• Home
  • »
  • News
  • »
  • lifestyle
  • »
  • Diabetes Problem: ಯಾವ ಆಹಾರಗಳು ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ?

Diabetes Problem: ಯಾವ ಆಹಾರಗಳು ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಕ್ತದ ಸಕ್ಕರೆಯ ಮಟ್ಟ ಹೆಚ್ಚಳವಾಗುವುದು ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಮಧುಮೇಹ ನಿಯಂತ್ರಿಸಲು, ನಿಷ್ಕ್ರಿಯ ಜೀವನಶೈಲಿ ಸುಧಾರಿಸಲು ಮತ್ತು ಆಹಾರದಲ್ಲಿ ಕಡಿಮೆ ಗ್ಲೈಸೆಮಿಕ್ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯವಾಗಿದೆ.

  • Share this:

    ಮಧುಮೇಹವು (Diabetes) ಒಮ್ಮೆ ವ್ಯಕ್ತಿಯ (Person) ದೇಹವನ್ನು (Body) ಆಕ್ರಮಿಸಿದರೆ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಮಧುಮೇಹ ಗಂಭೀರ ಕಾಯಿಲೆ (Disease) ಆಗಿದ್ದು, ಅದನ್ನು ನಿಯಂತ್ರಿಸದೇ ಹೋದರೆ ಅದು ರಕ್ತದ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಧುಮೇಹವು ಕಳಪೆ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿಯ ಪರಿಣಾಮ ಉಂಟಾಗುತ್ತದೆ. ದೇಶ ಮತ್ತು ಪ್ರಪಂಚದಲ್ಲಿ ಎಲ್ಲಾ ವಯಸ್ಸಿನವರು ಈ ರೋಗದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. WHO ವರದಿಯ ಪ್ರಕಾರ, 2025 ರ ವೇಳೆಗೆ ವಿಶ್ವಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ 170 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದ್ದು, ಹೆಚ್ಚು ಆತಂಕಕಾರಿ ವಿಷಯವಾಗಿದೆ.


    ರಕ್ತದ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚುವುದು ಅಪಾಯಕಾರಿ


    ರಕ್ತದ ಸಕ್ಕರೆಯ ಮಟ್ಟ ಹೆಚ್ಚಳವಾಗುವುದು ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಕ್ತದ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹ ನಿಯಂತ್ರಿಸದೇ ಹೋದರೆ ಅದು ಹೃದಯ ಕಾಯಿಲೆ, ಮೂತ್ರಪಿಂಡ, ಕಣ್ಣಿನ ಸಮಸ್ಯೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ.


    ಮಧುಮೇಹಿಗಳು ಯಾವ ತರಕಾರಿಗಳನ್ನು ಸೇವಿಸಬಾರದು


    ಮಧುಮೇಹ ನಿಯಂತ್ರಿಸಲು, ನಿಷ್ಕ್ರಿಯ ಜೀವನಶೈಲಿ ಸುಧಾರಿಸಲು ಮತ್ತು ಆಹಾರದಲ್ಲಿ ಕಡಿಮೆ ಗ್ಲೈಸೆಮಿಕ್ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯವಾಗಿದೆ. ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಣ ಮಾಡಬಹುದಾಗಿದೆ. ಆದರೆ ಕೆಲವು ಆಹಾರಗಳು ಮಧುಮೇಹವನ್ನು ತ್ವರಿತವಾಗಿ ಹೆಚ್ಚಿಸುತ್ತವೆ.


    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು


    ತರಕಾರಿಗಳ ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ತರಕಾರಿಗಳು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಸಕ್ಕರೆ ನಿಯಂತ್ರಿಸಲು ಮಧುಮೇಹಿಗಳು ಯಾವ ತರಕಾರಿಗಳನ್ನು ಸೇವಿಸಬಾರದು ಎಂದು ಇಲ್ಲಿ ನಾವು ತಿಳಿಯೋಣ.


    ಆಲೂಗಡ್ಡೆಯನ್ನು ತಪ್ಪಿಸಿ


    ಆಲೂಗಡ್ಡೆಯು ಪಿಷ್ಟದ ತರಕಾರಿಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ ಅಂಶ ಅಧಿಕವಾಗಿದೆ. ಮಧುಮೇಹಿಗಳು ಆಲೂಗಡ್ಡೆ ಸೇವನೆ ಮಾಡಬಾರದು. ಆಲೂಗಡ್ಡೆ ಜೊತೆಗೆ, ಆಲೂಗಡ್ಡೆ ಚಿಪ್ಸ್, ಬರ್ಗರ್ ಮತ್ತು ಫ್ರೈಗಳಿಂದ ದೂರವಿರಿ. ಆಲೂಗಡ್ಡೆ ಬದಲಿಗೆ ಬ್ರೊಕೊಲಿ ಬಳಸಿ.


    ಮೆಕ್ಕೆಜೋಳ ಸೇವನೆಯನ್ನು ತಪ್ಪಿಸಿ


    ಮೆಕ್ಕೆಜೋಳ ಸೇವನೆಯು ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಕಾರ್ನ್ ರುಚಿಕರವಾಗಿದೆ ಆದರೆ ಇದು ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚು. ವಿಶೇಷವಾಗಿ ಸಿಹಿ ಕಾರ್ನ್ ಸೇವನೆಯನ್ನು ತಪ್ಪಿಸಬೇಕು. ಅರ್ಧ ಕಪ್ ಕಾರ್ನ್ 21 ಗ್ರಾಂ ಕಾರ್ಬೋಹೈಡ್ರೇಟ್‌ ಹೊಂದಿರುತ್ತದೆ. ಮತ್ತು ಕೇವಲ 2 ಗ್ರಾಂ ಫೈಬರ್ ಹೊಂದಿರುತ್ತದೆ. ಇದು ತ್ವರಿತವಾಗಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಕಾರ್ನ್ ಬದಲಿಗೆ ಚಿಯಾ ಬೀಜಗಳನ್ನು ಬಳಸಬಹುದು.


    ಹಸಿರು ಬಟಾಣಿ ಸೇವನೆ ತಪ್ಪಿಸಿ


    ಹಸಿರು ಬಟಾಣಿ ಕಾಳು ತಿನ್ನಲು ಎಷ್ಟು ರುಚಿಕರವಾಗಿರುತ್ತದೆ. ಮಧುಮೇಹ ರೋಗಿಗಳಿಗೆ ಇದು ಹೆಚ್ಚು ಅಪಾಯಕಾರಿ. ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಬಟಾಣಿಗಳು ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಮಧುಮೇಹಿಗಳು ಕಡಿಮೆ ಕಾರ್ಬ್ ಆಹಾರ ಸೇವಿಸುವುದು ಉತ್ತಮ. ಬಟಾಣಿ ಬದಲಿಗೆ ಬೇಳೆ ಕಾಳು ದಾಲ್ ಸೇವಿಸಿ.


    ಪಾರ್ಸ್ನಿಪ್ ಸೇವನೆ ತಪ್ಪಿಸಿ


    ಪಾರ್ಸ್ನಿಪ್ಗಳು ಬೀಟ್ ತರಹದ ತರಕಾರಿ. ಅದು ಕ್ಯಾರೆಟ್ಗಳಂತೆಯೇ ಸಿಹಿ ಮತ್ತು ಕಾಯಿ ರುಚಿ ಹೊಂದಿವೆ. ಇದರ ಸೇವನೆ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಬಹುದು.


    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!


    ಲೀಕ್ಸ್ ಸೇವನೆ ತಪ್ಪಿಸಿ


    ಲೀಕ್ಸ್ ಸೇವನೆ ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. 100 ಗ್ರಾಂ ಲೀಕ್ಸ್‌ನಲ್ಲಿ 14 ಗ್ರಾಂ ಕಾರ್ಬೋಹೈಡ್ರೇಟ್‌ಗಳಿವೆ. ಇದು ಕಡಿಮೆ ಫೈಬರ್ ಮತ್ತು ಫ್ರಕ್ಟಿನ್ ಹೊಂದಿದೆ. ಇದು ಗ್ಯಾಸ್ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಇದರ ಸೇವನೆ ರಕ್ತದ ಸಕ್ಕರೆ ಹೆಚ್ಚಿಸುತ್ತದೆ.

    Published by:renukadariyannavar
    First published: