Health Tips: ತೆಂಗಿನ ಎಣ್ಣೆ v/s ಆಲಿವ್ ಎಣ್ಣೆಯಲ್ಲಿ ಯಾವುದು ಬೆಸ್ಟ್? ಯಾಕೆ? ಫುಲ್ ಡೀಟೆಲ್ಸ್ ಇಲ್ಲಿದೆ

ತೆಂಗಿನ ಎಣ್ಣೆ ಹಾಗೂ ಆಲಿವ್ ಎಣ್ಣೆಗಳಲ್ಲಿ ಯಾವುದು ಉತ್ತಮ ಎಣ್ಣೆ ಎಂದು ಪರಿಗಣಿಸಲು ಪ್ರಮುಖವಾಗಿ ಅವುಗಳು ಹೊಂದಿರುವ ಪೋಷಕಾಂಶಗಳು ಮತ್ತು ಪ್ರಯೋಜನಗಳನ್ನು ನಾವು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆಂಗಿನ ಎಣ್ಣೆ (Coconut Oil) ದಕ್ಷಿಣ ಏಷ್ಯಾದ ಪಾಕಪದ್ಧತಿಯ ಮತ್ತು ಕೂದಲು (Hair), ಚರ್ಮದ ಆರೈಕೆಯಲ್ಲಿ ಅತಿ ಹೆಚ್ಚು ಬಳಸುವ ಪ್ರಮುಖ ಎಣ್ಣೆಯಾಗಿದೆ. ಹಾಗೆಯೇ ಆಲಿವ್ ಎಣ್ಣೆ (Olive oil) ಸಹ ಮೆಡಿಟರೇನಿಯನ್ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದು, ಪ್ರಪಂಚದಾದ್ಯಂತ ವ್ಯಾಪಕವಾಗಿ ಈ ಆಲಿವ್ ಎಣ್ಣೆಯನ್ನು ಉಪಯೋಗಸಲಾಗುತ್ತದೆ. ಇನ್ನು, ಈ  ಎರಡೂ ಎಣ್ಣೆಗಳಲ್ಲಿಯೂ ವಿಟಮಿನ್ ಇ ಮತ್ತು ಕೆ (Vitamin E and K) ಹಾಗೂ ಇತರ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹೀಗಾಗಿ ಈ ಎರಡು ಎಣ್ಣೆಗಳಲ್ಲಿ ಯಾವುದು ಉತ್ತಮ ಎಣ್ಣೆ ಎಂದು ಪರಿಗಣಿಸಲು ಪ್ರಮುಖವಾಗಿ ಅವುಗಳು ಹೊಂದಿರುವ ಪೋಷಕಾಂಶಗಳು ಮತ್ತು ಪ್ರಯೋಜನಗಳನ್ನು ನಾವು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.

ತೆಂಗಿನ ಎಣ್ಣೆ
ಬಲಿತ ತೆಂಗಿನಕಾಯಿಂದ ಹೊರತೆಗೆಯುವ ಎಣ್ಣೆಯನ್ನು ತೆಂಗಿನ ಎಣ್ಣೆ ಎಂದು ಕರೆಯಲಾಗುತ್ತದೆ. ತೆಂಗಿನಕಾಯಿ ಎಣ್ಣೆಯನ್ನು ಪ್ರಮುಖವಾಗಿ ಅದರ ಸುವಾಸನೆ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ಭಾರತೀಯರು ಕೂದಲು ಮತ್ತು ಚರ್ಮದ ಆರೈಕೆಗೆ ಹೆಚ್ಚು ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ತೆಂಗಿನಕಾಯಿ ಎಣ್ಣೆಯಲ್ಲಿ ಕೋಪ್ರಾ ಆಯಿಲ್ ಮತ್ತು ವರ್ಜಿನ್ ತೆಂಗಿನ ಎಣ್ಣೆ ಎಂಬ ಎರಡು ವಿಧಗಳಿದ್ದು, ಇವು ಪೋಷಕಾಂಶಗಳ ಮುಖ್ಯ ಆಗರವಾಗಿವೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯನ್ನು ಆಲಿವ್ ತಿರುಳಿನಿಂದ ಹೊರತೆಗೆಯಲಾಗುತ್ತದೆ. ಆಲಿವ್ (ಓಲಿಯಾ ಯುರೋಪಿಯಾ ಎಲ್) ಮೆಡಿಟರೇನಿಯನ್ ಮರದಲ್ಲಿ ಸಿಗುವ ಕಾಯಿ ಇದಾಗಿದ್ದು, ಸಲಾಡ್ ಡ್ರೆಸ್ಸಿಂಗ್, ಪಾಸ್ಟಾ ಮತ್ತು ಇತರೆ ಅಡುಗೆಯಲ್ಲಿ ಹೆಚ್ಚಾಗಿ ಆಲಿವ್​ ಎಣ್ಣೆಯನ್ನು ಬಳಸಲಾಗುತ್ತದೆ.

ಆಲಿವ್ ಎಣ್ಣೆಯಲ್ಲಿ ನಾಲ್ಕು ಮುಖ್ಯ ವಿಧಗಳು

ಆಲಿವ್ ಎಣ್ಣೆಯಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ. ಅವುಗಳೆಂದರೆ ವರ್ಜಿನ್ ಆಲಿವ್ ಎಣ್ಣೆ, ಸಾಮಾನ್ಯ ಆಲಿವ್ ಎಣ್ಣೆ, ಪೊಮೆಸ್ ಆಲಿವ್ ಎಣ್ಣೆ, ಸಂಸ್ಕರಿಸಿದ ಆಲಿವ್ ಎಣ್ಣೆಗಳಾಗಿವೆ. ಇವುಗಳಲ್ಲಿ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳು ಸಮೃದ್ಧವಾಗಿವೆ.

ತೆಂಗಿನ ಎಣ್ಣೆ ಮತ್ತು  ಆಲಿವ್ ಎಣ್ಣೆಯಲ್ಲಿನ ಪೌಷ್ಟಿಕಾಂಶಗಳು

ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆ

ಕ್ಯಾಲೋರಿ: 895 kcal, 884 kcal
ಕಾರ್ಬ್ಸ್: 0.84 g, 0 g
ಫ್ಯಾಟ್: 99.1g, 100g
ಸೋಡಿಯಂ: 1 g, 2 g
ಕಬ್ಬಿಣಾಂಶ: 00.5mg, 0.56mg
ವಿಟಮಿನ್ ಇ: 0.11 ಮಿಗ್ರಾಂ, 14.4 ಮಿಗ್ರಾಂ
ವಿಟಮಿನ್ ಕೆ: 0.6 g, 60.2 g

ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯ ಪ್ರಯೋಜನಗಳು

1) ಆರೋಗ್ಯಕರ ಚರ್ಮದ ರಕ್ಷಣೆಗೆ ಸಹಾಯಕ

ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯು ಹೆಚ್ಚಿನ ಕೊಬ್ಬಿನಾಮ್ಲವನ್ನು ಹೊಂದಿದೆ. ಇವುಗಳಲ್ಲಿ ವಿಟಮಿನ್ ಇ ಮತ್ತು ಕೆ ಸಮೃದ್ಧವಾಗಿದ್ದು, ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇನ್ನ, ತೆಂಗಿನ ಎಣ್ಣೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಪೋಷಿಸುತ್ತದೆ. ಸೂರ್ಯನಿಂದ ಬರುವ ಯುವಿ ಕಿರಣಗಳ ಹಾನಿಯನ್ನು ತಡೆಯುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವ ಮೂಲಕ ಯೌವನವನ್ನು ಹೆಚ್ಚಿಸುತ್ತದೆ. ಇದನ್ನು ಫೇಸ್ ಮಾಸ್ಕ್‌ಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ.

ಆಲಿವ್ ಎಣ್ಣೆಯು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಬ್ಲ್ಯಾಕ್, ವೈಟ್‌ ಹೆಡ್ಸ್ ಗಳಿಗೆ ನೈಸರ್ಗಿಕವಾಗಿ ಚಿಕಿತ್ಸೆ ನೀಡುತ್ತದೆ.

ಇದನ್ನೂ ಓದಿ: Health Tips: ಹೃದಯಾಘಾತದ ಭಯವೇ.. ತೆಂಗಿನ ಎಣ್ಣೆಯಲ್ಲಿದೆ ನೋಡಿ ನಿಮ್ಮ ನೆಮ್ಮದಿ..

2) ಕೂದಲಿನ ಆರೈಕೆಗೆ ಸಹಾಯ

ತೆಂಗಿನ ಎಣ್ಣೆ ಕೂದಲನ್ನು ರಕ್ಷಿಸುವುದರ ಜೊತೆಗೆ ಬಲಪಡಿಸುತ್ತದೆ. ಇದರ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ಚಿಕಿತ್ಸೆಗೆ ಉತ್ತಮ ಆಯ್ಕೆಯಾಗಿದೆ. ಒಣ ಕೂದಲಿಗೆ ಆಲಿವ್ ಎಣ್ಣೆಯು ಅತ್ಯುತ್ತಮ ಆಯ್ಕೆಯಾಗಿದ್ದು, ಡ್ಯಾಂಡ್ರಫ್ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿಯಾಗಿದೆ.

3) ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ

ತೆಂಗಿನ ಎಣ್ಣೆಯು ಫಿನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆಲಿವ್ ಎಣ್ಣೆಯು ಫೀನಾಲ್ ಆಲ್ಕೋಹಾಲ್‌ಗಳು ಮತ್ತು ಆಮ್ಲಗಳು, ಸೆಕೊಯಿರಿಡಾಯ್ಡ್‌ಗಳು, ಲಿಗ್ನಾನ್‌ಗಳು ಮತ್ತು ಫ್ಲೇವೊನ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.

ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರೆಡಿಕಲ್‌ಗಳನ್ನು ನಿವಾರಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ. ಇದು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.

4) ಸೋಂಕುಗಳ ವಿರುದ್ಧ ಹೋರಾಡುತ್ತವೆ

ತೆಂಗಿನ ಎಣ್ಣೆಯು ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಕೊಬ್ಬಿನಾಮ್ಲಗಳು ಬ್ಯಾಕ್ಟೀರಾಯಾಗಳು ಮತ್ತು ಕ್ಲೋಸ್ಟ್ರಿಡಿಯಮ್‌ನಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ತೆಂಗಿನ ಎಣ್ಣೆ ಕ್ಯಾಂಡಿಡಾ ಶಿಲೀಂಧ್ರಗಳ ವಿರುದ್ಧವೂ ಪರಿಣಾಮಕಾರಿಯಾಗಿದೆ. ಆಲಿವ್ ಎಣ್ಣೆಯಲ್ಲಿರುವ ಪಾಲಿಫಿನಾಲ್‌ಗಳು ಬ್ಯಾಸಿಲಸ್ ಮತ್ತು ಸ್ಯೂಡೋಮೊನಸ್‌ನಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

5) ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡುತ್ತದೆ

ಆಲಿವ್ ಎಣ್ಣೆಯ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್‌ಗಳನ್ನು ಹೆಚ್ಚಿಸುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6) ದಂತ ಚಿಕಿತ್ಸೆಗೆ ಸಹಾಯ

ತೆಂಗಿನ ಎಣ್ಣೆಯಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಹಲ್ಲಿನ ಸಮಸ್ಯೆಗೆ ಸಂಬಂಧಿಸಿದ ರೋಗಕಾರಕಗಳ ಬೆಳವಣಿಗೆಯನ್ನು ತಡೆಯುತ್ತದೆ. ನೀವು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದನ್ನು ಬಳಸಬಹುದು.

ಇದನ್ನೂ ಓದಿ: Health Tips: ಆಲಿವ್​ ಎಣ್ಣೆ ಅಡುಗೆಯಲ್ಲಿ ಯಾಕೆ ಬಳಸಬೇಕು? ಅದರಿಂದಾಗುವ ಪ್ರಯೋಜನವೇನು?

ತೆಂಗಿನ ಎಣ್ಣೆ Vs. ಆಲಿವ್ ಎಣ್ಣೆ

ತೆಂಗಿನ ಎಣ್ಣೆಗಿಂತ ಆಲಿವ್ ಎಣ್ಣೆ ಹೆಚ್ಚು ಆರೋಗ್ಯಕರ, ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಜೊತೆಗೆ ಅಡುಗೆಯಲ್ಲಿ ವ್ಯಾಪಕವಾದ ಆಲಿವ್ ಎಣ್ಣೆ ಬಳಸಲಾಗುತ್ತಿದ್ದು, ಅದರಲ್ಲಿ ಪ್ರಯೋಜನಕಾರಿ ಕೊಬ್ಬಿನಾಮ್ಲಗಳಿವೆ. ಆಲಿವ್ ಎಣ್ಣೆ ತೆಂಗಿನ ಎಣ್ಣೆಗೆ ಹೋಲಿಸಿದರೆ ದುಬಾರಿಯಾಗಿದೆ. ದುಬಾರಿ ವಿಚಾರ ಬಿಟ್ಟರೆ ಆರೋಗ್ಯ ವಿಚಾರದಲ್ಲಿ ಆಲಿವ್ ಎಣ್ಣೆ ಅತ್ಯುತ್ತಮವಾಗಿದೆ.
Published by:shrikrishna bhat
First published: