ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ (Junk Food) ಸೇವನೆಯಿಂದಾಗಿ ಜೀರ್ಣಾಂಗ ವ್ಯವಸ್ಥೆ (Digestive System) ಬೇಗ ಹಾಳಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ಹದಗೆಟ್ಟರೆ ವಿವಿಧ ಆರೋಗ್ಯ ಸಮಸ್ಯೆಗಳು (Health Problems) ಹುಟ್ಟಿಕೊಳ್ಳುತ್ತವೆ. ಹಾಗಾಗಿ ಆಹಾರ ಸೇವನೆಯ ವೇಳೆ ಜಾಗ್ರತೆ ವಹಿಸುವುದು ಮುಖ್ಯ. ಉತ್ತಮ ಆಹಾರ ಸೇವನೆಯು ಇನ್ನೂ ಮುಖ್ಯವಾಗಿದೆ. ಇದು ಆರೋಗ್ಯದ ಮೇಲೆ ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಕರಿದ ಪದಾರ್ಥಗಳು, ಸಕ್ಕರೆಯುಕ್ತ ಪಾನೀಯಗಳ ಸೇವನೆಯು ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆ ಹಾಳು ಮಾಡುತ್ತದೆ. ಇದು ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಮಲಬದ್ಧತೆ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೊಟ್ಟೆಯುಬ್ಬರ, ಗ್ಯಾಸ್, ಆಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ.
ಆಹಾರ ಸೇವಿಸುವಾಗ ಸಂಯೋಜನೆಯ ಬಗ್ಗೆ ಇರಲಿ ಕಾಳಜಿ
ಯಾವಾಗ ಬೇಕೋ ಆಗ, ಹೇಗೇ ಬೇಕೋ ಹಾಗೇ ಆಹಾರ ಸೇವನೆ ಮಾಡಿದರೆ ಆರೋಗ್ಯ ಬೇಗ ಹಾಳಾಗುತ್ತದೆ. ಹಾಗಾಗಿ ಕುಡಿಯುವ ಮತ್ತು ತಿನ್ನುವ ಪದಾರ್ಥಗಳ ಬಗ್ಗೆ ಹೆಚ್ಚಿನ ಕಾಳಜಿ ಮುಖ್ಯ. ಇಲ್ಲದಿದ್ದರೆ ಆರೋಗ್ಯ ಕೆಡುತ್ತದೆ. ಇದು ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಉಂಟು ಮಾಡುತ್ತದೆ. ಇದಕ್ಕೆ ದೊಡ್ಡ ಕಾರಣ ಕೆಟ್ಟ ಆಹಾರ ಪದ್ಧತಿಯಾಗಿದೆ.
ಹಾಗಾಗಿ ಉತ್ತಮ ಆರೋಗ್ಯ ಹೊಂದಲು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಕೆಲವೊಮ್ಮೆ ಆರೋಗ್ಯಕರ ಆಹಾರ ಸೇವನೆಯ ನಂತರವೂ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ನಿಮ್ಮ ಆಹಾರ ಸಂಯೋಜನೆಯು ಕಾರಣವಾಗಿರುತ್ತದೆ. ಆದ್ದರಿಂದ ಆಹಾರ ಸಮಯೋಜನೆಯ ಬಗ್ಗೆ ತಿಳಿಯುವುದು ಮುಖ್ಯ.
ಇಲ್ಲಿ ನಾವು ಯಾವ ಆಹಾರ ಸಂಯೋಜನೆಯು ಹೊಟ್ಟೆ ಸಮಸ್ಯೆ ಉಂಟು ಮಾಡುತ್ತದೆ, ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಹೊಟ್ಟೆಯುಬ್ಬರ, ಆಮ್ಲೀಯತೆ ಮತ್ತು ಹೊಟ್ಟೆ ನೋವನ್ನು ಉಂಟು ಮಾಡುತ್ತದೆ ಎಂಬ ಬಗ್ಗೆ ನೋಡೋಣ.
ಯಾವ ಆಹಾರ ಸಂಯೋಜನೆಯು ಹೊಟ್ಟೆ ಸಮಸ್ಯೆ ಉಂಟು ಮಾಡುತ್ತದೆ
ಹಣ್ಣು ಮತ್ತು ಡೈರಿ ಉತ್ಪನ್ನಗಳ ಸಂಯೋಜನೆ
ಪ್ರಾಣಿ ಪ್ರೋಟೀನ್ಗಳು ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳಲ್ಲಿವೆ. ಆಗ ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳ ಸಂಯೋಜನೆ ಮಾಡುದರೆ, ಇದು ಹೊಟ್ಟೆಯಲ್ಲಿ ಹುದುಗುವಿಕೆ ಸಮಸ್ಯೆ ಉಂಟು ಮಾಡುತ್ತದೆ. ಇದು ಹೊಟ್ಟೆಯುಬ್ಬರ, ಅಸಿಡಿಟಿ ಮತ್ತು ಇತರ ಹೊಟ್ಟೆಯ ಸಮಸ್ಯೆ ಉಂಟು ಮಾಡುತ್ತದೆ.
ಸಾಮಾನ್ಯವಾಗಿ ಜನರು ಮೊಸರನ್ನು ಫ್ರೂಟ್ ಸಲಾಡ್ ನಲ್ಲಿ ತಿನ್ನುತ್ತಾರೆ. ಜನರು ಹಣ್ಣು ಸ್ಮೂಥಿ ಮತ್ತು ಬೆಳಗಿನ ಉಪಾಹಾರದಲ್ಲಿ ಹಣ್ಣು ಮತ್ತು ಹಾಲಿನ ಸಂಯೋಜನೆ ಇಷ್ಟ ಪಡುತ್ತಾರೆ, ಆದರೆ ಇದನ್ನು ತಪ್ಪಿಸಿ.
ಮಾಂಸ ಮತ್ತು ಕಾರ್ಬೋಹೈಡ್ರೇಟ್ ಗಳ ಸಂಯೋಜನೆ
ಪ್ರಾಣಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಸಂಯೋಜನೆಯು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಲ್ಲ. ಪ್ರಾಣಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಜೀರ್ಣಿಸಿಕೊಳ್ಳಲು ಎರಡು ವಿಭಿನ್ನ ಕಿಣ್ವಗಳಿವೆ. ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ಅಜೀರ್ಣ, ಆಮ್ಲೀಯತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆ ಹೆಚ್ಚಿಸುತ್ತದೆ.
ಆಹಾರ ಮತ್ತು ಪಾನೀಯ
ನೀರು, ಕಾಫಿ, ಟೀ, ತಂಪು ಪಾನೀಯಗಳಂತಹ ಯಾವುದೇ ಪಾನೀಯವನ್ನು ತಿನ್ನುವಾಗ ಅಥವಾ ತಿಂದ ತಕ್ಷಣ ಆಹಾರ ಸೇವಿಸುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ದುರ್ಬಲಗೊಳಿಸುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕಲ್ಲಂಗಡಿ ಮತ್ತು ಇತರೆ ಹಣ್ಣುಗಳ ಸಂಯೋಜನೆ
ಎಲ್ಲಾ ಹಣ್ಣುಗಳಿಗಿಂತ ಹಲಸಿನ ಹಣ್ಣು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬೇರೆ ಹಣ್ಣುಗಳ ಜೊತೆ ಹಲಸು ಸೇವನೆ ಅಸಿಡಿಟಿ, ಅಜೀರ್ಣ, ಉಬ್ಬುವಿಕೆಗೆ ಕಾರಣವಾಗುತ್ತದೆ. ಹಲಸಿನ ಜೊತೆ ಕಲ್ಲಂಗಡಿ ತಿನ್ನಬೇಡಿ. ಮತ್ತು ಹಣ್ಣು ಸಲಾಡ್ನಲ್ಲಿ ಬಳಸಬೇಡಿ. ಕಲ್ಲಂಗಡಿ ಮತ್ತು ಇತರ ಆಹಾರ ಪದಾರ್ಥಗಳ ನಡುವೆ ಅರ್ಧ ಗಂಟೆ ಅಂತರವಿರಲಿ.
ಹಣ್ಣುಗಳು ಮತ್ತು ಕಾರ್ಬೋಹೈಡ್ರೇಟ್ ಸಂಯೋಜನೆ
ಕಾರ್ಬ್ ಭರಿತ ಆಹಾರಕ್ಕಿಂತ ಹಣ್ಣುಗಳು ವೇಗವಾಗಿ ಮತ್ತು ಸುಲಭವಾಗಿ ಜೀರ್ಣವಾಗುತ್ತವೆ. ಆಹಾರಗಳ ಜೀರ್ಣಕ್ರಿಯೆಯ ಪ್ರಕ್ರಿಯೆ ವ್ಯತ್ಯಾಸವು ಆಮ್ಲೀಯತೆ, ಅಜೀರ್ಣ, ಉಬ್ಬುವುದು ಮತ್ತು ಹೊಟ್ಟೆ ನೋವು ಉಂಟು ಮಾಡುತ್ತದೆ.
ಇದನ್ನೂ ಓದಿ: ಈ ಸ್ಪೆಷಲ್ ಟೀ ಕುಡಿದ್ರೆ ಒಂದು ತಿಂಗಳಿನಲ್ಲಿಯೇ ಸಣ್ಣ ಆಗ್ತೀರಾ; ನೆನಪಿನ ಶಕ್ತಿಯೂ ಹೆಚ್ಚಾಗುತ್ತೆ
ಚೀಸ್ ಮತ್ತು ತಂಪು ಪಾನೀಯ ಸಮಯೋಜನೆ
ಚೀಸ್ ಮತ್ತು ತಂಪು ಪಾನೀಯ ಸಂಯೋಜನೆ ಟೇಸ್ಟಿಯಾಗಿರುತ್ತದೆ. ಆದರೆ ಇದು ಆರೋಗ್ಯ ಕೆಡಿಸುತ್ತದೆ. ಈ ಸಂಯೋಜನೆಯು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ನಿಮಗೆ ವಿವಿಧ ಜೀರ್ಣಕಾರಿ ಸಮಸ್ಯೆ ತಂದೊಡ್ಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ