ್ಗೆ ವಾಕಿಂಗ್ ಹೋಗುತ್ತಾರೆ. ಮತ್ತು ಯೋಗ ಅಥವಾ ಜಿಮ್ ಮಾಡುತ್ತಾರೆ. ಆದರೆ ಕೆಲವರಿಗೆ ಇಂತಹ ದಿನಚರಿ ಮಾಡಲು ಸಾಧ್ಯವಾಗುತ್ತಿಲ್ಲ. ಮತ್ತು ಒತ್ತಡ ಮತ್ತು ಖಿನ್ನತೆಗೆ ಬಲಿಯಾಗುತ್ತಾರೆ.
ಅಂತವರು ತಾಜಾ ಮತ್ತು ಒತ್ತಡ ಮುಕ್ತವಾಗಿರಲು ಚಹಾ ಕುಡಿಯುವುದು ಉತ್ತಮ ಮಾರ್ಗವಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಸಾವಿರಾರು ವರ್ಷಗಳಿಂದ, ಜನರು ತಮ್ಮ ಆರೋಗ್ಯ ಸುಧಾರಿಸಲು ಮತ್ತು ಆನಂದಿಸಲು ಗಿಡಮೂಲಿಕೆ ಚಹಾ ಕುಡಿಯುವುದನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ
ಒತ್ತಡ, ಆತಂಕವನ್ನು ಕಡಿಮೆ ಮಾಡಲು ಹರ್ಬಲ್ ಚಹಾ ಸಹಕಾರಿ
ಹರ್ಬಲ್ ಚಹಾ ಒತ್ತಡ, ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ ಗಿಡಮೂಲಿಕೆ ಚಹಾ ಸೇವನೆ ವಿಭಿನ್ನ ಒತ್ತಡವಿರುವ ಪ್ರತಿಯೊಬ್ಬರ ಮೇಲೆ ವಿಭಿನ್ನ ಪರಿಣಾಮ ಬೀರುತ್ತವೆ.
ಪುದೀನಾ ಚಹಾ
ಪುದೀನಾದಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ. ಚಹಾ ಅಥವಾ ಯಾವುದೇ ಆಹಾರ ಪದಾರ್ಥವಿರಲಿ ಅದಕ್ಕೆ ಪುದೀನಾ ಹಾಕಿದರೆ ತಕ್ಷಣ ಪರಿಮಳದ ಜೊತೆಗೆ ಗುಣಮಟ್ಟವೂ ಹೆಚ್ಚಾಗುತ್ತದೆ. ಪುದೀನ ಚಹಾವನ್ನು ಬಿಸಿ ನೀರಿನಲ್ಲಿ ಪುದೀನಾ ಎಲೆಗಳನ್ನು ಕುದಿಸಿ ತಯಾರಿಸಲಾಗುತ್ತದೆ.
ಪುದೀನಾ ಚಹಾ, ಲ್ಯಾವೆಂಡರ್ ಪುದೀನಾ ಚಹಾದಂತಹ ವಿವಿಧ ರೀತಿಯ ಪುದೀನ ಚಹಾ ರೆಡಿ ಮಾಡಲಾಗುತ್ತದೆ. ಸಂಶೋಧನೆಯ ಪ್ರಕಾರ, ಈ ಗಿಡಮೂಲಿಕೆ ಚಹಾ ವಿಶ್ರಾಂತಿ ಗುಣ ಹೊಂದಿದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ಕ್ಯಾಮೊಮೈಲ್ ಟೀ
ಕ್ಯಾಮೊಮೈಲ್ ಚಹಾವನ್ನು ಕ್ಯಾಮೊಮೈಲ್ ಹೂವಿನಿಂದ ತಯಾರಿಸುತ್ತಾರೆ. ಇದು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ, ಹೀಲಿಂಗ್ ಮುಂತಾದ ಹಲವು ಗುಣ ಹೊಂದಿದೆ. ಇದರಲ್ಲಿರುವ ಫ್ಲೇವನಾಯ್ಡ್ಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಅತ್ಯಂತ ಹಳೆಯ ಔಷಧೀಯ ಸಸ್ಯಗಳಲ್ಲಿ ಒಂದಾಗಿದ್ದು, ಗಾಯದ ಚಿಕಿತ್ಸೆ, ಸಂಧಿವಾತ, ಚರ್ಮ ಮತ್ತು ಖಿನ್ನತೆ ಸಮಸ್ಯೆ ನಿವಾರಿಸುತ್ತದೆ.
ಲ್ಯಾವೆಂಡರ್ ಟೀ
ಲ್ಯಾವೆಂಡರ್ ಅದರ ಪರಿಮಳದಿಂದ ಸಾಕಷ್ಟು ಫೇಮಸ್. ಇದು ಒಂದು ರೀತಿಯ ಗಿಡಮೂಲಿಕೆಯಾಗಿದೆ. ಇದು ಮಾನಸಿಕ ಒತ್ತಡ ನಿವಾರಿಸುತ್ತದೆ. ಮತ್ತು ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸಲು ಪ್ರಯೋಜನಕಾರಿ. ಇದರ ತಾಜಾ ಮತ್ತು ಒಣಗಿದ ಹೂವುಗಳ ಮೂಲಕ ಗಿಡಮೂಲಿಕೆ ಚಹಾ ತಯಾರಿಸುತ್ತಾರೆ.
ಮೋಚ
ಮೋಚಾವು ಅಮೈನೋ ಆಮ್ಲ ಹೊಂದಿದೆ. ಅದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಮತ್ತು ಒತ್ತಡಕ್ಕೆ ಪರಿಹಾರ ನೀಡುತ್ತದೆ. ಮೋಚಾ ಚಹಾ ಹೆಚ್ಚಿನ ಮಟ್ಟದ ಎಲ್-ಥೈನೈನ್ ಹೊಂದಿದೆ. ವಿಶ್ರಾಂತಿಗೆ ಸಹಕಾರಿ.
ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?
ಗುಲಾಬಿ ಚಹಾ
ಗುಲಾಬಿ ದಳದಿಂದ ಮಾಡಿದ ರೋಸ್ ಟೀ ನಿಮ್ಮ ದಿನವನ್ನು ಸಂತೋಷದಿಂದ ಕಳೆಯಲು ಸಹಕಾರಿ. ಔಷಧೀಯ ಗುಣಗಳು ಪಿರಿಯಡ್ಸ್ ಸಮಯದ ನೋವು ನಿವಾರಿಸುತ್ತದೆ. ತೂಕ ಕಡಿಮೆ ಮಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ