Strange Disease: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

ಅರ್ಜೆಂಟಿನಾ ಆರೋಗ್ಯ ಸಚಿವ ಲೂಯಿಸ್ ಮದೀನಾ ರೂಯಿಜ್ ನ್ಯೂಮೋನಿಯಾ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಕ್ಲಿನಿಕ್‌ನಲ್ಲಿ ಎಂಟು ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಒಂಬತ್ತು ಜನರಿಗೆ ನ್ಯುಮೋನಿಯಾ ತರಹದ ಉಸಿರಾಟದ ಕಾಯಿಲೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋವಿಡ್ 19 ಸಾಂಕ್ರಾಮಿಕ ರೋಗ (Disease) ಜಗತ್ತಿನಾದ್ಯಂತ (World) ಮರಣಮೃದಂಗ ಬಾರಿಸಿದ ನಂತರ ಸಾಕಷ್ಟು ವಾತಾವರಣದಲ್ಲಿ (Weather) ಬದಲಾವಣೆ ಕಂಡು ಬಂದಿತು. ಜೊತೆಗೆ ಅನೇಕ ಹೊಸ ರೋಗಗಳು ಜನರನ್ನು (People) ಈಗಲೂ ಬಾಧಿಸುತ್ತಿವೆ. ಅವುಗಳಲ್ಲಿ ಕೆಲವು ಅಪರೂಪದ ಕಾಯಿಲೆಗಳು ಆಗಿವೆ. ಮತ್ತು ಕೆಲವು ಕಾಯಿಲೆಗಳ ಬಗ್ಗೆ ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಇತ್ತೀಚೆಗಷ್ಟೇ ಅರ್ಜೆಂಟೀನಾದ ಟುಕುಮಾನ್ ಪ್ರಾಂತ್ಯದಲ್ಲಿ ವಿಚಿತ್ರ ಕಾಯಿಲೆಗೆ ತುತ್ತಾಗಿ ನಾಲ್ಕು ಮಂದಿ ಮೃತಪಟ್ಟ ಘಟನೆ ನಡೆದಿದ್ದು, ಜನರನ್ನು ತಲ್ಲಣಗೊಳಿಸಿದೆ. ನ್ಯುಮೋನಿಯಾ ಕಾಯಿಲೆ ಗಂಭೀರ ಸ್ವರೂಪದ ಕಾಯಿಲೆ ಆಗಿದೆ. ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ಜನರನ್ನು ಬಾಧಿಸುತ್ತವೆ. ಈಗ ಅರ್ಜೆಂಟೀನಾದ ಟುಕುಮಾನ್ ಪ್ರಾಂತ್ಯದಲ್ಲಿ ಈ ರೋಗ ವರದಿ ಆಗಿದೆ.

    ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು

    ಆರೋಗ್ಯ ಸಚಿವ ಲೂಯಿಸ್ ಮದೀನಾ ರೂಯಿಜ್, ನ್ಯೂಮೋನಿಯಾ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಕ್ಲಿನಿಕ್‌ನಲ್ಲಿ ಎಂಟು ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಒಂಬತ್ತು ಜನರಿಗೆ ನ್ಯುಮೋನಿಯಾ ತರಹದ ಉಸಿರಾಟದ ಕಾಯಿಲೆ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದು ಲೆಜಿಯೊನೈರ್ಸ್ ಕಾಯಿಲೆ ಎಂದು ಹೇಳಲಾಗುತ್ತಿದೆ - ಇದು ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ಆಗಿದೆ. ಇನ್ನೂ ಕೆಲವರು ಇದರ ಸೋಂಕಿಗೆ ಒಳಗಾಗಿದ್ದಾರೆ.

    ಇದನ್ನೂ ಓದಿ: ಋತುಚಕ್ರ ನಿಲ್ಲುವ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆ ಹೀಗಿದ್ದರೆ ಚೆಂದ

    ಲೆಜಿಯೊನೈರ್ಸ್ ಕಾಯಿಲೆ ಎಂದರೇನು?

    ಲೆಜಿಯೊನೈರ್ಸ್ ಕಾಯಿಲೆಯು ನ್ಯುಮೋನಿಯಾದ ಗಂಭೀರ ವಿಧಗಳಲ್ಲಿ ಒಂದಾಗಿದೆ. ಅಂದರೆ ಲೆಜಿಯೊನೆಲ್ಲಾ ಬ್ಯಾಕ್ಟೀರಿಯಾದಿಂದ ಉಂಟಾಗುವ ಶ್ವಾಸಕೋಶದ ಸೋಂಕು ಇದಾಗಿದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಅಥವಾ ಬಾಯಿಯಲ್ಲಿರುವ ಹನಿಗಳಿಂದ ವ್ಯಕ್ತಿಯು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

    ಈ ರೋಗವು ಮೊದಲ ಬಾರಿಗೆ 1976 ರಲ್ಲಿ US ನಗರದ ಫಿಲಡೆಲ್ಫಿಯಾದಲ್ಲಿ US ಆರ್ಮಿ ಗ್ರೂಪ್ನ ಸಭೆಯಲ್ಲಿ ಕಾಣಿಸಿಕೊಂಡಿತು. ಇದು ಕಲುಷಿತ ನೀರು ಅಥವಾ ಅಸ್ವಚ್ಛತೆಯ ಹವಾ ನಿಯಂತ್ರಣ ವ್ಯವಸ್ಥೆಯ ಜೊತೆಗೆ ಸಂಬಂಧ ಪಟ್ಟಿದೆ.

    ಲೆಜಿಯೊನೈರ್ಸ್ ಕಾಯಿಲೆಯ ಲಕ್ಷಣಗಳು ಯಾವವು?

    ಲೆಜಿಯೊನೈರ್ಸ್ ಕಾಯಿಲೆಯ ಲಕ್ಷಣಗಳು ನ್ಯುಮೋನಿಯಾ ಮತ್ತು ಕೋವಿಡ್ ತರಹವೇ ಇರುತ್ತವೆ. ಲಕ್ಷಣಗಳು ಒಂದೇ ತೆರನಾಗಿ ಇರುತ್ತವೆ.

    ಉಸಿರಾಟದ ತೊಂದರೆ, ಅಧಿಕ ಜ್ವರ, ಮೈ ಕೈ ನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿಯವರೆಗೆ ಎಲ್ಲಾ ಪ್ರಕರಣಗಳು ಒಂದೇ ಆರೋಗ್ಯ ಚಿಕಿತ್ಸಾಲಯಕ್ಕೆ ಸಂಬಂಧಿಸಿವೆ. ಲೆಜಿಯೊನೈರ್ಸ್ ಕಾಯಿಲೆಯ ಮೊದಲ ಪ್ರಕರಣಗಳು ಆಗಸ್ಟ್ 18 ಮತ್ತು 22 ರ ನಡುವೆ ವರದಿ ಆಗಿದೆ.

    ಲೆಜಿಯೊನೈರ್ಸ್ ಕಾಯಿಲೆಯಿಂದ ಎಪ್ಪತ್ತು ವರ್ಷದ ಮಹಿಳೆಯೊಬ್ಬರ ಸಾವು

    ಮದೀನಾ ರೂಯಿಜ್ ಅವರು ಹೇಳಿದ ಪ್ರಕಾರ, ಲೆಜಿಯೊನೈರ್ಸ್ ಕಾಯಿಲೆಯಿಂದ 70 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅವರು ಕ್ಲಿನಿಕ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಏಕಾಏಕಿ ಲೆಜಿಯೊನೈರ್ಸ್ ಕಾಯಿಲೆಗೆ ತುತ್ತಾಗಿದ್ದಾರೆ. ಏಕಾಏಕಿ ಕೆಲವೇ ಗಂಟೆಗಳಲ್ಲಿ ರೋಗದಿಂದ ಸೋಂಕಿಗೆ ಒಳಗಾದ ಜನಸಂಖ್ಯೆಯಲ್ಲಿ ಇವರು ಮೊದಲ ವ್ಯಕ್ತಿ ಮತ್ತು ಮೃತಪಟ್ಟ ಮಹಿಳೆ ಎಂದಿದ್ದಾರೆ.

    ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಯಾವುದೇ ಪುರಾವೆಗಳು ಕಂಡು ಬಂದಿಲ್ಲ

    ಆರೋಗ್ಯ ಸಚಿವರು ಹೇಳುವ ಪ್ರಕಾರ, ಪ್ರಸ್ತುತ ಇಬ್ಬರು ಲೆಜಿಯೊನೈರ್ಸ್ ಕಾಯಿಲೆಯ ಸ್ಥಿತಿಯಿಂದ ಬಳಲುತ್ತಿದ್ದಾರೆ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾಯಿಲೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಯಾವುದೇ ಪುರಾವೆಗಳು ಇನ್ನೂ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

    ಅರ್ಜೆಂಟೀನಾದ ಆರೋಗ್ಯ ಅಧಿಕಾರಿಗಳು ಏಕಾಏಕಿ ಲೆಜಿಯೊನೈರ್ಸ್ ಕಾಯಿಲೆಯ ಮೂಲ ಮತ್ತು ಸ್ವರೂಪವನ್ನು ಅಧ್ಯಯನ ಮಾಡುತ್ತಿದ್ದಾರೆ. ರೋಗಿಗಳನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಲಾಗಿದೆ.

    ಇದನ್ನೂ ಓದಿ: ನಿಮ್ಮ ಆಹಾರ ಪದ್ದತಿ ಹೀಗಿದ್ರೆ ಆರೋಗ್ಯ ಸಮಸ್ಯೆಗಳು ಕಾಡಲ್ವಂತೆ ನೆನಪಿರಲಿ

    ಟುಕುಮಾನ್ ಪ್ರಾಂತೀಯ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಹೆಕ್ಟರ್ ಸೆಲ್ ಪ್ರಕಾರ, ಈ ಸಮಯದಲ್ಲಿ ಯಾವುದೇ ರೋಗಿಯನ್ನು ಇತರ ರೋಗಿಗಳ ಜೊತೆ ಇರಿಸಲಾಗಿಲ್ಲ. ಹಾಗಾಗಿ ಈ ಕಾಯಿಲೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಬಗ್ಗೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
    Published by:renukadariyannavar
    First published: