• Home
  • »
  • News
  • »
  • lifestyle
  • »
  • Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!

Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂಳೆ ಮಜ್ಜೆಯೊಳಗೆ ಕೆಂಪು ರಕ್ತ ಕಣ ತಯಾರಾಗುತ್ತದೆ. ಇದು ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಹೊಂದಿದೆ. ಈ ಪ್ರೋಟೀನ್ ಬೇರೆ ಅಂಗಗಳಿಗೆ ಆಮ್ಲಜನಕ ಮತ್ತು ಪೋಷಣೆ ನೀಡುತ್ತದೆ.

  • Share this:

    ದೇಹದ (Body) ಆರೋಗ್ಯಕ್ಕೆ (Health) ಮತ್ತು ಸರಿಯಾಗಿ ಅಂಗಗಳು (Parts) ಕೆಲಸ ಮಾಡಲು ಪ್ರಮುಖವಾಗಿ ರಕ್ತ ಮತ್ತು ಆಮ್ಲಜನಕ (Blood And Oxygen) ಬೇಕು. ದೇಹದ ತೂಕದಲ್ಲಿ ಕೇವಲ 10 ಪ್ರತಿಶತ ರಕ್ತ ಮಾತ್ರ ಇದೆ. ಇದು ದೇಹದಲ್ಲಿ ಆಮ್ಲಜನಕ ಮತ್ತು ಪೌಷ್ಟಿಕಾಂಶವನ್ನು ಮೇಲಿನಿಂದ ಕೆಳಕ್ಕೆ ಸಾಗಿಸಲು ಸಹಾಯ ಮಾಡುತ್ತದೆ. ಆದರೆ ರಕ್ತ ಎಂಬುದು ಹೇಗೆ ಮತ್ತು ಯಾವ ವಸ್ತುವಿನಿಂದ ಮಾಡಲ್ಪಟ್ಟಿದೆ ಎಂಬುದು ನಿಮಗೆ ಗೊತ್ತಿದೆಯಾ? ಅಂದ ಹಾಗೇ ದೇಹದ ಕಾರ್ಯ ಚಟುವಟಿಕೆಗೆ ಕೆಂಪು ರಕ್ತ ಕಣಗಳು ರಕ್ತದ ಬಹುಮುಖ್ಯ ಭಾಗ ಆಗಿದೆ. ಹೀಗಾಗಿ ರಕ್ತವು ಕೊಳಕು ನೀರು ಸಹ ಆಗಿ ಮಾರ್ಪಾಡಾಗುತ್ತದೆ. ಜೊತೆಗೆ ದೇಹಕ್ಕೆ ಸರಿಯಾದ ಪೋಷಣೆಯನ್ನು ನೀಡಲು ಅಡಚಣೆ ಉಂಟು ಮಾಡುತ್ತದೆ.


    ದೇಹದ ರಕ್ತದಲ್ಲಿ ಎಷ್ಟು ಕೆಂಪು ರಕ್ತ ಕಣಗಳು ಇರಬೇಕು?


    ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಿರುವ ಕೆಂಪು ರಕ್ತ ಕಣಗಳ ಸಂಖ್ಯೆ ಯಾವಾಗಲೂ ಭಿನ್ನವಾಗಿರುತ್ತದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಪುರುಷರು ಒಂದು ಮೈಕ್ರೋಲೀಟರ್ ರಕ್ತಕ್ಕೆ 4.7 ರಿಂದ 6.1 ಮಿಲಿಯನ್, ಮಹಿಳೆಯರು 4.2 ರಿಂದ 5.4 ಮಿಲಿಯನ್, ಮಕ್ಕಳು 4.0 ರಿಂದ 5.5 ಮಿಲಿಯನ್  ಕೆಂಪು ರಕ್ತ ಕಣ ಹೊಂದಿರಬೇಕು ಎಂದು ಹೇಳಿದೆ.


    ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಿ ಇಳಿಕೆಯಾಗಲು ಕಾರಣವೇನು?


    ಮೂಳೆ ಮಜ್ಜೆಯೊಳಗೆ ಕೆಂಪು ರಕ್ತ ಕಣ ತಯಾರಾಗುತ್ತದೆ. ಇದು ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಹೊಂದಿರುತ್ತದೆ. ಈ ಪ್ರೋಟೀನ್ ಬೇರೆ ಅಂಗಗಳಿಗೆ ಆಮ್ಲಜನಕ ಮತ್ತು ಪೋಷಣೆ ನೀಡುತ್ತದೆ. ರಕ್ತಹೀನತೆ, ರಕ್ತದ ನಷ್ಟ, ರಕ್ತದ ಕ್ಯಾನ್ಸರ್, ಮೂಳೆ ಮಜ್ಜೆಯ ಅಸ್ವಸ್ಥತೆ, ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳು ದೇಹದಲ್ಲಿ ಕೆಂಪು ರಕ್ತ ಕಣ ರೂಪುಗೊಳ್ಳುವಿಕೆಗೆ ತಡೆ ಒಡ್ಡುತ್ತದೆ.




    ಜೊತೆಗೆ ಯಾರ ದೇಹದಲ್ಲಿ ಕಬ್ಬಿಣ, ವಿಟಮಿನ್ ಬಿ 9, ವಿಟಮಿನ್ ಬಿ 12 ಕೊರತೆ ಇರುತ್ತದೆಯೋ ಅವರು ಕೆಂಪು ರಕ್ತ ಕಣಗಳ ಸಂಖ್ಯೆ ಕೊರತೆ ಉಂಟಾಗುತ್ತದೆ.


    ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾದಾಗ ಯಾವ ರೋಗ ಲಕ್ಷಣಗಳು ಕಾಣಿಸುತ್ತವೆ?


    ಆಯಾಸ, ತಲೆಸುತ್ತು, ತೆಳುವಾದ ದೇಹ, ದೌರ್ಬಲ್ಯ, ಹೃದಯ ಬಡಿತ ಹೆಚ್ಚಾಗುವಿಕೆ, ದೃಷ್ಟಿ ನಷ್ಟ  ಇತ್ಯಾದಿ ಸಮಸ್ಯೆ ಕಾಡುತ್ತವೆ.


    ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಕಬ್ಬಿಣ ಸಮೃದ್ಧ ಆಹಾರ ಸೇವಿಸಿ


    ಕಬ್ಬಿಣ ಅಂಶ ಸಮೃದ್ಧ ಆಹಾರ ಸೇವಿಸಿ. ಬೀಜಗಳು, ಬೀನ್ಸ್, ಒಣದ್ರಾಕ್ಷಿ, ಮಸೂರ, ಸಮುದ್ರಾಹಾರ, ಚಿಕನ್ ಇತ್ಯಾದಿ ಸೇವನೆ ಕಬ್ಬಿಣ ನೀಡುತ್ತದೆ.


    ತಾಮ್ರ ಪದಾರ್ಥ ತೆಗೆದುಕೊಳ್ಳಿ


    ಕಬ್ಬಿಣ ಬಳಸಲು ದೇಹಕ್ಕೆ ತಾಮ್ರದ ಅಗತ್ಯವಿದೆ. ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಕಬ್ಬಿಣದ ಜೊತೆಗೆ ತಾಮ್ರ ಸಮೃದ್ಧ ಆಹಾರ ಸೇವಿಸುವುದು ಅವಶ್ಯಕ. ಚಿಪ್ಪುಮೀನು, ಧಾನ್ಯಗಳು, ಬೀಜಗಳು, ಚಾಕೊಲೇಟ್, ಪ್ರಾಣಿಗಳ ಯಕೃತ್ತು ತಾಮ್ರ ನೀಡುತ್ತದೆ.


    ವಿಟಮಿನ್ ಬಿ 12


    ಕೆಂಪು ರಕ್ತ ಕಣ ಹೆಚ್ಚಿಸಲು ವಿಟಮಿನ್ ಬಿ 12 ಸಮೃದ್ಧ ಮಾಂಸ, ಕೋಳಿ, ಮೀನು, ಹಾಲು, ಚೀಸ್, ಮೊಟ್ಟೆ ಮತ್ತು ಬಲವರ್ಧಿತ ಆಹಾರ ಸೇವಿಸಿ.


    ವಿಟಮಿನ್ ಎ


    ವಿಟಮಿನ್ ಎ ಸಮೃದ್ಧ ಮೀನು, ಮೊಟ್ಟೆ, ಪ್ರಾಣಿಗಳ ಯಕೃತ್ತು, ಡೈರಿ ಉತ್ಪನ್ನಗಳು, ಹಸಿರು-ಎಲೆ ತರಕಾರಿಗಳು, ಕೆಂಪು ಮತ್ತು ಹಳದಿ ತರಕಾರಿ, ಟೊಮೆಟೊ ಆರ್ ಬಿಸಿ ಹೆಚ್ಚಿಸುತ್ತದೆ.


    ಫೋಲಿಕ್ ಆಮ್ಲ


    ವಿಟಮಿನ್ ಬಿ 9 ಅನ್ನು ಫೋಲಿಕ್ ಆಮ್ಲವೆನ್ನುತ್ತಾರೆ. ಪಾಲಕ, ಪ್ರಾಣಿಗಳ ಯಕೃತ್ತು, ಕಡಲೆಕಾಯಿ, ಸೂರ್ಯಕಾಂತಿ ಬೀಜ ಸೇವಿಸಿ.


    ಇದನ್ನೂ ಓದಿ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಬೆಸ್ಟ್ ಆಹಾರಗಳು


    ಆಹಾರದಿಂದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಆಗದಿದ್ದರೆ ವೈದ್ಯರ ಸೂಚನೆ ಮೇರೆಗೆ ಪೂರಕಗಳ ಸೇವನೆ ಮಾಡಬಹುದು.

    Published by:renukadariyannavar
    First published: