cow vs buffalo milk: ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು? ಆರೋಗ್ಯಕ್ಕೆ ಯಾವುದು ಉತ್ತಮ..?

ಹಸುವಿನ ಹಾಲು ಅಥವಾ ಎಮ್ಮೆ ಹಾಲು ಎರಡರಲ್ಲಿ ಆರೋಗ್ಯಕ್ಕೆ ಯಾವ ಹಾಲು ಒಳ್ಳೆಯದು ಎಂದು ಗೊಂದಲ ಬಹುತೇಕರಲ್ಲಿದೆ

file photo

file photo

  • Share this:
ಎಮ್ಮೆ ಹಾಲು ಅಥವಾ ಹಸುವಿನ ಹಾಲು, ಎರಡೂ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು, ರುಚಿ ಮತ್ತು ವಿನ್ಯಾಸವನ್ನು ಹೊಂದಿವೆ. ಆದರೆ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ.ನಾವು ಎಲ್ಲಾ ಆಹಾರ ಮತ್ತು ಪಾನೀಯ ಉತ್ಪನ್ನಗಳಾದ ಕಾಫಿ ಹಾಗೂ ಟೀ ಇತರೆ ತಂಪು ಪಾನೀಯಗಳಿಗೆ ಹೋಲಿಸಿದರೆ ಹಾಲು ಮೊದಲ ಸ್ಥಾನಕ್ಕೆ ಬರುತ್ತದೆ. ಮೊಸರು, ಚೀಸ್ ಅಥವಾ ಬೆಣ್ಣೆಯಂತಹ  ರುಚಿಕರವಾದ ಮತ್ತು ಪೌಷ್ಟಿಕ ಉತ್ಪನ್ನಗಳನ್ನು ತಯಾರಿಸಲು ಹಾಲು ಪ್ರಮುಖ ಅಂಶವಾಗಿದೆ. ಶಿಶುಗಳು, ಮಕ್ಕಳು ಮತ್ತು ವಯಸ್ಕರ ಬೆಳವಣಿಗೆ ಮತ್ತು ಯೋಗಕ್ಷೇಮಕ್ಕೆ ಹಾಲು ಅತ್ಯಗತ್ಯ ಆಹಾರವಾಗಿದೆ ಮತ್ತು ಇದು ನೈಸರ್ಗಿಕವಾಗಿ ಕಂಡುಬರುವ ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಪ್ರೋಟೀನ್‌ಗಳಂತಹ ಎಲ್ಲಾ ಅಂಶವನ್ನು ಹೊಂದಿದೆ.

ಹಸುವಿನ ಹಾಲು ಅಥವಾ ಎಮ್ಮೆ ಹಾಲು ಎರಡರಲ್ಲಿ ಆರೋಗ್ಯಕ್ಕೆ ಯಾವ ಹಾಲು ಒಳ್ಳೆಯದು ಎಂದು ಜನರು ತುಂಬಾ ಗೊಂದಲಕ್ಕೊಳಗಾಗಿದ್ದಾರೆ. ಹಸು ಹಾಲು ಮತ್ತು ಎಮ್ಮೆ ಹಾಲು ಅನನ್ಯ ಪ್ರಯೋಜನಗಳನ್ನು ಮತ್ತು ಪರಿಮಳವನ್ನು ಹೊಂದಿವೆ.
ಹಸು ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು. ಇದರ  ವಿನ್ಯಾಸ ಹೇಗಿದೆ. ಯಾವ ಪೋಷಕಾಂಶಗಳಿವೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಹಸು ಹಾಲು  ಶೀಘ್ರ ಜೀರ್ಣವಾಗತ್ತೆ
ಹಸುವಿನ ಹಾಲು ಕಡಿಮೆ ಕೊಬ್ಬಿನಂಶವನ್ನು ಹೊಂದಿರುತ್ತದೆ ಮತ್ತು ತಿಳಿಯಾಗಿರುತ್ತದೆ. ಆದರೆ ಎಮ್ಮೆ ಹಾಲು ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿರುತ್ತದೆ ಮತ್ತು ಹೆಚ್ಚು ಕೆನೆಯಿಂದ ಕೂಡಿರುತ್ತದೆ. ಆದರಿಂದ ಹಸುವಿನ ಹಾಲನ್ನು ಜೀರ್ಣಿಸಿಕೊಳ್ಳಲು ಸುಲಭ ಹಾಗೂ ಇದು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ.

ಇದನ್ನು ಓದಿ: ಮನೆಗೆಲಸದ ಸಹಾಯಕಿ ಉಳಿತಾಯಕ್ಕೆ ಬೆರಗಾದ; ಮಾನವೀಯತೆ ಎಂದರೆ ಇದೆ ಅಲ್ವಾ

ಎಮ್ಮೆ ಹಾಲು ಜೀರ್ಣಸಲು ಸಮಯಬೇಕು

ಎಮ್ಮೆ ಹಾಲು ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ. ಆದರಿಂದ ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆ ಹಾಲನ್ನು ಜೀರ್ಣಿಸಿಕೊಳ್ಳುವುದು ಕಷ್ಟ.

ಎಮ್ಮೆ ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನೀಶಿಯಮ್ ಮತ್ತು ಪೊಟ್ಯಾಶಿಯಮ್ ಅಂಶ ಹೆಚ್ಚಿದ್ದರೆ, ಹಸುವಿನ ಹಾಲಿನಲ್ಲಿ ಹೆಚ್ಚಿನ ವಿಟಮಿನ್ ಅಂಶವಿದೆ. ಹಸುವಿನ ಹಾಲಿನ ಬಣ್ಣವು ಹಳದಿ ಇರುತ್ತದೆ. ಬೀಟಾ-ಕ್ಯಾರೋಟಿನ್ ವರ್ಣದ್ರವ್ಯವು ಬಣ್ಣರಹಿತ ವಿಟಮಿನ್- ಎ ಆಗಿ ಪರಿವರ್ತನೆಗೊಳ್ಳುವ ಕಾರಣ ಎಮ್ಮೆಯ ಹಾಲಿನ ಬಣ್ಣ ಬಿಳಿ ಇರುತ್ತದೆ.

ಇದನ್ನು ಓದಿ: ಮೂರನೇ ಅಲೆ ಭೀತಿ: ಮಕ್ಕಳ ಚಿಕಿತ್ಸೆಗಾಗಿ ರೆಡಿ ಆಗ್ತಿವೆ ಕಲರ್ ಫುಲ್ ವಾರ್ಡ್ ಗಳು..!

ಬಳಕೆ ಮತ್ತು ಸಂರಕ್ಷಣೆ
ಹಸುವಿನ ಹಾಲಿಗೆ ಹೋಲಿಸಿದರೆ ಎಮ್ಮೆಯ ಹಾಲು ದಪ್ಪವಾಗಿರುತ್ತದೆ .ಉತ್ತಮ ಕಾಟೇಜ್ ಚೀಸ್ ಮತ್ತು ಸಿಹಿತಿಂಡಿಗಳಿಗೆ ಎಮ್ಮೆಯ ಹಾಲು ಹೆಸರುವಾಸಿಯಾಗಿದೆ. ಎಮ್ಮೆ ಹಾಲು ಹೆಚ್ಚಿನ ಪೆರಾಕ್ಸಿಡೇಸ್ ಅನ್ನು ಹೊಂದಿರುವ ಕಾರಣ ಹೆಚ್ಚಿನ ಅವಧಿಗೆ ಸಂಗ್ರಹಿಸಬಹುದು. ಆದರೆ ಹಸುವಿನ ಹಾಲನ್ನು 1-2 ದಿನಗಳವರೆಗೆ ಮಾತ್ರ ಸಂಗ್ರಹಿಸಬಹುದು.

ಆರೋಗ್ಯ ಪ್ರಯೋಜನಗಳು

ಬೀಟಾ-ಲ್ಯಾಕ್ಟೋಗ್ಲೋಬ್ಯುಲಿನ್ ಮತ್ತು ಪೊಟ್ಯಾಶಿಯಮ್ ಅಂಶವನ್ನು ಎಮ್ಮೆ ಹಾಲು ಹೊಂದಿದೆ. ಇದು ಹಾಲಿನಲ್ಲಿರುವ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಮ್ಮೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್ ಇರುತ್ತದೆ. ಆದ್ದರಿಂದ, ಪಿಸಿಒಡಿ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆಗಳು ಮತ್ತು ಬೊಜ್ಜು ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಎಮ್ಮೆ ಹಾಲು ಉತ್ತಮ ಆಯ್ಕೆಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: