Happy Mood: ನೀವು ಪ್ರತಿದಿನ ಅನುಭವಿಸುವ ನೋವು, ಸಂತೋಷಕ್ಕೆ ದೇಹದಲ್ಲುಂಟಾಗುವ ಇದೇ ಕಾರಣ!

ಕೆಲವರು ಮನೆಯಲ್ಲಿ ಭಕ್ತಿಗೀತೆಗಳನ್ನು ಕೇಳುತ್ತಾ ದಿನವನ್ನು ಶುರು ಮಾಡುತ್ತಾರೆ. ಆದರೆ ಮನೋವಿಜ್ಞಾನದ ಪ್ರಕಾರ, ಸಂತೋಷ ಅಥವಾ ದುಃಖವು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ಹಾರ್ಮೋನುಗಳಿಗೆ ಸಂಬಂಧಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಬೆಳಗ್ಗೆ (Morning) ಎದ್ದಾಗ ನಮ್ಮ ಮೂಡ್ (Mood) ಚೆನ್ನಾಗಿ ಇರಬೇಕು. ಇಲ್ಲದಿದ್ದರೆ ಸಣ್ಣ ಪುಟ್ಟ ವಿಷಯಕ್ಕೂ (Thing) ಕಿರಿಕಿರಿ ಅನುಭವಿಸುವಂತಾಗುತ್ತದೆ. ಜೊತೆಗೆ ನಮ್ಮ ಬೆಳಗನ್ನು ನಾವು ಚೆನ್ನಾಗಿ ಆರಂಭಿಸಿದರೆ ಇಡೀ ದಿನ ಉಲ್ಲಾಸ ಹಾಗೂ ಆನಂದದಿಂದ (Happiness) ಕಳೆಯುತ್ತೇವೆ. ಇಲ್ಲದಿದ್ದರೆ ಇಡೀ ದಿನವೂ (Full Day) ಹಾಳಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಪ್ರತಿಯೊಬ್ಬ ವ್ಯಕ್ತಿಯು ಬೆಳಗ್ಗೆ ತಾವು ಮಾಡುವ ಕೆಲಸ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತನ್ನದೇ ಆದ ವಿಭಿನ್ನ ಆಲೋಚನೆ ಮತ್ತು ಅಭ್ಯಾಸ ಹೊಂದಿರುತ್ತಾನೆ. ಕೆಲವರು ಏನಾದರೂ ತಿನ್ನುತ್ತಾರೆ. ಈ ಮೂಲಕ ಆನಂದಿಸುತ್ತಾರೆ. ಇನ್ನು ಕೆಲವರು ಬೆಳಗ್ಗೆ ವ್ಯಾಯಾಮ ಮಾಡುತ್ತಾರೆ.

    ಸಂತೋಷ ಅಥವಾ ದುಃಖವು ವಿವಿಧ ರೀತಿಯ ಹಾರ್ಮೋನುಗಳಿಗೆ ಸಂಬಂಧಿಸಿದೆ

    ಜಾಗಿಂಗ್ ಮಾಡುವಾಗ ಹಾಡು ಕೇಳುತ್ತಾ ಬೆಳಗ್ಗೆ ಸಂತಸದಿಂದ ದಿನವನ್ನು ಆರಂಭಿಸುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಭಕ್ತಿಗೀತೆಗಳನ್ನು ಕೇಳುತ್ತಾ ದಿನವನ್ನು ಶುರು ಮಾಡುತ್ತಾರೆ. ಆದರೆ ನಾವು ಮನೋವಿಜ್ಞಾನದ ಬಗ್ಗೆ ಹೇಳುವುದಾದರೆ ಸಂತೋಷ ಅಥವಾ ದುಃಖವು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ಹಾರ್ಮೋನುಗಳಿಗೆ ಸಂಬಂಧಿಸಿದೆ.

    ನಮ್ಮ ದೇಹದಲ್ಲಿ ಕೆಲವು ಹಾರ್ಮೋನ್‌ಗಳಿವೆ ಅದು ನಮಗೆ ಸಂತೋಷ ನೀಡುತ್ತದೆ ಮತ್ತು ಕೆಲವೊಮ್ಮೆ ಅವುಗಳಿಂದ ನಾವು ತುಂಬಾ ಕೆಟ್ಟ ಭಾವನೆ ಅನುಭವಿಸುತ್ತೇವೆ. ಇಂದು ನಾವು ನಿಮಗೆ ಆಂತರಿಕವಾಗಿ ಅಂದರೆ ಮನಸ್ಸಿನಾಳದಿಂದ ಸಂತೋಷವಾಗಿರಲು ಸಹಾಯ ಮಾಡುವ ಒಂದು ಹಾರ್ಮೋನ್ ಬಗ್ಗೆ ಇಲ್ಲಿ ನೋಡೋಣ.

    ಇದನ್ನೂ ಓದಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?

    ಎಂಡಾರ್ಫಿನ್ ಅಥವಾ ಸಂತೋಷದ ಹಾರ್ಮೋನ್

    ಎಂಡಾರ್ಫಿನ್ ಅಥವಾ ಸಂತೋಷದ ಹಾರ್ಮೋನ್ ವ್ಯಕ್ತಿಯು ಆಂತರಿಕವಾಗಿ ಅಂದರೆ ಮನಸ್ಸಿನಾಳದಿಂದ ಖುಷಿಯಾಗಿರಲು ಸಹಾಯ ಮಾಡುತ್ತದೆ. ಇವು ನಮ್ಮ ದೇಹದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅತ್ಯಂತ ಚಿಕ್ಕ ನ್ಯೂರೋಕೆಮಿಕಲ್ಗಳಾಗಿವೆ.

    ನಮಗೆ ಉಂಟಾಗುವ ನೋವು, ಒತ್ತಡ ಅಥವಾ ಏನಾದರೂ ತಿನ್ನುವಾಗ, ಲೈಂಗಿಕ ಸಂಪರ್ಕದ ಸಮಯದಲ್ಲಿ ಹಾಗೂ ವ್ಯಾಯಾಮ ಮಾಡುವಾಗ, ನಮ್ಮ ದೇಹವು ಅದಕ್ಕೆ ಪ್ರತಿಯಾಗಿ ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡುತ್ತದೆ. ಎಂಡಾರ್ಫಿನ್‌ಗಳನ್ನು ನೋವು ನಿವಾರಕ ಹಾರ್ಮೋನುಗಳು ಎಂದೂ ಕರೆಯುತ್ತಾರೆ.

    ಇದು ಪಿಟ್ಯುಟರಿ ಗ್ರಂಥಿಯಲ್ಲಿ ಮತ್ತು ದೇಹದ ಉಳಿದ ಭಾಗಗಳಲ್ಲಿ ಉತ್ಪತ್ತಿ ಆಗುತ್ತದೆ. ಈ ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸಲು ಸಹಕಾರಿಯಾಗುವ ಕೆಲವು ವಿಷಯಗಳ ಬಗ್ಗೆ ನೋಡೋಣ.

    - ವ್ಯಾಯಾಮ

    - ವಾಕಿಂಗ್

    - ಹೆಚ್ಚಿನ ತೀವ್ರತೆಯ ತರಬೇತಿ

    - ಜಾಗಿಂಗ್

    - ಸೈಕ್ಲಿಂಗ್

    ಇದಲ್ಲದೆ ತೆರೆದ ಪ್ರದೇಶದಲ್ಲಿ ವ್ಯಾಯಾಮ ಮಾಡುವುದು. ನಿಮ್ಮ ವಿಟಮಿನ್ ಡಿ ಮಟ್ಟ ಹೆಚ್ಚಿಸಲು ಸಹಕಾರಿ. ಇದು ಎಂಡಾರ್ಫಿನ್ ಹಾರ್ಮೋನು ಹೆಚ್ಚಳಕ್ಕೆ ಸಹಕಾರಿ.

    ನೃತ್ಯ ಮಾಡುವುದು

    ನೃತ್ಯ ವ್ಯಾಯಾಮದ ಒಂದು ಭಾಗ. ಎಂಡಾರ್ಫಿನ್ ಹಾರ್ಮೋನುಗಳನ್ನು ಸಾಮಾಜಿಕ ಬಂಧದ ಮೂಲಕವೂ ಹೆಚ್ಚಿಸಬಹುದು ಎಂದು ಸೂಚಿಸಲಾಗಿದೆ.

    ನಗುವುದು

    ನಗುವುದು ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ನಗುವುದು ನೋವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ..

    ಮೆಚ್ಚಿನ ಆಹಾರ

    ನಿಮ್ಮ ನೆಚ್ಚಿನ ಆಹಾರ ಪದಾರ್ಥ ಸೇವಿಸಿದಾಗ ಎಂಡಾರ್ಫಿನ್ ಹಾರ್ಮೋನ್ ಹೆಚ್ಚಿಸುತ್ತದೆ. ಹಾಗಾಗಿ ಆಹಾರ ಪದಾರ್ಥ ಚೆನ್ನಾಗಿದ್ದರೆ ದಿನವೂ ಬೆಳಿಗ್ಗೆ ತುಂಬಾ ಆಹ್ಲಾದಕರ ಅನುಭವ ಉಂಟಾಗುತ್ತದೆ.

    ಡಾರ್ಕ್ ಚಾಕೊಲೇಟ್ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರ ಎಂಡಾರ್ಫಿನ್ ಹಾರ್ಮೋನ್ ಮಟ್ಟ ಹೆಚ್ಚಿಸುತ್ತದೆ. ಆದರೆ ಹೆಚ್ಚು ತಿನ್ನುವುದು ಹಾನಿ ಮಾಡುತ್ತದೆ.

    ಇದನ್ನೂ ಓದಿ: ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ದಿನಚರಿಯಲ್ಲಿ ಮೊದಲು ಇದನ್ನು ಸೇರಿಸಿ

    ಅಪ್ಪಿಕೊಳ್ಳುವುದು

    ದೈಹಿಕ ಸ್ಪರ್ಶ ನಿಮ್ಮ ದೇಹದಲ್ಲಿ ಅನೇಕ ಒಳ್ಳೆಯ ಬದಲಾವಣೆ ಮೂಡಿಸುತ್ತದೆ. ನೀವು ಯಾರನ್ನಾದರೂ ತಬ್ಬಿಕೊಂಡಾಗ, ಆಕ್ಸಿಟೋಸಿನ್ ಎಂಬ ಸಂತೋಷದ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗುತ್ತದೆ.
    Published by:renukadariyannavar
    First published: