Parents and Children: ಪೋಷಕರು ಯಾವ ಹಂತದಲ್ಲಿ ಮಕ್ಕಳೊಂದಿಗೆ ಮಲಗುವುದನ್ನು ನಿಲ್ಲಿಸಬೇಕು?

ತಂದೆ-ತಾಯಿ ತಮ್ಮ ಮಕ್ಕಳ ಜೊತೆ ಎಷ್ಟು ವರ್ಷದವರೆಗೆ ಮಲಗಬೇಕು ಎಂಬ ಚರ್ಚೆ ಕೂಡ ನಡೆದಿದೆ. ಒಂದೇ ಹಾಸಿಗೆ ಮೇಲೆ ಬೆಳೆದ ಮಕ್ಕಳೊಂದಿಗೆ ತಂದೆ-ತಾಯಿ ಮಲಗುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಯಾವ ವಯಸ್ಸಿನವರೆಗೆ ಮಲಗಬೇಕು? ಈ ಬಗ್ಗೆ ಮಕ್ಕಳ ವೈದ್ಯರು ಮತ್ತು ಮನಶ್ಶಾಸ್ತ್ರಜ್ಞರು ಏನು ಹೇಳಿದ್ದಾರೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಮೇರಿಕನ್ (American) ನಟಿ (Actress) ಅಲಿಸಿಯಾ ಸಿಲ್ವರ್‌ಸ್ಟೋನ್ ತನ್ನ ಪೋಷಕರ (Parents) ಶೈಲಿಯಿಂದಾಗಿ ಆಗಾಗ್ಗೆ ಚರ್ಚೆಯಲ್ಲಿ ಇರುತ್ತಾಳೆ. ಇತ್ತೀಚೆಗಷ್ಟೇ ಅಲಿಸಿಯಾ ತನ್ನ 11 ವರ್ಷದ ಮಗ (Son) ಬೀರ್ ಜೊತೆ ಮಲಗಿದ್ದ ಫೋಟೋ ಶೇರ್ ಮಾಡಿದ್ದರು. ಅಲಿಸಿಯಾ ಫೋಟೋ ಶೇರ್ ಮಾಡಿ ಮಗ ಬೀರ್ ಮತ್ತು ನಾನು ಈಗಲೂ ಒಟ್ಟಿಗೆ ಮಲಗುತ್ತೇವೆ (Sleeping) ಎಂದು ಹೇಳಿದ್ದರು. ಅಲಿಸಿಯಾ ಪ್ರಕಾರ, ಅವಳು ಪ್ರಕೃತಿಕವಾಗಿ ಇರಲು ಬಯಸುತ್ತಾರೆ. ಅಲಿಸಿಯಾ ತಮ್ಮ ಹೇಳಿಕೆ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಅಲಿಸಿಯಾ ಅವರ ಹೇಳಿಕೆಯ ಕುರಿತು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನಿಮ್ಮ ಮಗನು ಸ್ವತಂತ್ರವಾಗಿರಲು ಕಲಿಯಲು ಬಿಡಿ ಎಂದಿದ್ದಾರೆ.

    ನೆಟ್ಟಿಗರು ಅಲಿಸಿಯಾ ಅವರಿಗೆ, ನೀವು ನಿಮ್ಮ ಮಗನಿಗೆ ಸಹಾಯ ಮಾಡದೇ, ಹಾನಿ ಮಾಡುತ್ತಿದ್ದೀರಿ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು, ಅಲಿಸಿಯಾ ತಮ್ಮ ಮಗನೊಂದಿಗೆ ನಿದ್ದೆ ಮಾಡುತ್ತಿರುವ ಫೋಟೋ ಬಗ್ಗೆ ಖಂಡಿಸಿದ್ದಾರೆ.

    ಕೆಲವು ಜನರು ಇದೇನೂ ಕೆಟ್ಟದ್ದಲ್ಲ ಎಂದಿದ್ದಾರೆ. ಅಲಿಸಿಯಾ ಅವರ ಆಯ್ಕೆಯ ಕುರಿತು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಪೋಷಕರು ಈ ರೀತಿಯ ಪ್ರೀತಿ ನೀಡುವುದು ಮಕ್ಕಳಿಗೆ ಮುಖ್ಯ ಎಂದಿದ್ದಾರೆ.

    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

    ಪೋಷಕರು ತಮ್ಮ ಮಕ್ಕಳೊಂದಿಗೆ ಯಾವ ವಯಸ್ಸಿನವರೆಗೆ ಮಲಗಬೇಕು?

    ಆದರೆ ತಂದೆ-ತಾಯಿ ತಮ್ಮ ಮಕ್ಕಳ ಜೊತೆ ಎಷ್ಟು ವರ್ಷದವರೆಗೆ ಮಲಗಬೇಕು ಎಂಬ ಚರ್ಚೆ ಕೂಡ ನಡೆದಿದೆ. ಒಂದೇ ಹಾಸಿಗೆ ಮೇಲೆ ಬೆಳೆದ ಮಕ್ಕಳೊಂದಿಗೆ ತಂದೆ-ತಾಯಿ ಮಲಗುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಯಾವ ವಯಸ್ಸಿನವರೆಗೆ ಮಲಗಬೇಕು? ಈ ಬಗ್ಗೆ ಮಕ್ಕಳ ವೈದ್ಯರು ಮತ್ತು ಮನಶ್ಶಾಸ್ತ್ರಜ್ಞರು ಏನು ಹೇಳಿದ್ದಾರೆ ಇಲ್ಲಿ ತಿಳಿಯಿರಿ.

    ನ್ಯೂಯಾರ್ಕ್ ಮೂಲದ ಮಕ್ಕಳ ತಜ್ಞೆ ಡಾ. ರೆಬೆಕ್ಕಾ ಫಿಸ್ಕ್ ಅವರು, ನಾನು ಯಾವಾಗಲೂ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗುವುದು ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಇದು ವೈದ್ಯಕೀಯ ನಿರ್ಧಾರವಲ್ಲ. ಪೋಷಕರು 12 ತಿಂಗಳು ಒಳಗಿನ ಮಕ್ಕಳೊಂದಿಗೆ ಹಾಸಿಗೆ ಹಂಚಿಕೊಳ್ಳಬಾರದು ಎಂದಿದ್ದಾರೆ.

    ಏಕೆಂದರೆ ಇದು SIDS ಅಂದ್ರೆ ಹಠಾತ್ ಶಿಶು ಮರಣ ಸಿಂಡ್ರೋಮ್ ಮತ್ತು ಉಸಿರುಗಟ್ಟುವಿಕೆಯಿಂದ ಸಾವಿನ ಅಪಾಯ ಹೆಚ್ಚಿಸುತ್ತದೆ. ವಿವಿಧ ಅಗತ್ಯಗಳ ಕಾರಣ ಹಾಗೂ ಮಕ್ಕಳೊಂದಿಗೆ ಒಟ್ಟಿಗೆ ಮಲಗುವುದು ಕೆಲವೊಮ್ಮೆ ನಿಮಗೆ ಮತ್ತು ಮಗುವಿಗೆ ಸರಿಯಾಗಿ ನಿದ್ರೆ ಮಾಡುವಲ್ಲಿ ಸಮಸ್ಯೆ ಉಂಟು ಮಾಡಬಹುದು ಎನ್ನುತ್ತಾರೆ ಫಿಸ್ಕ್.

    ನಿಮ್ಮ ಮಗುವಿನೊಂದಿಗೆ ಮಲಗುತ್ತಿದ್ದರೆ ಮಗು ದಿನವಿಡೀ ಚೆನ್ನಾಗಿ ವಿಶ್ರಾಂತಿ ಪಡೆಯುತ್ತಿದೆಯೇ ಎಂದು ನೋಡಿ. ನೀವು ಕೋಣೆಯಲ್ಲಿ ಹೆಚ್ಚುವರಿ ಹಾಸಿಗೆ ಕೂಡ ಇರಿಸಬಹುದು. ಮಗು ಮಲಗಿದ ನಂತರ ಬೇರೆ ಹಾಸಿಗೆಯಲ್ಲಿ ನೀವು ಮಲಗಬಹುದು. ಇದು ನಿಮ್ಮ ಮಗು ಚೆನ್ನಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

    ಮಕ್ಕಳ ಮನಶ್ಶಾಸ್ತ್ರಜ್ಞ ಎಲಿಜಬೆತ್ ಮ್ಯಾಥಿಸ್ ಅವರು, ಮಕ್ಕಳೊಂದಿಗೆ ಹಾಸಿಗೆ ಹಂಚಿಕೊಳ್ಳುವುದು ಕೆಲವೊಮ್ಮೆ ತುಂಬಾ ಒಳ್ಳೆಯದು ಎಂದಿದ್ದಾರೆ. ವಿಶೇಷವಾಗಿ ಮಗುವಿನೊಂದಿಗೆ ಮಲಗುವುದು ನಿಮಗೆ ಉತ್ತಮ ಭಾವನೆ ನೀಡುತ್ತದೆ ಎಂದು ಮ್ಯಾಥಿಸ್ ಹೇಳುತ್ತಾರೆ.

    ಯಾವ ಹಂತದಲ್ಲಿ ಮಕ್ಕಳೊಂದಿಗೆ ಮಲಗುವುದನ್ನು ನಿಲ್ಲಿಸಬೇಕು?

    ನಿಮ್ಮ ಮಗುವಿನ ದೈಹಿಕ ಬದಲಾವಣೆಗಳನ್ನು ನೀವು ಗಮನಿಸಲು ಶುರು ಮಾಡಿದರೆ ನೀವು ಮಕ್ಕಳೊಂದಿಗೆ ಮಲಗುವುದನ್ನು ನಿಲ್ಲಿಸಬೇಕು. ಇದನ್ನು ಪ್ರಿ-ಪ್ಯೂಬರ್ಟಿ ಎಂದು ಕರೆಯುತ್ತಾರೆ. ನಿಮ್ಮ ಮಗುವಿನ ದೇಹವು ಲೈಂಗಿಕವಾಗಿ ಪ್ರಬುದ್ಧವಾಗಲು ಪ್ರಾರಂಭಿಸುವ ಸಮಯವು ಪ್ರೌಢಾವಸ್ಥೆ ಅಥವಾ ಪೂರ್ವ ಪ್ರೌಢಾವಸ್ಥೆ.

    ಈ ಸಮಯದಲ್ಲಿ ಹುಡುಗಿಯರಲ್ಲಿ ಸ್ತನ ಬೆಳವಣಿಗೆ ಮತ್ತು ಪುರುಷರಲ್ಲಿ ಗಡ್ಡ ಮತ್ತು ಮೀಸೆ ಬೆಳವಣಿಗೆ, ಖಾಸಗಿ ಭಾಗದ ಗಾತ್ರದಲ್ಲಿ ಹೆಚ್ಚಳ ಸೇರಿದಂತೆ ಅನೇಕ ದೈಹಿಕ ಬದಲಾವಣೆಗಳು ಉಂಟಾಗುತ್ತವೆ. 'ಪ್ರಿ-ಪ್ಯೂಬರ್ಟಿ ಎಂದರೆ ನೀವು ನಿಮ್ಮ ಮಕ್ಕಳೊಂದಿಗೆ ಮಲಗುವುದನ್ನು ನಿಲ್ಲಿಸಬೇಕಾದ ಸಮಯ.' ಎಂದರ್ಥ ಎಂದು ತಜ್ಞರು ಹೇಳುತ್ತಾರೆ.

    ಮ್ಯಾಥಿಸ್ ಕೂಡ ಫಿಸ್ಕ್‌ ಹೇಳಿದ ಮಾತನ್ನು ಬೆಂಬಲಿಸಿದ್ದಾರೆ. ನಿಮ್ಮ ಮಗುವಿನ ಪ್ರೌಢಾವಸ್ಥೆ ನಂತರ ನೀವು ಬೇರೆ ಮಲಗುವುದು ಉತ್ತಮ. ಪ್ರೌಢಾವಸ್ಥೆಯ ಹಂತದ ಪ್ರಾರಂಭದ ಸರಾಸರಿ ವಯಸ್ಸು ಹುಡುಗಿಯರಿಗೆ 11 ವರ್ಷ. ಮತ್ತು ಹುಡುಗರಿಗೆ 12 ವರ್ಷ. ಹುಡುಗಿಯರು 8 ರಿಂದ 13 ವರ್ಷ ವಯಸ್ಸಿನೊಳಗೆ ಪ್ರೌಢಾವಸ್ಥೆಗೆ ತಲುಪುತ್ತಾರೆ. ಹುಡುಗರಲ್ಲಿ ಪ್ರೌಢಾವಸ್ಥೆಯು 9 ವರ್ಷದಿಂದ 14 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ.

    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

    ಪ್ರೌಢಾವಸ್ಥೆಯಲ್ಲಿ ಮಕ್ಕಳ ಬದಲಾವಣೆಯಾಗುತ್ತದೆ. ಹಾಗಾಗಿ ಅವರಿಗೆ ಪ್ರೈವೆಸಿ ನೀಡುವುದು ಮುಖ್ಯ. ಇದು ಅವರನ್ನು ತಮ್ಮ ಭಾವನೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಪೋಷಕರು ಬೇರೆ ಮಲಗುವುದು ಉತ್ತಮ ಎನ್ನುತ್ತಾರೆ ತಜ್ಞರು.
    Published by:renukadariyannavar
    First published: