Gut Health: ಕರುಳಿನ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿ ಯಾವ ಪದಾರ್ಥಗಳು ಇರಬೇಕು? ಇಲ್ಲಿದೆ ತಜ್ಞರ ಸಲಹೆ

ನಿಮ್ಮ ಕರುಳಿನ ಆರೋಗ್ಯವು ನಿಮ್ಮ ಇಡೀ ದೇಹದ ಆರೋಗ್ಯಕ್ಕೆ ಸಂಬಂಧಿಸಿದೆ. ದುರ್ಬಲ ಕರುಳು ನಮ್ಮ ಮಾನಸಿಕ ಆರೋಗ್ಯದ ಅಭಿವ್ಯಕ್ತಿ ಮತ್ತು ನಿರ್ವಹಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೊಟ್ಟೆಗೆ (Stomach) ಸಂಬಂಧಿಸಿದ ಕಾಯಿಲೆಗಳು (Disease) ಸಾಕಷ್ಟು ತೊಂದರೆ (Problems) ನೀಡುತ್ತವೆ. ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು ಸಾಕಷ್ಟು ಕಾಯಿಲೆಗಳನ್ನು ಉತ್ಪತ್ತಿ ಮಾಡುತ್ತವೆ. ಲಿವರ್, ಕರುಳು, ಕಿಡ್ನಿ ಸೇರಿದಂತೆ ಪ್ರಮುಖ ಅಂಗಗಳ ಆರೋಗ್ಯ (Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು. ಯಾಕೆಂದರೆ ದೇಹದಲ್ಲಿ ಉಂಟಾಗುವ ಕಾಯಿಲೆಗಳಿಗೆ ಅರ್ಜೀರ್ಣವೇ ಮೊದಲ ಕಾರಣವಾಗಿರುತ್ತದೆ. ಅದರಲ್ಲೂ ನಿಮ್ಮ ಕರುಳಿನ ಆರೋಗ್ಯವು ನಿಮ್ಮ ಇಡೀ ದೇಹದ ಆರೋಗ್ಯಕ್ಕೆ ಸಂಬಂಧಿಸಿದೆ. ದುರ್ಬಲ ಕರುಳು ನಮ್ಮ ಮಾನಸಿಕ ಆರೋಗ್ಯದ ಅಭಿವ್ಯಕ್ತಿ ಮತ್ತು ನಿರ್ವಹಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

    ದುರ್ಬಲ ಕರುಳಿನಿಂದ ಕಾಯಿಲೆಗಳ ಅಪಾಯ

    ದುರ್ಬಲ ಕರುಳು, ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಕಾಯಿಲೆಗೂ ಕಾರಣವಾಗುತ್ತದೆ. ಖಿನ್ನತೆ, ಆತಂಕ ಮತ್ತು ಒತ್ತಡದಂತಹ ವಿವಿಧ ಮಾನಸಿಕ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತದೆ. ಇದರ ಜೊತೆಗೆ ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ಉಂಟು ಮಾಡುತ್ತದೆ.

    ಅದೇ ವೇಳೆ ಕೆಲವು ಸ್ವಯಂ ನಿರೋಧಕ ಕಾಯಿಲೆಗಳಾದ ಕ್ರೋನ್ಸ್ ಕಾಯಿಲೆ, ದೊಡ್ಡ ಕರುಳಿನ ಉರಿಯೂತ, ಅಂತಃಸ್ರಾವಕ ವ್ಯವಸ್ಥೆ ಮತ್ತು ಕ್ಯಾನ್ಸರ್ಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಪ್ರಸಿದ್ಧ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಅವರು, ಕರುಳಿನ ಆರೋಗ್ಯ ಹೆಚ್ಚಿಸಲು ನೈಸರ್ಗಿಕ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ. ಇತ್ತೀಚೆಗೆ, ರುಜುತಾ ದಿವೇಕರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

    ಅದರಲ್ಲಿ ಅವರು ಕರುಳಿನ ಆರೋಗ್ಯ ಸುಧಾರಣೆಗೆ ಕೆಲವು ಸಲಹೆ ನೀಡಿದ್ದಾರೆ. ಭಾರತೀಯ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ನಿಮ್ಮ ಕರುಳಿನ ಆರೋಗ್ಯ ಹೇಗೆ ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

    ಸಾಕಷ್ಟು ನಿದ್ದೆ ಮಾಡುವುದು

    ಕರುಳಿನ ಆರೋಗ್ಯಕ್ಕೆ ಪ್ರತಿದಿನ 8 ತಾಸು ನಿದ್ದೆ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ಪೌಷ್ಟಿಕ ತಜ್ಞರಾದ ರುಜುತಾ. ಹಗಲು ಮಲಗುವುದು ಮತ್ತು ರಾತ್ರಿ ತುಂಬಾ ಹೊತ್ತಿನವರೆಗೆ ನಿದ್ದೆ ಮಾಡದೇ ಇರುವವರು ಅಥವಾ ತಡರಾತ್ರಿ ಎಚ್ಚರವಿರುವವರು ನೀವಾಗಿದ್ದರೆ ನಿಮಗೆ ಹೊಟ್ಟೆಯ ಸಮಸ್ಯೆ ಸದಾ ಕಾಡುತ್ತದೆ.

    ದೇಹವನ್ನು ಸಕ್ರಿಯವಾಗಿರಿಸಿ

    ರುಜುತಾ ದಿವೇಕರ್ ಹೇಳುವ ಪ್ರಕಾರ, ವ್ಯಾಯಾಮದಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಆಗುವುದು ಕಡಿಮೆ. ಪ್ರತಿ ಗಂಟೆಗೆ 3 ನಿಮಿಷಗಳ ಕಾಲ ನಿಲ್ಲಬೇಕು. ಏಕೆಂದರೆ ಗ್ಯಾಸ್ ಸಮಸ್ಯೆಯು ಪಾದಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಅದು ಕ್ರಮೇಣ ದೇಹದಾದ್ಯಂತ ಹರಡುತ್ತದೆ. ಹಾಗಾಗಿ ಆದಷ್ಟು ಸಕ್ರಿಯವಾಗಿರಬೇಕು.

    ಕರುಳಿನ ಆರೋಗ್ಯಕ್ಕೆ ಯಾವ ಆಹಾರ ಉತ್ತಮ

    ರುಜುತಾ ದಿವೇಕರ್ ಅವರ ಪ್ರಕಾರ, ಅನ್ನವನ್ನು ತಿನ್ನುವುದು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಬೇಯಿಸಿದ ಅನ್ನವನ್ನು ತುಪ್ಪ ಮತ್ತು ಉಪ್ಪಿನೊಂದಿಗೆ ತಿನ್ನಲು ಸಲಹೆ ನೀಡುತ್ತಾರೆ. ಅನ್ನವು ಪ್ರಿಬಯಾಟಿಕ್ ಗುಣ ಹೊಂದಿದ್ದು ಅದು ಹೊಟ್ಟೆಯಲ್ಲಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರ ನೀಡುತ್ತದೆ.

    ಕುಂಬಳಕಾಯಿ ಅಥವಾ ಸೋರೆಕಾಯಿ ಸೇವನೆ

    ನೀರು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುವ ತರಕಾರಿಗಳು ಕರುಳಿನ ಆರೋಗ್ಯಕ್ಕೆ ಆರೋಗ್ಯಕರ ಎಂದು ಪೌಷ್ಟಿಕ ತಜ್ಞರಾದ ರುಜುತಾ ಸೂಚಿಸುತ್ತಾರೆ. ಈ ತರಕಾರಿಗಳಿಂದ ತಯಾರಿಸಿದ ರೈತಾ ತಿನ್ನುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ.

    ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

    ಕರುಳಿನ ಆರೋಗ್ಯಕ್ಕೆ ಮಡಿಕೆ ಕಾಳು

    ಆರೋಗ್ಯಕರ ಧಾನ್ಯ ಎಂದು ಕರೆಯಲ್ಪಡುವ ಮಡಿಕೆ ಕಾಳು ಕರುಳಿನ ಆರೋಗ್ಯ ಸುಧಾರಿಸಲು ಕೆಲಸ ಮಾಡುತ್ತದೆ. ಈ ಕಾಳುಗಳಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಇದನ್ನು ಕುದಿಸಿ ಅಥವಾ ಮೊಳಕೆ ಬರಿಸಿ, ಸಲಾಡ್ ರೂಪದಲ್ಲಿ ತಿನ್ನುವುದು ಕರುಳಿನ ಆರೋಗ್ಯಕ್ಕೆ ಸಹಕಾರಿ ಆಗಿದೆ.
    Published by:renukadariyannavar
    First published: