Baby Care: ಬೇಸಿಗೆಯಲ್ಲಿ ಮಗುವಿಗೆ ಮಸಾಜ್ ಮಾಡಲು ಯಾವ ಎಣ್ಣೆ ಬೆಸ್ಟ್ ? ಮಸಾಜ್ ಪ್ರಯೋಜನಗಳೇನು?

ದೈನಂದಿನ ಮಗುವಿನ ಮಸಾಜ್ ನಿಮ್ಮ ಮತ್ತು ಮಗುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮಗುವಿನ ಮೇಲೆ ಮುದ್ದು ಮತ್ತು ಪ್ರೀತಿ ತೋರಿಸಲು ಉತ್ತಮ ಅವಕಾಶವೂ ಹೌದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ (India) ಮಗುವಿನ (Baby) ಮಸಾಜ್ (Massage) ಸಂಪ್ರದಾಯ ಯಾವಾಗಲೂ ಇದೆ. ಇದು ಹಳೆಯ ಸಂಪ್ರದಾಯ (Old Culture). ತಾಯಿಯಿಂದ (Mother) ಮಗಳಿಗೆ ಪೀಳಿಗೆಯಿಂದ ಪೀಳಿಗೆಗೆ ಮಾಡಿಕೊಂಡು ಬರಲಾಗಿದೆ. ಮಸಾಜ್ ನಿಮಗೆ ಮತ್ತು ನಿಮ್ಮ ಮಗುವಿಗೆ ಹಲವು ವಿಧಗಳಲ್ಲಿ ಪ್ರಯೋಜನ (Benefit) ನೀಡುತ್ತದೆ. ದೈನಂದಿನ ಮಗುವಿನ ಮಸಾಜ್ ನಿಮ್ಮ ಮತ್ತು ಮಗುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮಗುವಿನ ಮೇಲೆ ಮುದ್ದು ಮತ್ತು ಪ್ರೀತಿ ತೋರಿಸಲು ಉತ್ತಮ ಅವಕಾಶವೂ ಹೌದು. ಮಸಾಜ್ ಮಗು ಮತ್ತು ತಾಯಿ ಆನಂದದಿಂದ, ಪ್ರೀತಿಯಿಂದ ಪರಸ್ಪರ ಸಮಯ ಕಳೆಯಲು ವಿಶೇಷ ಅವಕಾಶ ನೀಡಿದೆ. ನೀವು ನಿಮ್ಮ ಮಗುವಿಗೆ ಮಸಾಜ್ ಮಾಡುತ್ತ ಮಾತನಾಡುತ್ತೀರಿ. ಮುದ್ದುಗರೆಯುತ್ತೀರಿ.

    ಮಗುವಿಗೆ ಮಸಾಜ್ ಮಾಡುವುದು

    ಮಸಾಜ್ ನಿಮ್ಮ ಮಗುವಿನ ನೋವನ್ನು ಶಮನಗೊಳಿಸಲು ಮತ್ತು ಆರಾಮವಾಗಿಸಲು ಸಹಕಾರಿ. ನಿಮ್ಮ ಮಗು ಚೆನ್ನಾಗಿ ನಿದ್ದೆ ಮಾಡಲು ಮತ್ತು ಕಡಿಮೆ ಅಳಲು ಸಹ ಮಸಾಜ್ ಸಹಕಾರಿ ಆಗಿದೆ. ಮಸಾಜ್‌ನ ಇತರೆ ಪ್ರಯೋಜನಗಳೆಂದರೆ ಮಗುವಿನ ತೂಕ ಹೆಚ್ಚಾಗುವುದು, ಜೀರ್ಣಕ್ರಿಯೆ ಸುಧಾರಣೆಯಾಗುವುದು, ಸುಧಾರಿತ ರಕ್ತ ಪರಿಚಲನೆ ಮತ್ತು ಹಲ್ಲು ನೋವಿನಿಂದ ಪರಿಹಾರ ಆಗಿದೆ.

    ಆಕ್ಸಿಟೋಸಿನ್ ಹಾರ್ಮೋನ್ ಉತ್ಪಾದನೆ

    ಮಗುವಿಗೆ ಮಸಾಜ್ ಮಾಡುವುದರಿಂದ ತಾಯಿಯ ಮೃದುವಾದ, ಲಯಬದ್ಧ ಮತ್ತು ವಿಶ್ರಾಂತಿ ಕೈಗಳಿಗೆ ಸಿಗುತ್ತದೆ. ಜೈಗಳ ಚಲನೆ ನಿಮ್ಮ ಮತ್ತು ನಿಮ್ಮ ಮಗುವಿನ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

    ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

    ಮಸಾಜ್ ಮಾಡುವಾಗ ನಿಮ್ಮ ಪತಿಯೂ ನಿಮ್ಮನ್ನು ಗಮನಿಸುತ್ತಿದ್ದರೆ ಅವನ ದೇಹದಲ್ಲೂ ಈ ಹಾರ್ಮೋನ್  ಉತ್ಪಾದನೆ ಆಗುತ್ತದೆ. ಆಕ್ಸಿಟೋಸಿನ್ ಹಾರ್ಮೋನ್ ಮಗುವನ್ನು ಹಿಡಿದಿಟ್ಟುಕೊಳ್ಳುವಾಗ ಅಥವಾ ಹಾಲುಣಿಸುವಾಗ ನಿಮಗೆ ಪ್ರೀತಿ ಭಾವನೆ ಉಂಟು ಮಾಡುತ್ತದೆ.

    ಬೇಸಿಗೆಯಲ್ಲಿ ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ

    ಬೇಸಿಗೆಯಲ್ಲಿ ಮಗುವಿಗೆ ಮಸಾಜ್ ಮಾಡುವಾಗ ಪೋಷಕರು ಕೂಲಿಂಗ್ ಆಗಿರುವ ಎಣ್ಣೆಯ ಆಯ್ಕೆ ಮಾಡಿಕೊಳ್ಳಬೇಕು. ನೀವು ಸ್ವಲ್ಪ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಬಹುದು. ಚರ್ಮವು ತೆಂಗಿನ ಎಣ್ಣೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

    ತೆಂಗಿನ ಎಣ್ಣೆ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಅನೇಕ ರೀತಿಯ ಸೋಂಕುಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ. ಇದಲ್ಲದೆ, ನೀವು ಬೇಸಿಗೆಯಲ್ಲಿ ಎಳ್ಳೆಣ್ಣೆಯಿಂದ ಮಸಾಜ್ ಮಾಡಬಹುದು. ಇದರಿಂದ ಮೂಳೆಗಳು ಗಟ್ಟಿ ಮತ್ತು ಬಲಿಷ್ಠವಾಗುತ್ತವೆ.

    ಮಗುವಿಗೆ ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳು

    - ಮಗುವಿಗೆ ಮಸಾಜ್ ಮಾಡುವುದು ಅನೇಕ ಪ್ರಯೋಜನ ನೀಡುತ್ತದೆ. ಮಸಾಜ್ ಮಾಡುವುದರಿಂದ ಮಗುವಿನ ದೇಹ ಆರೋಗ್ಯವಾಗಿರುತ್ತದೆ. ಮತ್ತು ಮಗು ಕಡಿಮೆ ಅಳುತ್ತದೆ.

    - ಮಗುವಿಗೆ ಮಸಾಜ್ ಮಾಡುವುದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ದೇಹಕ್ಕೆ ಉಷ್ಣತೆ ತರುತ್ತದೆ.

    - ಮಗುವಿಗೆ ಮಾಡುವ ಮಸಾಜ್ ನಿಂದ ಕೈ ಮತ್ತು ಕಾಲುಗಳಲ್ಲಿ ರಕ್ತದ ಹರಿವು ಹೆಚ್ಚುತ್ತದೆ. ಇದಲ್ಲದೆ, ಜೀರ್ಣಕ್ರಿಯೆ ಉತ್ತಮವಾಗುತ್ತದೆ.

    - ಎಣ್ಣೆಯಿಂದ ಮಸಾಜ್ ಮಾಡಿದರೆ ಮಗುವಿನ ದೇಹವು ವಿಶ್ರಾಂತಿ ಪಡೆಯುತ್ತದೆ. ಜೊತೆಗೆ ಉತ್ತಮ ನಿದ್ರೆ ಮಾಡುತ್ತದೆ.

    - ಮಸಾಜ್ ಮಾಡುವುದರಿಂದ ಮಗುವಿನ ತೂಕ ಹೆಚ್ಚಾಗುತ್ತದೆ. ಹೃದಯ ಬಡಿತ ಸಮತೋಲನಗೊಳಿಸುತ್ತದೆ.

    ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

    - ತಲೆಗೆ ಮಸಾಜ್ ಮಾಡಿ ಚಂಪಿ ಮಾಡುವುದು ಮಗುವಿನ ಮೆದುಳು ಉತ್ತಮವಾಗಿ ಕೆಲಸ ಮಾಡಲು ಸಹಕಾರಿ ಆಗುತ್ತದೆ.

    - ಮಗುವಿಗೆ ಮಾಡುವ ಮಸಾಜ್ ಮೂಳೆಗಳನ್ನ ಗಟ್ಟಿಗೊಳಿಸಿ ಮಗು ಚುರುಕಾಗುವಂತೆ ಮಾಡುತ್ತದೆ.

    - ಮಸಾಜ್ ಮಾಡುವಾಗ ಮಗು ಅಳುವುದರಿಂದ ಗಂಟಲು ಮತ್ತು ಹಸಿವನ್ನು ಹೆಚ್ಚಿಸುತ್ತದೆ.
    Published by:renukadariyannavar
    First published: