Coffee: ನೀವು ಕಾಫಿ ಪ್ರಿಯರ ಹಾಗಾದ್ರೆ ಇದನ್ನು ಓದಲೇ ಬೇಕು..!

Perfect Time For Coffee: ನೀವು ಬೆಳಗ್ಗೆ ಎದ್ದ ತಕ್ಷಣ ಕಾಫಿ ಸೇವನೆ ಮಾಡುವುದು ನಿಮ್ಮ ಶಕ್ತಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು  ಕಾಫಿ(Coffee) ಪ್ರಿಯರಾಗಿದ್ದಾರೆ, ನಿಮಗೆ ಪ್ರತಿದಿನ ಕಾಫಿ ಬೇಕೆ ಬೇಕು. ಬಹುಶಃ ನೀವು ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವನ್ನು ಸಹ ಹೊಂದಿರಬಹುದು. ವಾಸ್ತವವಾಗಿ, ಯುಎಸ್​ನಲ್ಲಿ(US) 90 ಪ್ರತಿಶತ ವಯಸ್ಕರು ಪ್ರತಿದಿನ  ಕಾಫಿ ಸೇವಿಸುತ್ತಾರೆ. ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದು. ನೀವು ಹಾಸಿಗೆಯಿಂದ ಎದ್ದ ತಕ್ಷಣ ಕಾಫಿ ಕುಡಿಯುವ ನಿಮ್ಮ ಅಭ್ಯಾಸ ಆರೋಗ್ಯಕರವಾಗಿಲ್ಲದಿರಬಹುದು. ಕೆಲ ಸಮಯಗಳಲ್ಲಿ ಕಾಫಿ ಸೇವನೆ ಮಾಡುವುದು ನಿಮಗೆ ಸಮಸ್ಯೆ(Health Problem) ಉಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಾಫಿಯಲ್ಲಿರುವ ಕೆಲ ಅಂಶಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾವ ಸಮಯದಲ್ಲಿ ಕಾಫಿ ಸೇವನೆ ಮಾಡಬೇಕು ಎಂಬುದು ಇಲ್ಲಿದೆ.

ನಿಮ್ಮ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಈ ಸಮಯದಲ್ಲಿ ಉತ್ತುಂಗ ಮಟ್ಟದಲ್ಲಿರುವ ಕಾರಣ ಕಾಫಿ ಕುಡಿದ ನಂತರ ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಾರ್ಟಿಸೋಲ್ ಒಂದು ಹಾರ್ಮೋನ್ ಆಗಿದ್ದು ಅದು ಜಾಗರೂಕತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಚಯಾಪಚಯ, ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನಿಮ್ಮ ಕಾರ್ಟಿಸೋಲ್ ಮಟ್ಟವು ಕಡಿಮೆಯಾದಾಗ ಕಾಫಿಯನ್ನು ಕುಡಿಯಲು ಉತ್ತಮ ಸಮಯ ಮಧ್ಯದಿಂದ ತಡರಾತ್ರಿಯವರೆಗೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಬೇಕಾದರೆ ಈ ಆಹಾರಗಳನ್ನ ತಿನ್ನಬೇಡಿ

ನೀವು ಬೆಳಗ್ಗೆ ಎದ್ದ ತಕ್ಷಣ ಕಾಫಿ ಸೇವನೆ ಮಾಡುವುದು ನಿಮ್ಮ ಶಕ್ತಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಇನ್ನು ಸಂಜೆ ಕಾಫಿ ಕುಡಿಯುವ ಅಭ್ಯಾಸವಿರುವವರು ಲೇಟ್ ಆಗಿ ಕಾಫಿ ಸೇವನೆ ಮಾಡಬಾರದು. ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ನಿದ್ದೆ ಸರಿಯಾಗಿ ಬಾರದೇ ಇರುವ, ನಡು ನಡುವೆ ಎಚ್ಚರಾಗುವ ವ್ಯಕ್ತಿಗಳು ಸಂಜೆಯ ಬಳಿಕ ಎಂದಿಗೂ ಕಾಫಿ ಕುಡಿಯಬಾರದು.

 ಕಾಫಿ ಬಗ್ಗೆ ತಿಳಿದರಬೇಕಾದ ಮುಖ್ಯ ಮಾಹಿತಿಗಳು

ಕಾಫಿಯನ್ನು ಎಂದಿಗೂ ಬೇರೆ ಆಹಾರಗಳ ಜೊತೆಯಿಲ್ಲದೇ ಸೇವನೆ ಮಾಡಬಾರದು. ಕಾಫಿಯ ಜೊತೆ ಏನಾದರೂ ಇತರ ಆಹಾರಗಳಿರಲಿ. ಟೋಸ್ಟ್, ರಸ್ಕ್, ಬಿಸ್ಕತ್ತು, ಕುರುಕು ತಿಂಡಿ ತಿನ್ನುವುದು ಉತ್ತಮ.

ಕಾಫಿ ಹೆಚ್ಚು ಸ್ಟ್ರಾಂಗ್ ಇರಬಾರದು. ಬ್ಯ್ಲಾಕ್ ಕಾಫಿಗಿಂತಲೂ ಕಡಿಮೆ ಕಾಫಿ ಪುಡಿ, ಕೊಂಚ ಬೆಲ್ಲ ಹಾಕಿ ಹಾಲಿನಲ್ಲಿ ಕುದಿಸಿದ ಕಾಫಿಯೇ ಸುರಕ್ಷಿತವಾಗಿದೆ. ಹೆಚ್ಚು ಕಾಫಿ ಪುಡಿ ಹಾಕುವುದು ನಿಮ್ಮ ದೇಹಕ್ಕೆ ಹೆಚ್ಚು ಕೆಫಿನ್ ಅಂಶ ಸೇರಲು ಕಾರಣವಾಗುತ್ತದೆ.

ಬ್ಲ್ಯಾಕ್​ ಕಾಫಿಯೇ ನಿಮಗೆ ಅಭ್ಯಾಸವಾಗಿದ್ದರೆ, ಕೆಫೀನ್ ಜೀರ್ಣಾಂಗಗಳನ್ನು ಒಣಗಿಸುವ ಹಾಗೂ ಆಮ್ಲೀಯತೆಯನ್ನು ಉಂಟು ಮಾಡುವ ಪ್ರಭಾವವನ್ನು ಕಡಿಮೆಗೊಳಿಸಲು ಕೊಂಚ ಬೆಣ್ಣೆ ಅಥವಾ ತುಪ್ಪವನ್ನು ಹಾಕಿ ಕುಡಿಯಿರಿ.

ಇದನ್ನೂ ಓದಿ: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?

ಮಲಬದ್ದತೆಯಾದಾಗ ಬೆಣ್ಣೆ ಬೆರೆಸಿದ ಬೆಲ್ಲದ ಕಪ್ಪು ಕಾಫಿಯ ಸೇವನೆ ನೈಸರ್ಗಿಕ  ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ ಸಾಬೀತಾಗಿದೆ. ಅಲ್ಲದೇ ಗರ್ಭಿಣಿ ಮಹಿಳೆಯರು ಕಾಫಿ ಕುಡಿಯುವ ಅಭ್ಯಾಸವನ್ನು ಬಿಡುವುದು ಉಳಿತು ಎನ್ನುತ್ತಾರೆ.
Published by:Sandhya M
First published: