• Home
  • »
  • News
  • »
  • lifestyle
  • »
  • Red Meat: ಕೆಂಪು ಮಾಂಸ ತಿನ್ನಲು ಸರಿಯಾದ ಸಮಯ ಯಾವುದು? ಪ್ರಯೋಜನಗಳು ಹೀಗಿವೆ!

Red Meat: ಕೆಂಪು ಮಾಂಸ ತಿನ್ನಲು ಸರಿಯಾದ ಸಮಯ ಯಾವುದು? ಪ್ರಯೋಜನಗಳು ಹೀಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲ್ಲೆಡೆ ಚಳಿಗಾಲದಲ್ಲಿ ನಾನ್ ವೆಜ್ ತಿನ್ನಬೇಕಾ ಅಥವಾ ಬೇಡ್ವಾ ಎಂಬ ಚರ್ಚೆ ನಡೆಯುತ್ತಿದೆ. ಶೀತ ಹೆಚ್ಚಾದಾಗ ಕೆಂಪು ಮಾಂಸ ತಿನ್ನಬೇಕು ಎಂದು ಕೆಲವು ತಜ್ಞರು ಹೇಳುತ್ತಾರೆ. ಇನ್ನು ಕೆಲವು ತಜ್ಞರು ಚಳಿಗಾಲದಲ್ಲಿ ಕೆಂಪು ಮಾಂಸ ತಿನ್ನುವುದು ಸರಿಯಲ್ಲ ಅಂತಾ ಹೇಳ್ತಾರೆ.

  • Share this:

    ಈಗಾಗಲೇ ಚಳಿಗಾಲ (Winter) ಆರಂಭವಾಗಿದೆ. ಚಳಿಗಾಲದಲ್ಲಿ ಬಿಸಿ ಬಿಸಿ ಪದಾರ್ಥಗಳ (Hot Food) ಸೇವನೆಗೆ ಮನಸ್ಸಾಗುತ್ತದೆ. ಸಂಜೆಯಾಗುತ್ತಲೇ ಬಿಸಿ ಚಹಾ (Hot Tea), ಕಾಫಿ (Coffee), ಬೋಂಡಾ, ಬಜ್ಜಿ, ಹೀಗೆ ಹಾಟ್ ಪದಾರ್ಥಗಳನ್ನು ತಿನ್ನಬೇಕೆಂಬ ಹಂಬಲವಾಗುತ್ತದೆ. ನಾಲಿಗೆ ರುಚಿ ಬಯಸುತ್ತದೆ. ಕೆಲವರು ಚಳಿಯಲ್ಲಿ ರಾತ್ರಿ ನಾನ್ ವೆಜ್ (Nonveg) ಪದಾರ್ಥಗಳ ಸೇವನೆ ಇಷ್ಟ ಪಡ್ತಾರೆ. ಚಿಕನ್ ಕಬಾಬ್, ಮಟನ್ ರೆಸಿಪಿ, ಚಿಕನ್ ತಂದೂರಿ ತಿನ್ನಲು ಇಷ್ಟ ಪಡ್ತಾರೆ. ಇನ್ನು ಈಗ ಎಲ್ಲೆಡೆ ಚಳಿಗಾಲದಲ್ಲಿ ನಾನ್ ವೆಜ್ ತಿನ್ನಬೇಕಾ ಅಥವಾ ಬೇಡ್ವಾ ಎಂಬ ಚರ್ಚೆ ನಡೆಯುತ್ತಿದೆ. ಶೀತ ಹೆಚ್ಚಾದಾಗ ಕೆಂಪು ಮಾಂಸ ತಿನ್ನಬೇಕು ಎಂದು ಕೆಲವು ತಜ್ಞರು ಹೇಳುತ್ತಾರೆ.


    ಕೆಂಪು ಮಾಂಸ ತಿನ್ನಲು ಸರಿಯಾದ ಸಮಯ ಯಾವುದು?


    ಆದರೆ ಇನ್ನು ಕೆಲವು ತಜ್ಞರು ಚಳಿಗಾಲದಲ್ಲಿ ಕೆಂಪು ಮಾಂಸ ತಿನ್ನುವುದು ಸರಿಯಲ್ಲ ಅಂತಾ ಹೇಳ್ತಾರೆ. ಇನ್ನು ತಜ್ಞರ ಪ್ರಕಾರ, ಕೆಂಪು ಮಾಂಸ ಹೃದಯದ ಸಮಸ್ಯೆ ಹೆಚ್ಚಿಸುತ್ತದೆ ಎಂದು ಹೇಳ್ತಾರೆ. ಅದೇ ರೀತಿ ಕೆಂಪು ಮಾಂಸ ತಿನ್ನುವ ಸರಿಯಾದ ಸಮಯ ಯಾವುದು ಎಂಬ ಪ್ರಶ್ನೆ ಎದುರಾಗಿದೆ. ಯಾವಾಗ ಕೆಂಪು ಮಾಂಸ ತಿಂದರೆ ಪ್ರಯೋಜನ ಸಿಗುತ್ತದೆ ಎಂದು ಕೇಳಲಾಗಿದೆ.


    ಅದಕ್ಕೆ ತಜ್ಞರು ಹೀಗೆ ಹೇಳ್ತಾರೆ. ಚಳಿಗಾಲದಲ್ಲಿ ಕೆಂಪು ಮಾಂಸ ತಿನ್ನಬಹುದು. ಚಳಿಗಾಲ ಕೆಂಪು ಮಾಂಸ ತಿನ್ನಲು ಸರಿಯಾದ ಸಮಯ ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ಮಾಂಸಾಹಾರಿಗಳು ಕೆಂಪು ಮಾಂಸ ತಿನ್ನುವುದು ಬೇಸಿಗೆಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಚಳಿಗಾಲದಲ್ಲಿ ಕೆಂಪು ಮಾಂಸ ಸೇವನೆಯ ಪ್ರಯೋಜನಗಳು


    ನಾವು ತಿನ್ನುವ ಆಹಾರವು ನಮ್ಮ ದೇಹದ ಮೇಲೆ ಬೇಗ ಮತ್ತು ಹೆಚ್ಚು ಪರಿಣಾಮ ಬೀರುತ್ತದೆ. ಪೌಷ್ಟಿಕ ತಜ್ಞ ಡಾ.ಮಧು ರೈ ಹೇಳುವ ಪ್ರಕಾರ, ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಾಗ ನಮ್ಮ ದೇಹದ ಉಷ್ಣತೆಯೂ ಕಡಿಮೆ ಆಗುತ್ತದೆ. ಹಾಗಾಗಿ ನಾವು ತಿನ್ನುವ ಆಹಾರ ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಆಹಾರ ಸೇವನೆ ನಂತರ ನಮ್ಮ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಇದು ದೇಹಕ್ಕೆ ಚೈತನ್ಯ ನೀಡುತ್ತದೆ ಎಂದು ಹೇಳಿದ್ದಾರೆ.


    ದೇಹವನ್ನು ಬೆಚ್ಚಗಿಡುವ ಆಹಾರ ಸೇವನೆ ಮಾಡುವುದು


    ಚಳಿಗಾಲದಲ್ಲಿ, ದೇಹವನ್ನು ಬೆಚ್ಚಗಿಡುವ ಆಹಾರ ಸೇವನೆಯ ಅಗತ್ಯವಿದೆ. ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ದೇಹದ ಉಷ್ಣತೆ ಹೆಚ್ಚುತ್ತದೆ. ದೇಹ ಬೆಚ್ಚಗಾಗಲು ಸಾಧ್ಯ. ಈ ಪ್ರಕ್ರಿಯೆಯನ್ನು ಥರ್ಮೋಜೆನೆಸಿಸ್ ಎಂದು ಕರೆಯುತ್ತಾರೆ. ಆಹಾರದ ಚಯಾಪಚಯ ಕ್ರಿಯೆ ದೇಹದಲ್ಲಿ ಶಾಖ ಉತ್ಪತ್ತಿ ಮಾಡುತ್ತದೆ.


    ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಹೊಂದಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ಬೇಕು. ನಾನ್ ವೆಜ್ ನಲ್ಲಿ ಈ ಮೂರು ಅಂಶಗಳಿವೆ. ಹಾಗಾಗಿ ಶೀತ ದಿನಗಳಲ್ಲಿ ನಾನ್ ವೆಜ್ ತಿನ್ನಬಹುದು.


    ಸಿ ರಿಯಾಕ್ಟಿವ್ ಪ್ರೊಟೀನ್ ಕಡಿಮೆ ಮಾಡುತ್ತದೆ


    ಚಳಿಗಾಲದಲ್ಲಿ ಕೆಂಪು ಮಾಂಸ ತಿಂದರೆ ಸಿ ರಿಯಾಕ್ಟಿವ್ ಪ್ರೊಟೀನ್ ಸಾಕು. ಸಿ ರಿಯಾಕ್ಟಿವ್ ಪ್ರೋಟೀನ್ ಕಾರ್ಡಿಯೋ ನಾಳೀಯ, ಬಾಡಿ ಮಾಸ್ ಇಂಡೆಕ್ಸ್ ಮತ್ತು ಮಧುಮೇಹದ ಜೊತೆ ಸಂಬಂಧಿಸಿದೆ. ದೀರ್ಘಕಾಲದ ಹೃದ್ರೋಗದಿಂದ ಬಳಲುತ್ತಿರುವ ಜನರು ಸಂಸ್ಕರಿಸದ ಮಾಂಸವನ್ನು ಮಿತವಾಗಿ ಸೇವಿಸಿದರೆ ಹೃದಯದ ಆರೋಗ್ಯ ಅಪಾಯ ಕಡಿಮೆ ಎಂದು ಹೇಳಲಾಗಿದೆ.


    ಕೆಂಪು ಮಾಂಸ ಕಬ್ಬಿಣದ ಕೊರತೆ ಕಡಿಮೆ ಮಾಡುತ್ತದೆ


    ಕೆಲವರಿಗೆ ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುತ್ತದೆ. ಅದಕ್ಕೆ ಕಬ್ಬಿಣದ ಕೊರತೆಯೇ ಕಾರಣ ಅಂತಾರೆ ವೈದ್ಯರು. ಕೆಂಪು ಮಾಂಸದಲ್ಲಿ ಕಬ್ಬಿಣವು ಸಮೃದ್ಧವಾಗಿದೆ. ಇದು ದೇಹದ ಇತರ ಭಾಗಗಳಿಗೆ ಆಮ್ಲಜನಕ ಸಾಗಿಸುತ್ತದೆ. ರಕ್ತದ ಕೊರತೆ, ಕೆಂಪು ಮಾಂಸವು ವಿಟಮಿನ್ ಬಿ 12 ಹೊಂದಿದೆ. ಆಯಾಸ, ಖಿನ್ನತೆ ಹೋಗಲಾಡಿಸಿ, ನರಗಳನ್ನು ಬಲಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಮೊಟ್ಟೆ ಮತ್ತು ಚಿಕನ್ ಸೇವನೆ ಪ್ರಯೋಜನಕಾರಿ


    ಶೀತ ವಾತಾವರಣದಲ್ಲಿ ಕೋಳಿ ಮತ್ತು ಮೊಟ್ಟೆ ಎರಡನ್ನೂ ತಿನ್ನಬಹುದು. ಇದು ಕಬ್ಬಿಣ, ಕ್ಯಾಲ್ಸಿಯಂ, ಪ್ರೊಟೀನ್‌ ನೀಡುತ್ತದೆ. ಪ್ರೋಟೀನ್ ಭರಿತ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಶೀತ ಋತುವಿನಲ್ಲಿ ದೇಹವು ಬೆಚ್ಚಗಿರುತ್ತದೆ.

    Published by:renukadariyannavar
    First published: