High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಯಾವ ಭಂಗಿಯಲ್ಲಿ ಮಲಗಿದರೆ ಉತ್ತಮ?

ಅಧಿಕ ರಕ್ತದೊತ್ತಡದ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿಮ್ಮ ಮಲಗುವ ಮಾದರಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಯಾವ ಭಂಗಿಯಲ್ಲಿ ಮಲಗುವುದು ಒಳ್ಳೆಯದು ಎಂದು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನಾರೋಗ್ಯಕರ (Unhealthy) ಜೀವನಶೈಲಿ (Lifestyle) ಇಟ್ಟುಕೊಂಡರೆ ಅನೇಕ ಕಾಯಿಲೆಗಳು (Disease) ಮುತ್ತಿಕೊಳ್ಳುತ್ತವೆ. ಅದರಲ್ಲಿ ಅಧಿಕ ರಕ್ತದೊತ್ತಡ (High Blood Pressure) ಸಾಮಾನ್ಯ ಕಾಯಿಲೆ ಆಗಿದೆ. ವಯಸ್ಸು 40 ದಾಟುತ್ತಿದ್ದಂತೆ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಾರೆ ಮತ್ತು ಹೋರಾಡುತ್ತಾರೆ. ಸಾಮಾನ್ಯವಾಗಿ ನಮ್ಮ ದೇಹದ ರಕ್ತದೊತ್ತಡವು ವಿವಿಧ ಚಟುವಟಿಕೆಗಳಿಂದ ದಿನವಿಡೀ ಬದಲಾಗುತ್ತಲೇ ಇರುತ್ತದೆ. ಆದರೆ ಸಾಮಾನ್ಯ ವ್ಯಕ್ತಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಏಕೆಂದರೆ ಇದು ಸಾಮಾನ್ಯ ವ್ಯಾಪ್ತಿಯಲ್ಲಿ ಕಡಿಮೆ ಆಗುತ್ತದೆ ಮತ್ತು ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿಯ ರಕ್ತದೊತ್ತಡವು 140/90 mm/Hg ಗಿಂತ ಹೆಚ್ಚಾದರೆ ಅದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

    ಅಧಿಕ ರಕ್ತದೊತ್ತಡ ಸಮಸ್ಯೆ

    ಅಧಿಕ ರಕ್ತದೊತ್ತಡ ಇದು ಹೃದ್ರೋಗಕ್ಕೆ ಮುಖ್ಯ ಕಾರಣವಾದ ಅಂಶವೆಂದು ಪರಿಗಣಿಸಲಾಗಿದೆ. ಅಧಿಕ ರಕ್ತದೊತ್ತಡದ ನಿರಂತರ ಸಮಸ್ಯೆ ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಹಾರ ಮತ್ತು ಜೀವನಶೈಲಿ ಎರಡಕ್ಕೂ ಗಮನ ಕೊಡುವುದು ಅವಶ್ಯಕ.

    ನಿದ್ರೆಯ ಕೊರತೆ ಮತ್ತು ಅಧಿಕ ರಕ್ತದೊತ್ತಡದ ನಡುವೆ ಸಂಬಂಧ

    ತಜ್ಞರ ಪ್ರಕಾರ ಅಧಿಕ ರಕ್ತದೊತ್ತಡವನ್ನು ಮೂಲದಿಂದ ಹೊರ ಹಾಕಲು ಸಾಧ್ಯವಿಲ್ಲ. ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ಅದನ್ನು ನಿಯಂತ್ರಿಸಬಹುದು. ನಿದ್ರೆಯ ಕೊರತೆ ಮತ್ತು ಅಧಿಕ ರಕ್ತದೊತ್ತಡದ ನಡುವೆ ಸಂಬಂಧವಿದೆ. ಇದು ಎಂದು ಕೆಲವೇ ಜನರಿಗೆ ತಿಳಿದಿದೆ.

    ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

    ಅಧಿಕ ರಕ್ತದೊತ್ತಡದ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿಮ್ಮ ಮಲಗುವ ಮಾದರಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಯಾವ ಭಂಗಿಯಲ್ಲಿ ಮಲಗುವುದು ಒಳ್ಳೆಯದು ಎಂದು ನೋಡೋಣ.

    ಅಧಿಕ ರಕ್ತದೊತ್ತಡ ಇರುವವರು ಯಾವ ಭಂಗಿಯಲ್ಲಿ ಮಲಗಬೇಕು?

    ಅಧಿಕ ರಕ್ತದೊತ್ತಡ ಮತ್ತು ನಿದ್ರೆಯ ನಡುವೆ ಬಲವಾದ ಲಿಂಕ್ ಇದೆ. ನಿದ್ರೆಯ ಕೊರತೆಯು ಅಧಿಕ ರಕ್ತದೊತ್ತಡ ಉಲ್ಬಣಗೊಳಿಸುತ್ತದೆ. ಒಬ್ಬ ವ್ಯಕ್ತಿಯು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿದ್ರೆಯ ಕಳಪೆ ಗುಣಮಟ್ಟವು ಅದನ್ನು ಹೆಚ್ಚಿಸುತ್ತದೆ.

    ಒತ್ತಡದ ಹಾರ್ಮೋನುಗಳನ್ನು ತೊಡೆದು ಹಾಕಲು ನಿದ್ರೆಯು ದೇಹದ ನೈಸರ್ಗಿಕ ಮಾರ್ಗವಾಗಿದೆ. ಆದರೆ ನೀವು ಸಾಕಷ್ಟು ಗುಣಮಟ್ಟದ ನಿದ್ರೆ ಮಾಡದಿದ್ದರೆ ನಿಮ್ಮ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ. ಇದು ಉರಿಯೂತ ಉಂಟು ಮಾಡುತ್ತದೆ. ಇದು ನಿಮ್ಮ ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಮತ್ತು ನಿಮ್ಮ ರಕ್ತದೊತ್ತಡ ಹೆಚ್ಚಿಸುತ್ತದೆ.

    ನಿದ್ರೆಯ ಈ ವಿಧಾನ ಅಧಿಕ ರಕ್ತದೊತ್ತಡದಲ್ಲಿ ಪ್ರಯೋಜನಕಾರಿ

    ಅಧಿಕ ರಕ್ತದೊತ್ತಡ ಇರುವವರು ಎಡಭಾಗದಲ್ಲಿ ಮಲಗಬೇಕು. ಇದು ಅವರಿಗೆ ಅತ್ಯುತ್ತಮ ಮಲಗುವ ಸ್ಥಾನವಾಗಿದೆ. ಈ ರೀತಿಯಲ್ಲಿ ಮಲಗುವುದು ರಕ್ತನಾಳಗಳ ಮೇಲಿನ ಒತ್ತಡ ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ.

    ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಇರುವವರು ಹೊಟ್ಟೆಯ ಮೇಲೆ ಮಲಗಿ

    ನಿಮ್ಮ ಹೊಟ್ಟೆಯ ಮೇಲೆ ಮಲಗುವುದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಂತಹ ಸಮಸ್ಯೆಗಳ ಪರಿಹಾರಕ್ಕೆ ಒಳ್ಳೆಯದು. ಈ ರೀತಿ ಮಲಗುವ ಅಭ್ಯಾಸವು ಬಹಳಷ್ಟು ಪ್ರಯೋಜನ ನೀಡುತ್ತದೆ.

    ಗರ್ಭಿಣಿಯರು ಎಡಬದಿಯಲ್ಲಿ ಮಲಗಿ

    ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಗರ್ಭಿಣಿಯರು ಎಡಭಾಗದಲ್ಲಿ ಮಲಗುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳೆಯುತ್ತಿರುವ ಮಗು ಆಂತರಿಕ ಅಂಗಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ರಕ್ತಪರಿಚಲನೆಯ ಸಮಸ್ಯೆ ಉಂಟು ಮಾಡಬಹುದು. ಹಾಗಾಗಿ ಎಡಭಾಗದಲ್ಲಿ ಮಲಗುವುದು ಬೆಸ್ಟ್.

    ಇದನ್ನೂ ಓದಿ: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

    ಅಧಿಕ ರಕ್ತದೊತ್ತಡದಿಂದ ಮುಕ್ತಿ ಪಡೆಯುವಲ್ಲಿ ನಿದ್ರೆ ಬಹಳ ಮುಖ್ಯವಾದ ಅಂಶವಾಗಿದೆ. ಸುಮಾರು 7-8 ಗಂಟೆಗಳ ಉತ್ತಮ ನಿದ್ರೆ ನಿಮ್ಮ ರಕ್ತದೊತ್ತಡದ ಮಟ್ಟದಲ್ಲಿ ಉತ್ತಮ ಪರಿಣಾಮ ಬೀರುತ್ತದೆ.
    Published by:renukadariyannavar
    First published: