Multivitamin Deficiency: ಅತಿಯಾಗಿ ಆಯಾಸವಾಗುತ್ತಾ? ದೇಹಕ್ಕೆ ಮಲ್ಟಿವಿಟಮಿನ್ ಅಗತ್ಯವಾಗಿ ಬೇಕು

ಕೋವಿಡ್ ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಯು ಬಲಿಷ್ಠ ರೋಗ ನಿರೋಧಕ ಶಕ್ತಿ ಹೊಂದಿರುವ ಅವಶ್ಯಕತೆ ಇದೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸರಿಯಾದ ಆಹಾರ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ಸುತ್ತಮುತ್ತಲ ಪರಿಸರದಲ್ಲಿ (Environment) ಅನೇಕ ಜೀವಿಗಳಿವೆ. ಅವುಗಳಲ್ಲಿ ಸೂಕ್ಷ್ಮಾಣು ಜೀವಿಗಳು (Microorganisms) ಸಹ ಒಂದು. ಪರಿಸರದಲ್ಲಿ ಸೂಕ್ಷ್ಮಾಣು ಜೀವಿಗಳು ಯಾವಾಗಲೂ ಇರುತ್ತವೆ. ಮತ್ತು ಸೋಂಕನ್ನು (Virus) ಹರಡಲು ಅವು ನಿರಂತರವಾಗಿ ರೂಪ ಬದಲಾಯಿಸುತ್ತವೆ. ಈ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ವ್ಯಕ್ತಿಯ ದೇಹದೊಳಗೆ (Body) ಸೇರಿ ಶರೀರವನ್ನು ದುರ್ಬಲಗೊಳಿಸುತ್ತವೆ. ಇಂತಹ ಸಮಯದಲ್ಲಿ ಈ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮುಖ್ಯವಾಗಿ ಬೇಕು. ರೋಗ ನಿರೋಧಕ ಶಕ್ತಿ ಬಲಿಷ್ಠವಾಗಿದ್ದಾಗ ಮಾತ್ರ ನಾವು ಎಂತಹುದ್ದೇ ಕಾಯಿಲೆಯನ್ನು ಸೋಲಿಸಬಹುದು. ಇದಕ್ಕೆ ತಾಜಾ ಉದಾಹರಣೆ ಅಂದ್ರೆ COVID-19 ಸಾಂಕ್ರಾಮಿಕ.

  ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮಾರ್ಗಗಳು ಯಾವವು?

  ಕೋವಿಡ್ ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಯು ಬಲಿಷ್ಠ ರೋಗ ನಿರೋಧಕ ಶಕ್ತಿ ಹೊಂದಿರುವ ಅವಶ್ಯಕತೆ ಇದೆ. ಹಾಗಾದ್ರೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮಾರ್ಗಗಳು ಯಾವವು? ಸರಿಯಾದ ಆಹಾರ, ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಪ್ರಮುಖ ವಿಷಯ.

  ಆದರೆ ಸಾಮಾನ್ಯವಾಗಿ ನಮ್ಮ ಆಹಾರದಲ್ಲಿ ಸರಿಯಾದ ಮಿಶ್ರಣ ಅಥವಾ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇರಲ್ಲ. ಮಲ್ಟಿವಿಟಮಿನ್ ಪೂರಕಗಳು ಪೋಷಕಾಂಶ ಕೊರತೆ ನಿವಾರಿಸಲು ಕೆಲಸ ಮಾಡುತ್ತವೆ. ಬೆಂಗಳೂರಿನ ನಾರಾಯಣ ಹೃದಯಾಲಯದ ಹಿರಿಯ ಸಮಾಲೋಚಕ ವೈದ್ಯ ಡಾ.ಮಹೇಶ್ ಕುಮಾರ್ ಅವರು ಉತ್ತಮ ಆರೋಗ್ಯಕ್ಕೆ ಮಲ್ಟಿವಿಟಮಿನ್‌ಗಳು ಯಾಕೆ ಬೇಕು ಎಂಬ ಬಗ್ಗೆ ಹೇಳಿದ್ದಾರೆ.

  ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

  ವಿಟಮಿನ್ ಕೊರತೆಯಿಂದ ಆಗುವ ಅನಾನುಕೂಲಗಳು

  ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪೋಷಕಾಂಶಗಳ ಕೊರತೆ ಮುಖ್ಯ ವಿಷಯವಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ವಿಟಮಿನ್ ಕೊರತೆ ಸಮಸ್ಯೆ ಎದುರಿಸುತ್ತಾರೆ. ಸಾಕಷ್ಟು ಜನರಿಗೆ ವಿಟಮಿನ್ ಮತ್ತು ಕೊರತೆಯ ಕಾರಣಗಳು ಮತ್ತು ಅಪಾಯಗಳ ಬಗ್ಗೆ ತಿಳಿದಿಲ್ಲ. ಈ ಜೀವಸತ್ವಗಳ ಕೊರತೆ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.

  ಜನಸಂಖ್ಯೆಯ ಸುಮಾರು 80ರಿಂದ 90 ಪ್ರತಿಶತ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಸುಮಾರು 19 ಪ್ರತಿಶತ ಪ್ರಿಸ್ಕೂಲ್ ಮಕ್ಕಳು ಮತ್ತು 32 ಪ್ರತಿಶತ ಹದಿಹರೆಯದವರು ಸತು ಕೊರತೆ ಇದೆ.

  ವಿಟಮಿನ್ ಕೊರತೆಗೆ ಮುಖ್ಯ ಕಾರಣಗಳು ಯಾವವು?

  ವಿಟಮಿನ್ ಕೊರತೆಗೆ ಕಳಪೆ ಜೀವನಶೈಲಿ, ಸ್ಥೂಲಕಾಯ, ಅತಿಯಾದ ಮದ್ಯಪಾನ, ಕಳಪೆ ಆಹಾರ, ಒತ್ತಡ ಮತ್ತು ವ್ಯಾಯಾಮದ ಕೊರತೆ ಮುಖ್ಯ ಕಾರಣಗಳಾಗಿವೆ.

  ವಿಟಮಿನ್ ಕೊರತೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು

  ದೀರ್ಘಕಾಲೀನ ವಿಟಮಿನ್ ಕೊರತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಗಾಗ್ಗೆ ಸೋಂಕು, ದೌರ್ಬಲ್ಯ, ಆಯಾಸ, ಉಸಿರಾಟ ತೊಂದರೆ, ತಲೆತಿರುಗುವಿಕೆ, ಅನಿಯಮಿತ ಹೃದಯ ಬಡಿತ, ತೂಕ ನಷ್ಟ, ಸ್ನಾಯು ದೌರ್ಬಲ್ಯ ಮತ್ತು ತುದಿಗಳು ಮತ್ತು ಪಾದಗಳಲ್ಲಿ ಮರಗಟ್ಟುವಿಕೆ ಸಮಸ್ಯೆ ಉಂಟು ಮಾಡುತ್ತದೆ.

  ಮಲ್ಟಿವಿಟಮಿನ್ ಮತ್ತು ಖನಿಜಗಳು ಯಾಕೆ ಅಗತ್ಯವಾಗಿವೆ?

  ಜೀವಸತ್ವಗಳು ಮತ್ತು ಖನಿಜಗಳು ಸಣ್ಣ ಪ್ರಮಾಣದಲ್ಲಿ ಮಾತ್ರ ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಬೇಕು. ವಿಟಮಿನ್ ಬಿ, ಸಿ ಮತ್ತು ಡಿ ಮತ್ತು ಸತು, ಕ್ರೋಮಿಯಂ ಮತ್ತು ಸೆಲೆನಿಯಂ ಖನಿಜಗಳು ನಮ್ಮ ರೋಗ ನಿರೋಧಕ ಶಕ್ತಿ ಸುಧಾರಿಸುತ್ತವೆ. ಉದಾಹರಣೆಗೆ, ವಿಟಮಿನ್ ಸಿ ಮತ್ತು ಸತು ಉತ್ಕರ್ಷಣ ನಿರೋಧಕಗಳು ಉಸಿರಾಟದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತವೆ.

  ಜೊತೆಗೆ, ಕಡಿಮೆ ಮಟ್ಟದ ವಿಟಮಿನ್ ಡಿ ಹೊಂದಿರುವರಲ್ಲಿ ಉಸಿರಾಟದ ಕಾಯಿಲೆಗಳಾದ ಇನ್ಫ್ಲುಯೆನ್ಸ ಮತ್ತು ಅಲರ್ಜಿಕ್ ಅಸ್ತಮಾದ ಅಪಾಯ ಹೆಚ್ಚಿಸುತ್ತದೆ. ಯಾವ ಪೋಷಕಾಂಶಗಳು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತವೆ, ಆರೋಗ್ಯಕರ ಜೀವನಕ್ಕೆ ಮತ್ತು ಸೋಂಕಿನ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ತಿಳಿಯಬೇಕು.

  ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

  ಯಾರಿಗೆ ಹೆಚ್ಚು ವಿಟಮಿನ್ ಅಗತ್ಯವಾಗಿದೆ?

  ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ವೈದ್ಯರ ಸಲಹೆ ಪಡೆದು ನಿಯಮಿತವಾಗಿ ಪೂರಕ ಸೇವಿಸುವುದು ಪ್ರಯೋಜನ ನೀಡುತ್ತದೆ. ಅಧಿಕ ರಕ್ತದೊತ್ತಡ ಅನುಭವಿಸುವವರು ನಿಯಮಿತ ವ್ಯಾಯಾಮ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು. ಸತು ಪೂರಕ ಸೇವಿಸಿ. ಇನ್ನು ಮಲ್ಟಿವಿಟಮಿನ್ ಪೂರಕ ಸೇವನೆ ಮೊದಲು ವೈದ್ಯರನ್ನು ಸಂಪರ್ಕಿಸಿ.
  Published by:renukadariyannavar
  First published: