Body Detox: ಯಾವ ಸಂಕೇತಗಳು ದೇಹವನ್ನು ಡಿಟಾಕ್ಸ್ ಮಾಡಬೇಕೆಂದು ಹೇಳುತ್ತವೆ?  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಿಂದ ವಿಷ ತೆಗೆದು ಹಾಕಲು ಸಹಾಯ ಮಾಡುವ ಯಕೃತ್ತು ಮತ್ತು ಮೂತ್ರಪಿಂಡ ಆರೋಗ್ಯವಾಗಿರಲು ಡಿಟಾಕ್ಸ್ ಮಾಡುವುದು ತುಂಬಾ ಮುಖ್ಯ. ದೇಹವು ಸಂಪೂರ್ಣವಾಗಿ ಡಿಟಾಕ್ಸ್ ಆಗುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.

  • Share this:

    ದೇಹವನ್ನು (Body) ಆಗಾಗ್ಗೆ ಡಿಟಾಕ್ಸ್ (Detox) ಮಾಡುವುದು ತುಂಬಾ ಮುಖ್ಯ. ದೇಹದಲ್ಲಿ ಸಂಗ್ರಹವಾಗುವ ವಿಷವನ್ನು (Poison) ನೈಸರ್ಗಿಕವಾಗಿ (Naturally) ತೆಗೆದು ಹಾಕುವುದು ತುಂಬಾ ಮುಖ್ಯ. ದೇಹದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಹೊರಗೆ ಹಾಕುವುದೇ ಡಿಟಾಕ್ಸ್ ಆಗಿದೆ. ಯಕೃತ್ತು (Liver), ಮೂತ್ರಪಿಂಡ, ಕರುಳು ಹಾಗೂ ದೇಹದಿಂದ ತ್ಯಾಜ್ಯ ಉತ್ಪನ್ನವನ್ನು ತೆಗೆದು ಹಾಕುವ ಕೆಲಸ ಮಾಡುತ್ತಲೇ ಇರುತ್ತವೆ. ಇದು ಪ್ರತಿದಿನ ನಿರಂತರವಾಗಿ ನಡೆಯುವ ಕೆಲಸ ಆಗಿದೆ. ಹಾಗಾದರೆ ದೇಹಕ್ಕೆ ಪ್ರತ್ಯೇಕವಾಗಿ ಡಿಟಾಕ್ಸ್ ಮಾಡುವುದು ಯಾಕೆ ಮುಖ್ಯ? ಎಂಬುದು ತುಂಬಾ ಜನರಿಗೆ (People) ಗೊತ್ತಿಲ್ಲ. ಇತ್ತೀಚಿನ ದಿನದ ಆಹಾರ ಪದ್ಧತಿ ಮತ್ತು ಜೀವನಶೈಲಿ ಮತ್ತು ವಾತಾವರಣದ ಅಂಶಗಳು ಸಾಕಷ್ಟು ಆರೋಗ್ಯ ಹಾಳು ಮಾಡುತ್ತವೆ.


    ದೇಹದ ತ್ಯಾಜ್ಯ ಹೊರಗೆ ಹಾಕುವುದು ಯಾಕೆ ಮುಖ್ಯ?


    ವ್ಯಕ್ತಿಯ ದೇಹವು ದಿನವೂ ಹಲವು ಅನಾರೋಗ್ಯಕರ ಅಂಶಗಳಿಗೆ ಒಡ್ಡಿಕೊಳ್ಳುತ್ತದೆ. ಈ ಪ್ರತಿಯೊಂದು ಅಂಶದಲ್ಲೂ ಬಹಳಷ್ಟು ರಾಸಾಯನಿಕಗಳು ಇವೆ. ಅದು ಆಹಾರ, ಉಸಿರಾಡುವ ಗಾಳಿ, ಸೌಂದರ್ಯವರ್ಧಕ ಉತ್ಪನ್ನಗಳ ಬಳಕೆ ಅಥವಾ ಯಾವುದೇ ಇತರೆ ರಾಸಾಯನಿಕ ವಸ್ತುಗಳ ಬಳಕೆ ಇರಬಹುದು.


    ಇವುಗಳಲ್ಲಿನ ಹಾನಿಕಾರಕ ವಸ್ತುಗಳು ದೇಹಕ್ಕೆ ಹಾನಿ ಮಾಡುತ್ತವೆ. ದೇಹದಿಂದ ವಿಷ ತೆಗೆದು ಹಾಕಲು ಸಹಾಯ ಮಾಡುವ ಯಕೃತ್ತು ಮತ್ತು ಮೂತ್ರಪಿಂಡ ಆರೋಗ್ಯವಾಗಿರಲು ಡಿಟಾಕ್ಸ್ ಮಾಡುವುದು ತುಂಬಾ ಮುಖ್ಯ.




    ದೇಹದ ಸಂಪೂರ್ಣ ಡಿಟಾಕ್ಸ್ ಪ್ರಯೋಜನಕಾರಿ


    ದೇಹವು ಸಂಪೂರ್ಣವಾಗಿ ಡಿಟಾಕ್ಸ್ ಆಗುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಹೆಚ್ಚಿನ ಜನರಿಗೆ ಇದು ಬೇಕಾಗಿಲ್ಲ. ದೇಹದಲ್ಲಿ ಸಂಗ್ರಹವಾದ ವಿಷ ಅಥವಾ ತ್ಯಾಜ್ಯ ಹೊರ ಹಾಕಲು ನಿರ್ವಿಶೀಕರಣ ವ್ಯವಸ್ಥೆ ಮುಖ್ಯವಾಗಿದೆ.


    ಹೆವಿ ಮೆಟಲ್ ವಿಷ ಇದ್ದಾಗ ವ್ಯಕ್ತಿಗೆ ಚೆಲೇಶನ್ ಥೆರಪಿ ಮಾಡಬೇಕಾಗುತ್ತದೆ. ಇದು ದೇಹದಿಂದ ಭಾರವಾದ ಲೋಹ ತೆಗೆದು ಹಾಕುತ್ತದೆ. ಆರೋಗ್ಯವಂತ ಜನರಿಗೆ ಸಾಮಾನ್ಯವಾಗಿ ನಿರ್ವಿಶೀಕರಣಕ್ಕೆ ಹೆಚ್ಚಿನ ಸಹಾಯ ಬೇಕಿಲ್ಲ.


    ಅದಾಗ್ಯೂ ದೇಹವು ಡಿಟಾಕ್ಸ್ ಆಗಬೇಕು ಎಂಬ ಬಗ್ಗೆ ಕೆಲವು ಸಂಕೇತಗಳನ್ನು ನೀಡುತ್ತದೆ.  ದೇಹವು ಡಿಟಾಕ್ಸ್ ಆಗದೇ ಇದ್ದರೆ ಹಲವು ಸಮಸ್ಯೆಗಳು ಉಂಟಾಗುತ್ತದೆ. ಅವುಗಳ ಬಗ್ಗೆ ನೋಡೋಣ.


    ತೂಕ ಇಳಿಕೆಯಲ್ಲಿ ತೊಂದರೆ


    ತೂಕ ಕಡಿಮೆ ಮಾಡಲು ನೀವು ತುಂಬಾ ಕಷ್ಟಪಟ್ಟರೂ ತೂಕ ಇಳಿಯದಿದ್ದರೆ ದೇಹವು ವಿಷದಿಂದ ತುಂಬಿದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಇದಕ್ಕಾಗಿ ಮೊದಲು ನಿಮ್ಮ ದೇಹದಿಂದ ವಿಷ ತೆಗೆದು ಹಾಕಬೇಕು.


    ಮತ್ತು ನಂತರ ತೂಕ ನಷ್ಟದ ಪ್ರಯಾಣ ಪ್ರಾರಂಭಿಸಬೇಕು. ಅತ್ಯಂತ ಮುಖ್ಯವಾಗಿ ದೇಹವನ್ನು ಸ್ವಚ್ಛಗೊಳಿಸಲು ಆರೋಗ್ಯಕರ ಆಹಾರ ಸೇವಿಸಿ. ಇದು ತೂಕ ಇಳಿಕೆಗೆ ಸಹಕಾರಿ.


    ಸಾಂದರ್ಭಿಕ ಚಿತ್ರ


    ಸುಸ್ತಾಗುವುದು


    ದಿನವಿಡೀ ದಣಿದಿದ್ದರೆ ಮತ್ತು ನಿಮ್ಮನ್ನು ತಾಜಾ ಆಗಿರಿಸಲು ಕೆಫೀನ್ ಅಥವಾ ಎನರ್ಜಿ ಡ್ರಿಂಕ್‌ ಬದಲು ದೇಹವನ್ನು ಡಿಟಾಕ್ಸ್ ಮಾಡಿ. ಎನರ್ಜಿ ಡ್ರಿಂಕ್ಸ್ ಕುಡಿದರೆ ಅದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಉತ್ತಮ ನಿರ್ವಿಶೀಕರಣವು ಚೈತನ್ಯ ನೀಡುತ್ತದೆ.


    ಮಲಬದ್ಧತೆ ಸಮಸ್ಯೆ


    ಮಲಬದ್ಧತೆ ಸಮಸ್ಯೆ ನಿವಾರಿಸಲು ಫೈಬರ್ ಭರಿತ ಆಹಾರ ಮತ್ತು ಸಾಕಷ್ಟು ನೀರು ಸೇವಿಸಿ. ಆದರೂ ಸಮಸ್ಯೆ ಹೋಗದಿದ್ದರೆ ದೇಹವನ್ನು ಡಿಟಾಕ್ಸ್ ಮಾಡಿ. ಕಚ್ಚಾ ತರಕಾರಿಗಳು ಮತ್ತು ಹಣ್ಣು ಸೇವಿಸಿ. ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಿ. ಆರೋಗ್ಯಕರ ಆಹಾರ ಸೇವಿಸಿ.


    ಹೊಟ್ಟೆಯುಬ್ಬರ ಸಮಸ್ಯೆ


    ಜೀರ್ಣಾಂಗ ವ್ಯವಸ್ಥೆಯು ಸಂಸ್ಕರಿಸಿದ ಆಹಾರ ಅಥವಾ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬಿನ ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯವಾಗಲ್ಲ. ಆಗ ಹೊಟ್ಟೆಯುಬ್ಬರ ಸಮಸ್ಯೆ ಸಂಭವಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆ ಆರೋಗ್ಯ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಡಿಟಾಕ್ಸ್ ಮಾಡಿದರೆ ಟಾಕ್ಸಿನ್‌ ಹೊರ ಹೋಗಿ ಕರುಳು ಆರೋಗ್ಯವಾಗುತ್ತದೆ.


    ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್


    ನಿದ್ರಾಹೀನತೆ


    ವಿಷಕಾರಿ ರಚನೆಯು ಮೆಲಟೋನಿನ್ ಮಟ್ಟ ಕಡಿಮೆ ಮಾಡುತ್ತದೆ. ಇದು ನಿದ್ರಾಹೀನತೆ ಸಮಸ್ಯೆ ಉಂಟು ಮಾಡುತ್ತದೆ. ಹಗಲು ನಿದ್ರಿಸುವುದು, ರಾತ್ರಿ ಎಚ್ಚರಗೊಳ್ಳುವುದು ಆಗುತ್ತದೆ. ಇದನ್ನು ತಪ್ಪಿಸಲು ಡಿಟಾಕ್ಸ್ ಮಾಡಿ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು