Dementia Problem: ವಯಸ್ಸಾಗುತ್ತಾ ಹೋದಂತೆ ಹೆಚ್ಚುವ ಬುದ್ಧಿಮಾಂದ್ಯತೆ ಕಡಿಮೆ ಮಾಡಲು ಯಾವ ವಿಧಾನ ಪ್ರಯೋಜನಕಾರಿ?

ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ರೋಗಿಯು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟ ಪಡುತ್ತಾನೆ. ಅವನು ತನ್ನನ್ನೇ ತಾನು ಮರೆಯುತ್ತಾನೆ. ಅಂದ್ರೆ ತಾನ್ಯಾರು, ತನ್ನ ಹೆಸರೇನು, ಮನೆ ಎಲ್ಲಿದೆ? ಎಂಬ ತನ್ನ ಸ್ವಂತ ಗುರುತನ್ನು ಮರೆತು ಬಿಡುವ ಆತಂಕ ಕುಟುಂಬಸ್ಥರಲ್ಲಿ ಇದ್ದೇ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಯಸ್ಸಾದವರಿಗೆ (Aged People) ಅರಳು ಮರಳು ಅಂತಾ ಹೇಳೋದನ್ನ ನೀವು ಕೇಳಿಯೇ ಇರ್ತೀರಿ. ಆದರೆ ಇಂದಿನ ದಿನಗಳಲ್ಲಿ ವಯಸ್ಸಾದವರಿಗಿಂತ ವಯಸ್ಕರರಲ್ಲೇ (Youths) ಅರಳು ಮರಳು ಶುರುವಾಗಿದೆ. ಇದರ ಹಿಂದೆ ಹಲವು ಕಾರಣಗಳು (Causes) ಇರಬಹುದು. ಆದರೆ ಮರೆವು (Forgetting) ಒಂದು ಕಾಯಿಲೆಯಾಗಿದೆ. ಅದರಲ್ಲೂ ಗಂಭೀರ ವಿಷಯ ಅಂದರೆ ಅದು ಬುದ್ಧಿಮಾಂದ್ಯತೆ. ಮರೆವಿನ ಕಾಯಿಲೆಯೇ ಆಗಿದ್ದರೂ ಇದುವರೆಗೂ ಸರಿಯಾದ ಅರ್ಥ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಬುದ್ಧಿಮಾಂದ್ಯತೆ ಇದನ್ನು ಗುಣಪಡಿಸಲು ಇಂದಿನ ವಿಜ್ಞಾನವು ಸಹ  ಹೆಚ್ಚು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ಮಿತಿಯ ನಂತರ ಮರೆವಿನ ಕಾಯಿಲೆ ಮತ್ತಷ್ಟು ಬಲಗೊಳ್ಳುತ್ತಾ ಹೋಗುತ್ತದೆ.

  ಮರೆವಿನ ಕಾಯಿಲೆ

  ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ರೋಗಿಯು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟ ಪಡುತ್ತಾನೆ. ಅವನು ತನ್ನನ್ನೇ ತಾನು ಮರೆಯುತ್ತಾನೆ. ಅಂದ್ರೆ ತಾನ್ಯಾರು, ತನ್ನ ಹೆಸರೇನು, ಮನೆ ಎಲ್ಲಿದೆ? ಎಂಬ ತನ್ನ ಸ್ವಂತ ಗುರುತನ್ನು ಮರೆತು ಬಿಡುವ ಆತಂಕ ಕುಟುಂಬಸ್ಥರಲ್ಲಿ ಇದ್ದೇ ಇರುತ್ತದೆ.

  ಬುದ್ಧಿಮಾಂದ್ಯತೆಯ ಆರಂಭಿಕ ಹಂತವೇ ಮರೆವು

  ಮರೆವಿನ ಕಾಯಿಲೆ, ಬುದ್ಧಿಮಾಂದ್ಯತೆಯ ಆರಂಭಿಕ ಹಂತವಾಗಿದೆ. ಆದರೆ ಇದು ಕೆಲವೊಮ್ಮೆ ಅಪಘಾತ ಹಾಗೂ ಇತರೆ ವಿಷಯ ಮತ್ತು ಸನ್ನಿವೇಶಗಳಲ್ಲಿ ಉಂಟಾಗಿರುತ್ತದೆ. ಮನಸ್ಸಿನ ಅಸಮರ್ಥತೆಯಿಂದಾಗಿ ಭಾವನಾತ್ಮಕ ಅಥವಾ ಸಾಮಾಜಿಕ ಆಘಾತದ ಪರಿಣಾಮದಿಂದಲೂ ಮರೆವು ಉಂಟಾಗುತ್ತದೆ.

  ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

  ಮರೆವು ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಜೀವನದ ಕೊನೆಯಲ್ಲಿ ಸಂಭವಿಸುತ್ತದೆ. ಬುದ್ಧಿಮಾಂದ್ಯತೆಯು ಒಂದು ರೋಗವಲ್ಲ. ಆದರೆ ಗಂಭೀರ ಮಾನಸಿಕ ಕಾಯಿಲೆಗೆ ಕಾರಣವಾಗುವ ರೋಗ ಲಕ್ಷಣಗಳ ಸರಣಿಯಾಗಿದೆ.

  ಪ್ರೀತಿಪಾತ್ರರನ್ನು ಕಳೆದುಕೊಂಡು ಬಿಡುತ್ತೇವೋ ಎಂಬ ಭಯ

  ಯಾರದ್ದಾದರೂ ಕುಟುಂಬದಲ್ಲಿ ಬುದ್ಧಿಮಾಂದ್ಯತೆ ಅಥವಾ ಮರೆವಿನ ಕಾಯಿಲೆಯಿಂದ  ಬಳಲುತ್ತಿರುವ ರೋಗಿಯಿದ್ದರೆ, ಇಡೀ ಕುಟುಂಬವು ತೊಂದರೆಗೊಳಗಾಗುತ್ತದೆ. ಏಕೆಂದರೆ ಈ ರೋಗ  ಅಪರಿಚಿತ ಮತ್ತು ಭಯ ಹುಟ್ಟು ಹಾಕುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎಂಬ ಭಯ.

  ಇನ್ನು ವಯಸ್ಸಾದಂತೆ, ಬುದ್ಧಿಮಾಂದ್ಯತೆ ಅಂದರೆ ಮರೆವಿನ ಅಪಾಯ ಹೆಚ್ಚುತ್ತದೆ. ಇಂಥ ಬುದ್ದಿಮಾಂದ್ಯತೆಯಿಂದ ನಿಮ್ಮ ಮನೆಯ ಹಿರಿಯರನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾದ ಕೆಲವು ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ಸೇರಿಸುವಂತೆ ಹೇಳಿ ಕೊಡಿ. ಇಲ್ಲಿವೆ ಕೆಲವು ಸುಲಭ ಸಲಹೆಗಳು...

  ಬುದ್ಧಿಮಾಂದ್ಯತೆ ಏಕೆ ಸಂಭವಿಸುತ್ತದೆ?

  ಬುದ್ಧಿಮಾಂದ್ಯತೆ ಕಾಯಿಲೆಯು ಮೆದುಳಿನ ಜೀವಕೋಶಗಳ ನಡುವಿನ ಪರಸ್ಪರ ಸಂಪರ್ಕದಲ್ಲಿ ಅಡಚಣೆ ಉಂಟಾದಾಗ ಉದ್ಭವಿಸುತ್ತದೆ. ಗಾಯದಿಂದಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುತ್ತದೆ ಅಥವಾ ವಯಸ್ಸಾದ ಕಾರಣ ಮೆದುಳಿನ ನರಗಳಲ್ಲಿ ನಯಗೊಳಿಸುವಿಕೆಯ ಕೊರತೆಯಿಂದ ಉಂಟಾಗುತ್ತದೆ.

  ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅದರ ಪರಿಣಾಮ ಬೇರೆ ಬೇರೆ ಮಟ್ಟದಲ್ಲಿ ಕಾಣಬಹುದು. ಏಕೆಂದರೆ ಈ ರೋಗದ ಪರಿಣಾಮ ಮೆದುಳಿನ ಯಾವ ಭಾಗವು ಪರಿಣಾಮ ಬೀರುತ್ತದೆ ಮತ್ತು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಅವಲಂಬನೆ ಆಗಿರುತ್ತದೆ.

  ಬುದ್ಧಿಮಾಂದ್ಯತೆ ತಪ್ಪಿಸಲು ಏನು ಮಾಡಬೇಕು?

  ಮರೆವು ಮೆದುಳಿಗೆ ಸಂಬಂಧಿಸಿದೆ. ಹಾಗಾಗಿ ಇದರ ಮೊದಲ ಮತ್ತು ಸ್ಪಷ್ಟವಾದ ಕೆಲಸ ಅಂದ್ರೆ ನಿಮ್ಮ ಮೆದುಳಿಗೆ ಸಂಪೂರ್ಣ ವಿಶ್ರಾಂತಿ ನೀಡುವುದು.

  ವಯಸ್ಸಾದಂತೆ ನಿದ್ರೆಯು ಕಡಿಮೆಯಾಗುತ್ತದೆ. ಆದರೆ ನೀವು ಪ್ರತಿದಿನ ದೈಹಿಕವಾಗಿ ಸಕ್ರಿಯವಾಗಿ, ಚಟುವಟಿಕೆಯಿಂದಿರಲು ಪ್ರಯತ್ನ ಮಾಡಬೇಕು. ಇದರಿಂದ ನಿದ್ರೆ ಸರಿಯಾದ ಪ್ರಮಾಣದಲ್ಲಿ ಬರುತ್ತದೆ. ನಿದ್ರೆ ಚೆನ್ನಾಗಿ ಆದಾಗ ಮನಸ್ಸು ಕೂಡ ಶಾಂತವಾಗುತ್ತದೆ.

  ಬುದ್ಧಿಮಾಂದ್ಯತೆ ತಪ್ಪಿಸಲು ಮತ್ತೊಂದು ಅತ್ಯಂತ ಪರಿಣಾಮಕಾರಿ ಮತ್ತು ಸುಲಭ ಮಾರ್ಗವೆಂದರೆ ಮೆದುಳಿಗೆ ಹೆಚ್ಚು ಕೆಲಸ ನೀಡುವ ಆಟಗಳನ್ನು ಆಡುವುದು. ಕುಟುಂಬದ ಮಕ್ಕಳೊಂದಿಗೆ ಆಟೋಟದಲ್ಲಿ ಭಾಗಿಯಾಗಿ. ಅವರ ಮಾತು ಕೇಳಿ, ನಗು ಆಲಿಸಿ. ತೊದಲು ನುಡಿಗಳ ಅನುಭವ, ಹಾಡು, ಕಥೆಗಳನ್ನು ಹೇಳಿ.

  ಯೋಗ ಮತ್ತು ಧ್ಯಾನ

  ಸಾಮಾಜಿಕವಾಗಿ ಹೆಚ್ಚು ಓಡಾಡಿಕೊಂಡಿರಿ. ಇದು ಬುದ್ಧಿಮಾಂದ್ಯತೆ ತಪ್ಪಿಸುತ್ತದೆ. ನೀವು ಏಕಾಂಗಿಯಾಗಿರುವುದನ್ನು ತಪ್ಪಿಸಿ. ನಿಮ್ಮ ಸ್ನೇಹಿತರು, ಕುಟುಂಬ, ಸಂಬಂಧಿಕರೊಂದಿಗೆ ಸಮಯ ಕಳೆಯಿರಿ. ಕ್ಲಬ್‌ಗೆ ಸೇರಿ. ಅಥವಾ ನೀವು ಯೋಗ ಮತ್ತು ಧ್ಯಾನ ಕೇಂದ್ರಕ್ಕೆ ಸೇರಬಹುದು.

  ಸಂಗೀತವನ್ನು ಕೇಳಿ. ಹಾಡು ಹಾಡುತ್ತ ಇರಿ. ಹಾಡು ಕೇಳುವುದರಿಂದ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ. ನೀವು ವಾದ್ಯ ನುಡಿಸಲು ಕಲಿಯಿರಿ.

  ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

  ಉಸಿರಾಟದ ವ್ಯಾಯಾಮ ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ. ಆದ್ದರಿಂದ, ಯೋಗ ಮತ್ತು ಧ್ಯಾನದ ಜೊತೆಗೆ, ಪ್ರಾಣಾಯಾಮ ಮಾಡಿ.
  Published by:renukadariyannavar
  First published: