Fruits Seeds: ಈ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ, ಹಣ್ಣು ತಿನ್ನುವ ಮುನ್ನ ಯೋಚಿಸಿ

ಕೆಲವು ಹಣ್ಣುಗಳು ಮತ್ತು ಅದರ ಬೀಜಗಳು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಅಂತಹ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವ ಮೊದಲು ಅವುಗಳು ನಿಮ್ಮ ಆರೋಗ್ಯಕ್ಕೆ ಸೂಕ್ತವೇ ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ದಿನಗಳಲ್ಲಿ ನಾವು ತಿನ್ನುವ (Eating) ಆಹಾರ (Food) ಮತ್ತು ನಮ್ಮ ಜೀವನಶೈಲಿ (Lifestyle) ಆರೋಗ್ಯದ (Health) ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಫಿಟ್ ಆಗಿರಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಚ್ಚಿನ ಜನರು (People) ಆರೋಗ್ಯದ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಾರೆ. ಅನೇಕ ಜನರು ಆರೋಗ್ಯವಾಗಿರಲು ಕೆಲವು ತರಹದ ಬೀಜಗಳನ್ನು ಸಹ ಸೇವನೆ ಮಾಡುತ್ತಾರೆ. ಸೂರ್ಯಕಾಂತಿ ಬೀಜಗಳು, ಚಿಯಾ ಬೀಜಗಳು ಮತ್ತು ಕಲ್ಲಂಗಡಿ ಬೀಜಗಳು ಮತ್ತು ಇನ್ನೂ ಅನೇಕ ತರಹದ ಬೀಜಗಳು ಹಲವು ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಕೆಲವು ಹಣ್ಣುಗಳು ಮತ್ತು ಅದರ ಬೀಜಗಳು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಇದೆ.

ಹಾಗಾಗಿ ಅಂತಹ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವ ಮೊದಲು ಅವುಗಳು ನಿಮ್ಮ ಆರೋಗ್ಯಕ್ಕೆ ಸೂಕ್ತವೇ ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ. ಇಲ್ಲಿ ನಾವು ಇಂದು ಅಂತಹ ಐದು ಹಣ್ಣುಗಳ ಬಗ್ಗೆ ತಿಳಿಯೋಣ.

ಹಣ್ಣುಗಳು ಮತ್ತು ಅದರ ಬೀಜಗಳು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಅದರ ಜೊತೆಗೆ ಕೆಲವೊಮ್ಮೆ ಆ ಹಣ್ಣುಗಳ ಬೀಜಗಳು ವಿಷದಂತೆ ಕಾರ್ಯ ನಿರ್ವಹಿಸುತ್ತವೆ. ಅದಕ್ಕಾಗಿ ಅವುಗಳನ್ನು ತಪ್ಪಿಸಬೇಕು .

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ

ಸೇಬು ಬೀಜಗಳು

ಸೇಬು ಆರೋಗ್ಯಕರ ಪ್ರಯೋಜನ ನೀಡುವ ಉತ್ತಮ ಹಣ್ಣುಗಳಲ್ಲಿ ಒಂದಾಗಿದೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವೊಮ್ಮೆ ನಾವು ಬೀಜಗಳನ್ನು ತಿನ್ನುವಾಗ ನುಂಗುತ್ತೇವೆ. ಒಂದು ಅಥವಾ ಎರಡು ಸೇಬಿನ ಬೀಜಗಳನ್ನು ನುಂಗುವುದು ಸಮಸ್ಯೆಯಲ್ಲ.

ಆದರೆ ಅದನ್ನು ದೊಡ್ಡ ಪ್ರಮಾಣದಲ್ಲಿ ನುಂಗಿದರೆ, ಅದು ತುಂಬಾ ಅಪಾಯಕಾರಿ. ಸೇಬು ಬೀಜಗಳು ಸೈನೈಡ್ ಅನ್ನು ಹೊಂದಿವೆ. ಇದರ ಅತಿಯಾದ ಸೇವನೆ ಹೊಟ್ಟೆ ಸೆಳೆತ, ವಾಕರಿಕೆ, ಅತಿಸಾರ ಮತ್ತು ಸಾವಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು.

ಪೇರಳೆ ಹಣ್ಣಿನ ಬೀಜಗಳು

ಪೇರಳೆ ಹಣ್ಣಿನ ಬೀಜಗಳು ಸೇಬಿನ ಬೀಜಗಳಂತೆ ಆರೋಗ್ಯಕ್ಕೆ ಅಪಾಯಕಾರಿ. ಈ ಬೀಜಗಳಲ್ಲಿ ಮಾರಣಾಂತಿಕ ಸೈನೈಡ್ ಸಂಯುಕ್ತ ಕಂಡು ಬರುತ್ತದೆ. ಇದರ ಸೇವನೆಯಿಂದ ಹೊಟ್ಟೆ ನೋವು, ವಾಕರಿಕೆ ಮತ್ತು ಭೇದಿ ಉಂಟು ಮಾಡುತ್ತದೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಸೇವನೆ ಮಾಡುವುದು ಅತಿಯಾದ ಬೆವರುವಿಕೆ, ಆಯಾಸ ಮತ್ತು ಹೊಟ್ಟೆ ಸೆಳೆತ ಪ್ರಾರಂಭ ಆಗುತ್ತದೆ. ಕೆಲವೊಮ್ಮೆ ಕೋಮಾಗೆ ತಲುಪುವ ಅಪಾಯವಿದೆ.

ಪೀಚ್ ಹಣ್ಣಿನ ಬೀಜಗಳು

ಪೀಚ್ ಹಣ್ಣಿನ ಬೀಜಗಳ ಸೇವನೆ ತಪ್ಪಿಸಬೇಕು. ಅವು ಅಮಿಗ್ಡಾಲಿನ್ ಮತ್ತು ಸೈನೋಜೆನಿಕ್ ಗ್ಲೈಕೋಸೈಡ್‌ಗಳನ್ನು ಹೊಂದಿವೆ. ಇದರ ಸೇವನೆ ನರ, ಹೊಟ್ಟೆ ನೋವು, ದೌರ್ಬಲ್ಯ ಉಂಟು ಮಾಡುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿಯು ಕೋಮಾಕ್ಕೆ ಹೋಗುತ್ತಾನೆ. ಹಾಗಾಗಿ ಮರೆತೂ ಪೀಚ್ ಬೀಜಗಳನ್ನು ಸೇವಿಸಬಾರದು.

ಚೆರ್ರಿ ಹಣ್ಣಿನ ಬೀಜಗಳು

ಚೆರ್ರಿ ನೋಡಲು ಸುಂದರವಾಗಿರುತ್ತದೆ ಮತ್ತು ತಿನ್ನಲು ರುಚಿಕರ. ಅದರ ಬೀಜಗಳು ಅಷ್ಟೇ ಹಾನಿಕರ. ಚೆರ್ರಿ ಬೀಜಗಳು ಸೈನೈಡ್ ಸಂಯುಕ್ತ ಹೊಂದಿವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಹೊಟ್ಟೆ ಸೆಳೆತ, ಅತಿಸಾರ ಮತ್ತು ವಾಕರಿಕೆ ಉಂಟು ಮಾಡುತ್ತದೆ. ಸೇಬಿನ ಬೀಜಗಳಂತೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸಾವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಪ್ರೊಟೀನ್ ಭರಿತ ಪದಾರ್ಥ ಸೇವನೆ ಮಾಡಿದ್ರೆ ಅಸ್ಥಿಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತೆ

 ಏಪ್ರಿಕಾಟ್ ಬೀಜಗಳು

ಏಪ್ರಿಕಾಟ್ ಬೀಜಗಳು ಆರೋಗ್ಯಕ್ಕೆ ವಿಷವಿದ್ದಂತೆ. ಈ ಬೀಜಗಳಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್‌ಗಳು ಮತ್ತು ಅಮಿಗ್ಡಾಲನ್‌ಗಳ ವಿಷ ಕಂಡು ಬರುತ್ತವೆ. ಇದನ್ನು ದೊಡ್ಡ ಪ್ರಮಾಣದಲ್ಲಿ ತಿನ್ನುವುದು ಪೀಚ್ ಬೀಜಗಳಂತೆಯೇ ಸಮಸ್ಯೆ ಉಂಟು ಮಾಡುತ್ತದೆ. ದೇಹದಲ್ಲಿ ದೌರ್ಬಲ್ಯವಿದೆ. ಆತಂಕ ಶುರುವಾಗುತ್ತದೆ.
Published by:renukadariyannavar
First published: