Milk And Health: ಹಾಲಿನ ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದ್ರೆ ವಿಷಕಾರಿ ಅಂಶ ಸೃಷ್ಟಿ! ಇರಲಿ ಎಚ್ಚರ

ಕೆಲವರು ಹಾಲಿಗೆ ಸ್ವಲ್ಪ ಸಕ್ಕರೆ ಅಥವಾ ವಿವಿಧ ರೀತಿಯ ಪದಾರ್ಥಗಳನ್ನು ಸೇರಿಸಿ ಕುಡಿಯುತ್ತಾರೆ. ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಹಾಲಿನೊಂದಿಗೆ ಯಾವ ಪದಾರ್ಥ ಮಿಶ್ರಣ ಮಾಡಿ ಕುಡಿಯುತ್ತೇವೆ ಎಂಬುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಶ್ವ ಹಾಲು ದಿನ 2022 (World Milk Day). ಜೂನ್‌ ತಿಂಗಳ (June Month) ಮೊದಲ ದಿನವನ್ನು (First Day) ವಿಶ್ವದಾದ್ಯಂತ ಹಾಲು ದಿನ ಎಂದು ಆಚರಣೆ ಮಾಡಲಾಗುತ್ತದೆ. ಹಾಲು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ದೇಹಕ್ಕೆ (Body) ಬೇಕಾದ ಮುಖ್ಯ ಕ್ಯಾಲ್ಸಿಯಂ ಹಾಲಿನಲ್ಲಿ ಕಂಡು ಬರುತ್ತದೆ. ಮತ್ತು ಇದು ಆರೋಗ್ಯಕ್ಕೆ ಬಹಳ ಮುಖ್ಯ.  ಹಾಲಿನ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಾತ್ರ ವಿಶ್ವ ಹಾಲು ದಿನವನ್ನು ಆಚರಣೆ ಮಾಡಲಾಗುತ್ತದೆ. ಜನರು ತಮ್ಮದೇ ಆದ ರೀತಿಯಲ್ಲಿ ಹಾಲು ಕುಡಿಯುತ್ತಾರೆ. ಕೆಲವರು ಸಾದಾ ಹಾಲನ್ನು ಕುಡಿಯಲು ಹೆಚ್ಚು ಇಷ್ಟ ಪಡುತ್ತಾರೆ.

    ಹಾಲಿನ ಜೊತೆ ಯಾವ ಪದಾರ್ಥ ಮಿಶ್ರಣ ಮಾಡಿ ಸೇವನೆ ಮಾಡಬಾರದು?

    ಇನ್ನು ಕೆಲವರು ಹಾಲಿಗೆ ಸ್ವಲ್ಪ ಸಕ್ಕರೆ ಅಥವಾ ವಿವಿಧ ರೀತಿಯ ಪದಾರ್ಥಗಳನ್ನು ಸೇರಿಸಿ ಕುಡಿಯುತ್ತಾರೆ. ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಹಾಲಿನೊಂದಿಗೆ ಯಾವ ಪದಾರ್ಥ ಮಿಶ್ರಣ ಮಾಡಿ ಕುಡಿಯುತ್ತೇವೆ ಎಂಬುದು ಮುಖ್ಯ.

    ಯಾಕೆಂದರೆ ಕೆಲವು ಪದಾರ್ಥಗಳನ್ನು ಹಾಲಿನ ಜೊತೆ ಮಿಶ್ರಣ ಮಾಡಿದರೆ ಅದು ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ. ಹಾಗಾಗಿ ಹಾಲಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎನ್ನುತ್ತಾರೆ ತಜ್ಞರು. ಆ ಪದಾರ್ಥಗಳು ಯಾವವು ಎಂದು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಮಹಿಳೆಯರನ್ನು ಹೆಚ್ಚು ಬಾಧಿಸುವ ಮೈಗ್ರೇನ್ ಗೆ ಕಾರಣಗಳು ಮತ್ತು ಪರಿಹಾರ ಹೇಗೆ?

    ಮೀನಿನೊಂದಿಗೆ ಹಾಲು ಸೇವನೆ

    ಮೀನು ತಿನ್ನುವಾಗ ಹಾಲು ತಂಪಾಗಿಸುವ ಪರಿಣಾಮ ಹೊಂದಿರುತ್ತದೆ. ದೇಹದ ಉಷ್ಣತೆ ಹೆಚ್ಚಿಸುತ್ತದೆ. ಈ ಸಂಯೋಜನೆಯು ದೇಹದಲ್ಲಿ ಅಸಮತೋಲನ ಉಂಟು ಮಾಡುತ್ತದೆ. ಮತ್ತು ಇದರಿಂದಾಗಿ ರಾಸಾಯನಿಕ ಬದಲಾವಣೆಗಳು ದೇಹದಲ್ಲಿ ಉಂಟಾಗಲು ಪ್ರಾರಂಭಿಸುತ್ತವೆ.

    ಮೀನು-ಮಾಂಸದೊಂದಿಗೆ ಹಾಲು ಕುಡಿಯುವುದು ಜೀರ್ಣಕಾರಿ ಸಮಸ್ಯೆಗೆ ಕಾರಣ. ಮತ್ತು ಹೊಟ್ಟೆಯಲ್ಲಿ ಭಾರವಾದ ಅನುಭವ ಉಳಿಯುತ್ತದೆ.

    ಬಾಳೆಹಣ್ಣುಹಾಲು

    ಅನೇಕ ಜನರು ಹಾಲು ಮತ್ತು ಬಾಳೆಹಣ್ಣಿನ ಸಂಯೋಜನೆ ತುಂಬಾ ಆರೋಗ್ಯಕರ ಎಂದು ತಿಳಿದಿದ್ದಾರೆ. ಆದರೆ ಆರೋಗ್ಯ ತಜ್ಞರು ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದು ತುಂಬಾ ಭಾರವಾಗುತ್ತದೆ. ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು. ಈ ಎರಡನ್ನೂ ಒಟ್ಟಿಗೆ ತೆಗೆದುಕೊಂಡರೆ ಸುಸ್ತಾಗುತ್ತದೆ. ಆದ್ದರಿಂದ ಹಾಲು ಮತ್ತು ಬಾಳೆಹಣ್ಣನ್ನು ಪ್ರತ್ಯೇಕವಾಗಿ ಸೇವನೆ ಮಾಡಬೇಕು.

    ಹಣ್ಣು ಮತ್ತು ಹಾಲು

    ಅನೇಕ ಹಣ್ಣುಗಳೊಂದಿಗೆ ಹಾಲು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಹಾಲು ಹೊಟ್ಟೆ ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಆದರೆ ಹಣ್ಣುಗಳು ನೈಸರ್ಗಿಕ ಉಪ್ಪು ಮತ್ತು ನೀರನ್ನು ಹೊಂದಿರುತ್ತವೆ. ಇದು ಮೂತ್ರದ ಮೂಲಕ ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ.

    ಇವುಗಳನ್ನು ಒಟ್ಟಿಗೆ ಸೇವಿಸುವುದು ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಮತ್ತು ದೇಹದಲ್ಲಿ ವಿಷಕಾರಿ ಅಂಶ ಹೆಚ್ಚಾಗುತ್ತದೆ. ಇದರಿಂದ ವಾಂತಿ, ಭೇದಿ ಸಮಸ್ಯೆ ಬರಬಹುದು. ಆದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ತಿನ್ನಿರಿ.

    ಮೂಲಂಗಿ ಮತ್ತು ಹಾಲು

    ಆಯುರ್ವೇದದ ಪ್ರಕಾರ ಮೂಲಂಗಿ ತಿಂದ ತಕ್ಷಣ ಹಾಲು ಕುಡಿಯಬಾರದು. ಏಕೆಂದರೆ ಮೂಲಂಗಿ ಬಿಸಿ ಪದಾರ್ಥ. ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ. ಹಾಲು ಮತ್ತು ಮೂಲಂಗಿ ಪ್ರತ್ಯೇಕವಾಗಿ ಸೇವಿಸಬೇಕು. ಏಕೆಂದರೆ ಅವು ಒಟ್ಟಿಗೆ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ತಜ್ಞರ ಪ್ರಕಾರ, ಮೂಲಂಗಿ ಅಥವಾ ಅದರಿಂದ ಮಾಡಿದ ವಸ್ತುಗಳನ್ನು ತಿಂದ ಕನಿಷ್ಠ ಎರಡು ಗಂಟೆಗಳ ನಂತರ ಮಾತ್ರ ಹಾಲು ಕುಡಿಯಬೇಕು.

    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮತ್ತು ವಯಸ್ಸಾಗುವಿಕೆ ತಡೆಯಲು ವಿಟಮಿನ್ ಸಿ ಪ್ರಯೋಜನಕಾರಿ

    ಹಾಲು ಮತ್ತು ಹುಳಿ

    ಹುಳಿ ಅಥವಾ ಆಮ್ಲೀಯ ವಸ್ತುಗಳನ್ನು ಹಾಲಿನಲ್ಲಿ ಬೆರೆಸಬಾರದು ಎಂದು ತಜ್ಞರು ಹೇಳುತ್ತಾರೆ. ಹಾಲಿನೊಂದಿಗೆ ವಿಟಮಿನ್ ಸಿ ಹೊಂದಿರುವ ಹಣ್ಣು ತಿನ್ನುವುದನ್ನು ತಪ್ಪಿಸಿ. ಹಾಲು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ನಿಂಬೆ ಅಥವಾ ಯಾವುದೇ ಹುಳಿ ಹಣ್ಣನ್ನು ಹಾಲಿನೊಂದಿಗೆ ತಿನ್ನುವುದರಿಂದ ಅದು ಹೊಟ್ಟೆ ದಪ್ಪವಾಗುತ್ತದೆ. ಇದು ಶೀತ, ಕೆಮ್ಮು, ದದ್ದುಗಳು ಮತ್ತು ಅಲರ್ಜಿ ಉಂಟುಮಾಡಬಹುದು.
    Published by:renukadariyannavar
    First published: