Kidney Health: ಹಾಲು, ಬಾಳೆ ಹಣ್ಣು ಇವೆಲ್ಲ ಮೂತ್ರಪಿಂಡಕ್ಕೆ ಹಾನಿ ಮಾಡುತ್ತಂತೆ! ಶಾಕಿಂಗ್ ಸತ್ಯ ಇಲ್ಲಿದೆ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಳೆ ಹಣ್ಣು, ಹಾಲು, ಮೊಸರು, ಟೊಮ್ಯಾಟೋ, ಚಿಕನ್ ಇವೆಲ್ಲ ಆರೋಗ್ಯಕ್ಕೆ ಉತ್ತಮ ಅಂತ ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ ಇವುಗಳು ಕಿಡ್ನಿಗೆ ಸಮಸ್ಯೆ ತಂದೊಡ್ಡುತ್ತವೆಯಂತೆ!

  • Share this:

    ಮೂತ್ರಪಿಂಡಗಳು (Kidneys) ದೇಹಕ್ಕೆ (Body) ತುಂಬಾ ಮುಖ್ಯವಾಗಿ ಬೇಕಾಗಿರುವ ಅಂಗಗಳು (Parts) ಎಂಬುದು ಎಲ್ಲರಿಗೂ ಗೊತ್ತಿದೆ. ಯಾಕಂದ್ರೆ ಮೂತ್ರಪಿಂಡಗಳು ದೇಹದಲ್ಲಿರುವ ಕೆಟ್ಟ ತ್ಯಾಜ್ಯವನ್ನು ಹೊರಗೆ ಹಾಕುವ ಕೆಲಸ ಮಾಡುತ್ತವೆ. ಮೂತ್ರಪಿಂಡಗಳು ನಮ್ಮ ದೇಹವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತವೆ. ಹಾಗಾಗಿ ಅವುಗಳನ್ನು ಆರೋಗ್ಯವಾಗಿ (Health) ಇಡುವುದು ತುಂಬಾ ಮುಖ್ಯ. ಕಿಡ್ನಿಗೆ ಹಾನಿ ಆದರೆ ರಕ್ತದಲ್ಲಿ ಕೊಳೆ ಹೆಚ್ಚುತ್ತಾ ಹೋಗುತ್ತದೆ. ಈ ಕೊಳಕು ದೇಹದ ವಿವಿಧ ಭಾಗಗಳ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತದೆ. ಜೊತೆಗೆ ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ಮತ್ತು ರೋಗಿ ತನ್ನ ಜೀವವನ್ನೂ ಸಹ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.


    ಕಿಡ್ನಿ ಆರೋಗ್ಯ ಕಾಪಾಡಿ


    ಒಂದು ವೇಳೆ ಕಿಡ್ನಿ ಹಾನಿಯಾದ್ರೆ, ಅದನ್ನು ಕಸಿ ಮಾಡುವುದೇ ಪರಿಹಾರ ಮಾರ್ಗವಾಗಿದೆ. ಇದರಲ್ಲಿ ಆರೋಗ್ಯಕರ ಮೂತ್ರಪಿಂಡ ಅಳವಡಿಕೆ ಮಾಡಬೇಕಾಗುತ್ತದೆ. ಆರೋಗ್ಯಕ್ಕಾಗಿ ಮೂತ್ರಪಿಂಡಗಳ ಫಿಲ್ಟರ್‌ಗಳು ಅಂದ್ರೆ ಗ್ಲೋಮೆರುಲಸ್ ಸರಿಯಾಗಿ ಇರುವುದು ತುಂಬಾ ಮುಖ್ಯ.


    ಮೂತ್ರಪಿಂಡದ ಈ ಫಿಲ್ಟರ್‌ ಗಳು ದೇಹದ ಕೆಟ್ಟ ಕೊಳೆ ತೆಗೆದು ಹಾಕುವ ಕೆಲಸ ಮಾಡುತ್ತವೆ. ಇದಕ್ಕಾಗಿ ನೀವು ಕೆಲವು ಆಹಾರ ಪದಾರ್ಥಗಳ ಸೇವನೆ ತಪ್ಪಿಸಬೇಕಾಗುತ್ತದೆ. ಇಲ್ಲದೇ ಹೋದರೆ ಮೂತ್ರಪಿಂಡಗಳು ಬೇಗನೆ ಹಾನಿಗೆ ತುತ್ತಾಗುತ್ತವೆ.




    ಮೂತ್ರಪಿಂಡಗಳ ಫಿಲ್ಟರ್‌ಗಳು ಅಂದ್ರೆ ಗ್ಲೋಮೆರುಲಸ್ ಕೆಟ್ಟರೆ ಯಾವ ತ್ಯಾಜ್ಯ ದೇಹಕ್ಕೆ ಹಾನಿ ಮಾಡುತ್ತದೆ?


    ಯೂರಿಕ್ ಆಮ್ಲ ಸಮಸ್ಯೆ, ಅಮೋನಿಯಾ ಕಾಯಿಲೆ, ಯೂರಿಯಾ, ಕ್ರಿಯೇಟಿನೈನ್, ಅಮೈನೊ ಆಸಿಡ್, ಸೋಡಿಯಂ, ಹೆಚ್ಚುವರಿ ನೀರು ಇದು ದೇಹಕ್ಕೆ ಸಾಕಷ್ಟು ಹಾನಿ ಮಾಡುತ್ತದೆ.


    ಬಾಳೆಹಣ್ಣು ಸೇವನೆಯು ಮೂತ್ರಪಿಂಡಕ್ಕೆ ಹಾನಿ ಮಾಡುತ್ತದೆ


    ಯಾರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೋ, ಅವರು ಬಾಳೆಹಣ್ಣು ಸೇವಿಸಬಾರದು. ಯಾಕಂದ್ರೆ ಇದು ಬಹಳಷ್ಟು ಪೊಟ್ಯಾಸಿಯಂ ಅನ್ನು ಹೊಂದಿದೆ. ಅದರ ಹೆಚ್ಚಿನ ಸೇವನೆಯಿಂದ ಮೂತ್ರಪಿಂಡದ ಫಿಲ್ಟರ್ ಮತ್ತಷ್ಟು ಹಾಳಾಗುತ್ತದೆ.


    ಸಿಪ್ಪೆ ಸಹಿತ ಆಲೂಗಡ್ಡೆ ಸೇವನೆ ತಪ್ಪಿಸಿ


    ಜೆಆರ್‌ ಎನ್‌ ಜರ್ನಲ್‌ನ ಸಂಶೋಧನೆ ಹೇಳಿದ ಪ್ರಕಾರ, ಆಲೂಗಡ್ಡೆಯಲ್ಲಿ ಸಾಕಷ್ಟು ಪೊಟ್ಯಾಸಿಯಂ ಇದೆ. ಅದರಲ್ಲಿ ಹೆಚ್ಚಿನ ಭಾಗವು ಸಿಪ್ಪೆಯಿಂದ ಬರುತ್ತದೆ. ಹಾಗಾಗಿ ಆಲೂಗಡ್ಡೆ ಪದಾರ್ಥವನ್ನು ಸಿಪ್ಪೆಯೊಂದಿಗೆ ತಿನ್ನುವುದನ್ನು ತಪ್ಪಿಸಿ. ಇಲ್ಲದಿದ್ದರೆ ಮೂತ್ರಪಿಂಡಗಳು ಕ್ರಮೇಣ ಹಾನಿಗೆ ತುತ್ತಾಗುತ್ತವೆ.


    ಕೋಳಿ ಕೆಲವು ಭಾಗಗಳು


    ಚಿಕನ್‌ನ ಕೆಲವು ಭಾಗಗಳು ಪ್ರೋಟೀನ್‌ ಸಮೃದ್ಧ. ಆದರೆ ಇದು ಪೊಟ್ಯಾಸಿಯಮ್ ಅನ್ನು ಸಹ ಹೆಚ್ಚು ಒಳಗೊಂಡಿದೆ. ಹಾಗಾಗಿ ಕಿಡ್ನಿ ಸಮಸ್ಯೆ ಇರುವ ರೋಗಿಗಳು ಹೆಚ್ಚು ಚಿಕನ್  ಸೇವನೆ ತಪ್ಪಿಸಿ. ಆರೋಗ್ಯವಂತರು ಸಹ ಕಡಿಮೆ ಸೇವಿಸಿ.


    ಸಾಂದರ್ಭಿಕ ಚಿತ್ರ


    ಹಾಲು ಮತ್ತು ಮೊಸರು


    ಮೂತ್ರಪಿಂಡವನ್ನು ಹಾನಿಗೊಳಿಸುವ ಅಂಶವು ಹಾಲು ಅಥವಾ ಅದರಿಂದ ತಯಾರಿಸಿದ ಮೊಸರಿನ ಉತ್ಪನ್ನದಲ್ಲಿ ಇದೆ. ಹಾಗಾಗಿ ಮೂತ್ರಪಿಂಡದ ರೋಗಿಗಳು ಹಾಲು ಮತ್ತುಮೊಸರು ಸೇವನೆ ಕಡಿಮೆ ಮಾಡಿ. ಡೈರಿ ಉತ್ಪನ್ನಗಳು ನಮಗೆ ದೈನಂದಿನ ಅವಶ್ಯಕತೆಯ ಕಾಲು ಭಾಗವನ್ನು ಆರಾಮವಾಗಿ ಒದಗಿಸುತ್ತವೆ.


    ಟೊಮೆಟೊ ದೇಹದಲ್ಲಿ ಪೊಟ್ಯಾಸಿಯಂ ಹೆಚ್ಚಿಸುತ್ತದೆ


    ಟೊಮೆಟೊ ಅಥವಾ ಅದರ ಪೇಸ್ಟ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಇಲ್ಲದಿದ್ದರೆ ಇದು ಕಿಡ್ನಿ ಹಾನಿಕಾರಕ ಪೊಟ್ಯಾಸಿಯಮ್ ಅನ್ನು ಹೆಚ್ಚಿಸುತ್ತದೆ. ಮಧ್ಯಮ ಗಾತ್ರದ ಟೊಮೆಟೊ ಸುಮಾರು 290 ಮಿಲಿಗ್ರಾಂ ಪೊಟ್ಯಾಸಿಯಂ ಹೊಂದಿದೆ.


    ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್


    ಬೇಳೆ ಕಾಳು


    ಬೇಳೆ ಕಾಳುಗಳ ಸೇವನೆ ಹೆಚ್ಚು ಮಾಡಿದ್ದರೆ ಕಡಿ ಮಾಡಿ. ಕಡಿಮೆ ಪ್ರಮಾಣದಲ್ಲಿ ಬೇಳೆ ಕಾಳು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅದರ ಅತಿಯಾದ ಪ್ರಮಾಣ ಸೇವನೆಯು ಕಿಡ್ನಿ ಫಿಲ್ಟರ್‌ ನ್ನು ಹಾನಿ ಮಾಡುತ್ತದೆ. 1 ಕಪ್ ಬೇಯಿಸಿದ ಬೇಳೆಯು ಸುಮಾರು 730 ಮಿಗ್ರಾಂ ಪೊಟ್ಯಾಸಿಯಮ್ ಹೊಂದಿದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು