Hair Care: ಯಾವ ಪೋಷಕಾಂಶವು ಕೂದಲ ಉದುರುವಿಕೆಗೆ ಕಾರಣ? ಯಾವ ಆಹಾರ ಸೇವನೆ ಲಾಭಕಾರಿ?

ದೇಹದ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಕೂದಲು ಉದುರುವಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸಲು ತಜ್ಞರು ಸಲಹೆ ನೀಡಿದ್ದಾರೆ. ಹಾಗಾದರೆ ಅಗತ್ಯ ಪೋಷಕಾಂಶಗಳು ಯಾವುವು ಎಂದು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬದಲಾಗುತ್ತಿರುವ ಹವಾಮಾನ (Weather), ನೀರು (Water) ಮತ್ತು ಮಾಲಿನ್ಯ (Pollution) ಕೂದಲಿಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳನ್ನು (Problems) ಹುಟ್ಟು ಹಾಕುತ್ತವೆ. ಆದಾಗ್ಯೂ ಹೆಚ್ಚು ಪರಿಣಾಮ ಬೀರುವ ಸಮಸ್ಯೆಯೆಂದ್ರೆ ಕೂದಲು ಉದುರುವಿಕೆ. ಸಾಮಾನ್ಯವಾಗಿ ಮಹಿಳೆಯರು ಕೂದಲು ಉದುರುವಿಕೆ ಬಗ್ಗೆ ಹೆಚ್ಚು ಚಿಂತೆಗೊಳಗಾಗ್ತಾರೆ. ಈ ವೇಳೆ ವೈದ್ಯರು ಶಿಫಾರಸು ಮಾಡಿದ ವಿವಿಧ ಮನೆ ಮದ್ದುಗಳು, ರಾಸಾಯನಿಕ-ಭರಿತ ಉತ್ಪನ್ನಗಳು ಮತ್ತು ಔಷಧಿ ಬಳಸುವುದು ಸಹ ಅಗತ್ಯ. ಆದರೆ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಕೊರತೆ ಇದ್ದರೆ ಈ ಯಾವುದೇ ಪರಿಹಾರಗಳು ನಿಮಗೆ ಸಹಾಯ ಮಾಡಲ್ಲ. ಕೂದಲಿನ ಆರೋಗ್ಯ ಕಾಪಾಡಲು ನಿಮ್ಮ ಒಟ್ಟಾರೆ ಆರೋಗ್ಯವು ಸರಿಯಾಗಿರುವುದು ಮುಖ್ಯ.

  ದೇಹದ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಕೂದಲು ಉದುರುವಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸಲು ತಜ್ಞರು ಸಲಹೆ ನೀಡಿದ್ದಾರೆ. ಹಾಗಾದರೆ ಅಗತ್ಯ ಪೋಷಕಾಂಶಗಳು ಯಾವುವು ಎಂದು ತಿಳಿಯೋಣ.

  ಕೂದಲು ಉದುರುವಿಕೆಗೆ ತಜ್ಞರ ಸಲಹೆ

  ಚರ್ಮರೋಗ ತಜ್ಞ ಡಾ ಸುಯೋಮಿ ಅಕಾ ಡಾ ಸು ಅವರು ತಮ್ಮ Instagram ಪೋಸ್ಟ್ ಮೂಲಕ ಕೂದಲು ಉದುರುವಿಕೆ ನಿಯಂತ್ರಿಸಲು ಕೆಲವು ಪರಿಣಾಮಕಾರಿ ಮಾರ್ಗ ತಿಳಿಸಿದ್ದಾರೆ. ಸಮತೋಲನ ಆಹಾರದ ಮೇಲೆ ಕೇಂದ್ರೀಕರಿಸುವ ಬಗ್ಗೆ ಹೇಳಿದ್ದಾರೆ.

  ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

  ವಿಟಮಿನ್ ಡಿ, ಕಬ್ಬಿಣ, ಫೋಲಿಕ್ ಆಮ್ಲ ಮತ್ತು ಸತು ಸಮೃದ್ಧವಾಗಿರುವ ಆಹಾರ ಸೇವಿಸುವುದು ಅವಶ್ಯಕ. ಇದರೊಂದಿಗೆ ರೋಸ್ಮರಿ ಎಣ್ಣೆಯನ್ನು ಕೂದಲ ರಕ್ಷಣೆಯ ದಿನಚರಿಯಲ್ಲಿ ಸೇರಿಸಲು ತಿಳಿಸಿದ್ದಾರೆ.

  ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಯಾವವು?

  ವಿಟಮಿನ್ ಡಿ ಪ್ರಮಾಣ ಕಾಪಾಡಿಕೊಳ್ಳಿ

  ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ದೇಹದಲ್ಲಿ ವಿಟಮಿನ್ ಡಿ ಕೊರತೆ ಕೂದಲ ಬೇರುಗಳಿಂದ ದುರ್ಬಲಗೊಳಿಸುತ್ತದೆ. ಮತ್ತು ಕೂದಲು ಉದುರುವಿಕೆಗೆ ಕಾರಣ. ಮತ್ತೊಂದೆಡೆ, ನಿಮ್ಮ ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇದ್ದರೆ, ಅದು ಹೊಸ ಕೂದಲಿನ ಬೆಳವಣಿಗೆಗೆ ಉತ್ತೇಜಿಸುತ್ತದೆ.

  ಮನೆಯಲ್ಲಿ ದೀರ್ಘಕಾಲ ಉಳಿಯುವುದು, ಹೆಚ್ಚಿನ ಪ್ರಮಾಣದಲ್ಲಿ ಸನ್‌ಸ್ಕ್ರೀನ್ ಬಳಸುವುದು ಮತ್ತು ವಿಟಮಿನ್ ಡಿ ಪೂರಕ ಸೇವಿಸದಿರುವುದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು.

  ಸ್ವಲ್ಪ ಸಮಯ ತೆರೆದ ವಾತಾವರಣದಲ್ಲಿ ತಿರುಗಾಡಿ. ಆಹಾರದಲ್ಲಿ ಮೊಟ್ಟೆಯ ಹಳದಿ ಲೋಳೆ, ಅಣಬೆ, ಹಾಲು, ಕಿತ್ತಳೆ ರಸ, ಕೆಂಪು ಮಾಂಸ, ಮೀನು ಮತ್ತು ಸೋಯಾ ಹಾಲು ಮುಂತಾದ ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಸೇರಿಸಿ. ಕೋಸುಗಡ್ಡೆ, ಆವಕಾಡೊ, ಕಿವಿ ಮತ್ತು ಪಪ್ಪಾಯಿ ಕೂಡ ವಿಟಮಿನ್ ಡಿ ಸಮೃದ್ಧ ಸೂಪರ್‌ಫುಡ್‌ ಆಗಿವೆ.

  ಆಹಾರದಲ್ಲಿ ಕಬ್ಬಿಣಾಂಶ ಪದಾರ್ಥಗಳನ್ನು ಸೇರಿಸಿ

  ದೇಹದಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣವು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಕೂದಲಿನ ಮೂಲಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕ ತಲುಪಿಸಲು ಇದು ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯು ಅಗತ್ಯವಾದ ಪೋಷಕಾಂಶಗಳ ಬೇರಿಗೆ ಹಾನಿ ಮಾಡುತ್ತದೆ. ಇದರಿಂದ ಕೂದಲು ಉದುರುವುದು ಸಮಸ್ಯೆಗಳು ಕಾಣಿಸುತ್ತವೆ.

  ಬೀನ್ಸ್, ಬೇಳೆಕಾಳುಗಳು, ಕುಂಬಳಕಾಯಿ ಬೀಜಗಳು, ಎಳ್ಳು ಬೀಜಗಳು, ಸಿಂಪಿ, ಪಾಲಕ, ಪ್ರಾಣಿಗಳ ಯಕೃತ್ತು, ಕೆಂಪು ಮಾಂಸ, ಕ್ವಿನೋವಾ, ಬ್ರೊಕೊಲಿ, ಡಾರ್ಕ್ ಚಾಕೊಲೇಟ್, ಮೀನು ಮತ್ತು ತೋಫು ಸೂಪರ್‌ಫುಡ್‌ ಸೇವನೆ ಮಾಡಿ.

  ಸತು ಪದಾರ್ಥಗಳ ಸೇವನೆ ಮಾಡಿ

  ಸತುವು ಕೂದಲಿನ ಬೆಳವಣಿಗೆಗೆ ಉತ್ತೇಜಿಸುತ್ತದೆ. ತಲೆಹೊಟ್ಟು ಕೂದಲು ಉದುರುವಿಕೆ ಸಮಸ್ಯೆ ಹೋಗಲಾಡಿಸುತ್ತದೆ. ದೇಹದಲ್ಲಿ ಸತುವಿನ ಪ್ರಮಾಣ ಕಾಪಾಡಿಕೊಳ್ಳಲು ನಿಮ್ಮ ಆಹಾರದಲ್ಲಿ ಸಿಂಪಿ, ಬಿಳಿ ಬೀನ್ಸ್, ಬಟಾಣಿ, ಕಿಡ್ನಿ ಬೀನ್ಸ್, ಕಪ್ಪು ಬೀನ್ಸ್, ಮಸೂರ ಮತ್ತು ಇತರ ಬೀಜ ಸೇರಿಸಿ. ಇದರೊಂದಿಗೆ ಧಾನ್ಯಗಳು ಮತ್ತು ಬೀಜಗಳನ್ನು ಸೇವಿಸಿ.

  ಫೋಲಿಕ್ ಆಮ್ಲ

  ದೇಹದಲ್ಲಿ ಸಾಕಷ್ಟು ಪ್ರಮಾಣದ ಫೋಲಿಕ್ ಆಮ್ಲವು ಕೂದಲಿನ ಬೆಳವಣಿಗೆಗೆ ಸಹಕಾರಿ. ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಫೋಲಿಕ್ ಆಮ್ಲ ಹೊಂದಿರುವ ಆಹಾರ ಸೇವಿಸಿ. ಹೊಸ ಕೂದಲಿನ ಬೆಳವಣಿಗೆಗೆ ಸಹಕಾರಿ.

  ದೇಹದಲ್ಲಿ ಫೋಲಿಕ್ ಆಮ್ಲದ ಪ್ರಮಾಣ ಕಾಪಾಡಲು, ಹಸಿರು ಎಲೆಗಳ ತರಕಾರಿಗಳು, ಸಿಟ್ರಸ್ ಹಣ್ಣುಗಳು, ಬ್ರೊಕೊಲಿ, ಬೀಜಗಳು, ಪಪ್ಪಾಯಿ, ಬಾಳೆಹಣ್ಣು, ಆವಕಾಡೊ ಮತ್ತು ಮೊಟ್ಟೆವನ್ನು ನಿಮ್ಮ ನಿಯಮಿತ ಆಹಾರದಲ್ಲಿ ಸೇರಿಸಿ. ಬೀನ್ಸ್, ಬಟಾಣಿ ಮತ್ತು ಕಾಳುಗಳು ಸಹಾಯ ಮಾಡುತ್ತವೆ.

  ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

  ರೋಸ್ಮರಿ ಎಣ್ಣೆ ಕೂದಲಿಗೆ ಪ್ರಯೋಜನಕಾರಿ

  ರೋಸ್ಮರಿ ಎಣ್ಣೆಯನ್ನು ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಸೇರಿಸಿ. ರೋಸ್ಮರಿ ಎಣ್ಣೆಯು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲು ಉದುರುವಿಕೆ ಮತ್ತು ಒಡೆಯುವಿಕೆ ತಡೆಯುತ್ತದೆ.
  Published by:renukadariyannavar
  First published: