Good Breakfast: ಬೆಳಗಿನ ತಿಂಡಿಗೆ ಯಾವ ಪದಾರ್ಥ ಸೇವನೆ ಒಳಿತು, ಆರೋಗ್ಯಕರ ಜೀವನ ಸಲಹೆಗಳು

ದಿನದ ಉತ್ತಮ ಆರಂಭಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ನೀವು ಬೆಳಗಿನ ಉಪಾಹಾರ ಸೇವಿಸುತ್ತಿದ್ದರೆ ದಿನವಿಡೀ ನಿಮಗೆ ಶಕ್ತಿಯನ್ನು ನೀಡುವ ಮತ್ತು ದೀರ್ಘಕಾಲದವರೆಗೆ ನೀವು ಪೂರ್ಣವಾಗಿರುವುದನ್ನು ಅನುಭವಿಸುವ ಅಂತಹ ವಸ್ತುಗಳನ್ನು ನೀವು ಆರಿಸಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಿಗ್ಗೆ (Morning) ಏನು ತಿನ್ನಬೇಕು (Eat), ಏನು ತಿನ್ನಬಾರದು ಎಂಬ ಗೊಂದಲದಲ್ಲೇ ಜನರು (People) ಬೆಳಗಿ ತಿಂಡಿ (Breakfast) ತಿನ್ನುವುದನ್ನು ನೀವು ನೋಡಿರಬಹುದು. ಇದು ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಂಗತಿ. ನಾವು ಬೆಳಗ್ಗೆ ಯಾವ ತಿಂಡಿ ರೆಸಿಪಿ ರೆಡಿ ಮಾಡಬೇಕು ಎಂದು ಮಹಿಳೆಯರು ಹಿಂದಿನ ದಿನವೇ ಲೆಕ್ಕಾಚಾರ ಹಾಕಿಕೊಂಡು ತಯಾರಿ ಮಾಡಿಟ್ಟುಕೊಳ್ತಾರೆ. ಈ ರೂಢಿ ಹಲವರಲ್ಲಿ ಸಾಮಾನ್ಯವಾಗಿದೆ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ ನಟ್ಸ್ ತಿನ್ನುತ್ತಾರೆ. ಕೆಲವರು ಹಣ್ಣುಗಳು ಅಥವಾ ಒಂದು ಕಪ್ ಚಹಾ ಸೇವಿಸುವ ಮೂಲಕ ತಮ್ಮ ಬೆಳಿಗ್ಗೆಯನ್ನು ಪ್ರಾರಂಭಿಸುತ್ತಾರೆ. ಆದರೆ ಬೆಳಿಗ್ಗೆ ಯಾವ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕರ ಎಂದು ನಿಮಗೆ ತಿಳಿದಿಲ್ಲ ಅಲ್ವಾ?

    ಬೆಳಗಿನ ಉಪಾಹಾರ

    ಇಂದು ನಾವು ನಿಮ್ಮ ಪ್ರತಿದಿನದ ಬೆಳಗ್ಗೆಯನ್ನು ಹೆಚ್ಚು ಸ್ವಾದಿಷ್ಟವಾಗಿಸಲು ಯಾವ ಉಪಹಾರ ಹೆಚ್ಚು ಸಹಾಯ ಮಾಡುತ್ತದೆ ಎಂದು ನಾವಿಲ್ಲಿ ತಿಳಿಯೋಣ. ದಿನದ ಉತ್ತಮ ಆರಂಭಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ಅನೇಕ ಜನರು ಬೆಳಿಗ್ಗೆ ಉಪಹಾರ ಸೇವನೆ ಸ್ಕಿಪ್ ಮಾಡುತ್ತಾರೆ. ಆದರೆ ಕೆಲವು ಜನರು ಬೆಳಿಗ್ಗೆ ತಿಂಡಿ ತಿಂದೇ ಮುಂದಿನ ಕೆಲಸ ಮಾಡುತ್ತಾರೆ.

    ನೀವು ಬೆಳಗಿನ ಉಪಾಹಾರ ಸೇವಿಸುತ್ತಿದ್ದರೆ ದಿನವಿಡೀ ನಿಮಗೆ ಶಕ್ತಿಯನ್ನು ನೀಡುವ ಮತ್ತು ದೀರ್ಘಕಾಲದವರೆಗೆ ನೀವು ಪೂರ್ಣವಾಗಿರುವುದನ್ನು ಅನುಭವಿಸುವ ಅಂತಹ ವಸ್ತುಗಳನ್ನು ನೀವು ಆರಿಸಿಕೊಳ್ಳಬೇಕು. ನೀವು ಬೆಳಿಗ್ಗೆ ಏನು ತಿನ್ನಬೇಕು ಎಂಬ ಗೊಂದಲದಲ್ಲಿದ್ದರೆ, ಯಾವ ಪದಾರ್ಥ ಸೇವನೆ ಆರೋಗ್ಯಕರ ಎಂಬುದನ್ನು ಇಲ್ಲಿ ತಿಳಿಯಿರಿ.

    ಇದನ್ನೂ ಓದಿ: ರಕ್ತ ಪರೀಕ್ಷೆಯನ್ನು ಯಾವ ವಯಸ್ಸಿನವರು ಮಾಡಿಸಬೇಕು ಮತ್ತು ಯಾಕೆ? ತಜ್ಞರ ಅಭಿಪ್ರಾಯವೇನು?

    ಮೊಟ್ಟೆ

    ಮೊಟ್ಟೆಯು ಸುಲಭ ಉಪಹಾರ. ಇದು ಸಾಕಷ್ಟು ಆರೋಗ್ಯಕರ ಆಗಿದೆ. ಇದು ಪ್ರೋಟೀನ್‌ನ ಉತ್ತಮ ಮೂಲ. ಮತ್ತು ಇದು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ದೀರ್ಘಕಾಲದವರೆಗೆ ಹಸಿವು ಆಗಲ್ಲ. ಮೊಟ್ಟೆಗಳನ್ನು ಕೋಲೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮೆದುಳು ಮತ್ತು ಯಕೃತ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

    ಗ್ರೀಕ್ ಮೊಸರು

    ತ್ವರಿತ ಉಪಹಾರಕ್ಕಾಗಿ ಗ್ರೀಕ್ ಮೊಸರು ಉತ್ತಮ ಆಯ್ಕೆ. ಗ್ರೀಕ್ ಮೊಸರಿನಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ ಮತ್ತು ಇದು ಪ್ರೋಟೀನ್ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

    1 ಕಪ್ ಮೊಸರು 25 ಗ್ರಾಂ ಪ್ರೋಟೀನ್ ಮತ್ತು 149 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಜೊತೆಗೆ, ಗ್ರೀಕ್ ಮೊಸರು ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಪ್ರಯೋಜನಕಾರಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

    ಪಪ್ಪಾಯಿ

    ಪಪ್ಪಾಯಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ತುಂಬಾ ಒಳ್ಳೆಯದು. ಪಪ್ಪಾಯಿ ನಿಮ್ಮ ಹೊಟ್ಟೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ತಿಂದ ನಂತರ ಒಂದು ಗಂಟೆಯವರೆಗೆ ಬೇರೇನೂ ತಿನ್ನಬಾರದು. ಪಪ್ಪಾಯಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡಬಹುದು.

    ಓಟ್ ಮೀಲ್

    ಓಟ್ ಮೀಲ್ ಅನ್ನು ಉತ್ತಮ ಉಪಹಾರವೆಂದು ಪರಿಗಣಿಸಲಾಗಿದೆ. ಓಟ್ಸ್ ಗ್ಲುಟನ್ ಎಂಬ ವಿಶಿಷ್ಟ ಫೈಬರ್ ಅನ್ನು ಹೊಂದಿರುತ್ತದೆ. ಈ ಫೈಬರ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಓಟ್ಸ್ ಕಬ್ಬಿಣ, ಬಿ ಜೀವಸತ್ವಗಳು, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಮ್‌ಗಳ ಉತ್ತಮ ಮೂಲ.

    ಪನೀರ್

    ಬೆಳಗಿನ ಉಪಾಹಾರಕ್ಕೆ ಪನೀರ್ ಉತ್ತಮ ಆಯ್ಕೆಯಾಗಿದೆ. ಒಂದು ಕಪ್ ಪನೀರ್ 24 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಪನೀರ್ ಸೇವಿಸುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲ ತುಂಬಿರುತ್ತದೆ.ಪನೀರ್‌ನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಒಂದು ಕಪ್ ಪನೀರ್‌ನಲ್ಲಿ 180 ಕ್ಯಾಲೋರಿಗಳು ಕಂಡುಬರುತ್ತವೆ.

    ಗೋಧಿ ಹಿಟ್ಟಿನ ಟೋಸ್ಟ್

    ಗೋಧಿ ಹಿಟ್ಟಿನಿಂದ ಮಾಡಿದ ಟೋಸ್ಟ್ ತಿನ್ನಬಹುದು. ಗೋಧಿ ಹಿಟ್ಟಿನಿಂದ ತಯಾರಿಸಿದ ಟೋಸ್ಟ್‌ನಲ್ಲಿ ಫೈಬರ್‌ನ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಬಹಳ ನಿಧಾನವಾಗಿ ಜೀರ್ಣವಾಗುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುವುದನ್ನು ತಡೆಯುತ್ತದೆ. ನೀವು ಕಡಲೆಕಾಯಿ ಬೆಣ್ಣೆ, ಮೊಟ್ಟೆ, ಆವಕಾಡೊವನ್ನು ಟೋಸ್ಟ್‌ನೊಂದಿಗೆ ಸೇವಿಸಬಹುದು.

    ಗ್ರೀನ್ ಟೀ

    ಬೆಳಿಗ್ಗೆ ಹಸಿರು ಚಹಾವನ್ನು ಸೇವಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ. ಹಸಿರು ಚಹಾದಲ್ಲಿರುವ ಕೆಫೀನ್ ನಿಮ್ಮನ್ನು ಎಚ್ಚರಿಸುತ್ತದೆ ಮತ್ತು ಮನಸ್ಥಿತಿಯನ್ನು ಸರಿಯಾಗಿ ಇರಿಸುತ್ತದೆ. ಒಂದು ಕಪ್ ಹಸಿರು ಚಹಾದಲ್ಲಿ 35 ರಿಂದ 70 ಮಿಗ್ರಾಂ ಕೆಫೀನ್ ಇದೆ. ಗ್ರೀನ್ ಟೀ ಸೇವನೆಯು ಮೂಡ್ ಸುಧಾರಿಸುತ್ತದೆ.

    ಇದನ್ನೂ ಓದಿ : ಹಾಲಿನ ಜೊತೆ ಚಿಕನ್ ಯಾಕೆ ತಿನ್ನಬಾರದು? ಈ ಬಗ್ಗೆ ಆಯುರ್ವೇದ ಹೇಳೋದೇನು?

    ಚಿಯಾ ಬೀಜಗಳು

    ಚಿಯಾ ಬೀಜಗಳು ತುಂಬಾ ಪೌಷ್ಟಿಕವಾಗಿದೆ ಮತ್ತು ಫೈಬರ್‌ನ ಉತ್ತಮ ಮೂಲ. ಚಿಯಾ ಬೀಜಗಳು ಹೊಟ್ಟೆ ತುಂಬಿಸುತ್ತವೆ. ದೀರ್ಘಕಾಲ ಹಸಿವಾಗದಂತೆ ನೋಡಿಕೊಳ್ಳುತ್ತದೆ.
    Published by:renukadariyannavar
    First published: