Cholesterol Sensation: ತೋಳುಗಳಲ್ಲಿ ನೋವಿನ ಅನುಭವ ಇದೆಯಾ? ಈ ಗಂಭೀರ ಸಮಸ್ಯೆ ಬಗ್ಗೆ ಎಚ್ಚರ ಇರಲಿ

ಕೊಲೆಸ್ಟ್ರಾಲ್ ರಕ್ತದಲ್ಲಿರುವ ಒಂದು ರೀತಿಯ ಮೇಣದ ವಸ್ತುವೇ ಕೊಲೆಸ್ಟ್ರಾಲ್ ಆಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎರಡು ಇವೆ. ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹಿಸುತ್ತದೆ. ಇದು ಅಪಧಮನಿಗಳ ಮೂಲಕ ರಕ್ತದ ಹರಿವಿಗೆ ತಡೆಯೊಡ್ಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದಲ್ಲಿ (Body) ಕೊಲೆಸ್ಟ್ರಾಲ್ (Cholesterol) ಪ್ರಮಾಣ (Level) ಹೆಚ್ಚಾದಾಗ ಹೃದ್ರೋಗ ಸಮಸ್ಯೆ (Heart Disease) ಎದುರಿಸಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ದೇಹದಲ್ಲಿ ಹೆಚ್ಚುವ ಕೊಲೆಸ್ಟ್ರಾಲ್ ಮಟ್ಟ ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ಹೃದಯ ಸಂಬಂಧಿ ಕಾಯಿಲೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ದೇಹದಲ್ಲಿ ಯಾವುದೇ ರೋಗ ಲಕ್ಷಣ ಗೋಚರವಾಗುವುದಿಲ್ಲ. ಹಾಗಾಗಿ ಇದನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ.

    ಅಧಿಕ ಕೊಲೆಸ್ಟ್ರಾಲ್ ಎಂದರೇನು?

    ಕೊಲೆಸ್ಟ್ರಾಲ್ ರಕ್ತದಲ್ಲಿರುವ ಒಂದು ರೀತಿಯ ಮೇಣದ ವಸ್ತುವೇ ಕೊಲೆಸ್ಟ್ರಾಲ್ ಆಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎರಡು ಇವೆ. ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹಿಸುತ್ತದೆ. ಇದರಿಂದ ನಿಮ್ಮ ಅಪಧಮನಿಗಳ ಮೂಲಕ ರಕ್ತದ ಹರಿವು ಕಷ್ಟವಾಗುತ್ತದೆ.

    ಕೊಬ್ಬು ವಿಭಜನೆಯಾದಾಗ ರಕ್ತದಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ಪತ್ತೆ ಹಚ್ಚಲು ನಿಮ್ಮ ದೇಹದಲ್ಲಿ ಕೆಲವು ಸಂವೇದನೆಗಳು ಉಂಟಾಗುತ್ತವೆ.

    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

    ಕೈ ಮತ್ತು ಕಾಲುಗಳ ರಕ್ತದ ಹರಿವು ಕಡಿಮೆ ಮಾಡುತ್ತದೆ

    ದೇಹದಲ್ಲಿ ಸಮತೋಲಿತ ಮಟ್ಟದ ಕೊಲೆಸ್ಟ್ರಾಲ್ ಕಾಪಾಡಿಕೊಳ್ಳದಿದ್ದರೆ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು. ಇದು ಕೈ ಮತ್ತು ಕಾಲುಗಳಿಗೆ ರಕ್ತದ ಹರಿವು ಕಡಿಮೆ ಮಾಡುತ್ತದೆ. ಈ ಸ್ಥಿತಿಯನ್ನು ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಎಂದು ಕರೆಯುತ್ತಾರೆ. ಇದು ನಿಮ್ಮ ಕೈ ಮತ್ತು ಕಾಲುಗಳಲ್ಲಿ ಸಾಕಷ್ಟು ನೋವುಂಟು ಮಾಡುತ್ತದೆ.

    ಮೇಯೊ ಕ್ಲಿನಿಕ್ ಪ್ರಕಾರ, ಯಾವುದೇ ಕೆಲಸ ಮಾಡುವಾಗ ನಿಮ್ಮ ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿದರೆ ಅದು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟದ ಹೆಚ್ಚಳವನ್ನು ಸೂಚಿಸುತ್ತದೆ ಎಂದಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಯಾವುದೇ ಕೆಲಸ ಮಾಡುವಾಗ ನೋವಿನ ಜೊತೆಗೆ ಸೆಳೆತದ ಸಮಸ್ಯೆ ಉಂಟಾಗುತ್ತದೆ.

    ನಿಮ್ಮ ದೇಹವು ವಿಶ್ರಾಂತಿ ಸ್ಥಿತಿಯಲ್ಲಿದ್ದಾಗಲೂ ಕೈ ಮತ್ತು ಕಾಲುಗಳಲ್ಲಿ ಸೆಳೆತ ಕಂಡು ಬರುತ್ತವೆ. ಯುಕೆ ರಾಷ್ಟ್ರೀಯ ಆರೋಗ್ಯ ಸೇವೆ ಪ್ರಕಾರ, ತುದಿಗಳಲ್ಲಿ ಸೆಳೆತ ಕೆಲವೊಮ್ಮೆ ಸೌಮ್ಯವಾಗಿರುತ್ತವೆ. ಕೆಲವೊಮ್ಮೆ ನೋವಿನಿಂದ ಕೂಡಿರುತ್ತವೆ.

    ಬಾಹ್ಯ ಅಪಧಮನಿ ಕಾಯಿಲೆ ಎಂದರೇನು?

    ಪೆರಿಫೆರಲ್ ಆರ್ಟರಿ ಕಾಯಿಲೆಯು ನಿಮ್ಮ ತಲೆ, ಅಂಗಗಳು ಮತ್ತು ಕಾಲುಗಳಿಗೆ ರಕ್ತ ಸಾಗಿಸುವ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ನಿರ್ಮಿಸುವ ಕಾಯಿಲೆಯಾಗಿದೆ. ಇದು ಸಾಮಾನ್ಯ ರಕ್ತ ಪರಿಚಲನೆಯ ಸಮಸ್ಯೆ. ಅಪಧಮನಿಗಳು ತುಂಬಾ ಹಿಗ್ಗುತ್ತವೆ. ಸರಿಯಾದ ಪ್ರಮಾಣದ ರಕ್ತ ಕಾಲು ಮತ್ತು ತೋಳುಗಳಿಗೆ ತಲುಪಲ್ಲ.

    ತೋಳುಗಳಲ್ಲಿ ನೋವಿನ ಸಂವೇದನೆ

    ಪಾದಗಳ ಮರಗಟ್ಟುವಿಕೆ ಮತ್ತು ದೌರ್ಬಲ್ಯ.

    ಕಾಲಿನ ಕೂದಲು ನಷ್ಟ

    ಕಾಲ್ಬೆರಳ ಉಗುರು ಸುಲಭವಾಗಿ ಕಟ್ ಆಗುವುದು ಮತ್ತು ನಿಧಾನವಾಗಿ ಬೆಳೆಯುವುದು

    ಪಾದಗಳು ಮತ್ತು ಅಡಿಭಾಗದಲ್ಲಿ ಹುಣ್ಣುಗಳು

    ಹಳದಿ ಅಥವಾ ನೀಲಿ ಬಣ್ಣಕ್ಕೆ ತಿರುಗುವ ಪಾದದ ಚರ್ಮ ಮತ್ತು ಬಣ್ಣದಲ್ಲಿ ಬದಲಾವಣೆ

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ಅಧಿಕ ಕೊಲೆಸ್ಟ್ರಾಲ್ ಅಪಾಯ ಹೆಚ್ಚಿಸುತ್ತವೆ

    ದೇಹದಲ್ಲಿ ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಸ್ಯಾಚುರೇಟೆಡ್ ಕೊಬ್ಬು ಪದಾರ್ಥ ಸೇವನೆ, ಸ್ಥೂಲಕಾಯ, ದೈಹಿಕ ಚಟುವಟಿಕೆ ಮಾಡದಿರುವುದು, ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ ಕೊಲೆಸ್ಟ್ರಾಲ್ ಅಪಾಯ ಹೆಚ್ಚಿಸುತ್ತದೆ.
    Published by:renukadariyannavar
    First published: