ಸಕ್ಕರೆಯು (Sugar) ದೇಹದಲ್ಲಿ (Body) ಇನ್ಸುಲಿನ್ ಹಾರ್ಮೋನ್ ಉತ್ತೇಜಿಸುತ್ತದೆ. ಹಾಗಾಗಿ ದೇಹದ ತೂಕ (Body Weight) ಬಹುಬೇಗನೆ ಹೆಚ್ಚಾಗುತ್ತದೆ. ಜೊತೆಗೆ ಇದು ಅನೇಕ ರೋಗಗಳು (Diseases) ಹೆಚ್ಚಳಕ್ಕೆ ಕಾರಣವಾಗುತ್ತದೆ. ಅತಿಯಾದ ಸಕ್ಕರೆ ಅಂಶ ದೇಹ ಸೇರಿದ್ರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತೆ. ಇದರಿಂದ ಹಸಿವು ಕೂಡ ಹೆಚ್ಚು. ಜೊತೆಗೆ ನಾವು ಆಹಾರ ಸೇವಿಸಿದ್ರೂ ಸಹ ಮನಸ್ಸಿಗೆ ಆ ಆಹಾರ ತೃಪ್ತಿ ಹಾಗೂ ಖುಷಿ ಕೊಡಲ್ಲ. ಯಾವುದೇ ಪದಾರ್ಥ ತಿಂದರೂ ಸಹ ಸಕ್ಕರೆ ಹಾಗೂ ಸಿಹಿ ಪದಾರ್ಥದ ಕಡುಬಯಕೆ ಹೋಗುವುದಿಲ್ಲ. ಪದೇ ಪದೇ ಸಕ್ಕರೆ ಅಥವಾ ಸಿಹಿ ಪದಾರ್ಥಗಳ ಸೇವನೆಯ ಮನಸ್ಸಾಗುತ್ತದೆ. ಇದು ನಾಲಿಗೆಗೆ ಸಾಕಷ್ಟು ರುಚಿ ಕೊಡುತ್ತೆ. ಆದ್ರೆ ದೇಹದ ಆರೋಗ್ಯಕ್ಕೆ ಸಕ್ಕರೆ ಕಹಿ.
ಸಕ್ಕರೆ ಸೇವನೆಯಿಂದ ಆರೋಗ್ಯ ಬಾಧೆ
ಸಕ್ಕರೆ ಎಷ್ಟು ತಿನ್ನುತ್ತೀರೋ, ಅಷ್ಟು ಕಾಯಿಲೆ ಬಾಧಿಸುತ್ತವೆ ಎಂಬುದು ತಜ್ಞರ ಮಾತು. ಸಕ್ಕರೆ ದೇಹಕ್ಕೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ಆದರೆ ಸಿಹಿ ಸೇವನೆ ಜೀವನದ ಅವಿಭಾಜ್ಯ ರುಚಿ. ಅದನ್ನು ಬೇರ್ಪಡಿಸುವುದು ಸಾಧ್ಯವಿಲ್ಲ.
ಆದ್ರೆ ಸಕ್ಕರೆ ಹಾಗೂ ಸಕ್ಕರೆಯ ಪದಾರ್ಥಗಳ ಬದಲು ನೀವು ಜೇನುತುಪ್ಪ, ಬೆಲ್ಲ ಮತ್ತು ಸಕ್ಕರೆ ಮಿಠಾಯಿ ಸೇವಿಸಿದ್ರೆ ಹೆಚ್ಚು ಪ್ರಯೋಜನಕಾರಿ ಅಂತಾರೆ ತಜ್ಞರು. ಹಾಗಾದ್ರೆ ಜೇನುತುಪ್ಪ, ಬೆಲ್ಲ ಮತ್ತು ಕಲ್ಲುಸಕ್ಕರೆಗಳಲ್ಲಿ ಯಾವುದು ಉತ್ತಮ? ಜೇನುತುಪ್ಪ, ಬೆಲ್ಲ ಮತ್ತು ಸಕ್ಕರೆ ಮಿಠಾಯಿ ಪ್ರಯೋಜನಕಾರಿಯೇ?
ಅತ್ಯುತ್ತಮ ನೈಸರ್ಗಿಕ ಸಿಹಿ ಪದಾರ್ಥ ಯಾವುದು?
ಈ ಪ್ರಶ್ನೆಗಳಿಗೆ ತಜ್ಞರು ಹೇಳಿದ್ದು ಹೀಗೆ. ಜೇನುತುಪ್ಪ, ಬೆಲ್ಲ ಮತ್ತು ಸಕ್ಕರೆಯಲ್ಲಿ ಒಂದು ಸಿಹಿ ಪದಾರ್ಥ ಆರೋಗ್ಯಕ್ಕೆ ಉತ್ತಮ ಎಂದಿದ್ದಾರೆ. ಆಯುರ್ವೇದ ವೈದ್ಯೆ ವರಲಕ್ಷ್ಮಿ ಅವರು, ಅತ್ಯುತ್ತಮ ನೈಸರ್ಗಿಕ ಸಿಹಿ ಪದಾರ್ಥದ ಬಗ್ಗೆ ತಿಳಿಸಿದ್ದಾರೆ. ಇತರೆ ಎಲ್ಲ ಸಿಹಿ ಪದಾರ್ಥಗಳ ಆಯ್ಕೆಗಳಿಗಿಂತ ಹೆಚ್ಚು ಯಾವುದು ಪ್ರಯೋಜನಕಾರಿ ಮತ್ತು ಆರೋಗ್ಯಕ್ಕೆ ಸುರಕ್ಷಿತ ಎಂಬುದನ್ನು ತಿಳಿಸಿದ್ದಾರೆ.
ಜೇನುತುಪ್ಪ ಎಷ್ಟು ಪ್ರಯೋಜನಕಾರಿ?
ಸಕ್ಕರೆಗೆ ಪರ್ಯಾಯವಾಗಿ ಜೇನುತುಪ್ಪ ಬಳಸಿ ಎಂದು ಹೇಳಲಾಗುತ್ತದೆ. ಜೇನುತುಪ್ಪದ ಸೇವನೆಯಿಂದ ಕಫ ಸಮಸ್ಯೆ, ಲೋಳೆ, ನಾಲಿಗೆಯ ಕೊಳೆ, ಕೆಮ್ಮು ಮತ್ತು ನೆಗಡಿ ನಿವಾರಣೆ ಆಗುತ್ತದೆ. ಹೀಗಾಗಿ ಜೇನುತುಪ್ಪ ಅತ್ಯುತ್ತಮ ಆರೋಗ್ಯಕರ ಔಷಧ ಎಂದು ಹೇಳಲಾಗಿದೆ.
ಬಿಸಿ ಮಾಡಿದ್ರೆ ವಿಷವಾಗುತ್ತೆ ಜೇನುತುಪ್ಪ
ಆಯುರ್ವೇದ ವೈದ್ಯೆ ವರಲಕ್ಷ್ಮಿ ಅವರ ಪ್ರಕಾರ, ಜೇನುತುಪ್ಪವನ್ನು ಟೀ, ಕಾಫಿ ಇತ್ಯಾದಿ ಜೊತೆ ತಿನ್ನಲು ಸಾಧ್ಯವಿಲ್ಲ. ಯಾಕಂದ್ರೆ ಜೇನುತುಪ್ಪವನ್ನು ಬಿಸಿ ಮಾಡಿದ್ರೆ ಇದು ವಿಷವಾಗುತ್ತದೆ. ಹಾಗೂ ಜೇನುತುಪ್ಪವನ್ನು ಬಿಸಿ ಪದಾರ್ಥಗಳ ಜೊತೆ ಬೆರೆಸಬಾರದು.
ಬೆಲ್ಲ ಎಷ್ಟು ಪ್ರಯೋಜನಕಾರಿ?
ಸಕ್ಕರೆಯ ಬದಲು ಬೆಲ್ಲ ಸೇವಿಸಿದ್ರೆ ಹೆಚ್ಚು ಪ್ರಯೋಜನಕಾರಿ. ಇದು ಉತ್ತಮವಾದ ಸಂಸ್ಕರಿಸದ ಸಕ್ಕರೆ ಆಗಿದೆ. ಇದು ಕ್ಯಾಲ್ಸಿಯಂ ಮತ್ತು ಕಬ್ಬಿಣದಂಶಗಳಲ್ಲಿ ಸಮೃದ್ಧವಾಗಿದೆ. ಬೆಲ್ಲದ ಸೇವನೆ ಜೀರ್ಣಕ್ರಿಯೆ ಚೆನ್ನಾಗಿಡಲು ಸಹಕಾರಿ.
ಬೆಲ್ಲವನ್ನು ಹಾಲಿನ ಜೊತೆ ಬೆರೆಸಬೇಡಿ
ಬೆಲ್ಲದ ಗುಣ ಬಿಸಿ. ಹಾಗಾಗಿ ಇದನ್ನು ಹಾಲಿನ ಜೊತೆ ಬೆರೆಸಬೇಡಿ. ಹಾಲು ತಣ್ಣನೆಯ ಸ್ವಭಾವ ಹೊಂದಿದೆ.
ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆ ಹಲವು ರೋಗಗಳಿಗೆ ಆಹ್ವಾನ..!
ಕಲ್ಲುಸಕ್ಕರೆ ಮಿಠಾಯಿ ಅಥವಾ ಪದಾರ್ಥ ಸೇವನೆ ಆರೋಗ್ಯಕ್ಕೆ ಉತ್ತಮವೇ?
ಆಯುರ್ವೇದ ವೈದ್ಯೆ ವರಲಕ್ಷ್ಮಿ ಪ್ರಕಾರ, ಸಕ್ಕರೆ ಮಿಠಾಯಿ ಅತ್ಯುತ್ತಮ ನೈಸರ್ಗಿಕ ಸಿಹಿಕಾರಕವಾಗಿದೆ. ಇದನ್ನು ಯಾವ ರೀತಿ ಹಾಗೂ ಯಾರೂ ಬೇಕಾದ್ರೂ ಸೇವಿಸಬಹುದು. ಕಲ್ಲುಸಕ್ಕರೆಯಲ್ಲಿರುವ ಆಯುರ್ವೇದ ಗುಣಗಳಿಂದಾಗಿ ಇದನ್ನು ಅನೇಕ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ