Face Care: ರಾಖಿ ಹಬ್ಬಕ್ಕೆ ಕಾಂತಿಯುತ ಚರ್ಮದಿಂದ ಕಂಗೊಳಿಸಲು ಈ ಫೇಸ್​​ಪ್ಯಾಕ್ ಮಾಡಿ ರೆಡಿಯಾಗಿ

ನಟಿ ತೇಜಸ್ವಿ ಅವರು ತನ್ನ ಮುಖದ ಮೇಕಪ್ ತೆಗೆಯಲು ಮೊದಲು ಆಲಿವ್ ಮತ್ತು ಕ್ಯಾಸ್ಟರ್ ಆಯಿಲ್ ಬಳಸುತ್ತಾರೆ. ಈ ಎರಡು ಎಣ್ಣೆಗಳನ್ನು ಮಿಶ್ರಣ ಮಾಡಿ. ನಂತರ ಬೆರಳುಗಳ ಸಹಾಯದಿಂದ ಮುಖದ ತುಂಬೆಲ್ಲಾ ಅನ್ವಯಿಸಿ. ಚೆನ್ನಾಗಿ ಮಸಾಜ್ ಮಾಡಿ.

ನಟಿ ತೇಜಸ್ವಿ ಪ್ರಕಾಶ್

ನಟಿ ತೇಜಸ್ವಿ ಪ್ರಕಾಶ್

  • Share this:
    ರಾಖಿ ಹಬ್ಬಕ್ಕೆ (Rakhi Festival) ನಿಮ್ಮ ಮುಖವು (Face) ನಯವಾಗಿ, ಹೊಳೆಯುವಂತೆ (Brighten) ಕಾಣಿಸಬೇಕೆಂದರೆ ಅದಕ್ಕಾಗಿ ಕೆಲವು ಫೇಸ್ ಪ್ಯಾಕ್ (Face Pack) ಮಾಡುವ ಅನಿವಾರ್ಯತೆ ಇದೆ. ಆದರೆ ಕೆಲವರು ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕೆಲವು ರಸಾಯನಿಕ ಕ್ರೀಂಗಳನ್ನು ಖರೀದಿ ಮಾಡಿ, ಅವುಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಮನೆಯಲ್ಲಿ ಸೌಂದರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ನೀವು ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಜೊತೆಗೆ ಇದರಲ್ಲಿ ನಿಮಗೆ ಕಡಿಮೆ ಸಮಯ ತಗುಲುತ್ತದೆ. ಆದರೆ ಅದರ ಫಲಿತಾಂಶ ತುಂಬಾ ಉತ್ತಮ ಆಗಿರುವುದಿಲ್ಲ. ಖ್ಯಾತ ನಟಿ ತೇಜಸ್ವಿ ಪ್ರಕಾಶ್ ಕೂಡ ತಮ್ಮ ಸೌಂದರ್ಯ ಹೆಚ್ಚಳದ ಬಗ್ಗೆ ತಿಳಿಸಿದ್ದಾರೆ.

    ವಾಸ್ತವದಲ್ಲಿ ಹೇಳುವುದಾದರೆ DIY ಫೇಶಿಯಲ್ ಪ್ಯಾಕ್ ಬಗ್ಗೆ ಸಂಪೂರ್ಣ ವಿಧಾನವನ್ನು ನಟಿ ತೇಜಸ್ವಿ ಪ್ರಕಾಶ್ ಸ್ವತಃ ತನ್ನ ಸಾಮಾಜಿಕ ಮಾಧ್ಯಮ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೇಳಲಾಗಿರುವ ವಿಧಾನಗಳನ್ನು ಯಾರು ಬೇಕಾದರೂ ಆರಾಮವಾಗಿ ಫಾಲೋ ಮಾಡಬಹುದು. ಸುಲಭವಾಗಿ ಬೇಳೆ ಹಿಟ್ಟಿನ ಫೇಶಿಯಲ್ ಮಾಡುವುದು ಹೇಗೆ ಎಂದು ಹೇಳಿದ್ದಾರೆ.

    ಮೇಕಪ್ ತೆಗೆಯುವುದು ಹೇಗೆ?

    ನಟಿ ತೇಜಸ್ವಿ ಅವರು, ತನ್ನ ಮುಖದ ಮೇಕಪ್ ತೆಗೆಯಲು ಮೊದಲು ಆಲಿವ್ ಮತ್ತು ಕ್ಯಾಸ್ಟರ್ ಆಯಿಲ್ ಬಳಸುತ್ತಾರೆ. ಈ ಎರಡು ಎಣ್ಣೆಗಳನ್ನು ಮಿಶ್ರಣ ಮಾಡಿ. ನಂತರ ಬೆರಳುಗಳ ಸಹಾಯದಿಂದ ಮುಖದ ತುಂಬೆಲ್ಲಾ ಅನ್ವಯಿಸಿ. ಚೆನ್ನಾಗಿ ಮಸಾಜ್ ಮಾಡಿ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ನಂತರ ಟಿಶ್ಯು ಮೂಲಕ ಮುಖದ ಎಣ್ಣೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಮೇಕಪ್ ತೆಗೆಯುವ ಈ ನೈಸರ್ಗಿಕ ವಿಧಾನವು ಒಂದು ಕಡೆ ಮುಖವನ್ನು ಚೆನ್ನಾಗಿ ಸ್ವಚ್ಛ ಮಾಡುತ್ತದೆ. ಮತ್ತೊಂದೆಡೆ ಚರ್ಮದ ಹೊಳಪನ್ನು ಸಹ ಕಾಪಾಡುತ್ತದೆ ಎನ್ನುತ್ತಾರೆ ನಟಿ ತೇಜಸ್ವಿ.

    ಸ್ಕ್ರಬ್ಬಿಂಗ್ ಮತ್ತು ಸ್ಟೀಮ್

    ಮುಖದ ಮೇಕಪ್ ರಿಮೂವ್ ಮಾಡಿ ನಂತರ ತೇಜಶ್ವಿ ಮುಚ್ಚಿ ಹೋಗಿರುವ ರಂಧ್ರಗಳನ್ನು ಸ್ವಚ್ಛ ಮಾಡುತ್ತಾರೆ. ಇದಕ್ಕಾಗಿ ಅವರು ಸ್ಕ್ರಬ್ಬಿಂಗ್ ಮಾಡುತ್ತಾರೆ. ಮನೆಯಲ್ಲಿ ಸ್ಕ್ರಬ್ ಮಾಡಲು ನಟಿ ತೇಜಸ್ವಿ ಕಾಫಿ, ಸಕ್ಕರೆ ಮತ್ತು ತೆಂಗಿನ ಎಣ್ಣೆ ಮಿಶ್ರಣ ಮಾಡಿ.

    ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಈ ಸ್ಕ್ರಬ್ ನ್ನು ವೃತ್ತಾಕಾರದ ಚಲನೆಯಲ್ಲಿ ಮುಖದ ತುಂಬ ಮಸಾಜ್ ಮಾಡಿ. ಸ್ವಲ್ಪ ಸಮಯದವರೆಗೆ ಈ ಪ್ರಕ್ರಿಯೆ ನಂತರ, ಫೇಶಿಯಲ್ ವೈಪ್ ನಿಂದ ಮುಖ ಕ್ಲೀನ್ ಮಾಡಿ. ಮುಖವು ಸ್ವಚ್ಛವಾದ ನಂತರ ಮುಖಕ್ಕೆ ಹಬೆ ತೆಗೆದುಕೊಳ್ಳಿ.

    ಫೇಸ್ ಪ್ಯಾಕ್ ಮಾಡುವುದು ಹೇಗೆ?

    ನಂತರ ನಟಿ ತೇಜಸ್ವಿ ಪ್ರಕಾಶ್ ಅವರು ತಮ್ಮ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಮಾಡುವ ವಿಧಾನದ ಬಗ್ಗೆ ಹೇಳಿದ್ದಾರೆ. ಒಂದು ಬಟ್ಟಲಿನಲ್ಲಿ ಬೇಳೆ ಹಿಟ್ಟು ಮತ್ತು ಇನ್ನೊಂದರಲ್ಲಿ ತಾಜಾ ಮೊಸರು ತೆಗೆದುಕೊಳ್ಳಿ. ಈ ಎರಡನ್ನೂ ಚೆನ್ನಾಗಿ ಬೆರೆಸಿ ನಯವಾದ ಪೇಸ್ಟ್ ತಯಾರಿಸಿ.

    ಈ ಮಿಶ್ರಣವನ್ನು ಬ್ರಷ್‌ ಸಹಾಯದಿಂದ ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಫೇಸ್ ಪ್ಯಾಕ್ ಅನ್ನು ಬಿಟ್ಟ ನಂತರ, ಮುಖವನ್ನು ತೊಳೆಯಿರಿ. ಇದು ನಿಮಗೆ ತ್ವರಿತ ಫಲಿತಾಂಶ ನೀಡುತ್ತದೆ. ಈ ಫೇಸ್ ಪ್ಯಾಕ್ ತ್ವಚೆಯಿಂದ ಟ್ಯಾನಿಂಗ್ ಹೋಗಲಾಡಿಸಲು ತುಂಬಾ ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ಮುಖವು ದಣಿದಿದ್ದರೆ, ಅದು ತಾಜಾ ಮತ್ತು ಹೊಳೆಯುವ ನೋಟ ನೀಡುತ್ತದೆ. ಮುಖ ತೊಳೆದ ನಂತರ, ಚರ್ಮವು ತ್ವರಿತ ಹೊಳಪು ಮತ್ತು ಚರ್ಮದ ಟೋನ್ ಹಗುರವಾಗಿ ಕಾಣುವಂತೆ ಮಾಡುತ್ತದೆ. ಫೇಶಿಯಲ್ ಮುಗಿದ ನಂತರ ಕೊನೆಯ ಹಂತವಾಗಿ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ.
    Published by:renukadariyannavar
    First published: