Vitamin C: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

ದೇಹದಲ್ಲಿ ಅನೇಕ ಹಾರ್ಮೋನು ತಯಾರಿಸಲು ವಿಟಮಿನ್ ಸಿ ಸಹ ಅಗತ್ಯವಾಗಿದೆ. ಹಾಗಾದ್ರೆ ಪ್ರತಿದಿನ ದೇಹಕ್ಕೆ ಎಷ್ಟು ವಿಟಮಿನ್ ಸಿ ಅಗತ್ಯವಿದೆ ಎಂದರೆ ವಯಸ್ಕ ಪುರುಷ ಪ್ರತಿದಿನ 90 ಮಿಗ್ರಾಂ ವಿಟಮಿನ್ ಸಿ ಸೇವಿಸಬೇಕು. ಮತ್ತು ವಯಸ್ಕ ಹೆಣ್ಣು 75 ಮಿಗ್ರಾಂ ವಿಟಮಿನ್ ಸಿ ಸೇವಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಟಮಿನ್ ಸಿ (Vitamin C) ಅಥವಾ ಆಸ್ಕೋರ್ಬಿಕ್ ಆಮ್ಲವು ದೇಹಕ್ಕೆ (Body) ಅಗತ್ಯವಾದ ಪೋಷಕಾಂಶ ಆಗಿದೆ. ಇದು ನೀರಿನಲ್ಲಿ (Water) ಕರಗುವ ವಿಟಮಿನ್ ಆಗಿದೆ. ಪ್ರತಿದಿನ ವಿಟಮಿನ್ ಸಿ ಆಹಾರ (Food) ಮತ್ತು ಪೂರಕಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ ದೇಹವು ವಿಟಮಿನ್ ಸಿ ನ್ನು ತಯಾರಿಸುವುದಿಲ್ಲ. ವಿಟಮಿನ್ ಸಿ ದೇಹವು ಸೋಂಕು ನಿಯಂತ್ರಿಸಲು, ಗಾಯ ಗುಣಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಯ ಕಾರ್ಯವೇನು? ನರಮಂಡಲ, ಮೂಳೆ, ಕಾರ್ಟಿಲೆಜ್, ರಕ್ತ ಮತ್ತು ಇವುಗಳನ್ನು ಒಳಗೊಂಡಿರುವ ಸಂಯೋಜಕ ಅಂಗಾಂಶದ ಪ್ರಮುಖ ಭಾಗವಾಗಿರುವ ಕಾಲಜನ್ ಅನ್ನು ಉತ್ಪಾದಿಸಲು ದೇಹಕ್ಕೆ ವಿಟಮಿನ್ ಸಿ ಬೇಕೇ ಬೇಕು.

    ವಿಟಮಿನ್ ಸಿ

    ದೇಹದಲ್ಲಿ ಅನೇಕ ಹಾರ್ಮೋನು ತಯಾರಿಸಲು ವಿಟಮಿನ್ ಸಿ ಸಹ ಅಗತ್ಯವಾಗಿದೆ. ಹಾಗಾದ್ರೆ ಪ್ರತಿದಿನ ದೇಹಕ್ಕೆ ಎಷ್ಟು ವಿಟಮಿನ್ ಸಿ ಅಗತ್ಯವಿದೆ? ವಯಸ್ಕ ಪುರುಷ ಪ್ರತಿದಿನ 90 ಮಿಗ್ರಾಂ ವಿಟಮಿನ್ ಸಿ ಸೇವಿಸಬೇಕು. ಮತ್ತು ವಯಸ್ಕ ಹೆಣ್ಣು 75 ಮಿಗ್ರಾಂ ವಿಟಮಿನ್ ಸಿ ಸೇವಿಸಬೇಕು.

    ಧೂಮಪಾನಿಗಳು ವಿಟಮಿನ್ ಸಿ ಅನ್ನು ಇತರರಿಗಿಂತ ಹೆಚ್ಚು ಸೇವನೆ ಮಾಡಬೇಕಾಗುತ್ತದೆ. ಏಕೆಂದರೆ ಧೂಮಪಾನವು ದೇಹದಲ್ಲಿ ವಿಟಮಿನ್ ಸಿ ಮಟ್ಟ ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಬಗ್ಗೆ ಅನೇಕ ಪುರಾಣಗಳಿವೆ ಮತ್ತು ಅವುಗಳ ಬಗ್ಗೆ ನೀವು ತಿಳಿಯಬೇಕು.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ವಿಟಮಿನ್ ಸಿ ಸಾಮಾನ್ಯ ಶೀತಕ್ಕೆ ಪರಿಹಾರ ನೀಡುತ್ತದೆ

    ವಿಟಮಿನ್ ಸಿ ಸೇವನೆ ಶೀತ ತೊಡೆದು ಹಾಕುತ್ತದೆ. ಸಾಂಕ್ರಾಮಿಕ ರೋಗದ ಪ್ರಾರಂಭದ ಸಮಯದಲ್ಲಿ ಈ ಪೂರಕ ವ್ಯಾಪಕವಾಗಿ ಸೇವನೆ ಮಾಡಲಾಗುತ್ತದೆ. ಕೊರೋನಾ ಸಾಂಕ್ರಾಮಿಕ ರೂಪ ಪಡೆದಾಗ ಮತ್ತು ಅದರ ರೋಗ ಲಕ್ಷಣಗಳ ಬಗ್ಗೆ ಎಲ್ಲರಿಗೂ ತಿಳಿದಾಗ, ಜನರು ವೈದ್ಯರನ್ನು ಸಂಪರ್ಕಿಸದೆ ವಿಟಮಿನ್ ಸಿ ಪೂರಕ ಸೇವಿಸಲು ಪ್ರಾರಂಭಿಸಿದರು. ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದರೆ ಇದು ನೆಗಡಿಗೆ ಪರಿಹಾರ ನೀಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ.

    ಕಿತ್ತಳೆ ವಿಟಮಿನ್ ಸಿ ಯ ಬಹುದೊಡ್ಡ ಮೂಲ

    ಇದು ಸತ್ಯವಲ್ಲ. ಪ್ರತಿಯೊಂದು ಸಿಟ್ರಸ್-ರುಚಿಯ ಹಣ್ಣು ಅಥವಾ ತರಕಾರಿಗಳು ವಿಟಮಿನ್ ಸಿ ಯ ಉತ್ತಮ ಮೂಲ. ಇದು ಭಾಗಶಃ ನಿಜವಾಗಿದ್ದರೂ, ಕಿತ್ತಳೆ ಮತ್ತು ನಿಂಬೆಹಣ್ಣು ಸಿಟ್ರಸ್-ರುಚಿಯ ಆಹಾರಗಳಿಗಿಂತ ಕ್ಯಾಪ್ಸಿಕಂ ಹೆಚ್ಚು ವಿಟಮಿನ್ ಸಿ ಅನ್ನು ಹೊಂದಿದೆ.

    ಹೆಚ್ಚು ವಿಟಮಿನ್ ಸಿ ಹೆಚ್ಚು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

    ಇದು ಸತ್ಯವಲ್ಲ. ದೇಹದ ಪ್ರತಿಯೊಂದು ವಿಟಮಿನ್ ಒಂದು ನಿರ್ದಿಷ್ಟ ಕಾರ್ಯ ಹೊಂದಿದೆ. ಹೆಚ್ಚಿನ ವಿಟಮಿನ್ ಸೇವನೆಯು ದೇಹದಲ್ಲಿ ವಿಷತ್ವಕ್ಕೆ ಕಾರಣ. ವಿಟಮಿನ್ ಸಿ ಪೂರಕ ಹೆಚ್ಚು ಸೇವನೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಇದು ರಕ್ತದಲ್ಲಿ ಹೆಚ್ಚು ಕಬ್ಬಿಣದ ಅಂಶವಿರುವಾಗ ಉಂಟಾಗುವ ಹಿಮೋಕ್ರೊಮಾಟೋಸಿಸ್ ಎಂಬ ಸ್ಥಿತಿಗೆ ಕಾರಣವಾಗುತ್ತದೆ.

    ವಿಟಮಿನ್ ಸಿ ರೋಗ ನಿರೋಧಕ ಶಕ್ತಿಗೆ ಮಾತ್ರ ಅವಶ್ಯಕ

    ಇದು ನಿಜವಲ್ಲ. ವಿಟಮಿನ್ ಸಿ ದೇಹದಲ್ಲಿ ಅನೇಕ ಇತರ ಕಾರ್ಯ ನಡೆಸಲು ಬೇಕು. ಇದು ಕೇವಲ ರೋಗ ನಿರೋಧಕ ಶಕ್ತಿ ವರ್ಧಕವಲ್ಲ. ವಿಟಮಿನ್ ಸಿ ಮೆದುಳಿನ ಕಾರ್ಯ ಮತ್ತು ಮನಸ್ಥಿತಿ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಡೋಪಮೈನ್ ಮತ್ತು ನೊರ್ಪೈನ್ಫ್ರಿನ್ ಸಂಶ್ಲೇಷಣೆಯಲ್ಲಿ ಸಹಾಯ ಮಾಡುತ್ತದೆ. ಇದು ಅಂಶದ ಹೀರಿಕೊಳ್ಳುವಿಕೆ ಸುಲಭ ಮಾಡುತ್ತದೆ. ಇದು ದೇಹದಲ್ಲಿ ಕಬ್ಬಿಣದ ಕೊರತೆ ಕಡಿಮೆ ಮಾಡುತ್ತದೆ.

    ಆರೋಗ್ಯ ಹೊಂದಿರುವವರಿಗೆ ಅಗತ್ಯವಿಲ್ಲ

    ವಿಟಮಿನ್ ಸಿ ಎಲ್ಲಾ ಜನರಿಗೆ ಅಗತ್ಯವಿದೆ. ಜೀವಸತ್ವ ಅಂಗಗಳ ಸರಿಯಾದ ಕಾರ್ಯ ನಿರ್ವಹಣೆಗೆ ಬೇಕು. ನಿಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆಯೇ ಮತ್ತು ಅದು ನಿಮಗೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆಯ ಮೂಲಕ ಮಾತ್ರ ತಿಳಿಯಬಹುದು.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ವಿಟಮಿನ್ ಸಿ ಪೂರಕಗಳ ಸೇವನೆ ತೂಕ ಹೆಚ್ಚಿಸುತ್ತದೆಯೇ?

    ವಿಟಮಿನ್ ಸಿ ಪೂರಕಗಳ ಅತಿಯಾದ ಸೇವನೆ ದೇಹದ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇತರೆ ಅನೇಕ ಅಂಶಗಳಿಂದ ದೇಹದ ತೂಕ ಹೆಚ್ಚಾಗಬಹುದು.
    Published by:renukadariyannavar
    First published: