Vitamin D: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

ವಿಟಮಿನ್ ಡಿ ಪೋಷಕಾಂಶದ ಕೊರತೆಯು ನಿಮ್ಮ ಮೂಳೆಯ ಆರೋಗ್ಯ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ವಿಟಮಿನ್ ಡಿ ಕೊರತೆ ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆ ರಕ್ತ ಪರೀಕ್ಷೆಯ ಮೂಲಕ ಗೊತ್ತಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಟಮಿನ್ ಡಿ (Vitamin D) ವ್ಯಕ್ತಿಯ ದೇಹವು (Person Body) ಆರೋಗ್ಯವಾಗಿರಲು (Health) ಅಗತ್ಯವಿರುವ ಹಲವು ಪೋಷಕಾಂಶಗಳನ್ನು (Nutrients) ಒದಗಿಸುತ್ತದೆ. ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೊಬ್ಬಿನಲ್ಲಿ ಕರಗುವ ಪೋಷಕಾಂಶ ಆಗಿದೆ. ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಂಡಾಗ ದೇಹದಿಂದ ವಿಟಮಿನ್ ಡಿ ಉತ್ಪತ್ತಿ ಆಗುತ್ತದೆ. ಸೂರ್ಯನ ಕಿರಣಗಳು ಈ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುವ ಪ್ರಾಥಮಿಕ ಮೂಲ. ಯಾಕಂದ್ರೆ ವಿಟಮಿನ್ ಡಿ ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಇರುತ್ತೆ. ವಿಟಮಿನ್ ಡಿ ಕೊರತೆಯಿಂದ ದೇಹದಲ್ಲಿ ಉಂಟಾಗುವ ತೊಂದರೆಗಳಿವೆ.

    ವಿಟಮಿನ್ ಡಿ ಪೋಷಕಾಂಶದ ಕೊರತೆ

    ಈ ಪೋಷಕಾಂಶದ ಕೊರತೆಯು ನಿಮ್ಮ ಮೂಳೆಯ ಆರೋಗ್ಯ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ವಿಟಮಿನ್ ಡಿ ಕೊರತೆ ಅನುಭವಿಸುತ್ತಿದ್ದಾರೆ.

    ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆ ರಕ್ತ ಪರೀಕ್ಷೆಯ ಮೂಲಕ ಗೊತ್ತಾಗುತ್ತದೆ. ಆದರೆ ಈಗ ಸಂಶೋಧಕರು ನಿಮ್ಮ ನಾಲಿಗೆಯನ್ನು ಸ್ವಯಂ ಪರೀಕ್ಷೆ ಮಾಡುವ ಮೂಲಕ ವಿಟಮಿನ್ ಡಿ ಕೊರತೆ ಪತ್ತೆ ಹಚ್ಚಲು ಮತ್ತೊಂದು ಸುಲಭ ಮಾರ್ಗ ಕಂಡು ಹಿಡಿದಿದ್ದಾರೆ.

    ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

    ನಾಲಿಗೆಯಿಂದ ವಿಟಮಿನ್ ಡಿ ಕೊರತೆ ಕಂಡು ಹಿಡಿಯುವುದು ಹೇಗೆ?

    ಮೇಯೊ ಕ್ಲಿನಿಕ್ ಪ್ರಕಾರ ಜನರಲ್ಲಿ ಬಾಯಿಯಲ್ಲಿ ಸುಡುವ ಸಂವೇದನೆ ಲಕ್ಷಣಗಳು ವಿಟಮಿನ್ ಗಳು, ಖನಿಜಗಳ ಕೊರತೆಯಿಂದ ಆಗಿರಬಹುದು. ಈ ವೇಳೆ ಉಪವಾಸದ ರಕ್ತದ ಗ್ಲೂಕೋಸ್, ವಿಟಮಿನ್ ಡಿ (ಡಿ 2 ಮತ್ತು ಡಿ 3), ವಿಟಮಿನ್ ಬಿ 6, ಸತು, ವಿಟಮಿನ್ ಬಿ 1 ಮತ್ತು ಟಿಎಸ್ಎಚ್ ಅನ್ನು ಪರೀಕ್ಷಿಸಬೇಕು.

    ಈ ಸುಡುವ ನೋವು ಅಥವಾ ಬೆಚ್ಚಗಿನ ಸಂವೇದನೆಯು ಸಾಮಾನ್ಯವಾಗಿ ತುಟಿಗಳು ಅಥವಾ ನಾಲಿಗೆಯ ಮೇಲೆ ಅಥವಾ ಬಾಯಿಯಲ್ಲಿ ಹೆಚ್ಚು ವ್ಯಾಪಕವಾಗಿ ಕಂಡು ಬರುತ್ತವೆ. ಇದು ವ್ಯಕ್ತಿಯು ಮರಗಟ್ಟುವಿಕೆ, ಶುಷ್ಕತೆ ಮತ್ತು ಬಾಯಿಯಲ್ಲಿ ಅಹಿತಕರ ರುಚಿ ಅನುಭವಿಸಬಹುದು. ಏನನ್ನಾದರೂ ತಿನ್ನುವಾಗ ನೋವು ಹೆಚ್ಚಾಗುತ್ತದೆ. ಸ್ಥಿತಿಯ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

    ವಿಟಮಿನ್ ಡಿ ಕೊರತೆಯಿಂದ ಯಾವ ಬದಲಾವಣೆಗಳು ಕಂಡು ಬರುತ್ತವೆ?

    ಆಯಾಸ, ಕೂದಲು ಉದುರುವಿಕೆ, ಬೊಜ್ಜು, ಸುಡುವ ನಾಲಿಗೆ ಅಥವಾ ಬಾಯಿ, ದುರ್ಬಲ ವಿನಾಯಿತಿ, ಸ್ನಾಯು ನೋವು, ನಿಧಾನ ಗಾಯ ಗುಣವಾಗುವುದು, ಮನಸ್ಥಿತಿಯಲ್ಲಿ ಏರು ಪೇರು, ಆತಂಕ ಮತ್ತು ಖಿನ್ನತೆ, ಮೂಳೆ ನೋವು, ನಿದ್ರೆಯ ಕೊರತೆ, ಮಧುಮೇಹ, ಹೃದಯರೋಗ, ಸ್ವಯಂ ನಿರೋಧಕ ಅಸ್ವಸ್ಥತೆ.

    ವಿಟಮಿನ್ ಡಿ ಕೊರತೆಯಿಂದಾಗುವ ರೋಗಗಳು

    ಕಡಿಮೆ ರಕ್ತದ ಕ್ಯಾಲ್ಸಿಯಂ ಮಟ್ಟ ಅಂದ್ರೆ ಹೈಪೋಕಾಲ್ಸೆಮಿಯಾ, ಕಡಿಮೆ ರಕ್ತದ ಫಾಸ್ಫೇಟ್ ಮಟ್ಟ  ಅಂದ್ರೆ ಹೈಪೋಫಾಸ್ಫೇಟಿಮಿಯಾ, ರಿಕೆಟ್ಸ್ ಅಂದ್ರೆ ಬಾಲ್ಯದಲ್ಲಿ ಮೂಳೆಗಳ ಮೃದುತ್ವ, ಆಸ್ಟಿಯೋಮಲೇಶಿಯಾ ಅಂದ್ರೆ ವಯಸ್ಕರ ಮೂಳೆಗಳ ಮೃದುತ್ವ ತೊಂದರೆ ಉಂಟಾಗುತ್ತದೆ.

    ವಿಟಮಿನ್ ಡಿ ಗಾಗಿ ಎಷ್ಟು ಸೂರ್ಯನ ಬೆಳಕು ಬೇಕು?

    Webmd ಪ್ರಕಾರ ವಿಟಮಿನ್ ಡಿ ಪೂರೈಸಲು ಸೂರ್ಯನ ಬೆಳಕಿನ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದು ನಿಮ್ಮ ಚರ್ಮದ ಟೋನ್, ವಯಸ್ಸು, ಆರೋಗ್ಯ ಇತಿಹಾಸ, ಆಹಾರ ಮತ್ತು ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿದೆ.

    ಸಾಮಾನ್ಯ ಚರ್ಮದ ಬಣ್ಣ ಹೊಂದಿರುವ ಜನರಿಗೆ 5 ರಿಂದ 15 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಗಾಢವಾದ ಚರ್ಮ ಹೊಂದಿರುವ ಜನರಿಗೆ 30 ನಿಮಿಷ ಸಾಕು ಎನ್ನುತ್ತಾರೆ ತಜ್ಞರು. ಸನ್‌ಸ್ಕ್ರೀನ್ ಬಳಸಿದರೆ ಹೆಚ್ಚು ಸಮಯ ಹೊರಗೆ ಉಳಿಯಬಹುದು.

    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

    ವಿಟಮಿನ್ ಡಿ ಕೊರತೆಗೆ ಏನು ತಿನ್ನಬೇಕು?

    ಸೂರ್ಯನ ಬೆಳಕು ವಾಸ್ತವವಾಗಿ ವಿಟಮಿನ್ ಡಿ ಯ ಅತ್ಯುತ್ತಮ ಮೂಲ. ಆದರೆ ಕೆಲವು ಕಾರಣಗಳಿಂದ ನೀವು ವಿಟಮಿನ್ ಡಿ ಪೂರೈಸಲಾಗಲ್ಲ. ಆಹಾರದಲ್ಲಿ ಪಾಲಕ, ಎಲೆಕೋಸು, ಬೆಂಡೆಕಾಯಿ, ಸೋಯಾಬೀನ್, ಬಿಳಿ ಬೀನ್ಸ್, ಸಾರ್ಡೀನ್ ಮತ್ತು ಸಾಲ್ಮನ್, ಮೀನು, ಡೈರಿ ಉತ್ಪನ್ನಗಳು ಇತ್ಯಾದಿ ಸೇರಿಸುವುದು ಉತ್ತಮ.
    Published by:renukadariyannavar
    First published: