Remedies for PCOS: ಪಿಸಿಓಎಸ್​ ಸಮಸ್ಯೆಗೆ ಈ ಆಹಾರದಲ್ಲಿದೆ ಪರಿಹಾರ, ಇಲ್ಲಿದೆ ಲಿಸ್ಟ್​

Remedies for PCOS: ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿದ್ದರೂ ಸಾಕಾಗುವುದಿಲ್ಲ. ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಋತುಸ್ರಾವದ ದಿನಗಳು ಹೆಚ್ಚಾಗಿ ಏರುಪೇರಾಗುತ್ತಿದೆ. ಇದನ್ನು ವೈದ್ಯರಲ್ಲಿ ಹೇಳಲು ಹಿಂಜರಿದು ಮುಂದೆ ಇನ್ನೂ ಅನೇಕ ರೋಗ ರುಜಿನಗಳಿಗೆ ಭಾಗಿಯಾಗುತ್ತಾರೆ. ಹಾಗಾಗಿ ಆರೋಗ್ಯದ ಬಗೆಗಿನ ಕಾಳಜಿ ಬಹಳ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಣ್ಣು ಒಂದು ಅದ್ಭುತ ಮಾಯೆ. ಆಕೆಯ ವಯಸ್ಸು ಏರಿದಂತೆ ದೇಹದಲ್ಲಿ ಕೂಡ ನಾನಾ ರೀತಿಯ ಬದಲಾವಣೆಗಳು ಆಗುತ್ತದೆ. ಇದು ಪ್ರಕೃತಿಯ (Nature) ನಿಯಮ ಇದ್ದಂತೆ. ಆಕೆ ಸಣ್ಣ ವಯಸ್ಸನ್ನು ದಾಟಿದ ನಂತರ ಯೌವನದಿಂದ ವೃದ್ಧಾಪ್ಯದವರೆಗೂ ಹಲವಾರು ಬದಲಾವಣೆಗೆ ಒಳಗಾಗುತ್ತಾಳೆ. ಕಾರಣ ಆಕೆಯ ದೇಹದಲ್ಲಿ ಬದಲಾಗುವ ಹಾರ್ಮೋನ್ ಬದಲಾವಣೆ. ಆದರೆ ಅವುಗಳಲ್ಲಿ ಏನಾದರೂ ಬದಲಾವಣೆಗಳಾದರೆ ಒಂದರ ಹಿಂದೆ ಮತ್ತೊಂದು ಕಾಯಿಲೆಗಳು (Disease) ಆರಂಭವಾಗುತ್ತವೆ.  ಹೆಣ್ಣು ಎಷ್ಟು ಪ್ರಭಲವಾಗಿದ್ದಾಳೆಯೋ ಅಷ್ಟೇ ಸೂಕ್ಷ್ಮ ಕೂಡ.  ಈ ಸೆಪ್ಟೆಂಬರ್ ತಿಂಗಳನ್ನು ಇಂತಹ ಬಾಧೆಗಳ ಬಗ್ಗೆ ಜಾಗೃತಿ ವಹಿಸುವ ತಿಂಗಳು ಎನ್ನಲಾಗುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು PCOD ( ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ) ಮತ್ತು PCOS ಎಂಬ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಇರೆಗ್ಯುಲರ್ ಪಿರಿಯಡ್ಸ್, ಬಂಜೆತನ ಹೀಗೆ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದರ ಬಗ್ಗೆ ಜಾಗೃತಿವಹಿಸುವ ಕಾರ್ಯಕ್ರಮಗಳು ಸಾಕಷ್ಟು ಆಗಬೇಕಾಗಿವೆ. ಸೆಪ್ಟೆಂಬರ್ ತಿಂಗಳನ್ನು ಪಿಸಿಓಎಸ್ ಜಾಗೃತಿ ತಿಂಗಳೆಂದು ಗುರುತಿಸಲಾಗಿದೆ. ಪ್ರತಿ ಮಹಿಳೆಯರು ತಿಳಿದಿರಲೇಬೇಕಾದಂಥಹ ವಿಷಯಗಳಿವು. ಹೀಗಾಗಿಯೇ ಹದಿಹರೆಯದ ವಯಸ್ಸಿಗೆ ಬಂದಾಗ ಆಯಾ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಇದರ ಬಗ್ಗೆ ಜಾಗೃತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

PCOS ಅನ್ನು ಅನುಭವಿಸುತ್ತಿರುವ ಹೆಣ್ಣು ಮಕ್ಕಳು ಇದನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಇದರಿಂದ ಮುಂದಿನ ದಿನಗಳಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಅರಿವು ಅತ್ಯಗತ್ಯ. ಹಲವಾರು ಚಿಕಿತ್ಸೆಗಳಿರುತ್ತವೆ ಆದರೆ ಅದನ್ನು ಬಳಸಿಕೊಳ್ಳಲು ಹಿಂಜರಿಯುವವರೇ ಹೆಚ್ಚು. ಕೇವಲ ಬಂಜೆತನ ಮಾತ್ರವಲ್ಲದೇ ಗಂಭೀರ ಆರೋಗ್ಯ ತೊಡಕುಗಳನ್ನು ಉಂಟುಮಾಡಬಹುದು.

ಉದಾಹರಣೆಗೆ, ಬೊಜ್ಜು, ಮಧುಮೇಹ, ಹೃದಯರಕ್ತನಾಳದ ಕಾಯಿಲೆ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್​ಗಳಂತ ರೋಗಗಳಿಗೆ ತುತ್ತಾಗಬಹುದು. ಹಾಗಾಗಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ತಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ವೈದ್ಯರಲ್ಲಿ ತೆರಳಲೇ ಬೇಕು. ಮತ್ತು ಮುಕ್ತವಾಗಿ ಪ್ರತಿಯೊಂದು ವಿಷಯಗಳನ್ನು ಹಂಚಿಕೊಳ್ಳಬೇಕು.

ಇದನ್ನೂ ಓದಿ : Unique Vegetables: ಬ್ಲ್ಯಾಕ್ ರಾಡಿಶ್, ರೊಮಾನೆಸ್ಕೊ! ಇವೆಲ್ಲ ವಿಶಿಷ್ಟ ಹಣ್ಣು, ತರಕಾರಿಗಳಂತೆ ಕಣ್ರೀ!

ವೈದ್ಯರ ಸಲಹೆಯ ಪ್ರಕಾರ

ಗುರುಗ್ರಾಮನ್​ನ ಫೋರ್ಟಿಸ್ ಮೆಮೋರಯಲ್ ರಿಸರ್ಚ್​ ಇನ್​ಸ್ಟಿಟ್ಯೂಟ್​ನ  ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ.ದೀಪ್ತಿ ಅಸ್ಥಾನಾ ಅವರ ಪ್ರಕಾರ, ಪಿಸಿಓಎಸ್ ಅತ್ಯಂತ ಪ್ರಭಾವಶಾಲಿಯಾದ ಕಾಯಿಲೆ. ಹೆಣ್ಣು ಮಕ್ಕಳು ಅವರಿಗೆ ದೇಹದಲ್ಲಿ ಆಗುವ ನಕರಾತ್ಮಕ ಬದಲಾವಣೆಗಳು ಕಂಡಾಗ ಕೂಡಲೇ ವೈದ್ಯರ ಸಲಹೆ ಪಡೆಯುವುದರಿಂದ ಇದನ್ನು ತಡೆಯಬಹುದು.
ಪ್ರತಿ ದಿನ ವ್ಯಾಯಾಮ ಮಾಡುವುದು, ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದು, ಜೀರಿಗೆ ಕಷಾಯ ಕುಡಿಯುವುದು ಮತ್ತು ಪಿರಿಯಡ್ಸ್ ಆಗದೇ ಇದ್ದಲ್ಲಿ ಶುಂಠಿ ಕಷಾಯ ಕುಡಿಯುವುದು ಈ ರೀತಿಯ ಕ್ರಮಗಳನ್ನು ಪಾಲಿಸಿದರೆ PCOS ನಂತಹ ಕಾಯಿಲೆಯಿಂದ ಪಾರಾಗಬಹುದು.

ಸೇವಿಸುವ ಆಹಾರ ಅತ್ಯಗತ್ಯ

ಈಗಾಗಲೇ ಹೇಳಿದ ಹಾಗೆ ಆಹಾರ ಕ್ರಮವು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಎಷ್ಟು ಜಾಗರೂಕತೆ ವಹಿಸಿದರೂ ಸಾಲದು. ಈ ಸೆಪ್ಟೆಂಬರ್ ತಿಂಗಳಲ್ಲಿ ಕೆಲವೊಂದಷ್ಟು ಹಣ್ಣುಗಳು, ತರಕಾರಿಗಳು ವಿಶೇಷವಾಗಿ ಫಲವನ್ನು ನೀಡುತ್ತದೆ ಎಂಬುದು ವಾಡಿಕೆ. ಹಳ್ಳಿಗಳಲ್ಲಿ ಮುಟ್ಟಾದವರಿಗೆ ಗದ್ದೆಯಿಂದ ಈ ಹಣ್ಣು, ತರಕಾರಿಗಳನ್ನು ತಂದು ತಿನ್ನಿಸುತ್ತಾರೆ. ಅದೇ ರೀತಿಯಾಗಿ ಹಳಸಿದ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಹೆಚ್ಚು ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಾಂಶವನ್ನು ನೀಡುವಂತಹ ಆಹಾರ ಸೇವನೆಯನ್ನು ಮಾಡಬಾರದು.

ಉಪ್ಪು, ಸಕ್ಕರೆ ಮತ್ತು ಖಾರವು ಇತಿಮಿತಿಯಾಗಿರಬೇಕು. ಇರೆಗ್ಯುಲರ್ ಪಿರಿಯಡ್ಸ್ ಇದ್ದಲ್ಲಿ ಪಪ್ಪಾಯಿ ಮತ್ತು ಶುಂಠಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.

ಇದನ್ನೂ ಓದಿ: Parking Spot: ಈ ದೇಶದಲ್ಲಿ ಮಹಿಳೆಯರಿಗಾಗಿ ಇದೆ ವಿಶೇಷ ಪಾರ್ಕಿಂಗ್ ಸ್ಪಾಟ್! ಹೇಗಿದೆ ಅಂತ ನೋಡಿ

ಹೀಗೆ ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸುವುದರಿಂದ PCOS ಗಳಂತ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು.
First published: