Fruits Eating Benefits: ಮಧುಮೇಹ ಮತ್ತು ಸ್ಥೂಲಕಾಯ ತಡೆಗೆ ಯಾವ ರೀತಿಯ ಹಣ್ಣುಗಳ ಸೇವನೆ ಬೆಸ್ಟ್? ತಜ್ಞರ ಸಲಹೆ ಹೀಗಿದೆ

ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರವಾಗಿರಲು ಮತ್ತು ಫಿಟ್ ಆಗಿರಲು ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಹೊಡೆದೋಡಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಅಲ್ಲದೇ ತಪ್ಪದೇ ದಿನವೂ ಯಾವುದಾದರೂ ಒಂದು ಹಣ್ಣು ಸೇವನೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಣ್ಣುಗಳ (Fruits) ಸೇವನೆಯಿಂದ (Eating) ಯಾವೆಲ್ಲಾ ಪ್ರಯೋಜನಗಳು (Benefits) ದೇಹಕ್ಕೆ (Body) ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವರು ತಮ್ಮ ಆರೋಗ್ಯ (Health) ಮತ್ತು ಪ್ರಯೋಜನ ನೀಡುವಂತಹ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಬಂದು ಸೇವನೆ ಮಾಡುತ್ತಾರೆ. ಇನ್ನು ಕೆಲವರು ಎಲ್ಲಾ ರೀತಿಯ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಸಾಕಷ್ಟು ರೀತಿಯ ಪೋಷಕಾಂಶಗಳು ಹಣ್ಣುಗಳಲ್ಲಿ ಕಂಡು ಬರುತ್ತವೆ. ಇದು ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ತುಂಬಾ ಅವಶ್ಯಕ ಆಗಿದೆ. ಹಣ್ಣುಗಳ ಪ್ರಯೋಜನ ತಿಳಿದ ಹೆಚ್ಚಿನವರು ಹಣ್ಣುಗಳನ್ನು ಸೇವಿಸದೇ ಇರುವುದಿಲ್ಲ. ಕೆಲವರು ಸೀಸನಲ್ ಹಣ್ಣುಗಳನ್ನು ಮಿಸ್ ಮಾಡದೇ ತಿನ್ನುತ್ತಾರೆ.

    ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದು ಹೆಲ್ದೀ ಆಗಿರಲು ಸಹಕಾರಿ

    ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರವಾಗಿರಲು ಮತ್ತು ಫಿಟ್ ಆಗಿರಲು ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಹೊಡೆದೋಡಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ತಪ್ಪದೇ ದಿನವೂ ಯಾವುದಾದರೂ ಒಂದು ಹಣ್ಣು ಸೇವನೆ ಮಾಡಲು ಸಲಹೆ ನೀಡುತ್ತಾರೆ.

    ಮಧುಮೇಹ ಮತ್ತು ಸ್ಥೂಲಕಾಯತೆ ನಿಯಂತ್ರಣಕ್ಕೆ ಹಣ್ಣು ಸೇವನೆ ಮಾಡಿ

    ನೀವು ಮಧುಮೇಹ ಮತ್ತು ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ತೊಂದರೆಗೆ ಒಳಗಾಗಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ದಿನವೂ ಹಣ್ಣುಗಳನ್ನು ಸೇವಿಸಬೇಕು. ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ರಿಸರ್ಚ್‌ನ ಜುಲೈ 2022 ರ ಸಂಚಿಕೆಯಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ಪಾಲಿಫಿನಾಲ್‌ಗಳು ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.

    ಇದನ್ನೂ ಓದಿ: ಮಧುಮೇಹಿಗಳಿಗೆ ಈ ಚಹಾ ವರದಾನವಾಗಿದೆ! ಪ್ರತಿನಿತ್ಯ ಸೇವಿಸಿ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ!

    ಇದು ಮಧುಮೇಹ ಮತ್ತು ಬೊಜ್ಜು ಅಪಾಯ ಕಡಿಮೆ ಮಾಡುತ್ತದೆ. ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ತರಕಾರಿಗಳನ್ನೂ ಸಹ ನಿಯಮಿತವಾಗಿ ಸೇವನೆ ಮಾಡಬೇಕು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

    ಪಾಲಿಫಿನಾಲ್‌ಗಳು ಎಂದರೇನು?

    ಪಾಲಿಫಿನಾಲ್‌ಗಳು ದೇಹದಲ್ಲಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುವ ಪ್ರಯೋಜನಕಾರಿ ಸಸ್ಯ ಸಂಯುಕ್ತಗಳು ಆಗಿವೆ. ಅವುಗಳು ದೇಹದ ಅಂಗಾಂಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಕ್ಯಾನ್ಸರ್, ಪರಿಧಮನಿಯ ಕಾಯಿಲೆ ಮತ್ತು ಉರಿಯೂತದಂತಹ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಮಾಡಲು ಸಹಾಯ ಮಾಡುತ್ತವೆ.

    ಮಧುಮೇಹ ಮತ್ತು ಸ್ಥೂಲಕಾಯತೆ ತಡೆಗೆ ಹಣ್ಣುಗಳು ಮದ್ದು

    ಸಂಶೋಧಕರ ಪ್ರಕಾರ, ಪಾಲಿಫಿನಾಲ್‌ಗಳು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ಮತ್ತು ಟೈಪ್ 2 ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಕೆಲವು ದೀರ್ಘಕಾಲದ ಚಯಾಪಚಯ ಕಾಯಿಲೆಗಳ ಮೇಲೆ ಉರಿಯೂತದ ಪರಿಣಾಮ ಹೊಂದಿವೆ.

    ಅಧ್ಯಯನದಲ್ಲಿ ಸಂಶೋಧಕರು, ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಪಾಲಿಫಿನಾಲ್‌ಗಳ ಪರಿಣಾಮಗಳನ್ನು ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆಯ ಅಪಾಯ ಕಡಿಮೆ ಮಾಡಲು ಪರಿಶೀಲನೆ ಮಾಡಿದ್ದಾರೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆ ಕಡಿಮೆ ಮಾಡುವಲ್ಲಿ ಪಾಲಿಫಿನಾಲ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದ್ದಾರೆ.

    ಪಾಲಿಫಿನಾಲ್‌ಗಳು ಡಯಾಬಿಟಿಸ್ ಮತ್ತು ಬೊಜ್ಜನ್ನು ಹೇಗೆ ಕಡಿಮೆ ಮಾಡುತ್ತವೆ?

    ಹಸಿವಿನ ಹಾರ್ಮೋನ್ ಲೆಪ್ಟಿನ್ ಅನ್ನು ನಿಯಂತ್ರಿಸುವಲ್ಲಿ ಪಾಲಿಫಿನಾಲ್ಗಳು ಪಾತ್ರ ವಹಿಸುತ್ತವೆ. ಪಾಲಿಫಿನಾಲ್-ಭರಿತ ಆಹಾರ ತಿನ್ನುವುದು ಹಸಿವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಬೊಜ್ಜು ಅಪಾಯ ಕಡಿಮೆ ಮಾಡುತ್ತದೆ. ಕೊಬ್ಬಿನಾಮ್ಲ ಆಕ್ಸಿಡೀಕರಣದ ಮೂಲಕ ಕೊಬ್ಬನ್ನು ಒಡೆಯಲು ಸಹಾಯ ಮಾಡುತ್ತದೆ.

    ಇದರಿಂದ ಈ ಸಂಯುಕ್ತಗಳು ನಿಮ್ಮ ಚಯಾಪಚಯ ಕ್ರಿಯೆಗೆ ಸಾಕಷ್ಟು ಪ್ರಯೋಜನಕಾರಿ ಆಗಿವೆ. ಪಾಲಿಫಿನಾಲ್‌ಗಳ ಸೇವನೆ ಬೊಜ್ಜು ಕಡಿಮೆ ಮಾಡುತ್ತದೆ. ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

    ಯಾವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪಾಲಿಫಿನಾಲ್ಗಳು ಇವೆ?

    ಅಧ್ಯಯನದ ಪ್ರಕಾರ, ನೀವು ಪಾಲಿಫಿನಾಲ್‌ಗಳಲ್ಲಿ ಅಧಿಕವಾಗಿರುವ ಹಣ್ಣುಗಳೆಂದರೆ ಬ್ಲೂಬೆರ್ರಿ, ಕಪ್ಪು ದ್ರಾಕ್ಷಿ, ಬ್ಲ್ಯಾಕ್‌ಬೆರಿ, ಚೋಕ್‌ಬೆರ್ರಿಗಳನ್ನು ತಿನ್ನಬೇಕು. ಎಲ್ಡರ್‌ಬೆರಿ ಮತ್ತು ಸೇಬು ಸೇವಿಸಬೇಕು.
    Published by:renukadariyannavar
    First published: