Tea Preparing Method: ಚಹಾ ಮಾಡುವುದು ಎಲ್ಲರಿಗೂ ಗೊತ್ತು, ಆದ್ರೆ ಚಹಾ ಮಾಡುವ ಸರಿಯಾದ ವಿಧಾನ ಗೊತ್ತಾ? ಇಲ್ಲಿದೆ ಟೇಸ್ಟಿ ಮಾಹಿತಿ!

ನೀವು ಚಹಾ ಮಾಡುವ ವಿಧಾನ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೋ ಇಲ್ಲವೋ ಎಂಬುದನ್ನು ಕಂಡು ಹಿಡಿಯಬೇಕು. ಚಹಾ ಮಾಡುವಾಗ ಜನರು ಯಾವ ತಪ್ಪುಗಳನ್ನು ಮಾಡುತ್ತಾರೆ? ಮತ್ತು ಚಹಾ ಮಾಡುವ ಸರಿಯಾದ ಮಾರ್ಗ ಯಾವುದು ಎಂದು ಇಲ್ಲಿ ತಿಳಿಯಿರಿ. ಈ ಮಳೆಗೆ ಸಖತ್ ಟೇಸ್ವಿ ಚಹಾ ನೀವೂ ಮಾಡಿ ಕುಡಿಯಿರಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಹುತೇಕರು ಬೆಳಗ್ಗೆ (Morning) ಒಂದು ಕಪ್ (One Cup) ಚಹಾ (Tea) ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ನೀವು ಬೆಳಿಗ್ಗೆ ಚಹಾ ಕುಡಿಯದೇ ಇದ್ದರೆ ಏನೋ ಕಳೆದುಕೊಂಡಂತೆ ಅನುಭವ (Feeling) ಪಡೆಯಬಹುದು. ಇದಕ್ಕೆ ಕಾರಣ ನೀವು ಚಹಾ ಕುಡಿಯುವ ಸಮಯ (Time) ಮತ್ತು ಚಹಾಕ್ಕೆ ಅಡಿಕ್ಟ್ ಆಗಿರುವುದು. ಕೆಲವರಿಗೆ ಟೀ ಕುಡಿಯುವ ಚಟ ಜಾಸ್ತಿ. ಮಾತನಾಡುತ್ತ, ವಾಕಿಂಗ್ ಹೋದಾಗ, ತಿಂಡಿ ತಿಂದನ ನಂತರ ಹೀಗೆ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಎಷ್ಟೇ ಬಿಜಿಯಾಗಿದ್ದರೂ ಚಹಾ ಇಲ್ಲದೆ ಕೆಲಸ ಮಾಡುವುದೇ ಇಲ್ಲ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ಜನರು ಚಹಾ ಕುಡಿಯುವುದನ್ನು ಕಾಣಬಹುದು. ಪ್ರತಿಯೊಬ್ಬರ ಟೀ ಮಾಡುವ ವಿಧಾನ ವಿಭಿನ್ನವಾಗಿರುತ್ತದೆ.

  ಚಹಾ ಕುಡಿಯುವುದು ಮತ್ತು ಮಾಡುವ ವಿಧಾನದಲ್ಲೂ ವೈವಿಧ್ಯತೆ

  ಕೆಲವರು ಗಟ್ಟಿಯಾದ ಚಹಾ ಅಂದರೆ ಹಾಲು ಹಾಕಿದ ಹಾಗೂ ಹಾಲಿನಲ್ಲೇ ಮಾಡಿದ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಕೆಲವರು ಶುಂಠಿ ಹಾಕಿ ಮಾಡಿದ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಕೆಲವರು ತುಳಸಿ ಮತ್ತು ಏಲಕ್ಕಿಯಿಂದ ಮಾಡಿದ ಚಹಾ ಹಾಗೂ ಕೆಲವರು ಮಸಾಲೆ ಹಾಗೂ ಬ್ಲ್ಯಾಕ್ ಟೀ ಇಷ್ಟ ಪಡುತ್ತಾರೆ.

  ಪ್ರತಿದಿನ ಬೆಳಗ್ಗೆ ಮನೆಯಿಂದ ಚಹಾದ ವಾಸನೆ ಬಂದೇ ಬರುತ್ತದೆ. ಆದರೆ ಟೀ ಮಾಡುವ ಸರಿಯಾದ ವಿಧಾನ ಯಾವುದು ಎಂದು ನಿಮಗೆ ಗೊತ್ತಾ? ನೀವು ಚಹಾ ಮಾಡುವ ವಿಧಾನ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೋ ಇಲ್ಲವೋ ಎಂಬುದನ್ನು ಕಂಡು ಹಿಡಿಯಬೇಕು. ಚಹಾ ಮಾಡುವಾಗ ಜನರು ಯಾವ ತಪ್ಪುಗಳನ್ನು ಮಾಡುತ್ತಾರೆ? ಮತ್ತು ಚಹಾ ಮಾಡುವ ಸರಿಯಾದ ಮಾರ್ಗ ಯಾವುದು ಎಂದು ಇಲ್ಲಿ ತಿಳಿಯಿರಿ.

  ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಈ ಕ್ರಮಗಳನ್ನು ಫಾಲೋ ಮಾಡಿ!

  ಚಹಾ ಮಾಡುವಾಗ ಮಾಡುವ ತಪ್ಪುಗಳು

  ಸಾಮಾನ್ಯವಾಗಿ ಜನರು ಚಹಾ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕೆಲವರು ಮೊದಲು ಹಾಲು ತೆಗೆದುಕೊಂಡು ಅದನ್ನು ಕುದಿಸಿ ಚಹಾ ಮಾಡುತ್ತಾರೆ. ಹಾಲು ಕುದಿಯುವಾಗ ಅದಕ್ಕೆ ನೀರು, ಚಹಾ ಎಲೆ, ಸಕ್ಕರೆ ಮತ್ತು ಶುಂಠಿ ಸೇರಿಸಿಸುತ್ತಾರೆ. ಆದರೆ ನೀವು ಚಹಾ ಮಾಡುತ್ತಿರುವಈ ವಿಧಾನವು ತಪ್ಪಾಗಿದೆ.

  ಕೆಲವರು ಚಹಾ ಎಲೆಗಳನ್ನು ಮತ್ತು ನೀರನ್ನು ತುಂಬಾ ಕುದಿಸಿ ಅಂತಹ ಚಹಾ ಕುಡಿಯುತ್ತಾರೆ. ಆದರೆ ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವರು ಚಹಾ ಮಾಡುವಾಗ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಸೇರಿಸಿ ನಂತರ ಅದನ್ನು ದೀರ್ಘ ಕಾಲದವರೆಗೆ ಕುದಿಸುತ್ತಾರೆ. ಅಂತಹ ಚಹಾವು ಬಹಳಷ್ಟು ಆಮ್ಲೀಯತೆ ಉಂಟು ಮಾಡುತ್ತದೆ.

  ಚಹಾ ಮಾಡುವ ಸರಿಯಾದ ವಿಧಾನ ಯಾವುದು?

  ಜನರು ತಮ್ಮ ರುಚಿಗೆ ಅನುಗುಣವಾಗಿ ಚಹಾ ಕುಡಿಯುತ್ತಾರೆ. ಆದರೆ ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಷನ್ ಚಹಾ ತಯಾರಿಸುವ ಸರಿಯಾದ ಮತ್ತು ಆದರ್ಶ ಮಾರ್ಗವನ್ನು ಹೇಳಿದೆ.

  ಚಹಾ ಮಾಡಲು ನಿಮಗೆ 2 ಪಾತ್ರೆಗಳು ಬೇಕು. ಒಂದು ಪಾತ್ರೆಯಲ್ಲಿ ನೀವು ಹಾಲನ್ನು ಕುದಿಸಬೇಕು ಮತ್ತು ಒಂದರಲ್ಲಿ ನೀವು ಚಹಾ ಎಲೆ ಮತ್ತು ನೀರನ್ನು ಕುದಿಸಬೇಕು. ಮೊದಲು ಹಾಲನ್ನು ಬಿಸಿಯಾಗಿಟ್ಟು ಮಧ್ಯದಲ್ಲಿ ಕಲಕುತ್ತಿರಿ.

  ಈಗ ಬಾಣಲೆಯಲ್ಲಿ ನೀರು ಹಾಕಿ ಅದು ಕುದಿಯುವಾಗ ಚಹಾ ಎಲೆ ಹಾಕಿ. ಈಗ ಅದಕ್ಕೆ ಸಕ್ಕರೆ ಮತ್ತು ಶುಂಠಿ ಹಾಕಿ ಕುದಿಸಿ. ನೀರು ಚೆನ್ನಾಗಿ ಕುದಿಯುವಾಗ ಮತ್ತು ಹಾಲು ಕೂಡ ಕುದಿಯುವಾಗ, ನಂತರ ಚಹಾದ ನೀರಿಗೆ ಹಾಲನ್ನು ಸೇರಿಸಿ.

  ಈಗ ಗ್ಯಾಸ್ ಆಫ್ ಮಾಡಿ ಮತ್ತು ಚಹಾವನ್ನು ಫಿಲ್ಟರ್ ಮಾಡಿ. ದೀರ್ಘ ಕಾಲದವರೆಗೆ ಹಾಲು ಮತ್ತು ಚಹಾ ಪುಡಿಯನ್ನು ಒಟ್ಟಿಗೆ ಕುದಿಸಬಾರದು. ಅಂತಹ ಚಹಾವು ಹೆಚ್ಚು ಹಾನಿ ಮಾಡುತ್ತದೆ.

  ಒತ್ತಡ ಮತ್ತು ಸುಸ್ತು ದೂರ ಮಾಡಲು ಚಹಾ ಸೇವನೆ

  ಇನ್ನು ಅತಿಯಾದ ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಪಾರ್ಶ್ವವಾಯು, ಹೃದಯಾಘಾತ, ಅಲ್ಸರ್, ಮಾನಸಿಕ ಸಮಸ್ಯೆ ಉಂಟಾಗುವ ಸಮಸ್ಯೆ ಹೆಚ್ಚುತ್ತದೆ. ಹೆಚ್ಚು ಒತ್ತಡ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಸಮಸ್ಯೆ ನಿಭಾಯಿಸಲು, ಗಿಡಮೂಲಿಕೆ ಚಹಾ ಕುಡಿಯಬಹುದು.

  ಲೈಕೋರೈಸ್ ಚಹಾ

  ಲೈಕೋರೈಸ್ ಟೀ ಒತ್ತಡ ನಿವಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ವಾಸ್ತವವಾಗಿ ಲೈಕೋರೈಸ್ ಚಹಾ ಆತಂಕ-ವಿರೋಧಿ ಔಷಧಿಗಳ ಪರಿಣಾಮ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

  ಇದನ್ನೂ ಓದಿ: ನಿತ್ಯ ಕಾಡೋ ಒತ್ತಡ, ಸುಸ್ತನ್ನು ಕಡಿಮೆ ಮಾಡಲು ಈ ಚಹಾ ಕುಡಿಯಿರಿ

  ವಲೇರಿಯನ್ ರೂಟ್ ಟೀ

  ಈ ಚಹಾ ಒತ್ತಡ ನಿವಾರಿಸುವುದು ಮಾತ್ರವಲ್ಲದೆ ಉತ್ತಮ ನಿದ್ರೆಗೆ ಉತ್ತಮವಾಗಿದೆ. ಶಾಂತಿ ಮತ್ತು ಉತ್ತಮ ನಿದ್ರೆಗೆ ಪರಿಹಾರವಾಗಿದೆ ನಮ್ಮ ಮೆದುಳಿನ ಗಾಮಾ ಅಮಿನೊಬ್ಯುಟರಿಕ್ ಆಮ್ಲದ ವಿಭಜನೆ ಕಡಿಮೆ ಮಾಡಲು ವ್ಯಾಲೆರಿನಿಕ್ ಆಮ್ಲ ಒಳ್ಳೆಯದು.
  Published by:renukadariyannavar
  First published: