Skin Care: ಈ ಆಹಾರಗಳು ಚರ್ಮದ ಆರೋಗ್ಯಕ್ಕೆ ಹಾನಿಕಾರಕ, ತಜ್ಞರು ಹೇಳೋದೇನು ಕೇಳಿ

ಮೊಡವೆ ಕಪ್ಪು ಕಲೆ ಸುಕ್ಕು ಇತ್ಯಾದಿಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ನೀವು ಕೆಲವು ಆಹಾರ ಪದಾರ್ಥಗಳಿಂದ ದೂರ ಇರುವುದು ಉತ್ತಮ. ಯಾವ ಪದಾರ್ಥಗಳನ್ನು ತಿನ್ನಬೇಕು ಮತ್ತು ಅದು ತ್ವಚೆಗೆ ವಿಷದಂತೆ ಕೆಲಸ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚರ್ಮದ (Skin) ನಿಜವಾದ ಹೊಳಪು (Brighten) ಬರಲು ನೀವು ಏನೆಲ್ಲಾ ಪ್ರಯತ್ನ (Try) ಮಾಡುತ್ತಿರಬಹುದು. ಆದರೆ ನಿಜವಾಗಿಯೂ ನಿಮ್ಮ ತ್ವಚೆಯ ಹೊಳಪು ನಿಮ್ಮ ಆಹಾರ ಸೇವನೆಯು (Eating Food) ಆಹಾರ ಪದ್ಧತಿಯ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಬಾಹ್ಯ ಉತ್ಪನ್ನಗಳನ್ನು ಚರ್ಮಕ್ಕೆ ಅನ್ವಯಿಸುವುದರ ಜೊತೆಗೆ ನಿಮ್ಮ ಆಹಾರ ಕ್ರಮದ ಮೇಲೆ ಹೆಚ್ಚು ಕಾಳಜಿ (Care) ವಹಿಸುವುದು ತುಂಬಾ ಮುಖ್ಯ ಆಗಿದೆ ಎಂದು ತಜ್ಞರು ಸಹ ನಂಬುತ್ತಾರೆ. ನೀವು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಹಾರ ಪದಾರ್ಥಗಳನ್ನ ಸೇವಿಸಿದರೆ ಯಾವುದೇ ಅಡ್ಡ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು. ಆಗ ನೀವು ಹಚ್ಚುವ ಅತ್ಯಂತ ದುಬಾರಿ ಕ್ರೀಮ್‌ಗಳು ಸಹ ಆರೋಗ್ಯಕರ ಮತ್ತು ಹೊಳೆಯುವ ಚರ್ಮ ನೀಡಲು ವಿಫಲ ಆಗುತ್ತವೆ.

  ಚರ್ಮದ ಪೋಷಣೆಗೆ ಯಾವ ಪದಾರ್ಥಗಳ ಸೇವನೆ ಹಾನಿಕರ?

  ಮೊಡವೆ, ಕಪ್ಪು ಕಲೆ, ಸುಕ್ಕು ಇತ್ಯಾದಿಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ನೀವು ಬಯಸಿದರೆ, ನೀವು ಕೆಲವು ಆಹಾರ ಪದಾರ್ಥಗಳಿಂದ ದೂರ ಇರುವುದು ಉತ್ತಮ. ಯಾವ ಪದಾರ್ಥಗಳನ್ನು ತಿನ್ನಬೇಕು ಮತ್ತು ಅದು ತ್ವಚೆಗೆ ವಿಷಕಾರಿ ಎಂದು ಸಾಬೀತು ಪಡಿಸಬಹುದು. ಕೆಳಗೆ ನೀಡಿರುವ ಅಂಶಗಳು ನಿಮ್ಮ ತ್ವಚೆಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು.

  ಹುರಿದ ಪದಾರ್ಥಗಳ ಸೇವನೆ

  ಬಿಸಿ ಬಿಸಿ ಪಕೋಡ, ಕಚೋರಿ, ಸಮೋಸ, ಪೂರಿ ಹೀಗೆ ಕರಿದ ಮತ್ತು ಹುರಿದ ಪದಾರ್ಥಗಳು ಹೆಸರು ಹೇಳಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಈ ವಸ್ತುಗಳು ಚರ್ಮಕ್ಕೆ ಅಡ್ಡ ಪರಿಣಾಮ ಬೀರುತ್ತವೆ. ಅವುಗಳ ಅತಿಯಾದ ಸೇವನೆ ಚರ್ಮದ ಮೇಲೆ ಮೊಡವೆಗಳನ್ನು ಸುಲಭವಾಗಿ ಪ್ರಚೋದಿಸುತ್ತದೆ. ವಿಶೇಷವಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಅಂತಹ ಆಹಾರವು ಹಾನಿ ಉಂಟು ಮಾಡುತ್ತದೆ.

  ಇದನ್ನೂ ಓದಿ: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

  ತ್ವರಿತ ಆಹಾರ ಸೇವನೆ

  ಅದೇ ರೀತಿ ಬರ್ಗರ್, ಪಿಜ್ಜಾ, ಫ್ರೆಂಚ್ ಫ್ರೈಸ್ ನಂತಹ ಟೆಂಪ್ಟಿಂಗ್ ವಸ್ತುಗಳೂ ತ್ವಚೆಗೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತವೆ. ಈ ಆಹಾರಗಳು ಕ್ಯಾಲೋರಿಗಳು, ಕೊಬ್ಬು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಮೂಲಗಳಾಗಿವೆ. ಇವು ಚರ್ಮಕ್ಕೆ ಒಳ್ಳೆಯದಲ್ಲ. ಇವುಗಳ ಸೇವನೆ ಮೊಡವೆ ಸಮಸ್ಯೆ ಹೆಚ್ಚಿಸುತ್ತವೆ. ಮತ್ತು ಪೋಷಕಾಂಶಗಳಿಲ್ಲದ ಈ ಆಹಾರಗಳು ತ್ವಚೆಯನ್ನು ಮಂಕಾಗಿಸುತ್ತದೆ.

  ಮಸಾಲೆ ಆಹಾರ ಸೇವನೆ

  ಭಾರತೀಯ ಆಹಾರವು ಮಸಾಲೆಯುಕ್ತ ಪದಾರ್ಥವಾಗಿದೆ. ಅವುಗಳನ್ನು ಮಿತಿಯಲ್ಲಿ ಸೇವಿಸಿದರೆ ಅವು ದೇಹಕ್ಕೆ ಪ್ರಯೋಜನ ನೀಡುತ್ತವೆ. ಆದರೆ ಅವುಗಳ ಅತಿಯಾದ ಸೇವನೆ ಚರ್ಮದ ಸಮಸ್ಯೆ ಹೆಚ್ಚಿಸುತ್ತದೆ. ಬದಲಾಗಿ ಕನಿಷ್ಠ ಮಸಾಲೆ ಮತ್ತು ಮೆಣಸಿನಕಾಯಿಗಳ ರುಚಿ ಪದಾರ್ಥ ಸೇವಿಸಿ. ಇದು ನಿಮಗೆ ತೃಪ್ತಿ ನೀಡುತ್ತದೆ. ಜೊತೆಗೆ ಚರ್ಮಕ್ಕೆ ಹಾನಿಯಾಗಲ್ಲ.

  ಚಾಕೊಲೇಟ್ ಸೇವನೆ

  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಾಕೊಲೇಟ್‌ ಪ್ರೀತಿಪಾತ್ರ ವಾಗಿದೆ. ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಕಾಲಜನ್ ಅನ್ನು ಗಟ್ಟಿಯಾಗಿಸುತ್ತದೆ. ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಹೆಚ್ಚಿಸುವುದು ಮಾತ್ರವಲ್ಲದೆ ಸುಕ್ಕುಗಳನ್ನು ಉತ್ತೇಜಿಸುತ್ತದೆ. ನೀವು ಚಾಕೊಲೇಟ್ ತಿನ್ನಲು ಬಯಸಿದರೆ, ನಂತರ ಡಾರ್ಕ್ ಚಾಕೊಲೇಟ್ ತಿನ್ನಿರಿ. ಅದರ ಪ್ರಮಾಣವೂ ಮಿತಿಗೊಳಿಸಿ.

  ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಆಹಾರ ಸೇವನೆ

  ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳು ಚರ್ಮಕ್ಕೆ ಹಾನಿಕರ. ಬ್ರೆಡ್, ಪಾಸ್ಟಾ, ಆಲೂಗಡ್ಡೆ ವಸ್ತುಗಳು ಸ್ಕಿನ್ ಬ್ರೇಕ್ಔಟ್ಗ ಗೆ ಕಾರಣವಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಹೋದರೆ ಚರ್ಮದ ವಯಸ್ಸಾದ ಚಿಹ್ನೆಗಳು ಬೇಗ ಕಾಣಿಸಿಕೊಳ್ಳುತ್ತವೆ.

  ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

  ತಂಪು ಪಾನೀಯಗಳು ಮತ್ತು ಮದ್ಯ ಸೇವನೆ

  ಸೋಡಾ ಮತ್ತು ಆಲ್ಕೋಹಾಲ್ ಹೊಂದಿರುವ ತಂಪು ಪಾನೀಯಗಳು ಇದು ಚರ್ಮಕ್ಕೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ಹಾಗಾಗಿ ತಂಪು ಪಾನೀಯ ಮತ್ತು ಮದ್ಯ ಸೇವನೆ ಅತ್ಯಂತ ಕಡಿಮೆ ಮಾಡಿ.
  Published by:renukadariyannavar
  First published: