• Home
  • »
  • News
  • »
  • lifestyle
  • »
  • Skin Care: ಮುಖದ ಅಂದಕ್ಕಾಗಿ ಯಾವ ಪದಾರ್ಥಗಳ ಫೇಸ್ ಪ್ಯಾಕ್ ಉತ್ತಮ? ಬೆಸ್ಟ್ ಆಯ್ಕೆಗಳಿವು

Skin Care: ಮುಖದ ಅಂದಕ್ಕಾಗಿ ಯಾವ ಪದಾರ್ಥಗಳ ಫೇಸ್ ಪ್ಯಾಕ್ ಉತ್ತಮ? ಬೆಸ್ಟ್ ಆಯ್ಕೆಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನವೂ ನಮ್ಮ ಚರ್ಮದ ಬಗ್ಗೆ ಹೆಚ್ಚು ಯೋಚನೆ ಮಾಡುವುದೂ ಸಹ ಒಂದು ಪ್ರಮುಖ ಸಮಸ್ಯೆ ಆಗಿದೆ. ಚರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್‌ನ ವೈದ್ಯಕೀಯ ಸಲಹೆಗಾರ ಡಾ.ಮನೀಶಾ ಮಿಶ್ರಾ ಗೋಸ್ವಾಮಿ ಅವರು ಮಾಲಿನ್ಯಕಾರಕಗಳ ಸಂಪರ್ಕದಿಂದಾಗಿ ಚರ್ಮವು ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ (Now A Days) ಹೆಚ್ಚುತ್ತಿರುವ ಮಾಲಿನ್ಯ (Pollution), ಕೊಳಕು, ಧೂಳಿನಿಂದಾಗಿ ಮುಖದ ಚರ್ಮವು (Face Skin) ಕೊಳಕು ರೀತಿಯಲ್ಲಿ ಪರಿಣಾಮ (Effects) ಬೀರಲು ಪ್ರಾರಂಭಿಸುತ್ತದೆ. ಮತ್ತು ಅಂತಹ ಸ್ಥಿತಿಯಲ್ಲಿ ಚರ್ಮವು ನಿರ್ಜೀವ, ಶುಷ್ಕ ಮತ್ತು ಕಳೆಗುಂದಿದಂತೆ ಕಾಣಲು ಶುರು ಆಗುತ್ತದೆ. ಅಲ್ಲದೆ ಇದು ಒತ್ತಡ, ವಯಸ್ಸಾಗುವಿಕೆ, ಸೂರ್ಯನ ಹಾನಿಕಾರಕ ಕಿರಣಗಳು, ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದಿರುವುದು ಅಥವಾ ಸಾಕಷ್ಟು ನಿದ್ರೆ ನಿಮ್ಮ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ವೇಳೆ ನಿಮ್ಮ ಮುಖದ ಚರ್ಮವನ್ನು ಪ್ರತಿದಿನ ನೋಡಿಕೊಳ್ಳುವುದು ನಿಮ್ಮಲ್ಲಿ ಒಂದು ರೀತಿಯ ಸಮಸ್ಯೆ ಉಂಟು ಮಾಡುತ್ತದೆ.


    ಚರ್ಮವು ತನ್ನ ನೈಸರ್ಗಿಕ ಹೊಳಪು ಕಳೆದುಕೊಳ್ಳುತ್ತದೆ


    ದಿನವೂ ನಮ್ಮ ಚರ್ಮದ ಬಗ್ಗೆ ಹೆಚ್ಚು ಯೋಚನೆ ಮಾಡುವುದೂ ಸಹ ಒಂದು ಪ್ರಮುಖ ಸಮಸ್ಯೆ ಆಗಿದೆ. ಚರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್‌ನ ವೈದ್ಯಕೀಯ ಸಲಹೆಗಾರ ಡಾ.ಮನೀಶಾ ಮಿಶ್ರಾ ಗೋಸ್ವಾಮಿ ಅವರು ಮಾಲಿನ್ಯಕಾರಕಗಳ ಸಂಪರ್ಕದಿಂದಾಗಿ ಚರ್ಮವು ತನ್ನ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.


    ಹೀಗಾಗಿ ಮೊಡವೆ, ಶುಷ್ಕತೆ, ಚರ್ಮ ಕಪ್ಪಾಗುವುದು ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತದೆ. ಹೆಚ್ಚಿನ ಜನರು ಇದಕ್ಕಾಗಿ ವಿವಿಧ ರೀತಿಯ ದುಬಾರಿ ಸೌಂದರ್ಯವರ್ಧಕ ಬಳಕೆ ಮಾಡುತ್ತಾರೆ. ಆದರೆ ಅವುಗಳ ಅತಿಯಾದ ಬಳಕೆ ಚರ್ಮವನ್ನು ಮತ್ತಷ್ಟು ಹದಗೆಡಿಸುತ್ತದೆ. ಅಂತಹ ಸ್ಥಿತಿಯಲ್ಲಿ, ಮುಖದ ಚರ್ಮವನ್ನು ಹೊಳಪಾಗಿರಿಸಲು ಮತ್ತು ನಿಷ್ಕಳಂಕವಾಗಿಡಲು ನೈಸರ್ಗಿಕ ವಸ್ತುಗಳನ್ನು ಬಳಸುವುದು ಉತ್ತಮ ಆಯ್ಕೆ ಆಗಿದೆ.


    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ


    ಮುಖದ ಅಂದ ಮತ್ತು ಹೊಳಪು ನಿಖರವಾಗಿರಲು ಯಾವ ಪದಾರ್ಥಗಳ ಫೇಸ್ ಪ್ಯಾಕ್ ಸಹಕಾರಿ?


    ಅರಿಶಿನ


    ಅರಿಶಿನವು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸೋರಿಯಾಸಿಸ್‌ನಂತಹ ಅನೇಕ ಸಮಸ್ಯೆಗಳಲ್ಲಿ ಅರಿಶಿನವು ಪ್ರಯೋಜನಕಾರಿ ಆಗಿದೆ. ಇದು ಮೊಡವೆ ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಇದು ವಯಸ್ಸಾಗುವಿಕೆ ಹಾಗೂ ಚರ್ಮ ಸುಕ್ಕು ಸಮಸ್ಯೆ ದೂರ ಮಾಡುತ್ತದೆ. ಮತ್ತು ಚರ್ಮ ಸುಧಾರಿಸುತ್ತದೆ.


    ತೆಂಗಿನ ಎಣ್ಣೆ


    ತೆಂಗಿನ ಎಣ್ಣೆ ಚರ್ಮದ ಶುಷ್ಕತೆ ಸಮಸ್ಯೆ ಹೋಗಲಾಡಿಸುತ್ತದೆ. ಇದರ ಜೊತೆ ತೆಂಗಿನ ಎಣ್ಣೆಯು ಚರ್ಮಕ್ಕೆ ತಂಪು ನೀಡುತ್ತದೆ. ಮತ್ತು ಸಣ್ಣ ಗಾಯ ಅಥವಾ ಕಡಿತದ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿ. ತೆಂಗಿನ ಎಣ್ಣೆಯು ಸೂರ್ಯನ ರಕ್ಷಣೆ ಮತ್ತು ವಯಸ್ಸಾಗುವಿಕೆ ವಿರೋಧಿ ಗುಣ ಸಹ ಹೊಂದಿದೆ.


    ಅಲೋವೆರಾ ಜೆಲ್


    ಅಲೋವೆರಾವನ್ನು ಔಷಧೀಯ ಗುಣಗಳ ಗಣಿ ಎಂದು ಪರಿಗಣಿಸಲಾಗಿದೆ. ಇದು ಮುಖದ ಚರ್ಮದ ಶುಷ್ಕತೆ ಕಡಿಮೆ ಮಾಡುತ್ತದೆ. ಇದು ನೈಸರ್ಗಿಕ ಹೊಳಪು ಉಳಿಸುತ್ತದೆ. ಇದು ಮುಖದ ಕಪ್ಪು ಕಲೆ ನಿವಾರಿಸುತ್ತದೆ. ಅಲೋವೆರಾ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯ ಕಾಪಾಡುತ್ತದೆ.


    ಶ್ರೀಗಂಧದ ಫೇಸ್ ಪ್ಯಾಕ್


    ವಾರದಲ್ಲಿ ಎರಡು ಬಾರಿ ಶ್ರೀಗಂಧದ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದ ತ್ವಚೆಯು ಯಂಗ್ ಆಗಿ ಕಾಣುತ್ತದೆ. ಜೊತೆಗೆ ಚರ್ಮವು ಮೃದು, ಬಾಲ್ಸಾಮಿಕ್ ಮತ್ತು ಕಾಂತಿಯುತವಾಗಿ ಕಾಣುತ್ತದೆ. ಮತ್ತು ಇದು ಚರ್ಮದ ಕಿರಿಕಿರಿ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು


    ಮುಲ್ತಾನಿ ಮಿಟ್ಟಿ


    ಮುಲ್ತಾನಿ ಮಿಟ್ಟಿ ಮುಖದ ಚರ್ಮಕ್ಕೆ ಪ್ರಯೋಜನಕಾರಿ ಆಗಿದೆ. ಮುಲ್ತಾನಿ ಮಿಟ್ಟಿ ಚರ್ಮದ ಕಲೆಗಳು ಮತ್ತು ಕಪ್ಪು ಕಲೆ ರಿಮೂವ್ ಮಾಡಲು ಸಹಾಯ ಮಾಡುತ್ತದೆ. ಇದು ಮುಖದ ಹೊಳಪು, ಸುಕ್ಕುಗಳು ಮತ್ತು ಚರ್ಮದ ಸೂಕ್ಷ್ಮ ರೇಖೆಗಳನ್ನು ಸಹ ಕಡಿಮೆ ಮಾಡುತ್ತದೆ. ಮುಲ್ತಾನಿ ಮಿಟ್ಟಿ ಮುಖದ ಚರ್ಮ ಅಂದವನ್ನು ಸುಧಾರಿಸಲು ಉಪಯುಕ್ತವಾಗಿದೆ.

    Published by:renukadariyannavar
    First published: