Cancer And Health: ಈ ಕೆಲವು ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ!

ಕ್ಯಾನ್ಸರ್ ರೋಗವನ್ನು ಸಕಾಲದಲ್ಲಿ ಪತ್ತೆ ಹಚ್ಚಿದರೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದು. ವಿಶ್ವ ಕ್ಯಾನ್ಸರ್ ಸಂಶೋಧನೆಯ ಪ್ರಕಾರ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಲವು ಸಂಗತಿಗಳಿವೆ. ಆ ಅಭ್ಯಾಸಗಳನ್ನು ನಿಲ್ಲಿಸಿದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಲವು ರೋಗಗಳಿವೆ (Disease). ಕೆಲವು ರೋಗಗಳಿಗೆ ಯಾವುದೇ ರೀತಿಯ ಮದ್ದು (Medicine) ಇಲ್ಲ. ಅಂತಹ ರೋಗಗಳು ದೇಹಕ್ಕೆ (Body) ಅಂಟಿಕೊಂಡರೆ ಸಾಕಷ್ಟು ಬಾಧಿಸುತ್ತವೆ. ಜೊತೆಗೆ ಮಾರಣಾಂತಿಕವೂ (Deadly) ಆಗಿರುತ್ತದೆ. ಅದರಲ್ಲಿ ಕ್ಯಾನ್ಸರ್ (Cancer) ಒಂದು ಮಾರಣಾಂತಿಕ ಕಾಯಿಲೆ ಆಗಿದೆ. ಕ್ಯಾನ್ಸರ್ ನಲ್ಲಿ ಹಲವು ತರಹದ ಕ್ಯಾನ್ಸರ್ ಗಳಿವೆ. ಕ್ಯಾನ್ಸರ್ ಕಾಯಿಲೆಗೂ ಸಹ ಶಾಶ್ವತವಾದ ಚಿಕಿತ್ಸೆ ಇಲ್ಲ. ಪ್ರಪಂಚದಾದ್ಯಂತ ಕ್ಯಾನ್ಸರ್ನಿಂದ ಪ್ರತಿ ವರ್ಷ ಲಕ್ಷಾಂತರ ಜನರು ಮೃತಪಡುತ್ತಾರೆ. ಈ ಮಾರಣಾಂತಿಕ ಕಾಯಿಲೆಯಿಂದಾಗಿ, ದೇಹದ ಜೀವಕೋಶಗಳು ನಾಶವಾಗಲು ಪ್ರಾರಂಭ ಆಗುತ್ತವೆ. ಮತ್ತು ನಂತರ ಕ್ರಮೇಣ ದೇಹದ ಭಾಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

  ಕ್ಯಾನ್ಸರ್ ಅಪಾಯ ಹೆಚ್ಚಿಸುವ ಅಂಶಗಳು

  ಕ್ಯಾನ್ಸರ್ ರೋಗವನ್ನು ಸಕಾಲದಲ್ಲಿ ಪತ್ತೆ ಹಚ್ಚಿದರೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದು. ವಿಶ್ವ ಕ್ಯಾನ್ಸರ್ ಸಂಶೋಧನೆಯ ಪ್ರಕಾರ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಲವು ಸಂಗತಿಗಳಿವೆ. ಆ ಅಭ್ಯಾಸಗಳನ್ನು ನಿಲ್ಲಿಸಿದರೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

  ಕರಿದ ಆಹಾರ, ಅತಿಯಾಗಿ ಬೇಯಿಸಿದ ಆಹಾರ, ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಂಸ್ಕರಿಸಿದ ಮಾಂಸವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಅನಾರೋಗ್ಯಕರ ಜೀವನಶೈಲಿ. ಹೌದು.. ನಿಮ್ಮ ಅನಾರೋಗ್ಯಕರ ಜೀವನಶೈಲಿಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇವುಗಳಲ್ಲದೇ ಒಂದು ಪಾನೀಯವೂ ಸಹ ಇದೆ.

  ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

  ಅದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಯುಕೆಯಲ್ಲಿಯೂ ಈ ಪಾನೀಯವು ಕ್ಯಾನ್ಸರ್ ಅನ್ನು ಉತ್ತೇಜಿಸುತ್ತದೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಅದು ಯಾವ ಪಾನೀಯ? ಆರೋಗ್ಯ ಅನಾನುಕೂಲತೆಗಳ ಬಗ್ಗೆ ತಿಳಿಯೋಣ.

  ಕ್ಯಾನ್ಸರ್ ಅಪಾಯ ಹೆಚ್ಚಿಸುವ ಪಾನೀಯ ಯಾವುದು?

  Express.co.uk ಪ್ರಕಾರ, ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವ ಪಾನೀಯವೆಂದರೆ 'ಮದ್ಯ'. ಮಾಹಿತಿಯ ಪ್ರಕಾರ, ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವುದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ಕ್ಯಾನ್ಸರ್ ರಿಸರ್ಚ್ ನಲ್ಲಿ ತಿಳಿದು ಬಂದಿದೆ.

  UK ಯಲ್ಲೂ, ಈ ಪಾನೀಯದಿಂದ ಕ್ಯಾನ್ಸರ್ ಅಪಾಯವು ಗಣನೀಯವಾಗಿ ಹೆಚ್ಚಿದೆ. ಹಾಗಾಗಿ ಕಡಿಮೆ ಆಲ್ಕೋಹಾಲ್ ಸೇವಿಸಲು ಮತ್ತು ಮಿತಿಗಿಂತ ಹೆಚ್ಚು ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆ ಮಾಡಲು ಸಲಹೆ ನೀಡಲಾಗಿದೆ.

  ಭಾರತದಲ್ಲಿ ಆಲ್ಕೋಹಾಲ್ ಸೇವನೆ

  ಮಾರ್ಚ್ 2022 ರಲ್ಲಿ ಸ್ಟ್ಯಾಟಿಸ್ಟಾ ರಿಸರ್ಚ್ ಡಿಪಾರ್ಟ್ಮೆಂಟ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ, 2020 ರಲ್ಲಿ ಭಾರತದಲ್ಲಿ ಆಲ್ಕೋಹಾಲ್ ಸೇವನೆಯು ಸುಮಾರು ಐದು ಶತಕೋಟಿ ಲೀಟರ್ಗಳಷ್ಟಿತ್ತು. ಮತ್ತು 2024 ರ ವೇಳೆಗೆ ಈ ಅಂಕಿ ಅಂಶವು ಸುಮಾರು 6.21 ಶತಕೋಟಿ ಲೀಟರ್ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

  ಭಾರತದ ಮದ್ಯದ ಮಾರುಕಟ್ಟೆಯು ಎರಡು ಮುಖ್ಯ ವಿಧದ ಮದ್ಯವನ್ನು ಒಳಗೊಂಡಿದೆ. ಭಾರತೀಯ ಮೇಡ್ ಇನ್ ಇಂಡಿಯಾ ಲಿಕ್ಕರ್ (IMIL) ಮತ್ತು ಮೇಡ್ ಇನ್ ಇಂಡಿಯಾ ಫಾರಿನ್ ಲಿಕ್ಕರ್ (IMFL) ಅವುಗಳೆಂದರೆ: ಬಿಯರ್, ವೈನ್ ಇತ್ಯಾದಿ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ.

  ಯುನೈಟೆಡ್ ಸ್ಟೇಟ್ಸ್‌ನಂತಹ ಇತರ ದೇಶಗಳಿಗಿಂತ ಭಾರತದಲ್ಲಿ ವಯಸ್ಕರರು ಸರಾಸರಿ ಆಲ್ಕೋಹಾಲ್ ಸೇವನೆ ಕಡಿಮೆ ಹೊಂದಿದೆ. ಆದರೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಮದ್ಯ ಸೇವಿಸುತ್ತಾರೆ. ಸಂಶೋಧನೆಯ ಪ್ರಕಾರ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯರಲ್ಲಿ ಶೇಕಡಾ 88 ಕ್ಕಿಂತ ಹೆಚ್ಚು ಜನರು ವಯಸ್ಸಿನ ಹೊರತಾಗಿಯೂ ಮದ್ಯ ಸೇವಿಸುತ್ತಾರೆ. ದೇಶಾದ್ಯಂತ ಕೆಲವು ರಾಜ್ಯಗಳಲ್ಲಿ ಮದ್ಯಪಾನ ನಿಷೇಧದ ಹೊರತಾಗಿಯೂ ಈ ಅಂಕಿ ಅಂಶ ಕಂಡು ಬಂದಿದೆ.

  ಆಲ್ಕೋಹಾಲ್ ಸೇವನೆ ಕ್ಯಾನ್ಸರ್ಗೆ ಕಾರಣ

  ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಕೆಂಪು ವೈನ್, ವೈಟ್ ವೈನ್, ಬಿಯರ್ ಮತ್ತು ಮದ್ಯ ಸೇರಿದಂತೆ ಎಲ್ಲಾ ಆಲ್ಕೊಹಾಲ್ಯುಕ್ತ ಪಾನೀಯಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತವೆ. ಜನರು ಹೆಚ್ಚು ಆಲ್ಕೊಹಾಲ್ಯುಕ್ತ ಪಾನೀಯ ಸೇವಿಸಿದರೆ, ಅವರ ಕ್ಯಾನ್ಸರ್ ಅಪಾಯವು ಹೆಚ್ಚುತ್ತದೆ.

  ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

  ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಕ್ಯಾನ್ಸರ್‌ನಲ್ಲಿ ಪ್ರಕಟವಾದ ಬೀಜಿಂಗ್‌ನ ಆಕ್ಸ್‌ಫರ್ಡ್ ಪಾಪ್ಯುಲೇಶನ್ ಹೆಲ್ತ್, ಪೀಕಿಂಗ್ ವಿಶ್ವವಿದ್ಯಾಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ ಸಂಶೋಧಕರು ನಡೆಸಿದ ಸಂಶೋಧನೆಯು ಆಲ್ಕೋಹಾಲ್ ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ ಎಂದು ಹೇಳಿದೆ.
  Published by:renukadariyannavar
  First published: