Belly Fat: ಹೊಟ್ಟೆ ಬೊಜ್ಜು ಕರಗಿಸಲು ಯಾವ ಆಹಾರ ಸೇವನೆ ಮಾಡಬೇಕು? ತಜ್ಞರು ನಡೆಸಿದ ಸಂಶೋಧನೆ ಏನು ಹೇಳುತ್ತೆ?

ಒಂದು ಅಧ್ಯಯನದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು. ಅದು ಹೇಗೆ ಹಸಿವನ್ನು 60 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಅದು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ಕಾಲದಲ್ಲಿ (Now a Days) ಅಧಿಕ ಜನರು (People) ತಮ್ಮ ದೊಡ್ಡ ಹಾಗೂ ಜೋತು ಬಿದ್ದ ಹೊಟ್ಟೆಯನ್ನು (Belly Fat) ಕಡಿಮೆ ಮಾಡಲು ಹರಸಾಹಸ ಪಡುತ್ತಾರೆ. ಇದಕ್ಕಾಗಿ ಜನರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ವಿಭಿನ್ನ ರೀತಿಯ  ಆಹಾರ ಕ್ರಮ (Food) ಅನುಸರಿಸುತ್ತಾರೆ. ಮತ್ತು ಗಂಟೆಗಳ ಕಾಲ ಟ್ರೆಡ್ ಮಿಲ್ನ ಮೇಲೆ ಓಡುವ ಮೂಲಕ ಬೆವರು ಇಳಿಸುತ್ತಾರೆ. ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ. ವಾಸ್ತವದಲ್ಲಿ ಹೆಚ್ಚುವರಿ ಹೊಟ್ಟೆಯ ಕೊಬ್ಬು ಹೃದಯಾಘಾತ, ಪಾರ್ಶ್ವವಾಯು, ಮಧುಮೇಹ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚು ಮಾಡುತ್ತದೆ. ಜೊತೆಗೆ ಸೈಜ್ ಗೆ ತಕ್ಕಂತೆ ಬಟ್ಟೆ ಸಿಗಲ್ಲ.

  ಆಹಾರ ಮತ್ತು ಆರೋಗ್ಯಕರ ಜೀವನಶೈಲಿ

  ಒಂದು ಅಧ್ಯಯನದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು. ಅದು ಹೇಗೆ ಹಸಿವನ್ನು 60 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಅದು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

  ಬೊಜ್ಜು ಕಡಿಮೆ ಮಾಡಲು ಹಸಿವು ಕಡಿಮೆ ಮಾಡಲು ಇಂತಹ ಆಹಾರ ಸೇವಿಸಿ

  ದೇಹದ ಕೊಬ್ಬು ಅಥವಾ ಹೆಚ್ಚುವರಿ ಕೊಬ್ಬು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ಹೆಚ್ಚು ನೀರು ಕುಡಿಯುವುದು ಹಸಿವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸ್ಪ್ರಿಂಗರ್ ಓಪನ್‌ನಲ್ಲಿ ಪ್ರಕಟವಾದ ಸಂಶೋಧನೆ ಹೇಳುವ ಪ್ರಕಾರ,

  ಇದನ್ನೂ ಓದಿ: ತೈಲ ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ ಭಾರವಾದ ಊಟದ ನಂತರ ಹೀಗೆ ಮಾಡಿದ್ರೆ ಕರುಳಿನ ಸಮಸ್ಯೆ ಕಡಿಮೆಯಾಗುತ್ತೆ!

  ಪ್ರತಿದಿನ ವ್ಯಾಯಾಮ ಮಾಡುವುದು ಮತ್ತು ಥರ್ಮೋಜೆನಿಕ್ ಆಹಾರ ಸೇವನೆ ಮಾಡುವುದು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಥರ್ಮೋಜೆನಿಕ್ ಆಹಾರ ಸೇವನೆ ಮಾಡುವುದು ಥರ್ಮೋಜೆನೆಸಿಸ್ ಪ್ರಕ್ರಿಯೆಯನ್ನು ಹೆಚ್ಚಿಸುವ ಮೂಲಕ ಚಯಾಪಚಯ

  ಮತ್ತು ಕ್ಯಾಲೋರಿ ಬರ್ನಿಂಗ್ ಉತ್ತೇಜಿಸಲು ಸಹಾಯ ಮಾಡುತ್ತದೆ. ಥರ್ಮೋಜೆನೆಸಿಸ್ ಎನ್ನುವುದು ದೇಹವು ಸೇವಿಸಿದ ಆಹಾರವನ್ನು ಬಳಸಲು ಕ್ಯಾಲೊರಿ ಸುಡುವ ಪ್ರಕ್ರಿಯೆ ಆಗಿದೆ. ಮತ್ತು ಆ ಕ್ಯಾಲೊರಿಗಳನ್ನು ಶಾಖವಾಗಿ ಪರಿವರ್ತಿಸುತ್ತದೆ.

   ಥರ್ಮೋಜೆನೆಸಿಸ್ ಕ್ಯಾಲೊರಿ ಬರ್ನ್ ಮಾಡುತ್ತದೆ

  ಥರ್ಮೋಜೆನೆಸಿಸ್ ಕೂಡ ಬಹಳಷ್ಟು ಕ್ಯಾಲೊರಿ ಬರ್ನ್ ಮಾಡುತ್ತದೆ. ಹಾಗಾಗಿ ಥರ್ಮೋಜೆನೆಸಿಸ್ ಆಹಾರ ಸೇವನೆ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ. ಅಂತಹ ಆಹಾರಗಳು ಥರ್ಮೋಜೆನಿಕ್ ಆಹಾರ ಆಗಿವೆ.

  ಅದು ಥರ್ಮೋಜೆನಿಕ್ ಪ್ರಕ್ರಿಯೆ ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿ ಬರ್ನ್ ಮಾಡುತ್ತದೆ. ಇದನ್ನು ಥರ್ಮೋಜೆನಿಕ್ ಆಹಾರ ಎಂದು ಕರೆಯುತ್ತಾರೆ. ಇದು ಹೆಚ್ಚುವರಿ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಈ ಆಹಾರಗಳನ್ನು ಯಾರು ಬೇಕಾದರೂ ಸೇವನೆ ಮಾಡಬಹುದು.

  ಇವುಗಳು ಹೊಟ್ಟೆ ಕೊಬ್ಬು ಕರಗಿಸುತ್ತವೆ

  ಕೆಂಪು ಅಥವಾ ಹಸಿರು ಮೆಣಸಿನಕಾಯಿ

  ಮೆಣಸು

  ಶುಂಠಿ

  ತೆಂಗಿನ ಎಣ್ಣೆ

  ಪ್ರೋಟೀನ್

  ಹೊಟ್ಟೆಯ ಕೊಬ್ಬು ಬರ್ನ್ ಮಾಡಲು ಪ್ರೋಟೀನ್ ಹೇಗೆ ಸಹಾಯ ಮಾಡುತ್ತದೆ?

  ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಪ್ರೋಟೀನ್ ಆಹಾರ ಸೇವನೆ ಮಾಡಲಾಗುತ್ತದೆ. ಪ್ರೋಟೀನ್ ಮುಖ್ಯ ಕಾರ್ಯ ಅಂದ್ರೆ ಅದು ಸ್ನಾಯು ಅಂಗಾಂಶವನ್ನು ಸರಿಪಡಿಸುತ್ತದೆ. ಆದರೆ ಪ್ರೋಟೀನ್ ಕೂಡ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ. ಕಾರಣವೆಂದರೆ ಪ್ರೋಟೀನ್ ಭರಿತ ಆಹಾರ ಸೇವಿಸಿದ ನಂತರ ಹಸಿವು ಕಡಿಮೆಯಾಗುತ್ತದೆ.

  ನಿಮ್ಮ ಆಹಾರದಲ್ಲಿ ಲೀನ್ ಪ್ರೊಟೀನ್ ಮೂಲ ಸೇರಿಸಿದರೆ, ತುಂಬಾ ಕಡಿಮೆ ತಿನ್ನುವುದು ಸಹ ಹೊಟ್ಟೆ ತುಂಬಿಸುತ್ತದೆ. ಹೆಚ್ಚು ಪ್ರೋಟೀನ್ ಆಹಾರ ಸೇವಿಸುವ ಜನರು, ಅವರ ಹಸಿವು 60 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆಯು ಕಂಡು ಹಿಡಿದಿದೆ.

  ಇದನ್ನೂ ಓದಿ: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತವೆ? ಪರಿಹಾರವೇನು?

  ಅದೇ ಸಮಯದಲ್ಲಿ ಚಯಾಪಚಯ ವೇಗಗೊಳಿಸುವ ಮೂಲಕ ಪ್ರೋಟೀನ್ ಸುಮಾರು 80-100 ಕ್ಯಾಲೊರಿ ಹೆಚ್ಚು ಬರ್ನ್ ಮಾಡುತ್ತದೆ.  25 ಪ್ರತಿಶತದಷ್ಟು ಪ್ರೋಟೀನ್ ಸೇವನೆ ಹಸಿವನ್ನು 60 ಪ್ರತಿಶತ ಕಡಿಮೆ ಮಾಡಬಹುದು ಎಂದು ಸಂಶೋಧನೆ ಹೇಳಿದೆ.
  Published by:renukadariyannavar
  First published: