Cholesterol Problem: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಯಾವ ಆರೋಗ್ಯಕರ ಪದಾರ್ಥಗಳನ್ನು ಸೇವಿಸಬೇಕು?

ಕೆಟ್ಟ ಕೊಲೆಸ್ಟ್ರಾಲ್ ರಕ್ತದ ಹರಿವು ತಡೆಯುವ ಕೆಲಸ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನಾವು ತಿನ್ನುವ ಆಹಾರವು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಆರೋಗ್ಯಕರ ಆಹಾರ ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊಲೆಸ್ಟ್ರಾಲ್ (Cholesterol) ಎಲ್ಲರ ದೇಹಗಳಲ್ಲಿ (Body) ಕಂಡು ಬರುತ್ತದೆ. ಆದರೆ ನಮ್ಮ ಆಹಾರ (Food) ಪದ್ಧತಿ  ಮತ್ತು ಜೀವನಶೈಲಿಯು (Lifestyle) ಕೆಟ್ಟದಾಗಿದ್ದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುತ್ತಾ ಹೋಗುತ್ತದೆ. ದೇಹದ ಎಲ್ಲಾ ಜೀವಕೋಶಗಳಲ್ಲಿ ಕಂಡು ಬರುವ ಮೇಣದಂತಹ ವಸ್ತು ಆಗಿದೆ. ದೇಹದಲ್ಲಿ ಎರಡು ವಿಧದ ಕೊಲೆಸ್ಟ್ರಾಲ್ ಗಳು ಕಂಡು ಬರುತ್ತವೆ. HDL ಒಳ್ಳೆಯ ಕೊಲೆಸ್ಟ್ರಾಲ್ ಮತ್ತು LDL ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಕೆಟ್ಟ ಕೊಲೆಸ್ಟ್ರಾಲ್ ರಕ್ತದ ಹರಿವು ತಡೆಯುವ ಕೆಲಸ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನಾವು ತಿನ್ನುವ ಆಹಾರವು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಆರೋಗ್ಯಕರ ಆಹಾರ ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.

    ಹಾಗಾದರೆ ಕೆಟ್ಟ ಕೊಲೆಸ್ಟ್ರಾಲ್‌ ಇದ್ದವರು ಯಾವ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದರ ಬಗ್ಗೆ ಮೊದಲು ತಿಳಿಯುವುದು ಮುಖ್ಯ.

    ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಯಾವ ಆರೋಗ್ಯಕರ ಪದಾರ್ಥಗಳನ್ನು ಸೇವಿಸಬೇಕು?

    ಮೀನು ಮತ್ತು ಮೊಟ್ಟೆ

    ಒಮೆಗಾ 3, ಪ್ರೋಟೀನ್ ಮೀನು ಮತ್ತು ಮೊಟ್ಟೆಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ರಕ್ತ ಪರಿಚಲನೆಯಲ್ಲಿ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೀನು ಮತ್ತು ಮೊಟ್ಟೆ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಬಹುದು.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಕಡಿಮೆ ಕೊಬ್ಬಿನ ಪ್ರೋಟೀನ್ ಅನ್ನು ನಿಯಮಿತವಾಗಿ ಸೇವನೆ ಮಾಡುವುದು ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ದ್ವಿದಳ ಧಾನ್ಯಗಳು

    ಹೆಚ್ಚಿನ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಲು ಧಾನ್ಯಗಳನ್ನು ಸೇವಿಸುವುದು ಉತ್ತಮ ಆಯ್ಕೆ ಎನ್ನುತ್ತಾರೆ ತಜ್ಞರು. ಫೈಬರ್ ಮತ್ತು ಇತರ ಪ್ರೋಟೀನ್ಗಳು ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ. ಇದರಿಂದ ರಕ್ತದೊತ್ತಡದ ಜೊತೆಗೆ ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಆಗಿದೆ.

    ಅಗಸೆ ಬೀಜಗಳು

    ಅಗಸೆ ಬೀಜವನ್ನು ಆರೋಗ್ಯಕ್ಕೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ಫೈಬರ್, ಪ್ರೋಟೀನ್, ತಾಮ್ರ ಮತ್ತು ಸತು ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದ್ದರಿಂದ ಅಗಸೆ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸಲಾಡ್, ಸ್ಮೂಥಿ ಮತ್ತು ಓಟ್ಸ್‌ಗೆ ಸೇರಿಸಿ ಸೇವನೆ ಮಾಡಬಹುದು.

    ಹಸಿರು ಚಹಾ

    ಹಸಿರು ಚಹಾ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಸಿರು ಚಹಾ ಸೇವನೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಕೊಲೆಸ್ಟ್ರಾಲ್ ಹೆಚ್ಚಿರುವ ಈ ಪದಾರ್ಥಗಳ ಸೇವನೆಯಿಂದ ದೂರವಿರಿ

    ರಿಫೈನ್ಡ್ ಆಯಿಲ್ ಸೇವನೆಯಿಂದ ದೂರವಿರಿ

    ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಎಣ್ಣೆಯ ಸೇವನೆ ಮತ್ತು ಕರಿದ ಪದಾರ್ಥಗಳ ಸೇವನೆ. ಹಾಗಾಗಿ ರಿಫೈನ್ಡ್ ಆಯಿಲ್ ಸೇವನೆ ಮಾಡಬೇಡಿ. ಅದರ ಬದಲು ಅಡುಗೆ ಮತ್ತು ನಿಮ್ಮ ಆಹಾರದಲ್ಲಿ ಆಲಿವ್ ಅಥವಾ ಸಾಸಿವೆ ಎಣ್ಣೆ ಸೇರಿಸಿ. ಈ ತೈಲಗಳು ಅಪರ್ಯಾಪ್ತ ಕೊಬ್ಬನ್ನು ಹೊಂದಿವೆ.

    ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸುಲಭ ಮಾರ್ಗವಾಗಿದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು ಎಂದರೆ ಅನಾರೋಗ್ಯಕರ ಕೊಬ್ಬನ್ನು ನಿಗ್ರಹಿಸುವುದು ಎಂದರ್ಥ. ಹಾಗಾಗಿ ನೀವು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ತೊಂದರೆಗೆ ಒಳಗಾಗಿದ್ದರೆ ಚೀಸ್, ಬೆಣ್ಣೆ, ಸಂಸ್ಕರಿಸಿದ ಎಣ್ಣೆಗಳ ಸೇವನೆ ಕಡಿಮೆ ಮಾಡಿ.

    ಕೋಳಿ ಮಾಂಸ ಸೇವನೆ ಕಡಿಮೆ ಮಾಡಿ

    ನೀವು ಚಿಕನ್ ಪ್ರಿಯರಾಗಿದ್ದರೆ, ಕೆಟ್ಟ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದರೆ ಜಾಗ್ರತೆ ವಹಿಸಿ. ಕೊಲೆಸ್ಟ್ರಾಲ್ ಹೊಂದಿರುವವರು ಕೋಳಿ ಮಾಂಸ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಿದೆ. ಕೋಳಿಯಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ. ಹಾಗಾಗಿ ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದ್ದರೆ ನೀವು ಚಿಕನ್ ಸೇವನೆಯಿಂದ ದೂರವಿರಿ.

    ಹಾಲಿನ ಉತ್ಪನ್ನಗಳ ಅಧಿಕ ಸೇವನೆ ಬೇಡ

    ಅಧಿಕ ಕೊಬ್ಬಿನಂಶವಿರುವ ಹಾಲು, ಅಧಿಕ ಕೊಲೆಸ್ಟ್ರಾಲ್ ಇರುವ ಚೀಸ್ ಸೇವನೆ ಬೇಡ. ಕೊಲೆಸ್ಟ್ರಾಲ್ ರೋಗಿಗಳು ಪೂರ್ಣ ಕೊಬ್ಬಿನ ಹಾಲು, ಚೀಸ್ ಸೇವನೆಯಿಂದ ದೂರವಿರಿ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ಹಸಿ ಮಾಂಸ ಸೇವನೆಯಿಂದ ದೂರವಿರಿ

    ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ, ಹಸಿ ಮತ್ತು ರೆಡ್ ಮೀಟ್ ಸೇವನೆ ಮಾಡಬೇಡಿ. ಮಾಂಸದಲ್ಲಿರುವ ಅಂಶಗಳು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
    Published by:renukadariyannavar
    First published: