Cancer And Food: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ

ನಮ್ಮೆಲ್ಲರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಳ್ಳುವುದು ಸಾಯುವುದು ಇದ್ದೇ ಇರುತ್ತದೆ. ನಮ್ಮ ದೇಹವು ನೈಸರ್ಗಿಕ ಶಕ್ತಿ ಪಡೆಯುತ್ತದೆ ಮತ್ತು ದೇಹದಲ್ಲಿ ಉದ್ಭವಿಸುವ ಕ್ಯಾನ್ಸರ್ ಕೋಶಗಳಿಗೆ ನಮ್ಮ ರೋಗ ನಿರೋಧಕ ಶಕ್ತಿ ಹೋರಾಟ ಮಾಡಿ ಕೊನೆಗೊಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ವರ್ಷಗಳಲ್ಲಿ (Now a Days) ಕ್ಯಾನ್ಸರ್ ರೋಗವು (Cancer Disease) ಸಾಕಷ್ಟು ವೇಗವಾಗಿ ಹರಡುತ್ತಿದೆ. ಕೆಲ ವರ್ಷಗಳಿಂದ (Years) ಹೆಚ್ಚಿನ ಸಂಖ್ಯೆಯಲ್ಲಿ ಜನರು (People) ಕ್ಯಾನ್ಸರ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ (Death). ಈ ಕಾಯಿಲೆ ಹೆಚ್ಚಳ  ತಪ್ಪಾದ ಆಹಾರ ಪದ್ಧತಿಯಿಂದಲೇ ಉಂಟಾಗುತ್ತಿರುವುದು ತುಂಬಾ ದೊಡ್ಡ ಕಾರಣ ಆಗಿದೆ. ನಾವು ಬದುಕುತ್ತಿರುವ ಶೈಲಿ, ತಿನ್ನುತ್ತಿರುವ ಆಹಾರ, ಫಾಸ್ಟ್ ಫುಡ್, ತಪ್ಪು ಜೀವನಶೈಲಿ ಮತ್ತು ಅನಿಯಂತ್ರಿತ ಜೀವನ ಕ್ಯಾನ್ಸರ್ ಕಾಯಿಲೆಗೆ ದೊಡ್ಡ ಕಾರಣವಾಗಿದೆ. ಏಕೆಂದರೆ ಕೆಲವು ಅನಿಯಂತ್ರಿತ ಜೀವಕೋಶಗಳಿಂದಾಗಿ ಕ್ಯಾನ್ಸರ್ ರೋಗ ವೇಗಗತಿಯಲ್ಲಿ ಬೆಳೆಯುತ್ತದೆ. ನಮ್ಮೆಲ್ಲರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಳ್ಳುವುದು ಸಾಯುವುದು ಇದ್ದೇ ಇರುತ್ತದೆ.

    ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ

    ಆದರೆ ನಾವು ನಮ್ಮ ದಿನಚರಿಯನ್ನು ಸರಿಯಾಗಿ ಮತ್ತು ಆರೋಗ್ಯಕರ ಆಹಾ ಇಟ್ಟುಕೊಳ್ಳದಿದ್ದರೆ ಮಾತ್ರ ಸಂಭವಿಸುತ್ತದೆ. ನಮ್ಮ ದೇಹವು ನೈಸರ್ಗಿಕ ಶಕ್ತಿ ಪಡೆಯುತ್ತದೆ ಮತ್ತು ದೇಹದಲ್ಲಿ ಉದ್ಭವಿಸುವ ಕ್ಯಾನ್ಸರ್ ಕೋಶಗಳಿಗೆ ನಮ್ಮ ರೋಗ ನಿರೋಧಕ ಶಕ್ತಿ ಹೋರಾಟ ಮಾಡಿ ಕೊನೆಗೊಳಿಸುತ್ತದೆ.

    ಸಂಸ್ಕರಿಸಿದ ಆಹಾರ ಮತ್ತು ಜಂಕ್ ಫುಡ್ ಹಾಗೂ ತ್ವರಿತ ಆಹಾರ ಮತ್ತು ಪೂರ್ವಸಿದ್ಧ ಪದಾರ್ಥಗಳ ಸೇವನೆ. ಸರಿಯಾಗಿ ನಿದ್ದೆ ಮಾಡದೇ ಇರುವುದು. ಮತ್ತು ಬೆಳಗಿನ ಜಾವದವರೆಗೆ ಮೊಬೈಲ್ ನೋಡುತ್ತಾ ಇರುವುದು, ಬೆಳಗಿನ ಜಾವ ಮಲಗುವುದು ಈ ರೀತಿಯ ಜೀವನ ಶೈಲಿ ಅನುಸರಿಸುವುದು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ.

    ಇದನ್ನೂ ಓದಿ: ಆಯುರ್ವೇದ ಔಷಧಗಳ ದೀರ್ಘ ಬಳಕೆ ಎಷ್ಟು ಒಳ್ಳೆಯದು? ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೀಗಿವೆ!

    ನಮ್ಮ ದೇಹ ಆಂತರಿಕವಾಗಿ ದುರ್ಬಲಗೊಳ್ಳಲು ಪ್ರಾರಂಭಿಸಿದಾಗ ಕ್ಯಾನ್ಸರ್ ಜೀವಕೋಶಗಳು ದೇಹವನ್ನು ಆಕ್ರಮಿಸಿಕೊಳ್ಳುತ್ತವೆ. ನಂತರ ಸಂಪೂರ್ಣ ದೇಹ ಕ್ಯಾನ್ಸರ್ ಕಪಿಮುಷ್ಠಿಗೆ ಬಂದಾಗ ಸಾವು ಸಂಭವಿಸುತ್ತದೆ.

    ಕ್ಯಾನ್ಸರ್ ತಡೆಗಟ್ಟುವ ಆಹಾರ ಪದಾರ್ಥಗಳು ಯಾವವು?

    ಆನುವಂಶಿಕ ಕಾರಣಗಳಿಂದಲೂ ಸಹ ಕ್ಯಾನ್ಸರ್ ಉಂಟಾಗುತ್ತದೆ. ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಆದರೆ ಕ್ಯಾನ್ಸರ್ ಗೆ ಕಾರಣವಾಗುವ ಜೀವನಶೈಲಿ ಅಂಶಗಳನ್ನು ನಾವು ನಿಯಂತ್ರಿಸಬಹುದು. ಕ್ಯಾನ್ಸರ್ ಜೀವಕೋಶಗಳ ತಡೆಗಟ್ಟುವ ಆಹಾರ ಪದಾರ್ಥಗಳು ಹೀಗಿವೆ. ಇದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಗೆ ಸಹಕಾರಿ.

    -ಶುಂಠಿ

    -ವಾಲ್ ನಟ್ಸ್

    -ಅಂಜೂರ

    -ದಾಳಿಂಬೆ

    -ಅರಿಶಿನ

    -ಟೊಮೆಟೊ

    -ಕೋಸುಗಡ್ಡೆ

    -ಬೆಳ್ಳುಳ್ಳಿ

    -ಸೊಪ್ಪು

    -ಬೆರಿಹಣ್ಣುಗಳು

    -ದ್ರಾಕ್ಷಿ

    ಈ ಎಲ್ಲಾ ಆಹಾರಗಳಿಂದ ದೇಹವು ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್‌ ಪಡೆಯುತ್ತದೆ. ಅಲ್ಲದೆ, ಪಾಲಿಫಿನಾಲ್‌ಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಹೊಂದಿರುವ ಈ ಆಹಾರಗಳು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ. ಆದ್ದರಿಂದ, ಈ ಪದಾರ್ಥಗಳನ್ನು ಪ್ರತಿದಿನ ಸೇವಿಸಬೇಕು.

    ಸೂಪರ್‌ ಫುಡ್‌ ಆಹಾರ

    ಹೆಚ್ಚಾಗಿ ಸಸ್ಯ-ಆಧಾರಿತ, ಆದರೆ ಕೆಲವು ಮೀನುಗಳು ಮತ್ತು ಡೈರಿ ಪದಾರ್ಥಗಳು ಕ್ಯಾನ್ಸರ್ ತಡೆಗೆ ಸಹಕಾರಿ. ಇದು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ. ಮತ್ತು ಆದ್ದರಿಂದ ಒಬ್ಬರ ಆರೋಗ್ಯಕ್ಕೆ ಒಳ್ಳೆಯದು. ಇದು ಹೆಚ್ಚಿನ ವಿಟಮಿನ್ ಮತ್ತು ಖನಿಜಾಂಶ ಹೊಂದಿದೆ.

    ಸೂಪರ್‌ ಫುಡ್‌ಗಳು ಅಲ್ಟ್ರಾ-ಆರೋಗ್ಯಕರ, ಪೌಷ್ಟಿಕ-ಸಮೃದ್ಧ, ಸಸ್ಯ-ಆಧಾರಿತ ಆಹಾರ ಮತ್ತು ಪೂರಕಗಳಿಗೆ ಸಮನಾಗಿವೆ. ಕ್ಯಾನ್ಸರ್ ಕೋಶಗಳು ಸಾಯುವುದಿಲ್ಲ. ಬದಲಿಗೆ ಅವು ವೇಗವಾಗಿ ಹರಡುತ್ತವೆ. ಇದು ನೇರವಾಗಿ ರೋಗಿಯ ಸಾವಿಗೆ ಕಾರಣವಾಗುತ್ತದೆ. ಇದನ್ನು ಸತ್ತ ಜೀವಕೋಶಗಳು ಎಂದೂ ಕರೆಯುತ್ತಾರೆ.

    ಇದನ್ನೂ ಓದಿ: ಮೂನ್ ಚಾರ್ಜ್ಡ್ ವಾಟರ್ ಎಂದರೇನು? ಇದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು?

    ಕ್ಯಾನ್ಸರ್ ಅಪಾಯ ತಪ್ಪಿಸುವ ಒಂದು ಮಾರ್ಗವೆಂದರೆ ಅದು ಬರದಂತೆ ತಡೆಯುವ ಆಹಾರ ಸೇವಿಸುವುದು. ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ, ಅವನ ಜೀವನಶೈಲಿ, ಆಹಾರ ಮತ್ತು ಆರೋಗ್ಯ ಅಭ್ಯಾಸಗಳಲ್ಲಿ ಬದಲಾವಣೆ ಮಾಡಬೇಕು.
    Published by:renukadariyannavar
    First published: