Longevity: ಈ ಆಹಾರ ಪದಾರ್ಥ ಸೇವಿಸಿದ್ರೆ ಇರೋ ಆಯಸ್ಸು ಕಡಿಮೆಯಾಗುತ್ತೆ ಎಚ್ಚರ!

ನೇಚರ್ ಫುಡ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ ಈ ಅಧ್ಯಯನವು ವ್ಯಕ್ತಿಯ ಉತ್ತಮ ಜೀವನದ ಗುಣಮಟ್ಟ ಆಧರಿಸಿದೆ. ಅಧ್ಯಯನದಲ್ಲಿ ವಿಜ್ಞಾನಿಗಳು ಸುಮಾರು 6 ಸಾವಿರ ವಿವಿಧ ವಿಷಯಗಳನ್ನು ಉಪಹಾರ ಊಟ ಮತ್ತು ಪಾನೀಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬರೂ (Everyone) ತಮಗೆ ದೀರ್ಘಾಯುಷ್ಯ (Longevity) ಮತ್ತು ದೀರ್ಘಾರೋಗ್ಯ ಸಿಗಲೆಂದು ಬಯಸುತ್ತಾರೆ. ವಿಶ್ವ ಜೀವಿತಾವಧಿಯ ಪ್ರಕಾರ, ಭಾರತದಲ್ಲಿ (India) ಪುರುಷರ (Men’s) ಸರಾಸರಿ ವಯಸ್ಸು (Age) 69.5 ವರ್ಷಗಳು ಮತ್ತು ಮಹಿಳೆಯರ (Women’s) ವಯಸ್ಸು 72.2 ವರ್ಷಗಳು. ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಪಾರ್ಶ್ವವಾಯು, ಮಧುಮೇಹ ಸೇರಿದಂತೆ ಸುಮಾರು 50 ರೋಗಗಳು ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಉಂಟಾಗುತ್ತಿದ್ದು, ಇದು ಸಾವಿಗೆ ಕಾರಣವಾಗಬಹುದು. ಯಾರು ಉತ್ತಮ ಆಹಾರ ಸೇವನೆ ಮಾಡುತ್ತಾರೋ, ಅವರ ಆಯುಷ್ಯ ಹೆಚ್ಚಾಗುತ್ತದೆ. ಮತ್ತು ಯಾರು ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೋ ಅವರ ಆಯುಷ್ಯ ಕಡಿಮೆಯಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.

    ಯಾವ ಆಹಾರ ಪದಾರ್ಥಗಳ ಸೇವನೆಯಿಂದ ದೀರ್ಘಾಯುಷ್ಯ ಕಡಿಮೆಯಾಗುತ್ತದೆ?

    ಹಾಗಿದ್ರೆ ದೀರ್ಘಾಯುಷ್ಯ ಯಾವ ಆಹಾರ ಪದಾರ್ಥಗಳ ಸೇವನೆಯಿಂದ ಕಡಿಮೆ ಆಗುತ್ತದೆ ಎಂಬುದನ್ನು ನಾವು ಇಲ್ಲಿ ನೋಡೋಣ. ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಮಿಚಿಗನ್ ವಿಶ್ವವಿದ್ಯಾನಿಲಯದ ತಜ್ಞರು ಕೆಲವು ಆಹಾರ ಪದಾರ್ಥಗಳು ಮತ್ತು ಆರೋಗ್ಯದ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ತಿಳಿಯಲು ಸಂಶೋಧನೆ ನಡೆಸಿದ್ದಾರೆ.

    ಕೆಲವು ವಸ್ತುಗಳು ನಿಮ್ಮ ಜೀವಿತಾವಧಿಯನ್ನು ಕೆಲವು ನಿಮಿಷದವರೆಗೆ ಹೆಚ್ಚಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಕೆಲವು ಪದಾರ್ಥಗಳನ್ನು ಸೇವಿಸುವುದು ನಿಮ್ಮ ಜೀವನವನ್ನು ಕೆಲವು ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಉದಾಹರಣೆಗೆ ಯಾರಾದರೂ ಒಂದು ಸರ್ವಿಂಗ್ ನಟ್ಸ್ ಅನ್ನು ಸೇವಿಸಿದರೆ ಅವನ ಜೀವಿತಾವಧಿಯು 26 ನಿಮಿಷ ಹೆಚ್ಚಾಗಬಹುದು.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಆದರೆ ಯಾರಾದರೂ ಹಾಟ್-ಡಾಗ್ ಸೇವಿಸಿದರೆ, ಅವರ ಜೀವನವು 36 ನಿಮಿಷ ಕಡಿಮೆಯಾಗುತ್ತದೆ. ಇದರ ಹೊರತಾಗಿ ಕಡಲೆಕಾಯಿ ಬೆಣ್ಣೆ ಮತ್ತು ಜಾಮ್ ಸ್ಯಾಂಡ್ವಿಚ್ ಯಾವುದೇ ವ್ಯಕ್ತಿಯ ವಯಸ್ಸನ್ನು ಅರ್ಧ ಗಂಟೆ ಹೆಚ್ಚಿಸುತ್ತದೆ.

    ಆರು ಸಾವಿರ ಆಹಾರ ಪದಾರ್ಥಗಳ ಮೇಲೆ ನಡೆದ ಸಂಶೋಧನೆ

    ನೇಚರ್ ಫುಡ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಈ ಅಧ್ಯಯನವು ವ್ಯಕ್ತಿಯ ಉತ್ತಮ ಜೀವನದ ಗುಣಮಟ್ಟ ಆಧರಿಸಿದೆ. ಅಧ್ಯಯನದಲ್ಲಿ ವಿಜ್ಞಾನಿಗಳು ಸುಮಾರು 6 ಸಾವಿರ ವಿವಿಧ ವಿಷಯಗಳನ್ನು ಉಪಹಾರ, ಊಟ ಮತ್ತು ಪಾನೀಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸಂಸ್ಕರಿಸಿದ ಮಾಂಸ ಸೇವಿಸುವ ವ್ಯಕ್ತಿಯು ದಿನಕ್ಕೆ 48 ಹೆಚ್ಚುವರಿ ನಿಮಿಷ ಹೊಂದಬಹುದು ಎಂದಿದ್ದಾರೆ.

    ಯಾವ ಪದಾರ್ಥಗಳ ಸೇವನೆ ಆಯುಷ್ಯ ಕಡಿಮೆ ಮಾಡುತ್ತದೆ

    ದಿ ಟೆಲಿಗ್ರಾಫ್ ಪ್ರಕಾರ, ವ್ಯಕ್ತಿಯ ಆಯುಷ್ಯವನ್ನು ಕಡಿಮೆ ಮಾಡುವ ಅಂಶಗಳು

    ಹಾಟ್ ಡಾಗ್ : 36 ನಿಮಿಷಗಳ ಕಾಲ ಜೀವಿತಾವಧಿ ಕಡಿಮೆ ಮಾಡುತ್ತದೆ.

    ಸಂಸ್ಕರಿಸಿದ ಮಾಂಸ (ಬೇಕನ್) : 26 ನಿಮಿಷಗಳ ಕಾಲ ಆಯುಷ್ಯ ಕಡಿಮೆ ಮಾಡುತ್ತದೆ.

    ಚೀಸ್ ಬರ್ಗರ್ : 8.8 ನಿಮಿಷಗಳ ಜೀವಿತಾವಧಿ ಕಡಿಮೆ ಮಾಡುತ್ತದೆ.

    ತಂಪು ಪಾನೀಯ : ಆಯುಷ್ಯವನ್ನು 12.4 ನಿಮಿಷಗಳು ಕಡಿಮೆ ಮಾಡುತ್ತದೆ.

    ಪಿಜ್ಜಾ : ಆಯುಷ್ಯವನ್ನು 7.8 ನಿಮಿಷ ಕಡಿಮೆ ಮಾಡುತ್ತದೆ.

    ಯಾವ ಪದಾರ್ಥಗಳು ಆಯಸ್ಸು ಹೆಚ್ಚಿಸುತ್ತದೆ

    ಕೆಲವು ಪದಾರ್ಥಗಳನ್ನು ತಿಂದರೆ ಆಯಸ್ಸು ಹೆಚ್ಚಾಗುತ್ತದೆ.

    ಕಡಲೆಕಾಯಿ ಬೆಣ್ಣೆ ಮತ್ತು ಜಾಮ್ ಸ್ಯಾಂಡ್‌ವಿಚ್: 33.1 ನಿಮಿಷ

    ಬೇಯಿಸಿದ ಸಾಲ್ಮನ್ ಮೀನು : 13.5 ನಿಮಿಷ

    ಬಾಳೆಹಣ್ಣು: 13.5 ನಿಮಿಷ

    ಟೊಮ್ಯಾಟೊ: 3.8 ನಿಮಿಷ

    ಆವಕಾಡೊ: 1.5 ನಿಮಿಷ

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಆರೋಗ್ಯ ಸರಿಯಾಗಿಡಲು ಆಹಾರದಲ್ಲಿ ಬದಲಾವಣೆ

    ಸಾಲ್ಮನ್ ಮೀನಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ ಎಂದು ತಜ್ಞರು ಹೇಳಿದ್ದಾರೆ. ಅದರಲ್ಲಿ ಒಂದು ಸೇವೆಯು 16 ನಿಮಿಷಗಳ ಆಯಸ್ಸು ಹೆಚ್ಚಿಸುತ್ತದೆ. ಸಂಶೋಧನಾ ತಂಡದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಒಲಿವಿಯರ್ ಜೋಲಿಯಟ್, ಸಂಶೋಧನೆಯಿಂದ ಹೊರಬಂದ ಫಲಿತಾಂಶಗಳು ಜನರು ತಮ್ಮ ಆರೋಗ್ಯ ಮತ್ತು ಪರಿಸರ ಸುಧಾರಿಸಲು ಸಹಾಯ ಮಾಡುತ್ತದೆ. ಆಹಾರಕ್ರಮ ಬದಲಾಯಿಸಬೇಕು.
    Published by:renukadariyannavar
    First published: