• Home
  • »
  • News
  • »
  • lifestyle
  • »
  • Blood Donate: ರಕ್ತದಾನಕ್ಕೂ ಮೊದಲು ಯಾವ ಆಹಾರ ಸೇವಿಸಬೇಕು? ಬ್ಲಡ್​ ಡೊನೇಟ್​ ಮಾಡಿದ್ರೆ ಏನೆಲ್ಲಾ ಪ್ರಯೋಜನವಿದೆ?

Blood Donate: ರಕ್ತದಾನಕ್ಕೂ ಮೊದಲು ಯಾವ ಆಹಾರ ಸೇವಿಸಬೇಕು? ಬ್ಲಡ್​ ಡೊನೇಟ್​ ಮಾಡಿದ್ರೆ ಏನೆಲ್ಲಾ ಪ್ರಯೋಜನವಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಬ್ಬ ವ್ಯಕ್ತಿಯ ರಕ್ತದಾನವು ಮೂರು ಜೀವಗಳನ್ನು ಉಳಿಸುತ್ತದೆ. ರಕ್ತದಾನ ಮಾಡುವ ವ್ಯಕ್ತಿಯು ಅದರಿಂದ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನ ಪಡೆಯುತ್ತಾನೆ. ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ರಕ್ತದಾನ ಒಂದು ಸೂಕ್ತ ಮಾಧ್ಯಮವಾಗಿದೆ.

ಮುಂದೆ ಓದಿ ...
  • Share this:

    ರಕ್ತದಾನ (Blood Donate) ಮಹಾದಾನ. ರಕ್ತದಾನದ ಬಗ್ಗೆ ಎಷ್ಟೇ ಜಾಗೃತಿ (Awareness) ಮೂಡಿಸಿದರೂ ಸಹ ಜನರು ಈಗಲೂ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಪರಿಣಿತ ಆರೋಗ್ಯ ತಜ್ಞರ (Health Expertise) ಪ್ರಕಾರ, ಜನರು ಇನ್ನೂ ರಕ್ತದಾನ ಮಾಡಲು ಭಯ ಪಡುತ್ತಾರೆ. ರಕ್ತದಾನದಿಂದ ಎಲ್ಲಿ ತಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೋ ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಯಾಕೆಂದರೆ ರಕ್ತದಾನ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಡೆದೋಡಿಸಬಹುದು. ಪ್ರತಿದಿನ ಸಾವಿರಾರು ಜನರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಥವಾ ಬದುಕಲು ರಕ್ತ ದಾನ ಮಾಡುವುದು ಪುಣ್ಯದ ಕೆಲಸವಾಗಿದೆ.


    ಒಬ್ಬ ವ್ಯಕ್ತಿಯ ರಕ್ತದಾನವು ಮೂರು ಜೀವಗಳನ್ನು ಉಳಿಸುತ್ತದೆ


    ಅಮೇರಿಕನ್ ರೆಡ್ ಕ್ರಾಸ್ ಪ್ರಕಾರ, ಒಬ್ಬ ವ್ಯಕ್ತಿಯ ರಕ್ತದಾನವು ಮೂರು ಜೀವಗಳನ್ನು ಉಳಿಸುತ್ತದೆ. ರಕ್ತದಾನ ಮಾಡುವ ವ್ಯಕ್ತಿಯು ಅದರಿಂದ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನ ಪಡೆಯುತ್ತಾನೆ. ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ರಕ್ತದಾನ ಒಂದು ಸೂಕ್ತ ಮಾಧ್ಯಮವಾಗಿದೆ.


    ಒತ್ತಡ ಕಡಿಮೆ ಮಾಡುತ್ತದೆ


    ರಕ್ತದಾನ ಒತ್ತಡ ಕಡಿಮೆ ಮಾಡುತ್ತದೆ. ಭಾವನಾತ್ಮಕ ಸುಧಾರಣೆ, ದೈಹಿಕ ಆರೋಗ್ಯವು ನಕಾರಾತ್ಮಕ ಭಾವನೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಜನರೊಂದಿಗೆ ಸಂಪರ್ಕ ಸಾಧಿಸುವುದು ಒಂಟಿತನದ ಭಾವನೆಯನ್ನು ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು


    ರಕ್ತದಾನದ ಪ್ರಯೋಜನಗಳು


    ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿ ಜೀವ ಉಳಿಸುವುದು ಸಮಾಜದ ಕರ್ತವ್ಯ ಆಗಿದೆ. ರಕ್ತದಾನ ಹೃದಯಾಘಾತ ಮತ್ತು ಪಿತ್ತಜನಕಾಂಗದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ. ಹೊಸ ರಕ್ತ ಕಣಗಳು ರೂಪುಗೊಳ್ಳಲು ಸಹಕಾರಿ ಆಗಿದೆ.


    ಹಿಮೋಕ್ರೊಮಾಟೋಸಿಸ್ ಅಪಾಯ ಕಡಿಮೆ ಮಾಡುತ್ತದೆ. ಸಮತೋಲಿತ ತೂಕ ಕಾಪಾಡುತ್ತದೆ. ಅಕಾಲಿಕ ವಯಸ್ಸಾಗುವಿಕೆ ತಡೆಯುತ್ತದೆ. ಕಾಯಿಲೆ ವೇಗವಾಗಿ ಗುಣಪಡಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.


    ರಕ್ತದಾನ ಮಾಡುವುದರಿಂದ ಹಿಮೋಕ್ರೊಮಾಟೋಸಿಸ್ ಅಪಾಯ ಕಡಿಮೆಯಾಗುತ್ತದೆ. ದೇಹದಲ್ಲಿ ಕಬ್ಬಿಣದ ಅಧಿಕ ಶೇಖರಣೆ ಈ ಆರೋಗ್ಯ ಸ್ಥಿತಿಗೆ ಕಾರಣ.


    ರಕ್ತ ಕಣಗಳ ಉತ್ಪಾದನೆಗೆ ಸಹಕಾರಿ


    ಯಾವುದೇ ವ್ಯಕ್ತಿಯು ರಕ್ತದಾನ ಮಾಡಿದ ನಂತರ, ದೇಹವು ಆ ನಷ್ಟವನ್ನು ಸರಿದೂಗಿಸಲು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಹೊಸ ರಕ್ತ ಕಣಗಳು ವ್ಯಕ್ತಿಯ ಉತ್ತಮ ಆರೋಗ್ಯ ಕಾಪಾಡುತ್ತವೆ.


    ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ


    ರಕ್ತದಲ್ಲಿ ಕಬ್ಬಿಣದ ಅಂಶವು ದೇಹಕ್ಕೆ ಆರೋಗ್ಯಕರ ಮಟ್ಟದಲ್ಲಿ ಉಳಿಯುವುದು ರಕ್ತದಾನದಿಂದ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.


    ಹೃದಯ ಮತ್ತು ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ


    ರಕ್ತದಾನ ಮಾಡುವುದು ಇದು ದೇಹದ ಕಬ್ಬಿಣದ ಮಿತಿ ಮೀರಿದ ಕಾರಣದಿಂದ ಉಂಟಾಗುವ ಹೃದಯ ಮತ್ತು ಯಕೃತ್ತಿನ ಕಾಯಿಲೆಗಳಿಂದ ರಕ್ಷಿಸುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವೂ ಕಡಿಮೆಯಾಗುತ್ತದೆ.


    ರಕ್ತದಾನ ಮಾಡುವ ಮೊದಲು ಯಾವ ಆಹಾರ ಕ್ರಮ ಅನುಸರಿಸಬೇಕು?


    ರಕ್ತದಾನದ ವೇಳೆ ದೇಹದಲ್ಲಿ ತಾಜಾ ಮತ್ತು ಹೊಸ ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ. ನಿಯಮಿತವಾಗಿ ರಕ್ತದಾನ ಮಾಡಲು, ವ್ಯಕ್ತಿಯು ಸಂಪೂರ್ಣವಾಗಿ ಫಿಟ್ ಆಗಿದ್ದರೆ, 450 ಮಿಲಿ ರಕ್ತದ ಅಗತ್ಯವಿದೆ. ರಕ್ತದಾನ ಮಾಡಿದ ನಂತರ ರಕ್ತದಾನಿ ದುರ್ಬಲರಾಗಬಹುದು. ಆದ್ದರಿಂದ


    ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ


    ರಕ್ತದಾನ ಮಾಡಿದ ನಂತರ ದೇಹದಲ್ಲಿ ಕಬ್ಬಿಣದ ಕೊರತೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ದಾನಿಯು ಕಬ್ಬಿಣ ಅಂಶವಿರುವ ಆಹಾರ ಸೇವಿಸಬೇಕು. ಇದು ರಕ್ತದಾನದ ನಂತರ ತಲೆತಿರುಗುವಿಕೆ ಸಮಸ್ಯೆ ಉಂಟಾಗಲ್ಲ. ಕುಂಬಳಕಾಯಿ ಬೀಜಗಳು, ಕಡಲೆ, ಮಾಂಸ. ಬ್ರೌನ್ ರೈಸ್, ಬಿಳಿ ಬ್ರೆಡ್, ಮೀನು ಮತ್ತು ಪಾಲಕ ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಮಾವು, ಕಿವಿ ಮತ್ತು ಅನಾನಸ್‌, ಸಿಟ್ರಸ್ ಹಣ್ಣು ಸೇವಿಸಿ.


    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!


    ರಕ್ತದಾನ ಮಾಡಿದ ನಂತರ ಏನು ತಿನ್ನಬೇಕು?


    ರಕ್ತದಾನ ಮಾಡಿದ ನಂತರ, ಹಣ್ಣಿನ ರಸ ಕುಡಿಯಿರಿ ಮತ್ತು ಲಘು ತಿಂಡಿ ಸೇವಿಸಿ. ರಕ್ತದಾನ ಮಾಡಿದ ನಂತರವೂ ಕಬ್ಬಿಣದಂಶವಿರುವ ಪದಾರ್ಥ ಸೇವಿಸಬೇಕು. ಇದು ದೇಹದ ಕಬ್ಬಿಣಾಂಶದ ಕೊರತೆ ನೀಗಿಸುತ್ತದೆ. ಕೆಂಪು ರಕ್ತ ಕಣ ತಯಾರಿಸಲು ಸಹಕಾರಿ.

    Published by:renukadariyannavar
    First published: