Eyes Problem: ಕಣ್ಣಿನ ಸಮಸ್ಯೆಗೆ ಯಾವೆಲ್ಲಾ ಕಾಯಿಲೆಗಳು ಕಾರಣ? ಯಾವ ಯೋಗಾಸನಗಳು ದೃಷ್ಟಿ ಸುಧಾರಿಸುತ್ತವೆ?

ಕೆಲವೊಮ್ಮೆ ದಿನವಿಡೀ ಟಿವಿ ಮೊಬೈಲ್ ಕಂಪ್ಯೂಟರ್ ನೋಡುವುದರಿಂದಲೂ ಮತ್ತು ಬದಲಾಗುತ್ತಿರುವ ಹವಾಮಾನದಿಂದಲೂ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣುಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಪರಿಣಾಮವಾಗಿ ಮಳೆಗಾಲದಲ್ಲಿ ದೃಷ್ಟಿಹೀನತೆ ಮತ್ತು ಕಾಂಜಂಕ್ಟಿವಿಟಿಸ್ ಉಂಟಾಗುತ್ತದೆ. ಕೆಟ್ಟ ಜೀವನಶೈಲಿಯು ಕಣ್ಣುಗಳ ಸಮಸ್ಯೆ ಹುಟ್ಟು ಹಾಕುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನುಷ್ಯನ ಕಣ್ಣುಗಳು (Human Eyes) ಆತನ ಒಟ್ಟಾರೆ ಆರೋಗ್ಯದ (Health) ಗುಟ್ಟನ್ನು ಹೇಳುತ್ತವೆ ಎಂದು ಹೇಳಲಾಗುತ್ತದೆ. ನಿಮಗೆ ಆರೋಗ್ಯ ಸಮಸ್ಯೆಯಿಂದ (Problem) ವೈದ್ಯರ ಬಳಿ ಹೋದಾಗ ಮೊದಲು ಕಣ್ಣನ್ನು ಪರೀಕ್ಷಿಸುವುದನ್ನು (Eye Test) ನೀವು ನೋಡಿರಬಹುದು. ಒಬ್ಬ ವ್ಯಕ್ತಿಯು ಎಷ್ಟು ನಿಜ ಅಥವಾ ಸುಳ್ಳು ಹೇಳುತ್ತಾನೆ ಎಂಬ ಸಂಗತಿಯೂ ಆತನ ಕಣ್ಣುಗಳಿಂದ ಗೊತ್ತಾಗುತ್ತದೆ. ಹಾಗಾಗಿ ವ್ಯಕ್ತಿಯ ದೃಷ್ಟಿ ಚೆನ್ನಾಗಿರಬೇಕು  ಎಂದು ಹೇಳುತ್ತಾರೆ. ಆದರೆ ಪ್ರಪಂಚದ ಬಣ್ಣವನ್ನು ತೋರಿಸುವ ನಿಮ್ಮ ಕಣ್ಣುಗಳ ಸಮಸ್ಯೆ ಬಗ್ಗೆ ಯಾವತ್ತೂ ನಿರ್ಲಕ್ಷ್ಯ ಮಾಡಬೇಡಿ. ಅನೇಕ ಕಾಯಿಲೆಯ ಸಂಕೇತಗಳೂ ಕಣ್ಣಿನ ಸಮಸ್ಯೆಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಸಮಸ್ಯೆಗಳಿಂದಾಗಿ ಕಣ್ಣುಗಳು ತೊಂದರೆಗೆ ಒಳಗಾಗುತ್ತವೆ.

    ಕಾಯಿಲೆಗಳು ಮತ್ತು ಕಣ್ಣಿನ ಸಮಸ್ಯೆಗಳು

    ಕೆಲವೊಮ್ಮೆ ದಿನವಿಡೀ ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವುದರಿಂದಲೂ, ಕೆಲವೊಮ್ಮೆ ಬದಲಾಗುತ್ತಿರುವ ಹವಾಮಾನದಿಂದಲೂ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣುಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಪರಿಣಾಮವಾಗಿ ಮಳೆಗಾಲದಲ್ಲಿ ದೃಷ್ಟಿಹೀನತೆ ಮತ್ತು ಕಾಂಜಂಕ್ಟಿವಿಟಿಸ್ ಉಂಟಾಗುತ್ತದೆ.

    ಕೆಟ್ಟ ಜೀವನಶೈಲಿಯು ಕಣ್ಣುಗಳ ಸಮಸ್ಯೆ ಹುಟ್ಟು ಹಾಕುತ್ತದೆ. ಬಿಪಿ, ಶುಗರ್ ಸಮಸ್ಯೆ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯವು ಕಣ್ಣುಗಳಿಗೆ ಅಪಾಯಕಾರಿ ಆಗಿದೆ. ಕಣ್ಣು ಕೆಂಪಾಗುವುದು, ಉರಿ, ನೀರು ಬರುವುದು, ಕಣ್ಣು ಒಣಗುವುದು ಮುಂತಾದ ಸಮಸ್ಯೆಗಳು,

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಕಣ್ಣಿನ ಪೊರೆ ಉಂಟಾಗಲು ಕಾರಣವಾಗುತ್ತವೆ. ಹಾಗಾಗಿ ಇಂದು ನಾವು ಕಣ್ಣುಗಳನ್ನು ಯಾವೆಲ್ಲಾ ಕಾಯಿಲೆಗಳಿಂದ ಹೇಗೆ ಆರೋಗ್ಯವಾಗಿಡಬೇಕು ಎಂದು ತಿಳಿಯೋಣ.

    ಕಣ್ಣಿನ ಸಮಸ್ಯೆಗಳು ಯಾವವು?

    ಕಣ್ಣಿನ ಕಳಪೆ ದೃಷ್ಟಿ

    ಕಣ್ಣಿನಲ್ಲಿ ಶುಷ್ಕತೆ

    ಕಣ್ಣಿನ ಗ್ಲುಕೋಮಾ

    ಕಣ್ಣಿನ ಪೊರೆಗಳು

    ಕೆಂಪು ಕಣ್ಣುಗಳು

    ನೀರಿನ ಕಣ್ಣುಗಳು

    ಕಣ್ಣಿನ ಕೆರಳಿಕೆ

    ಡಯಾಬಿಟಿಕ್ ರೆಟಿನೋಪತಿ

    ಕಂಪ್ಯೂಟರ್ ಪರದೆ ನೋಡುವುದರ ಅಡ್ಡ ಪರಿಣಾಮಗಳು

    ಕಣ್ಣಿನ ಶುಷ್ಕತೆ

    ಕಣ್ಣಿನ ಸುಡುವಿಕೆ ಮತ್ತು ನೋವು

    ಕನ್ನಡಕದ ನಂಬರ್ ಹೆಚ್ಚಳ

    ನೀರಿನ ಕಣ್ಣುಗಳು

    ಕೆಂಪು ಕಣ್ಣುಗಳು

    ಕಣ್ಣುಗಳ ಮೇಲೆ ಬಿಪಿ ಮತ್ತು ಶುಗರ್ ಯಾವ ಪರಿಣಾಮ ಬೀರುತ್ತವೆ?

    ಡಯಾಬಿಟಿಕ್ ರೆಟಿನೋಪತಿ

    ಮಧುಮೇಹ ಮ್ಯಾಕ್ಯುಲರ್ ಎಡಿಮಾ

    ಕಣ್ಣಿನ ಪೊರೆಗಳು

    ಕಣ್ಣಿನ ಗ್ಲುಕೋಮಾ

    ಕಳಪೆ ದೃಷ್ಟಿ

    ತ್ರಾಟಕ ಕ್ರಿಯೆಯಿಂದ ಕಣ್ಣಿಗೆ ಸಿಗುವ ಪ್ರಯೋಜನಗಳು

    ಕಣ್ಣಿನ ರೋಗಗಳು ದೂರವಾಗುತ್ತವೆ

    ದೃಷ್ಟಿ ಸುಧಾರಣೆ

    ಕಣ್ಣಿನ ಕಿರಿಕಿರಿ ಕೊನೆಯಾಗುತ್ತದೆ

    ನೋವು ಕಡಿಮೆಯಾಗುತ್ತದೆ

    ಶುಷ್ಕತೆ ಕಡಿಮೆಯಾಗುತ್ತದೆ

    ಯಾವ ಯೋಗದ ಭಂಗಿ ದೃಷ್ಟಿ ಸುಧಾರಿಸುತ್ತದೆ

    ಹೆಡ್ಸ್ಟ್ಯಾಂಡ್

    ಸರ್ವಾಂಗಾಸನ

    ಹಲಸನ್

    ಮಂಡೂಕಾಸನ

    ಪಶ್ಚಿಮೋತ್ತನಾಸನ

    ಶಶಕಾಸನ

    ಸೂರ್ಯ ನಮಸ್ಕಾರ

    ಜಾಗಿಂಗ್

    ಸೂಕ್ಷ್ಮ ವ್ಯಾಯಾಮ

    ಪಾದದ ಭಂಗಿ

    ಹೆಡ್‌ಸ್ಟ್ಯಾಂಡ್‌ ಪ್ರಯೋಜನಗಳು

    ಆಮ್ಲಜನಕ ಸಂಪೂರ್ಣವಾಗಿ ಮೆದುಳಿಗೆ ತಲುಪುತ್ತದೆ. ಇದರಿಂದ ಮಾನಸಿಕ ಶಾಂತಿ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಹೆಡ್‌ಸ್ಟ್ಯಾಂಡ್ ಮಾಡುವುದರಿಂದ ದೃಷ್ಟಿ ಹೆಚ್ಚುತ್ತದೆ. ಮಕ್ಕಳಿಗೆ ಬಲವಾದ ಕೈಗಳು ಮತ್ತು ಶಕ್ತಿ ಸಿಗುತ್ತದೆ. ಕೂದಲಿಗೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಮಕ್ಕಳ ಮುಖದಲ್ಲಿ ತಾಜಾತನ ಮತ್ತು ಹೊಳಪು ಬರಲು ಇದು ಸಹಾಯ ಮಾಡುತ್ತದೆ.

    ಸರ್ವಾಂಗಾಸನ ಯಾವೆಲ್ಲಾ ಪ್ರಯೋಜನ ನೀಡುತ್ತದೆ?

    ಕಣ್ಣುಗಳ ದೃಷ್ಟಿ ಸುಧಾರಣೆಗೆ ಪ್ರಯೋಜನಕಾರಿ ಆಗಿದೆ. ಐಕ್ಯೂ ಮಟ್ಟ ಹೆಚ್ಚಿಸಲು ಸಹಾಯಕ. ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಮರೆವು ಕಡಿಮೆಯಾಗುತ್ತದೆ. ಮೆದುಳಿನಲ್ಲಿ ಶಕ್ತಿಯ ಹರಿವು ಉತ್ತಮವಾಗುತ್ತದೆ. ಕನ್ನಡಕದಿಂದ ದೂರವಿರಬಹದು. ಥೈರಾಯ್ಡ್ ಗ್ರಂಥಿಯು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತದೆ. ಕೈಗಳು ಮತ್ತು ಭುಜಗಳು ಸ್ಟ್ರಾಂಗ್ ಆಗುತ್ತವೆ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ಅನುಲೋಮ್ ವಿಲೋಮ್ ಮಾಡುವುದರ ಪ್ರಯೋಜನಗಳು

    ಒತ್ತಡ ದೂರವಾಗುತ್ತದೆ. ಉಸಿರಾಟ ಉತ್ತಮವಾಗುತ್ತದೆ ಮತ್ತು ನರಗಳನ್ನು ಬಲಪಡಿಸಿ, ದೇಹದ ರಕ್ತದ ಹರಿವನ್ನು ಸುಧಾರಿಸುತ್ತದೆ. ದೇಹದಿಂದ ವಿಷ ತೆಗೆದು ಹಾಕುತ್ತದೆ. ಅನುಲೋಮ್ ವಿಲೋಮ್ ಪ್ರಾಣಾಯಾಮ ಕ್ಯಾನ್ಸರ್ ಕಡಿಮೆ ಮಾಡುತ್ತದೆ.
    Published by:renukadariyannavar
    First published: