• Home
  • »
  • News
  • »
  • lifestyle
  • »
  • Healthy Food: ಆಮ್ಲಜನಕದ ಸರಿಯಾದ ಮಟ್ಟ ಕಾಪಾಡುವ ಆರೋಗ್ಯಕರ ಆಹಾರಗಳಿವು, ಮಿಸ್ ಮಾಡದೆ ತಿನ್ನಿ

Healthy Food: ಆಮ್ಲಜನಕದ ಸರಿಯಾದ ಮಟ್ಟ ಕಾಪಾಡುವ ಆರೋಗ್ಯಕರ ಆಹಾರಗಳಿವು, ಮಿಸ್ ಮಾಡದೆ ತಿನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ವ್ಯಕ್ತಿಯು ಉಲ್ಲಾಸಮಯವಾಗಿ, ಆರೋಗ್ಯದಿಂದ ಜೀವನ ಮುನ್ನಡೆಸುತ್ತಾನೆ. ದೇಹಕ್ಕೆ ಪ್ರಮುಖವಾಗಿ ಬೇಕಾಗಿರುವುದು ಆಮ್ಲಜನಕ. ಉಸಿರಾಟದ ತೊಂದರೆ ವ್ಯಕ್ತಿಯಲ್ಲಿ ಸಾಕಷ್ಟು ಹೆದರಿಕೆ ಮತ್ತು ಚಡಪಡಿಕೆ ಉಂಟು ಮಾಡುತ್ತದೆ.

  • Share this:

    ದೇಹವು (Body) ಆರೋಗ್ಯವಾಗಿದ್ದಾಗ (Healthy) ಮಾತ್ರ ವ್ಯಕ್ತಿ (Person) ಸಂತೋಷವಾಗಿ (Happy) ಮತ್ತು ಚಟುವಟಿಕೆಯಿಂದ (Active) ಇರಲು ಸಾಧ್ಯ ಆಗುತ್ತದೆ. ಒಮ್ಮೆ ವ್ಯಕ್ತಿಯ ಆರೋಗ್ಯದಲ್ಲಿ ಏರು-ಪೇರಾಗಲು ಶುರುವಾದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ವಯಸ್ಸಾಗುತ್ತಿದ್ದಂತೆ ಹಲವು ಕಾಯಿಲೆಗಳು ಒಮ್ಮೆಲೆ ಮುತ್ತುತ್ತವೆ. ಹಾಗಾಗಿ ನಮ್ಮ ಆಹಾರ ಮತ್ತು ಚಟುವಟಿಕೆಯ ಬಗ್ಗೆ ಹಾಗೂ ಜೀವನಶೈಲಿಯ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯು ತುಂಬಾ ಸೂಕ್ಷ್ಮವಾಗಿ ಗಮನಹರಿಸಬೇಕು. ನಮ್ಮ ಉಸಿರಾಟ, ಯಕೃತ್ತು, ಹೃದಯ, ಮೆದುಳು, ಕಿಡ್ನಿ ಹೀಗೆ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಬೇಕು. ಹೀಗಿದ್ದಾಗ ಮಾತ್ರ ವ್ಯಕ್ತಿಯು ಉಲ್ಲಾಸಮಯವಾಗಿ, ಆರೋಗ್ಯದಿಂದ ಜೀವನ ಮುನ್ನಡೆಸುತ್ತಾನೆ.


    ಹಾಗೆಯೇ ದೇಹಕ್ಕೆ ಪ್ರಮುಖವಾಗಿ ಬೇಕಾಗಿರುವುದು ಆಮ್ಲಜನಕ. ಪ್ರತಿಯೊಬ್ಬ ವ್ಯಕ್ತಿಗೂ ಆಮ್ಲಜನಕ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ, ಕೆಲವೊಮ್ಮೆ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ವ್ಯಕ್ತಿ ಸಾಕಷ್ಟು ಗಂಭೀರ ಮತ್ತು ಭಯ ಪಡಲು ಶುರು ಮಾಡುತ್ತಾನೆ. ಉಸಿರಾಟದ ತೊಂದರೆ ವ್ಯಕ್ತಿಯಲ್ಲಿ ಸಾಕಷ್ಟು ಹೆದರಿಕೆ ಮತ್ತು ಚಡಪಡಿಕೆ ಉಂಟು ಮಾಡುತ್ತದೆ.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ಯಾವ ಆಹಾರ ತುಂಬಾ ಮುಖ್ಯ


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಿಮ್ಮ ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಆಹಾರದ ಸಹಾಯ ಸಹ ಪಡೆದುಕೊಳ್ಳಬಹುದು. ಆಮ್ಲಜನಕವನ್ನು ಹೆಚ್ಚಿಸಲು ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ನಾವು ಇಲ್ಲಿ ತಿಳಿಯೋಣ.


    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ನಿಂಬೆ


    ನಿಂಬೆ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಮತ್ತು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ನಿಂಬೆ ಸೇವನೆ ವ್ಯಕ್ತಿಯ ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚುವಂತೆ ಮಾಡುತ್ತದೆ. ನಿಂಬೆಹಣ್ಣಿನ ಸೇವನೆ ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ಪೂರೈಕೆ ಮಾಡುತ್ತದೆ. ಇದು ಆಮ್ಲಜನಕ ಮಟ್ಟ ಹೆಚ್ಚಿಸುತ್ತದೆ.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ದ್ರಾಕ್ಷಿ


    ದ್ರಾಕ್ಷಿ ತಿನ್ನುವುದು ನಮ್ಮ ಚರ್ಮಕ್ಕೆ ಒಳ್ಳೆಯದು. ಅದು ಸ್ವತಂತ್ರ ರಾಡಿಕಲ್ಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ ಮತ್ತು ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ಕಲ್ಲಂಗಡಿ


    ಬೇಸಿಗೆಯಲ್ಲಿ ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆ ತೆಗೆದು ಹಾಕುತ್ತದೆ. ಆದರೆ ಕಲ್ಲಂಗಡಿಯಲ್ಲಿ ಲೈಕೋಪೀನ್, ವಿಟಮಿನ್ ಸಿ ಸಾಕಷ್ಟು ಕಂಡು ಬರುತ್ತದೆ, ಕಲ್ಲಂಗಡಿ ತಿನ್ನುವುದು ದೇಹದಲ್ಲಿ ಆಮ್ಲಜನಕದ ಕೊರತೆ ಪೂರೈಸುತ್ತದೆ.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ಏಪ್ರಿಕಾಟ್


    ಏಪ್ರಿಕಾಟ್ ದೇಹದ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಮತ್ತು ಅದೇ ವೇಳೆ ಏಪ್ರಿಕಾಟ್ ಸೇವನೆಯು ಆಮ್ಲಜನಕದ ಮಟ್ಟ ಹೆಚ್ಚಿಸುತ್ತದೆ. ನೀವು ಪ್ರತಿದಿನ ಏಪ್ರಿಕಾಟ್ಗಳನ್ನು ಸೇವಿಸಬೇಕು.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ಕೋಸುಗಡ್ಡೆ


    ಕೋಸುಗಡ್ಡೆ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ನೀವು ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಬ್ರೊಕೊಲಿ ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸುತ್ತದೆ. ಇದಲ್ಲದೆ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


    ದೇಹದಲ್ಲಿ ಆಮ್ಲಜನಕದ ಸರಿಯಾದ ಮಟ್ಟ ಕಾಪಾಡಲು ಕಿವಿ


    ಕಿವಿ ಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದರ ಸೇವನೆ ದೇಹಕ್ಕೆ ಆಮ್ಲಜನಕದ ಪೂರೈಕೆ ಚೆನ್ನಾಗಿ ಮಾಡುತ್ತದೆ. ಕಿವಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.


    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!


    ಇತರ ತರಕಾರಿಗಳು


    ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸಲು ನೀವು ಬೆಳ್ಳುಳ್ಳಿ, ಸೌತೆಕಾಯಿ, ಎಲೆಕೋಸು ಮತ್ತು ಪಾಲಕ ಮುಂತಾದ ತರಕಾರಿ ಸೇವನೆ ಮಾಡಬಹುದು.

    Published by:renukadariyannavar
    First published: