Home Chores Exercise: ಯಾವ ಮನೆಕೆಲಸಗಳು ವರ್ಕೌಟ್ ವರ್ಗಕ್ಕೆ ಸೇರುತ್ತವೆ? ಇವನ್ನು ಮಾಡಿದ್ರೆ ಜಿಮ್​​​ಗೆ ಹೋಗದೇ ಬೇಡ

30 ನಿಮಿಷ ವಾಕಿಂಗ್ ಮಾಡುವುದು, ಹಾಗಾದರೆ ಇದನ್ನು ವ್ಯಾಯಾಮ ಎಂದು ಪರಿಗಣಿಸಬಹುದೇ? ಆರೋಗ್ಯ ವರದಿಯ ಪ್ರಕಾರ ಅಂತಹ 4 ರಿಂದ 5 ಮನೆ ಕೆಲಸಗಳು ವರ್ಕೌಟ್‌ಗಳ ವರ್ಗಕ್ಕೆ ಸೇರ್ಪಡೆ ಆಗುತ್ತವೆ. ಅವುಗಳಿಂದ ನೀವು ದೈಹಿಕವಾಗಿ ಸದೃಢ ಆಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ (Try) ಮಾಡುತ್ತೇವೆ. ಕೆಲವೊಮ್ಮೆ ದಿನನಿತ್ಯ ಸರಿಯಾದ ಸಮಯಕ್ಕೆ (Time) ಮಲಗುವುದು (Sleeping) ಮತ್ತು ಏಳಲು ಸಾಧ್ಯವಾಗದೇ ಇರುವುದು ಹಲವು ರೀತಿಯ ಆರೋಗ್ಯ ಸಮಸ್ಯೆ (Problem) ಮತ್ತು ಒತ್ತಡಕ್ಕೆ (Stress) ಕಾರಣ ಆಗುತ್ತದೆ. ಅಲ್ಲದೇ ಒಂದು ಸರಿಯಾದ ಜೀವನಕ್ರಮ ಮತ್ತು ಡಯಟ್ ಪ್ಲಾನ್ ಇಲ್ಲದೇ ಇರುವುದು ಸಾಕಷ್ಟು ಸಮಸ್ಯೆ ಕ್ರಿಯೇಟ್ ಆಗಲು ಮುಖ್ಯ ಕಾರಣವಾಗುತ್ತದೆ. ಹೆಚ್ಚುತ್ತಿರುವ ತೂಕಕ್ಕೂ ಇದೇ ಕಾರಣ ಆಗುತ್ತದೆ. ಅನೇಕ ಜನರು ಸರಿಯಾಗಿ ದಿನನಿತ್ಯ ವರ್ಕೌಟ್ ಮಾಡಲು ಆಗುವುದಿಲ್ಲ. ಆದರೆ ದಿನವೂ ಸರಿಯಾಗಿ ಎಲ್ಲಾ ಮನೆ ಕೆಲಸ ಮಾಡುತ್ತಾರೆ.

    ಯಾವ ಮನೆಕೆಲಸಗಳು ವರ್ಕೌಟ್ ಗಳ ವರ್ಗಕ್ಕೆ ಸೇರ್ಪಡೆ ಆಗುತ್ತವೆ?

    ಅಥವಾ 30 ನಿಮಿಷ ವಾಕಿಂಗ್ ಮಾಡುತ್ತಾರೆ. ಹಾಗಾದರೆ ಇದನ್ನು ವ್ಯಾಯಾಮ ಎಂದು ಪರಿಗಣಿಸಬಹುದೇ? ಆರೋಗ್ಯ ವರದಿಯ ಪ್ರಕಾರ ಅಂತಹ 4 ರಿಂದ 5 ಮನೆ ಕೆಲಸಗಳು ವರ್ಕೌಟ್‌ಗಳ ವರ್ಗಕ್ಕೆ ಸೇರ್ಪಡೆ ಆಗುತ್ತವೆ. ಮತ್ತು ಅವುಗಳಿಂದ ನೀವು ದೈಹಿಕವಾಗಿ ಸದೃಢ ಆಗಿರಬಹುದು.

    ಆದರೆ ಈ ಎಲ್ಲಾ ಕೆಲಸಗಳು ಮಿತವಾದ ಅಂದರೆ ಹಗುರವಾದ ತಾಲೀಮು, ಇದರಿಂದ ದೇಹವು ಕ್ರಿಯಾಶೀಲ ಆಗಿರುತ್ತದೆ. ಆದರೆ ಹೆಚ್ಚಿನ ತೂಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದರ ಬಗ್ಗೆ ತಿಳಿಯಿರಿ.

    ಇದನ್ನೂ ಓದಿ: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

    ಮನೆಯಲ್ಲಿ ನೆಲ ಒರೆಸುವುದು

    ಮನೆಕೆಲಸಗಳಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುವುದು ಮತ್ತು ಮನೆಯಲ್ಲಿ ನೆಲ ಒರೆಸುವುದು, ದೈಹಿಕ ತಾಲೀಮು, ಉಳಿದ ಪಾತ್ರೆ ಸ್ವಚ್ಛ ಮಾಡುವುದು, ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ತೊಳೆಯುವುದು, ಈ ಎಲ್ಲಾ ಕೆಲಸಗಳು ನಿಮ್ಮನ್ನು ಕ್ರಿಯಾಶೀಲ ಆಗಿರಿಸುತ್ತದೆ. ಆದರೆ ಅದರಲ್ಲಿ ಕ್ಯಾಲೊರಿ ಬರ್ನ್ ಆಗುವುದಿಲ್ಲ. ಕ್ರಿಯಾಶೀಲವಾಗಿ ನೆಲ ಹಾಗೂ ಟೇಬಲ್ ಸೇರಿದಂತೆ ಹಲವು ಕ್ಲೀನಿಂಗ್ ಕೆಲಸಗಳು ದೇಹದ ಕೊಬ್ಬು ಕಡಿಮೆ ಮಾಡುತ್ತದೆ.

    ಮಕ್ಕಳ ಜೊತೆ ಆಟ ಆಡುವುದು

    ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರ ಜೊತೆ ಆಟವಾಡಿ. ಜೊತೆಗೆ ಮಕ್ಕಳ ಜೊತೆ ಕ್ರಿಯಾಶೀಲವಾಗಿರುವುದು ಮತ್ತು ನೀವು ಮಕ್ಕಳ ಜೊತೆ ಓಡುವುದು, ಜಿಗಿಯುವುದು, ಆಟ ಆಡುವುದು ದೈಹಿಕ ತಾಲೀಮಿಗೆ ಸಮವಲ್ಲದಿದ್ದರೂ ನಿಮ್ಮನ್ನು ಫಿಟ್ ಆಗಿರಿಸುತ್ತದೆ.

    ಇದು ಸಾಕಷ್ಟು ತೀವ್ರವಾದ ವ್ಯಾಯಾಮ ಮಾಡದೇ ಹೋದರೂ ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಇದು ಸಹಾಯಕ. ಈ ಕೆಲಸದಲ್ಲಿ ಮನಸ್ಸು ಮತ್ತು ಮೈಂಡ್ ಸಂತೋಷಗೊಳ್ಳುತ್ತದೆ. ಮತ್ತು ದೇಹವೂ ಕ್ರಿಯಾಶೀಲವಾಗುತ್ತದೆ.

    ತೋಟಗಾರಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು

    ನೀವು ಮರ ನೆಡುವುದು, ತೋಟಗಾರಿಕೆಯಲ್ಲಿ ಸಸಿಗಳ ಆರೈಕೆ, ತೋಟದಲ್ಲಿ ಓಡಾಡುವುದು ಮತ್ತು ಅವುಗಳ ರಕ್ಷಣೆ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ದೈಹಿಕ ವ್ಯಾಯಾಮವೂ ಆಗುತ್ತದೆ. ಇದು ನಿಮ್ಮನ್ನು ಕ್ರಿಯಾಶೀಲವಾಗಿ ಇರಿಸುತ್ತದೆ.

    ವಾಸ್ತವದಲ್ಲಿ ತೋಟಗಾರಿಕೆ ಸಾಮಾನ್ಯವಾಗಿ ಹೊರಾಂಗಣ ಚಟುವಟಿಕೆ ಆಗಿದೆ. ಇದರಲ್ಲಿ ಬಹಳಷ್ಟು ಬೆವರು ಹೊರಗೆ ಹೋಗುತ್ತದೆ. ಅದರಲ್ಲೂ ಹುಲ್ಲು ಕತ್ತರಿಸುವುದು, ಯಂತ್ರ ಚಲಿಸುವುದು ಇದು ಕಠಿಣ ಕೆಲಸ ಮತ್ತು ಅದು ತಾಲೀಮಿಗಿಂತ ಕಡಿಮೆಯಿಲ್ಲ.

    ಮೆಟ್ಟಿಲುಗಳನ್ನು ಹತ್ತುವುದು ಮತ್ತು ಇಳಿಯುವುದು

    ನೀವು ಮನೆಯಲ್ಲಿ ಚಟುವಟಿಕೆಯಿಂದ ಇರುವುದು ಮತ್ತು ಕನಿಷ್ಠ 100 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಕೆಲಸದ ಕಾರಣ 2 ಕಿಲೋಮೀಟರ್ ನಡೆಯುವುದು, ಇದನ್ನು ದೈಹಿಕ ವ್ಯಾಯಾಮದ ವರ್ಗದಲ್ಲಿ ಸೇರಿಸಲಾಗುತ್ತದೆ. ನೀವು 5 ಮಹಡಿಗಳ ಕೆಳಗೆ ವಾಸ ಮಾಡುತ್ತಿದ್ದರೆ, ಯಾವಾಗಲೂ ಮೆಟ್ಟಿಲು ಹತ್ತಿ ಇಳಿಯುವ ಅಭ್ಯಾಸ ಮಾಡಿ. ಅದು ಇಡೀ ದಿನದ ವ್ಯಾಯಾಮವಾಗಿದೆ.

    ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

    ಹೊರಾಂಗಣ ಆಟ ಮತ್ತು ನಡಿಗೆ

    ನೀವು ಯಾವುದೇ ದೈಹಿಕ ಕ್ರೀಡೆ ಆಡುವುದು ಅರ್ಧ ಘಂಟೆ ಚಟುವಟಿಕೆಯಿಂದ ಇರುವುದು ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಇದು ಒಂದು ಚಟುವಟಿಕೆ ಆಗಿದೆ. ವಿಶೇಷವಾಗಿ ಆಟವು ಹೆಚ್ಚಿನ ಕ್ಯಾಲೋರಿ ಬರ್ನ್ ಮಾಡುತ್ತದೆ.
    Published by:renukadariyannavar
    First published: