Protein And Health: ಆಹಾರ ಪದಾರ್ಥದಲ್ಲಿ ಎಷ್ಟು ಪ್ರೊಟೀನ್ ಇದೆ? ಪೌಡರ್ ಸೇವನೆ ಹಾನಿಕರವೇ?

ಕೆಲವೊಮ್ಮೆ ಪ್ರೊಟೀನ್ ಪೌಡರ್ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಹಾಗೂ ಮನೆಯಲ್ಲೇ ಪ್ರೊಟೀನ್ ಪೌಡರ್ ಅಥವಾ ಪ್ರೋಟೀನ್ ಭರಿತ ಆಹಾರ ಪದಾರ್ಥ ಸೇವನೆ ಮಾಡುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ (Health And Fitness) ಕಾಳಜಿ ಹೆಚ್ಚುತ್ತಿದೆ. ಜಿಮ್ ನಲ್ಲಿ ಬೆವರಿಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಫೈಬರ್ ಮತ್ತು ಪ್ರೊಟೀನ್ (Fiber And Protein) ಪದಾರ್ಥಗಳ ಸೇವನೆಯ ಜಾಗೃತಿಯೂ (Awareness) ಹೆಚ್ಚಿದೆ. ಅಲ್ಲದೇ ಈಗ ಪ್ರೋಟೀನ್ ಪೌಡರ್ ಸೇವನೆಯ ಪ್ರವೃತ್ತಿ ಅಧಿಕವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಗಳ ಪ್ರೋಟೀನ್ ಪೌಡರ್‌ಗಳು ಲಗ್ಗೆಯಿಟ್ಟಿವೆ. ಬಿಡುವಿನ ವೇಳೆಯಲ್ಲಿ ಮತ್ತು ಕಚೇರಿಗೆ ಹೋಗುವವರು ಪ್ರೊಟೀನ್ ಪೌಡರ್ ಶೇಕ್ ಮಾಡಿ ಕುಡಿಯುತ್ತಾರೆ. ಜಿಮ್‌ಗೆ ಹೋಗುವವರು ತೂಕ ಮತ್ತು ಸ್ನಾಯು ನಿರ್ವಹಣೆಗಾಗಿ ಪ್ರೋಟೀನ್ ಪೌಡರ್ ಸೇವನೆ ಮಾಡ್ತಾರೆ. ಪ್ರೊಟೀನ್ ಪೌಡರ್ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರೊಟೀನ್ ಸಿಗುತ್ತದೆ ಎಂದು ಹೇಳಲಾಗುತ್ತದೆ.

  ಪ್ರೋಟೀನ್ ಪೌಡರ್ ಮತ್ತು ಆರೋಗ್ಯ

  ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ರೊಟೀನ್ ಪೌಡರ್ ಸೇವನೆ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಕೆಲವೊಮ್ಮೆ ಪ್ರೊಟೀನ್ ಪೌಡರ್ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

  ಹಾಗಾಗಿ ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಹಾಗೂ ಮನೆಯಲ್ಲೇ ಪ್ರೊಟೀನ್ ಪೌಡರ್ ಅಥವಾ ಪ್ರೋಟೀನ್ ಭರಿತ ಆಹಾರ ಪದಾರ್ಥ ಸೇವನೆ ಮಾಡುವುದು ಉತ್ತಮ.

  ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

  ದೇಹಕ್ಕೆ ಪ್ರೋಟೀನ್ ಪೌಡರ್ ಅಗತ್ಯವಿದೆಯೇ ಎಂದು ಕಂಡು ಹಿಡಿಯಲು ನೋಯ್ಡಾ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಆಹಾರ ತಜ್ಞ ನೀಲಮ್ ಚೌಹಾನ್ ಮಾತನಾಡಿದ್ದಾರೆ. ದೇಹಕ್ಕೆ ಪ್ರೋಟೀನ್ ಏಕೆ ಮುಖ್ಯ ಎಂದು ತಿಳಿಯೋಣ.

  ಪ್ರೋಟೀನ್ ದೇಹ ನಿರ್ಮಿಸಲು ಅವಶ್ಯಕ

  ಡಾ.ನೀಲಂ ಪ್ರಕಾರ, ದೇಹದ ಬೆಳವಣಿಗೆ, ಸ್ನಾಯುಗಳ ನಿರ್ಮಾಣ, ಜೀವಕೋಶದ ಹಾನಿ ತಡೆಯುವುದು, ಹಾರ್ಮೋನ್ ರಚನೆ, ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಪ್ರಮುಖ ಕಾರ್ಯಗಳಿಗೆ ಪ್ರೋಟೀನ್ ಅಗತ್ಯವಿದೆ. ಜೀವಕೋಶಗಳು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ.

  ಹಾಗಾಗಿ ಅವುಗಳ ತಯಾರಿಕೆಗೆ ಪ್ರೋಟೀನ್ ಕೂಡ ಅಗತ್ಯವಿದೆ. ಇದನ್ನು ಬಾಡಿ ಬಿಲ್ಡಿಂಗ್ ಬ್ಲಾಕ್ ಎಂದೂ ಕರೆಯುತ್ತಾರೆ. ತೂಕ ನಷ್ಟಕ್ಕೆ ಪ್ರೋಟೀನ್ ಅತ್ಯಗತ್ಯ ಪೋಷಕಾಂಶ. ಇದರ ಸೇವನೆ ಹೊಟ್ಟೆ ತುಂಬಾ ಹೊತ್ತು ತುಂಬಿರುವಂತೆ ನೋಡಿಕೊಳ್ಳುತ್ತದೆ.

  ಪ್ರೋಟೀನ್ ಪೌಡರ್ ಹೇಗೆ ತಯಾರಿಸುತ್ತಾರೆ?

  ಹಾಲು, ಮಜ್ಜಿಗೆ, ಕ್ಯಾಸೀನ್, ಸೋಯಾ, ಬಟಾಣಿ, ಅಕ್ಕಿ, ಆಲೂಗಡ್ಡೆ, ಮೊಟ್ಟೆಗಳಿಂದ ಪ್ರೋಟೀನ್ ಪುಡಿ ತಯಾರಿಸುತ್ತಾರೆ. ಸಕ್ಕರೆ, ಜೀವಸತ್ವ ಮತ್ತು ಖನಿಜಗಳನ್ನು ಸಹ ಮಿಶ್ರಣ ಮಾಡಿ ಪೌಷ್ಟಿಕಾಂಶ ನೀಡುತ್ತದೆ. ನಾವು ನೈಸರ್ಗಿಕ ಪ್ರೋಟೀನ್ ಆಹಾರ ಸೇವಿಸಲು ಸಾಧ್ಯವಾಗದಿದ್ದಾಗ, ಪ್ರೊಟೀನ್ ಪೌಡರ್ ಸೇವಿಸುತ್ತಾರೆ.

  ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ದಿನವಿಡೀ ಚೈತನ್ಯ ನೀಡುತ್ತದೆ. ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಪ್ರೋಟೀನ್ ಪೌಡರ್ ಸೇವನೆ ಜೊತೆಗೆ ವ್ಯಾಯಾಮವೂ ಅಗತ್ಯವಾಗಿದೆ.

  ಪ್ರೋಟೀನ್ ಪುಡಿ ತೂಕ ಹೆಚ್ಚಿಸುತ್ತದೆ

  ಅತಿಯಾಗಿ ಸೇವಿಸಿದರೆ ಹೊಟ್ಟೆನೋವು, ತಲೆನೋವು, ಸುಸ್ತು, ಮೊಡವೆ ಸಾಧ್ಯತೆ ಇದೆ. ಇದರಿಂದ ದೇಹದಲ್ಲಿ ಕೊಬ್ಬಿನ ಅಂಶವೂ ಹೆಚ್ಚಾಗಬಹುದು. ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಪ್ರೊಟೀನ್ ಪೌಡರ್ ಗಳಲ್ಲಿಯೂ ಲೋಹಗಳು ಕಂಡು ಬಂದಿದ್ದು, ಇವು ಕ್ಯಾನ್ಸರ್ ಕಾರಕವಾಗಿವೆ.

  ಡಾ.ನೀಲಂ, ನಾನು ಪ್ರೋಟೀನ್ ಪೌಡರ್ ತೆಗೆದುಕೊಳ್ಳಲು ಶಿಫಾರಸು ಮಾಡುವುದಿಲ್ಲ ಎಂದು ಹೇಳುತ್ತಾರೆ. ತೂಕ ಇಳಿಸಲು 0.18 -1 ಗ್ರಾಂ / ಕೆಜಿ ದೇಹದ ತೂಕದ ಪ್ರೋಟೀನ್ ಅಗತ್ಯವಿದೆ. ಪ್ರೋಟೀನ್ ಭರಿತ ಆಹಾರ ಸೇವನೆ ಪೂರ್ಣ ಪ್ರಮಾಣದ ಪ್ರೋಟೀನ್ ದೇಹಕ್ಕೆ ಸಿಗುತ್ತದೆ. ಯಾವ ಪ್ರೊಟೀನ್ ಭರಿತ ಆಹಾರ ಸೇವನೆ ಎಷ್ಟು ಪ್ರಮಾಣದ ಪ್ರೊಟೀನ್ ದೇಹಕ್ಕೆ ನೀಡುತ್ತದೆ.

  ನೈಸರ್ಗಿಕ ಪ್ರೋಟೀನ್ ಭರಿತ ಆಹಾರಗಳ ಪಟ್ಟಿ

  100 ಗ್ರಾಂ ಪನೀರ್ ನಲ್ಲಿ - ಪ್ರೋಟೀನ್ 15 ಗ್ರಾಂ

  ಮೀನು 100 ಗ್ರಾಂ - ಪ್ರೋಟೀನ್ 25 ಗ್ರಾಂ

  ಕೊಬ್ಬು ರಹಿತ ಪನೀರ್ 100 ಗ್ರಾಂ - ಪ್ರೋಟೀನ್ 18 ಗ್ರಾಂ

  ಮೂಳೆ ರಹಿತ ಚಿಕನ್ ಸ್ತನ 100 ಗ್ರಾಂ - ಪ್ರೋಟೀನ್ 25 ಗ್ರಾಂ

  ದ್ವಿದಳ ಧಾನ್ಯಗಳು 100 ಗ್ರಾಂ - ಪ್ರೋಟೀನ್ 15 ಗ್ರಾಂ

  ಟೋನ್ಡ್ ಮಿಲ್ಕ್ 500 ಮಿಲಿ - ಪ್ರೋಟೀನ್ 18 ಗ್ರಾಂ

  1 ಮೊಟ್ಟೆ - ಪ್ರೋಟೀನ್ 4.66 ಗ್ರಾಂ

  ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

  ಕಡಲೆಕಾಯಿ 28 ಗ್ರಾಂ - ಪ್ರೋಟೀನ್ 7 ಗ್ರಾಂ

  ಬೇಳೆಕಾಳು 100 ಗ್ರಾಂ - ಪ್ರೋಟೀನ್ 18 ಗ್ರಾಂ

  ಸೋಯಾ ಚಂಕ್ಸ್ 50 ಗ್ರಾಂ - ಪ್ರೋಟೀನ್ 25 ಗ್ರಾಂ
  Published by:renukadariyannavar
  First published: