Iron Rich Foods: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

ಕಡಿಮೆ ಹಿಮೋಗ್ಲೋಬಿನ್ ಮಟ್ಟವು ನಮ್ಮ ಮೂತ್ರಪಿಂಡದಲ್ಲಿ ತೊಂದರೆ ಉಂಟು ಮಾಡಬಹುದು. ಆದಾಗ್ಯೂ ನಿಮ್ಮ ಆಹಾರದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವ ಪದಾರ್ಥಗಳ ಸೇವನೆ ಹೆಚ್ಚಿಸುವ ಮೂಲಕ ಹಿಮೋಗ್ಲೋಬಿನ್ ಕೊರತೆ ನೀವು ಪೂರೈಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದಲ್ಲಿ (Body) ರಕ್ತದ ಕೊರತೆಯಿಂದ (Lack of Blood) ಹಲವು ಸಮಸ್ಯೆಗಳು (Problem) ಉದ್ಭವವಾಗುತ್ತದೆ. ನಮ್ಮ ಸುತ್ತಲೂ ತಿನ್ನಲು ಮತ್ತು ಕುಡಿಯಲು ಹಲವು ಪದಾರ್ಥಗಳು (Ingredients) ಇವೆ. ಇವುಗಳ ಸೇವನೆಯಿಂದ ಹಿಮೋಗ್ಲೋಬಿನ್ ಕೊರತೆಯನ್ನು ತಪ್ಪಿಸಬಹುದು. ನಿಮ್ಮ ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದರೆ, ನಿಮ್ಮ ದೇಹವು ಹಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇದು ದೇಹವನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ದೇಹದಲ್ಲಿ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಕೊರತೆಯು ಹಿಮೋಗ್ಲೋಬಿನ್ ಮಟ್ಟ ಕಡಿಮೆ ಮಾಡುತ್ತದೆ. ಇದು ದಣಿದ ಮತ್ತು ದುರ್ಬಲರಾಗುವಂತೆ ಮಾಡುತ್ತದೆ.

    ಅಷ್ಟೇ ಅಲ್ಲದೇ, ಕಡಿಮೆ ಹಿಮೋಗ್ಲೋಬಿನ್ ಮಟ್ಟವು ನಮ್ಮ ಮೂತ್ರಪಿಂಡದಲ್ಲಿ ತೊಂದರೆ ಉಂಟು ಮಾಡಬಹುದು. ಆದಾಗ್ಯೂ ನಿಮ್ಮ ಆಹಾರದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವ ಪದಾರ್ಥಗಳ ಸೇವನೆ ಹೆಚ್ಚಿಸುವ ಮೂಲಕ ಹಿಮೋಗ್ಲೋಬಿನ್ ಕೊರತೆ ನೀವು ಪೂರೈಸಬಹುದು. ನಿಮ್ಮ ಆಹಾರದಲ್ಲಿ ಸಲಾಡ್, ಹಸಿರು ತರಕಾರಿ, ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸುವ ಮೂಲಕ ಕಬ್ಬಿಣದ ಕೊರತೆ ಪೂರೈಸಬಹುದು.

     ಬೀಟ್ರೂಟ್

    ಬೀಟ್ರೂಟ್ ಸೇವನೆಯು ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಗೆ ಬೀಟ್ ಎಲೆಗಳನ್ನು ತಿಂದರೆ ಕಬ್ಬಿಣಾಂಶ ಹೆಚ್ಚುತ್ತದೆ. ಇದರ ಎಲೆಗಳು ಬೀಟ್ರೂಟ್ಗಿಂತ ಮೂರು ಪಟ್ಟು ಹೆಚ್ಚು ಕಬ್ಬಿಣಾಂಶ ಹೊಂದಿವೆ.

    ಆಮ್ಲಾ ಮತ್ತು ಜಾಮೂನ್

    ನೆಲ್ಲಿಕಾಯಿ ಮತ್ತು ಜಾಮೂನ್ ರಸ ಸಮ ಪ್ರಮಾಣದಲ್ಲಿ ಬೆರೆಸಿ ಕುಡಿಯುವುದು ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಪಿಸ್ತಾ

    ಪಿಸ್ತಾದಲ್ಲಿ 30 ವಿಧದ ವಿಟಮಿನ್‌ಗಳಿದ್ದು, ಕಬ್ಬಿಣಾಂಶ ಹೇರಳವಾಗಿದೆ.

    ನಿಂಬೆಹಣ್ಣು

    ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.

    ದಾಳಿಂಬೆ

    ದಾಳಿಂಬೆಯಲ್ಲಿ ಮೆಗ್ನೀಷಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ ಅಲ್ಲದೆ ಕಬ್ಬಿಣಾಂಶವಿದೆ. ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಎರಡು ಚಮಚ ದಾಳಿಂಬೆ ಪುಡಿ ಸೇರಿಸಿ ಕುಡಿಯುವುದು ಹಿಮೋಗ್ಲೋಬಿನ್ ಹೆಚ್ಚುವಂತೆ ಮಾಡುತ್ತದೆ.

    ಸೇಬು

    ರಕ್ತಹೀನತೆ ಕಾಯಿಲೆಗಳಲ್ಲಿ ಸೇಬು ತುಂಬಾ ಪ್ರಯೋಜನಕಾರಿ. ಇದರ ಸೇವನೆ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುವಂತೆ ಮಾಡುತ್ತದೆ.

    ಸೊಪ್ಪು

    ಹಿಮೋಗ್ಲೋಬಿನ್ ಕೊರತೆಯಿದ್ದರೆ, ಪಾಲಕ್ ಸೇವಿಸಿ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೆಚ್ಚು.

    ಒಣ ಒಣದ್ರಾಕ್ಷಿ

    ಒಣದ್ರಾಕ್ಷಿ ರಕ್ತ ರಚನೆಗೆ ಅಗತ್ಯವಾದ ವಿಟಮಿನ್ ಬಿ ಸಂಕೀರ್ಣ ಕೊರತೆ ಪೂರೈಸುತ್ತದೆ. ಒಣ ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸುವ ಮೂಲಕ ಹಿಮೋಗ್ಲೋಬಿನ್ ಹೆಚ್ಚಿಸಬಹುದು.

    ಅಂಜೂರ

    ಅಂಜೂರದಲ್ಲಿ ವಿಟಮಿನ್ ಎ, ಬಿ1, ಬಿ2, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮ್ಯಾಂಗನೀಸ್, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಲೋರಿನ್ ಇದೆ. ರಾತ್ರಿ ಎರಡು ಅಂಜೂರ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದರ ನೀರು ಸೇವಿಸುವುದು ಮತ್ತು ಅಂಜೂರ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಬಹುದು.

    ಮಾಗಿದ ಪೇರಲ

    ಹಣ್ಣಾದ ಪೇರಲ ಸೇವನೆ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ನಿವಾರಿಸುತ್ತದೆ.

    ಬಾಳೆಹಣ್ಣು

    ಬಾಳೆಹಣ್ಣನ್ನು ಜೇನುತುಪ್ಪ ಅಥವಾ ನೆಲ್ಲಿಕಾಯಿ ರಸದೊಂದಿಗೆ ಸೇವಿಸುವುದು ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ.

    ಮೊಳಕೆಯೊಡೆದ ಆಹಾರ

    ಬೆಳಗ್ಗೆ ಮೊಳಕೆಕಾಳು, ನಿಂಬೆರಸ ಸೇರಿಸಿ ಸೇವಿಸುವುದು ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ.

    ಬಾದಾಮಿ

    10 ಗ್ರಾಂ ಒಣ ಹುರಿದ ಬಾದಾಮಿ 0.5 ಮಿಗ್ರಾಂ ಕಬ್ಬಿಣ ಹೊಂದಿದೆ. ಬಾದಾಮಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಇದೆ. ಮತ್ತು ಕ್ಯಾಲೋರಿ ಕೇವಲ 163 ಆಗಿದೆ. ಇದರ ಸೇವನೆ ಹಿಮೋಗ್ಲೋಬಿನ್ ಕೊರತೆ ನೀಗಿಸಿಕೊಳ್ಳಬಹುದು.

    ಗೋಡಂಬಿ

    10 ಗ್ರಾಂ ಗೋಡಂಬಿಯಲ್ಲಿ 0.3 ಮಿಗ್ರಾಂ ಕಬ್ಬಿಣವಿದೆ. ಇದು ನಿಮ್ಮ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ.

    ವಾಲ್ನಟ್

    ವಾಲ್ ನಟ್ಸ್ ಒಮೆಗಾ-3 ಫ್ಯಾಟಿ ಆಸಿಡ್ ಅಧಿಕ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೈಬರ್ ಮತ್ತು ವಿಟಮಿನ್ ಬಿ ಯಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿನ ಹಿಮೋಗ್ಲೋಬಿನ್ ಕೊರತೆ ನೀಗಿಸಬಹುದು.

    ತುಳಸಿ

    ತುಳಸಿ ಎಲೆ ನಿಯಮಿತ ಸೇವಿಸುವುದು ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ನಿವಾರಿಸುತ್ತದೆ.

    ಬೆಲ್ಲ ಮತ್ತು ಕಡಲೆಕಾಯಿ

    ಬೆಲ್ಲ ಮತ್ತು ಕಡಲೆಕಾಯಿ ಬೆರೆಸಿ ದಿನವೂ ಸೇವಿಸಿ. ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

     ಎಳ್ಳು

    ಎಳ್ಳು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ರಕ್ತಹೀನತೆ ನಿಯಂತ್ರಿಸಬಹುದು.
    Published by:renukadariyannavar
    First published: