ದಿನವೂ ನೀವು ಊಟದ ಹೊರತಾಗಿ ಹಲವು ಪದಾರ್ಥಗಳ (Ingredients) ಸೇವನೆಗೆ ಮನಸ್ಸು ಮಾಡುತ್ತೀರಿ. ಕೆಲವನ್ನು ಖಾದ್ಯ (Recipe) ರೂಪದಲ್ಲಿ ತಿನ್ನುತ್ತೀರಿ. ಕೆಲವನ್ನು ಹಸಿಯಾಗಿ ತಿನ್ನುತ್ತೀರಿ. ಹೀಗೆ ತಿನ್ನುವ ಕೆಲವು ಆಹಾರ ಪದಾರ್ಥಗಳು (Food Items) ನಮಗೆ ಗೊತ್ತಿಲ್ಲದಂತೆಯೇ ಆಸಿಡಿಟಿ (Acidity), ಹೊಟ್ಟೆಯುಬ್ಬರ ಸಮಸ್ಯೆ ಉಂಟು ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ವಯಸ್ಕರರು, ಮಕ್ಕಳು, ಹಿರಿಯ ನಾಗರಿಕರು, ಹೀಗೆ ಎಲ್ಲಾ ವರ್ಗದ ಜನರು ಆಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗೆ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆಯು ಜನರನ್ನು (People) ಹೈರಾಣಾಗಿಸುತ್ತದೆ. ಏನೇ ತಿಂದರೂ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತಿಲ್ಲ. ಆಸಿಡಿಟಿಯಿಂದಾಗಿ ಹಗಲು ರಾತ್ರಿ ಔಷಧ, ಮಾತ್ರೆ ಸೇವನೆ ಮಾಡುತ್ತಾರೆ.
ಯಾವ ಆಹಾರ ಪದಾರ್ಥಗಳು ಆಸಿಡಿಟಿ ಸಮಸ್ಯೆ ಹೆಚ್ಚಿಸುತ್ತವೆ?
ಅಂದ ಹಾಗೇ ದೇಹಕ್ಕೆ ಶಕ್ತಿ ದೊರೆಯಲು ಪೋಷಕಾಂಶ ಭರಿತ ಉತ್ತಮ ಆಹಾರ ಸೇವನೆ ತುಂಬಾ ಮುಖ್ಯ. ಆದರೆ ನೀವು ತಿನ್ನುವ ಆಹಾರವು ಆಮ್ಲ ಮತ್ತು ಕ್ಷಾರೀಯ ಗುಣಗಳನ್ನು ಹೊಂದಿದ್ದರೆ ಅದು ಸಾಕಷ್ಟು ಆರೋಗ್ಯ ತೊಂದರೆಗೆ ಕಾರಣವಾಗುತ್ತದೆ.
ನೀವು ಹೆಚ್ಚು ಆಮ್ಲೀಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿ ಆಸಿಡಿಟಿ (ಆಮ್ಲ) ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ಹಾಗಾದ್ರೆ ಇಲ್ಲಿ ನಾವು ದೇಹದಲ್ಲಿ ಆಸಿಡಿಟಿ ಹೇಗೆ ಉಂಟಾಗುತ್ತದೆ ಎಂದು ತಿಳಿಯೋಣ.
ದೇಹದಲ್ಲಿ ಆಸಿಡಿಟಿ ಅಂದ್ರೆ ಆಮ್ಲವು ಹೇಗೆ ರೂಪುಗೊಳ್ಳುತ್ತದೆ?
ಆಹಾರದಲ್ಲಿ ಹೇಗೆ ಆಮ್ಲ ಅಥವಾ ಕ್ಷಾರೀಯ ಮಟ್ಟ ಇರುತ್ತದೆಯೋ, ಹಾಗೆಯೇ ನಮ್ಮ ಎಲ್ಲಾ ಅಂಗಗಳು ಸಹ ಆಮ್ಲ ಅಥವಾ ಕ್ಷಾರೀಯ ಮಟ್ಟ ಹೊಂದಿರುತ್ತವೆ. ಇದಲ್ಲದೇ ನೀವು ಆಮ್ಲೀಯ ಆಹಾರಗಳ ಸೇವನೆ ಮಾಡಿದಾಗ ಸಾಮಾನ್ಯವಾಗಿ ಹೊಟ್ಟೆ,
ಕರುಳು ಮತ್ತು ಮೂತ್ರಪಿಂಡಗಳ ಪಿಎಚ್ ಮಟ್ಟ ಅಸಮಾಧಾನಗೊಳ್ಳುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಹಾಗೂ ಮೂತ್ರದಲ್ಲಿ ಉರಿ, ಎದೆಯುರಿ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ.
ಯಾವ ಆಹಾರಗಳು ಆಸಿಡಿಟಿ ಉತ್ಪಾದಿಸುತ್ತವೆ?
ಒಂದು ವರದಿಯ ಪ್ರಕಾರ, 4.6 ಅಥವಾ ಅದಕ್ಕಿಂತ ಕಡಿಮೆ ಪಿಎಚ್ ಮಟ್ಟ ಹೊಂದಿರುವ ಆಹಾರಗಳನ್ನು ಆಮ್ಲೀಯ ಅಂದ್ರೆ ಆಸಿಡಿಟಿ ಉತ್ಪಾದಿಸುವ ಪದಾರ್ಥಗಳೆಂದು ಪರಿಗಣಿಸಲಾಗಿದೆ ಎಂದು ಹೇಳಿದೆ. ಹಾಗಾಗಿ ಈ ಆಹಾರಗಳ ಸೇವನೆ ತಪ್ಪಿಸಿ. ಇಲ್ಲವೇ ನಿಯಂತ್ರಿಸಿ.
ಆಸಿಡಿಟಿ ಹೆಚ್ಚಿಸುವ ಪದಾರ್ಥಗಳು
ಚೀಸ್ ಹಾಗೂ ಕೆಲವು ಡೈರಿ ಉತ್ಪನ್ನಗಳು ಆಸಿಡಿಟಿ ಹೆಚ್ಚಿಸುತ್ತವೆ. ಮೀನು ಮತ್ತು ಇತರ ಸಮುದ್ರಾಹಾರ ಸೇವನೆ ಮಾಡುವುದು ಸಹ ಆಸಿಡಿಟಿ ಹೆಚ್ಚಿಸುತ್ತವೆ. ಹೆಚ್ಚು ಸೋಡಿಯಂ ನಿಂದ ಕೂಡಿರುವ ಸಂಸ್ಕರಿಸಿದ ಆಹಾರಗಳು ಆಸಿಡಿಟಿ ಹೆಚ್ಚಿಸುತ್ತವೆ.
ಮಾಂಸಾಹಾರಿ ಆಹಾರ, ಕಂದು ಅಕ್ಕಿ, ಓಟ್ಸ್ ಮುಂತಾದ ಪಿಷ್ಟ ಆಹಾರಗಳು, ಸೋಡಾ, ಕಾರ್ಬೊನೇಟೆಡ್ ಪಾನೀಯಗಳು, ಹೆಚ್ಚಿನ ಪ್ರೋಟೀನ್ ಆಹಾರಗಳು ಮತ್ತು ಪೂರಕಗಳ ಸೇವನೆಯಿ ಆಸಿಡಿಟಿ ಹೆಚ್ಚಿಸುತ್ತವೆ.
ಮೂತ್ರದಲ್ಲಿ ಸುಡುವ ಸಂವೇದನೆ ಉಂಟಾಗುವಿಕೆ
ಎನ್ ಸಿಬಿಐನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಆಸಿಡಿಟಿ ಹೆಚ್ಚಿಸುವ ಆಹಾರಗಳ ಅತಿಯಾದ ಸೇವನೆ ಮಾಡಿದಾಗ ಮೂತ್ರದಲ್ಲಿ ಆಮ್ಲೀಯತೆ ಮತ್ತು ಸುಡುವ ಸಂವೇದನೆ ಉಂಟಾಗುತ್ತದೆ. ಯೂರಿಕ್ ಆಸಿಡ್ ಮಟ್ಟವೂ ಸಹ ಅಪಾಯಕಾರಿಯಾಗುತ್ತದೆ. ಈ ವೇಳೆ ಮೂತ್ರಪಿಂಡದ ಕಲ್ಲು ಉಂಟಾಗುವ ಸಾಧ್ಯತೆ ಹೆಚ್ಚು.
ಮೂಳೆಗಳು ಕರಗುತ್ತವೆ
ಆಸಿಡಿಟಿ ಉಂಟು ಮಾಡುವ ಆಹಾರಗಳ ಅಧಿಕ ಸೇವನೆಯಿಂದ ರಕ್ತದಲ್ಲಿ ಆಮ್ಲ ಹೆಚ್ಚುತ್ತದೆ. ಈ ವೇಳೆ ಮೂಳೆಗಳಿಂದ ಕ್ಯಾಲ್ಸಿಯಂ ಕಡಿಮೆ ಆಗುತ್ತದೆ. ದೇಹವು ರಕ್ತದ ಪಿಹೆಚ್ ಮಟ್ಟ ನಿಯಂತ್ರಿಸುತ್ತದೆ. ಕ್ಯಾಲ್ಸಿಯಂ ಕೊರತೆಯಿಂದಾಗಿ, ಮೂಳೆಗಳು ದುರ್ಬಲ ಹಾಗೂ ಮುರಿಯುವ ಅಪಾಯ ಹೆಚ್ಚು.
ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ
ಯಾವ ಆಹಾರಗಳು ಕಡಿಮೆ ಆಸಿಡಿಟಿ ಉಂಟು ಮಾಡುತ್ತವೆ?
ಸೋಯಾಬೀನ್, ಮೊಸರು ಮತ್ತು ಹಾಲು, ಆಲೂಗಡ್ಡೆ, ತಾಜಾ ತರಕಾರಿ, ಹಣ್ಣು, ಕಾಳು, ಆಲಿವ್ ಎಣ್ಣೆ, ಆವಕಾಡೊ, ಬೀಜಗಳು ಇತ್ಯಾದಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ