• Home
  • »
  • News
  • »
  • lifestyle
  • »
  • Skin Health: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?

Skin Health: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನಾರೋಗ್ಯಕರ ಆಹಾರ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮತ್ತು ಚರ್ಮದ ಆರೈಕೆಗೆ ಉತ್ತಮ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಆದರೆ ನೀವು ತಿನ್ನುವ ಆಹಾರದಲ್ಲಿ ಸ್ವಲ್ಪ ಏರು ಪೇರಾದರೂ ಅದು ನಿಮ್ಮ ಚರ್ಮವನ್ನು ಕೆಟ್ಟದಾಗಿಸುತ್ತದೆ.

  • Share this:

    ಹೆಚ್ಚುತ್ತಿರುವ ವಯಸ್ಸು (Growing Age) ಮತ್ತು ಬದಲಾಗುತ್ತಿರುವ ಜೀವನಶೈಲಿ (Changing Lifestyle) ಚರ್ಮದ (Skin) ಮೇಲೆ ಪರಿಣಾಮ (Effects) ಬೀರುತ್ತದೆ. ನಾವು ತಿನ್ನುವ ಆಹಾರ ಮತ್ತು ಚಟುವಟಿಕೆಗಳು (Food And Activities) ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ಮೇಲೆ ಬೇಗ ಮತ್ತು ಹೆಚ್ಚು ಪರಿಣಾಮ ಬೀರುತ್ತವೆ. ಇದು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆ ಹೆಚ್ಚಿಸುತ್ತವೆ ಇಲ್ಲವೇ ಸಮಸ್ಯೆ ಉಂಟು ಮಾಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಅನಾರೋಗ್ಯಕರ ಆಹಾರ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮತ್ತು ಚರ್ಮದ ಆರೈಕೆಗೆ ಉತ್ತಮ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಆದರೆ ನೀವು ತಿನ್ನುವ ಆಹಾರದಲ್ಲಿ ಸ್ವಲ್ಪ ಏರು ಪೇರಾದರೂ ಅದು ನಿಮ್ಮ ಚರ್ಮವನ್ನು ಕೆಟ್ಟದಾಗಿಸುತ್ತದೆ.


    ಅನಾರೋಗ್ಯಕರ ಆಹಾರ ಪದಾರ್ಥಗಳ ಸೇವನೆ  


    ಅನೇಕ ಬಾರಿ ನಾವು ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ. ಅವುಗಳು ನಮ್ಮ ನಾಲಿಗೆ ರುಚಿ ಹೆಚ್ಚಿಸುತ್ತವೆ. ಆದರೆ ಚರ್ಮ ಮತ್ತು ಆರೋಗ್ಯಕ್ಕೆ ತುಂಬಾ ಹಾನಿ ಉಂಟು ಮಾಡುತ್ತವೆ. ವಿಶೇಷವಾಗಿ ನಿಮ್ಮ ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ, ಆಹಾರ ಪದಾರ್ಥಗಳ ಸೇವನೆಯಲ್ಲಿ ಜಾಗ್ರತೆ ವಹಿಸುವುದು ತುಂಬಾ ಮುಖ್ಯ.


    ನಾವು ತಿಳಿದೋ, ತಿಳಿಯದೆಯೋ ಅಥವಾ ನಾಲಿಗೆ ರುಚಿಯಿಂದಾಗಿಯೋ ಹುರಿದ, ಕರಿದ ಪದಾರ್ಥಗಳನ್ನು ಸೇವಿಸುತ್ತೇವೆ. ಸಾಯಂಕಾಲ ಪಾನಿಪುರಿ, ಮೊಮೊಸ್ ತಿನ್ನುತ್ತೇವೆ. ಆದರೆ ಈ ರೀತಿಯ ಪದಾರ್ಥಗಳು ಹೊಟ್ಟೆಯ ಆರೋಗ್ಯ ಹಾಳು ಮಾಡುತ್ತವೆ. ಜೊತೆಗೆ ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಇನ್ನು ನೀವು ಈಗಾಗಲೇ ಅಲರ್ಜಿ, ಚರ್ಮದ ತುರಿಕೆ, ಚರ್ಮದ ಕಾಯಿಲೆಗೆ ತುತ್ತಾಗಿದ್ದರೆ, ಯಾವುದೇ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿ ಹೇಳಲಾದ ಕೆಲವು ಅಂಶಗಳ ಬಗ್ಗೆ ಸೂಕ್ತ ಗಮನ ಹರಿಸಿ. ಇದು ನಿಮಗೆ ಪ್ರಯೋಜನ ನೀಡುತ್ತದೆ. ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು ಎಂದು ತಿಳಿಯೋಣ.


    ಅತಿಯಾಗಿ ತಿನ್ನುವುದು ತಪ್ಪಿಸಿ


    ಮಸಾಲೆಯುಕ್ತ ಪದಾರ್ಥಗಳಾದ ಮಸಾಲೆ, ಕೆಂಪು ಮೆಣಸಿನಕಾಯಿ, ಗರಂ ಮಸಾಲಾ, ಚಾಟ್ ಮಸಾಲಾ ಸೇವನೆ ಕಡಿಮೆ ಮಾಡಿ ಇಲ್ಲವೇ ತಪ್ಪಿಸಿ. ಇವುಗಳು ಆಹಾರದ ರುಚಿ ಹೆಚ್ಚಿಸುತ್ತವೆ. ಆದರೆ ಅದೇ ವೇಳೆ ಚರ್ಮದ ಆರೋಗ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತವೆ.


    ಆಯುರ್ವೇದದ ಪ್ರಕಾರ, ಅತಿಯಾದ ಮಸಾಲೆಯುಕ್ತ ಅಥವಾ ಉಪ್ಪುಸಹಿತ ಆಹಾರ ಸೇವನೆ ನಿಮ್ಮ ಜೀರ್ಣಕ್ರಿಯೆಗೆ ಮತ್ತು ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ. ದೇಹದಲ್ಲಿ ಇದು ಆಮ್ಲ ಉತ್ಪಾದಿಸುತ್ತದೆ. ಹಾಗಾಗಿ ಚರ್ಮದ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ.


    ಹೆಚ್ಚು ಹುಳಿ ಪದಾರ್ಥಗಳ ಸೇವನೆ ಬೇಡ


    ಹುಳಿ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಚರ್ಮದ ಸಮಸ್ಯೆ ಇದ್ದಾಗ ಹೆಚ್ಚು ಹುಳಿ ಸೇವಿಸುವುದು ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಿಸಬಹುದು.


    ಆಯುರ್ವೇದದ ಪ್ರಕಾರ, ಚರ್ಮದ ಸಮಸ್ಯೆ ಇದ್ದಾಗ ಹುಳಿ ಪದಾರ್ಥಗಳ ಸೇವನೆ ದೇಹದಲ್ಲಿ ಪಿತ್ತ ದೋಷ ಹೆಚ್ಚಿಸುತ್ತದೆ. ಅದು ರಕ್ತ ಕಲುಷಿತಗೊಳಿಸುತ್ತದೆ. ಇದು ನಿಮ್ಮ ಚರ್ಮದ ಸಮಸ್ಯೆಗ ಹೆಚ್ಚಿಸುತ್ತದೆ.


    ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಿ


    ಚರ್ಮದ ಸಮಸ್ಯೆಗಳು ಬರಲು ಕಾರಣ ದೇಹವು ಸಂಪೂರ್ಣವಾಗಿ ನಿರ್ವಿಶೀಕರಣ ಆಗದಿರುವುದು. ಸಂಸ್ಕರಿಸಿದ ಸಕ್ಕರೆ, ಬ್ರೆಡ್, ಜಂಕ್ ಫುಡ್ ಸೇರಿದಂತೆ ಮುಂತಾದ ಸಂಸ್ಕರಿಸಿದ ಆಹಾರ ಸೇವನೆ ದೇಹವು ಸಂಪೂರ್ಣವಾಗಿ ನಿರ್ವಿಷಗೊಳಿಸಲು ಸಾಧ್ಯವಾಗಲ್ಲ. ಹೀಗಾಗಿ ಚರ್ಮದ ಸಮಸ್ಯೆಗಳು ದೀರ್ಘಕಾಲ ಉಳಿಯುತ್ತವೆ.


    ಡೈರಿ ಉತ್ಪನ್ನ ಸೇವನೆ


    ಚರ್ಮದ ಸಮಸ್ಯೆಗಳ ಸಮಯದಲ್ಲಿ ಕೆಲವು ಜನರು ಡೈರಿ ಉತ್ಪನ್ನ ಸೇವನೆಯಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ನಿಮ್ಮ ಚರ್ಮರೋಗ ವೈದ್ಯರ ಸಂಪರ್ಕಿಸಿದ ನಂತರವೇ ಡೈರಿ ಉತ್ಪನ್ನ ಸೇವಿಸಬೇಕು.


    ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆ ಪ್ರಕಾರ, ಅಧಿಕ ರಕ್ತದ ಹಾರ್ಮೋನ್ ಮಟ್ಟ ಮತ್ತು ಮೊಡವೆ ಸಮಸ್ಯೆಯ ನಡುವೆ ನೇರ ಸಂಬಂಧವಿದೆ. ಇದು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಗ್ಲುಟನ್ ಪದಾರ್ಥಗಳ ಸೇವನೆ ತಪ್ಪಿಸಿ


    ಗ್ಲುಟನ್ ಗೋಧಿ, ರೈ ಮತ್ತು ಬಾರ್ಲಿಯಲ್ಲಿ ಕಂಡು ಬರುವ ಪ್ರೋಟೀನ್ ಆಗಿದೆ. ಚರ್ಮದ ಸಮಸ್ಯೆಯಿದ್ದಾಗ ಅವುಗಳ ಸೇವನೆ ಕರುಳಿಗೆ ಹಾನಿಯುಂಟು ಮಾಡುತ್ತದೆ. ಇದು ಚರ್ಮದ ತುರಿಕೆ, ದದ್ದುಗಳ ಸಮಸ್ಯೆ ಹೆಚ್ಚಿಸುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು