Salt: ಇಷ್ಟೊಂದು ವೈವಿಧ್ಯಮಯ ಉಪ್ಪಿನಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ಇಲ್ಲಿದೆ ತಿಳ್ಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಹಲವಾರು ಬಗೆಯ ವೈವಿಧ್ಯಮಯವಾದ ಉಪ್ಪು ಮಾರುಕಟ್ಟೆಯಲ್ಲಿ ಲಭ್ಯವಿದೆ. ಯಾವ ಬಗೆಯ ಉಪ್ಪನ್ನು ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬಂತಹ ಗೊಂದಲಗಳನ್ನು ಇದು ಗ್ರಾಹಕರಲ್ಲಿ ಉಂಟುಮಾಡುತ್ತಿರುವುದು ನಿಜ. ಆದ್ದರಿಂದ ಆರೋಗ್ಯಕ್ಕೆ ಯಾವ ಉಪ್ಪು ಸೂಕ್ತ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಈ ಲೇಖನ ಪ್ರಯೋಜನಕಾರಿಯಾಗಿರುವುದು ಖಂಡಿತ.

ವೈವಿಧ್ಯಮಯವಾದ ಉಪ್ಪು

ವೈವಿಧ್ಯಮಯವಾದ ಉಪ್ಪು

  • Share this:
ಉಪ್ಪಿಗಿಂತ ರುಚಿ ಬೇರೆ ಇಲ್ಲ ತಾಯಿಗಿಂತ ಬೇರೆ ಬಂಧುವಿಲ್ಲ ಎಂಬ ಮಾತಿನಂತೆಯೇ ಉಪ್ಪಿಲ್ಲದ (Taste) ಖಾದ್ಯ ವ್ಯರ್ಥವಾಗಿರುತ್ತದೆ. ಹಾಗೆಯೇ ಪ್ರತಿ ಭಕ್ಷ್ಯದಲ್ಲಿಯೂ ಉಪ್ಪಿನ ಸ್ಥಾನವನ್ನು ವರ್ಣಿಸಲೂ ಸಾಧ್ಯವಿಲ್ಲ. ರುಚಿ (Taste) ಸೇರಿಸುವ ಸಾಮರ್ಥ್ಯ ಹೊಂದಿರುವ ಉಪ್ಪು ರುಚಿ ಕೆಡಿಸುವ ಗುಣವನ್ನೂ ಹೊಂದಿದೆ ಎಂದರೆ ತಪ್ಪಿಲ್ಲ. ಒಟ್ಟಿನಲ್ಲಿ ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ಭಕ್ಷ್ಯಗಳಿಗೆ ಸೇರಿಸಬೇಕು ಎಂಬುದು ಬಾಣಸಿಗನ (Chef) ಕೈಚಳಕವಾಗಿದೆ. ಆರೋಗ್ಯದ ವಿಷಯಕ್ಕೆ ಬಂದಾಗ ಉಪ್ಪಿನ ಬಳಕೆ ಹಿತಮಿತವಾಗಿರಲಿ ಎಂಬ ಸಲಹೆಯನ್ನೇ ನಾವು ಆಲಿಸುತ್ತೇವೆ. ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು (High Blood Presure) ಉಪ್ಪಿನ ಸೇವನೆಯ ಮೇಲೆಯೇ ಅವಲಂಬಿತವಾಗಿರುತ್ತದೆ. ಹಾಗಿದ್ದರೆ ಆರೋಗ್ಯಕ್ಕೆ ಯಾವ ಉಪ್ಪು ಸೂಕ್ತ ಎಂಬುದು ನಿಮ್ಮ ಯೋಚನೆಯಾಗಿದ್ದರೆ ಈ ಲೇಖನ ಪ್ರಯೋಜನಕಾರಿಯಾಗಿರುವುದು ಖಂಡಿತ.

ಇತ್ತೀಚಿನ ದಿನಗಳಲ್ಲಿ ಹಲವಾರು ಬಗೆಯ ವೈವಿಧ್ಯಮಯವಾದ ಉಪ್ಪು ಮಾರುಕಟ್ಟೆಯಲ್ಲಿ ಲಭ್ಯವಿದೆ. ಯಾವ ಬಗೆಯ ಉಪ್ಪನ್ನು ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬಂತಹ ಗೊಂದಲಗಳನ್ನು ಇದು ಗ್ರಾಹಕರಲ್ಲಿ ಉಂಟುಮಾಡುತ್ತಿರುವುದು ನಿಜ.

ಉಪ್ಪಿನ ವಿಧಗಳು
ಟೇಬಲ್ ಸಾಲ್ಟ್ ಎಂಬ ಅನ್ವರ್ಥನಾಮವೂ ಉಪ್ಪಿಗಿದೆ. ಉಪ್ಪು ಸೋಡಿಯಂ ಮತ್ತು ಕ್ಲೋರೈಡ್ ಎಂಬ ಎರಡು ಅಯಾನುಗಳಿಂದ ಮಾಡಲ್ಪಟ್ಟ ಸಂಯುಕ್ತವಾಗಿದೆ ಇದರ ರಾಸಾಯನಿಕ ಸೂತ್ರ NaCl ಆಗಿದೆ.

ಸಮುದ್ರ ಉಪ್ಪು
ಸಮುದ್ರ ಉಪ್ಪಿನ ಮೂಲ. ಕಡಲ ಉಪ್ಪಿನಲ್ಲಿ ಕಬ್ಬಿಣ, ಮೆಗ್ನೇಸಿಯಮ್, ಸಲ್ಫರ್ ಮತ್ತು ಆಯೋಡಿನ್‌ನಂತಹ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹೆಚ್ಚಿನ ಖನಿಜಗಳು ಸಮುದ್ರದ ನೀರಿನಲ್ಲಿ ಮಿಳಿತವಾಗಿರುವ ಉಪ್ಪಿನಲ್ಲಿರುತ್ತವೆ.

ಇದನ್ನೂ ಓದಿ: Multivitamin Deficiency: ಅತಿಯಾಗಿ ಆಯಾಸವಾಗುತ್ತಾ? ದೇಹಕ್ಕೆ ಮಲ್ಟಿವಿಟಮಿನ್ ಅಗತ್ಯವಾಗಿ ಬೇಕು

ಕೈಗಾರಿಕಾ ಉಪ್ಪು
ಕೈಗಾರಿಕಾ ಯಂತ್ರಗಳನ್ನು ಬಳಸಿ ಸಮುದ್ರದ ನೀರಿನಲ್ಲಿ ಕರಗಿದ ಸ್ಫಟಿಕೀಕರಣದಿಂದ ಈ ರೀತಿಯ ಉಪ್ಪನ್ನು ತಯಾರಿಸಲಾಗುತ್ತದೆ. ಕೊನೆಯ ಹಂತದಲ್ಲಿ ಕಲ್ಮಶ ಹೊರತೆಗೆಯಲು ಉಪ್ಪನ್ನು ತೊಳೆಯಲಾಗುತ್ತದೆ.

ಕಲ್ಲುಪ್ಪು
ಭೂಗತ ತಳದಿಂದ ಗಣಿಗಾರಿಕೆಯ ಪ್ರಕ್ರಿಯೆಯ ಮೂಲಕ ಕಲ್ಲುಪ್ಪನ್ನು ಹೊರತೆಗೆಯಲಾಗುತ್ತದೆ. ಕಲ್ಲುಪ್ಪಿನಲ್ಲಿ ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಪೊಟ್ಯಾಸಿಯಮ್ ಕ್ಲೋರೈಡ್ನಂತಹ ನೈಸರ್ಗಿಕ ಕಲ್ಮಶಗಳಿವೆ. ಕಲ್ಲು ಮತ್ತು ಲವಣಯುಕ್ತ ಭೂಮಿಯ ನಿಕ್ಷೇಪಗಳಿಂದ ಪಡೆಯಲಾಗುತ್ತದೆ.

ಹಿಮಾಲಯನ್ ಪಿಂಕ್ ಉಪ್ಪು
ನಿಮ್ಮ ಆರೋಗ್ಯಕ್ಕೆ ಯಾವ ಉಪ್ಪು ಯೋಗ್ಯವಾದುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಹಿಮಾಲಯನ್ ಪಿಂಕ್ ಸಾಲ್ಟ್ ಅನ್ನು ಆಯ್ಕೆಮಾಡಬಹುದು. ಇದು ಹಿಮಾಲಯ ಪರ್ವತಗಳ ಸಮೀಪದ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಹೊರತೆಗೆಯಲಾದ ಉಪ್ಪಾಗಿದೆ.

ನೈಸರ್ಗಿಕ ಗುಲಾಬಿ ಬಣ್ಣವನ್ನು ಹೊಂದಿರುವ ಉಪ್ಪು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಹಾಗೂ ಕ್ಯಾಲ್ಶಿಯಂನಂತಹ ಹಲವಾರು ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಇದೆ. ಹೆಚ್ಚು ಸೋಡಿಯಂ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: Orange Fruit: ಕಿತ್ತಳೆ ಹಣ್ಣಿನಿಂದ ಉತ್ತಮ ಆರೋಗ್ಯ, ಕೊಲೆಸ್ಟ್ರಾಲ್ ದೂರವಿರಿಸೋಕೆ ತಿನ್ನಿ ಆರೆಂಜ್

ಕಪ್ಪು ಉಪ್ಪು
ಹಿಮಾಲಯನ್ ಕಪ್ಪು ಉಪ್ಪು ಅಥವಾ ಕಾಲಾ ನಮಕ್ ಆಕರ್ಷಕ ಗುಲಾಬಿ ಮಿಶ್ರಿತ ಬೂದು ಬಣ್ಣವನ್ನು ಹೊಂದಿದೆ ಹಾಗೂ ಇದರ ಮೂಲ ಜ್ವಾಲಾಮುಖಿಯಾಗಿದೆ. ಸೋಡಿಯಂ ಅಂಶ ಈ ಉಪ್ಪಿನಲ್ಲಿ ಕಡಿಮೆ ಇದ್ದು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪ್ರಮುಖ ಖನಿಜಗಳನ್ನು ಹೊಂದಿದೆ.

ವಿವಿಧ ಜೀವಕೋಶಗಳಿಗೆ ರಕ್ತವನ್ನು ಸಾಗಿಸಲು ಕಬ್ಬಿಣದ ಅಗತ್ಯವಿದೆ; ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಅಗತ್ಯವಿದೆ; ಮತ್ತು ಸಾಮಾನ್ಯ ಸ್ನಾಯು ಕಾರ್ಯಕ್ಕೆ ಮೆಗ್ನೀಸಿಯಮ್ ಅಗತ್ಯವಿದೆ. ಕಲ್ಲುಪ್ಪು ಉತ್ಕರ್ಷಣ ನಿರೋಧಕವೂ ಹೌದು.

ಪಿಂಕ್ ಪೆರುವಿಯನ್ ಉಪ್ಪು
ಈ ಉಪ್ಪಿನ ಮೂಲ ಆಂಡಿಸ್ ಪರ್ವತವಾಗಿದೆ. ಖನಿಜಾಂಶಗಳು ಸಮೃದ್ಧವಾಗಿರುವ ನೀರಿನಿಂದ ಯಥೇಚ್ಛವಾಗಿರುವ ಹೆಚ್ಚು ಆಳವಿಲ್ಲದ ಕೊಳಗಳಿಂದ ಈ ಉಪ್ಪನ್ನು ಸಂಗ್ರಹಿಸಲಾಗುತ್ತದೆ. ನೀರಿನಲ್ಲಿರುವ ಕ್ಯಾರೊಟಿನಾಯ್ಡ್ ವರ್ಣದ್ರವ್ಯಗಳಿಂದ ಉಪ್ಪು ಗುಲಾಬಿ ಬಣ್ಣವನ್ನು ಪಡೆದುಕೊಂಡಿದೆ.

ಕೆಂಪು ಹವಾವಿಯನ್ ಉಪ್ಪು
ಕೆಂಬಣ್ಣದ ಜ್ವಾಲಾಮುಖಿಯ ಜೇಡಿಮಣ್ಣಿನ ಹೆಚ್ಚಿನ ಅಂಶದಿಂದಾಗಿ ಟೆರಾಕೋಟಾ ಬಣ್ಣದಲ್ಲಿದೆ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ಇದನ್ನೂ ಓದಿ: Weight Loss: ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ತರಕಾರಿಗಳ ಸೇವನೆ! ಯಾವುದು ಬೆಸ್ಟ್?

ಕಾಲಾ ನಮಕ್ ಅಥವಾ ಬೂದು ಬಣ್ಣದ ಗುಲಾಬಿ ಉಪ್ಪು:
ಆರೋಗ್ಯದ ದೃಷ್ಟಿಯಿಂದ ಈ ಉಪ್ಪು ಅತ್ಯಂತ ಸೂಕ್ತವಾದುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಉಪ್ಪಿನ ಬಗೆಗಳಲ್ಲಿ ಇದೂ ಒಂದು. ಹೀಗೆ ಉಪ್ಪಿನಲ್ಲಿರುವ ಖನಿಜಾಂಶಗಳ ಬಗೆಗೆ ತಿಳಿದುಕೊಂಡು ಯಾವ ಉಪ್ಪು ಆರೋಗ್ಯಕ್ಕೆ ಉತ್ತಮ ಎಂಬುದನ್ನು ನಿರ್ಧರಿಸಿ ಉಪ್ಪನ್ನು ಖರೀದಿಸಿ.
Published by:Ashwini Prabhu
First published: