ತೂಕ ಕಡಿಮೆ (Weight Loss) ಮಾಡಿಕೊಳ್ಳಲು ಹಲವಾರು ಮಾರ್ಗಗಳಿವೆ (Methods). ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ (Try) ಪಟ್ಟರೂ ತೂಕ ಕಡಿಮೆ ಆಗುವುದೇ ಇಲ್ಲ. ಹೀಗೆ ತೂಕ ಕಳೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂಬ ಟೆನ್ಶನ್ ನಲ್ಲಿ (Tension) ಜನರು (People) ಮತ್ತಷ್ಟು ತೂಕ ಹೆಚ್ಚು ಮಾಡಿಕೊಂಡಿರುತ್ತಾರೆ. ತೂಕ ಇಳಿಸಲು ಫಿಟ್ನೆಸ್ (Fitness) ಉದ್ಯಮದಲ್ಲಿ ವಿವಿಧ ರೀತಿಯ ಆಹಾರ ಕ್ರಮಗಳನ್ನು ನಾವು ಕಾಣುತ್ತೇವೆ. ಈ ಆಹಾರ ಕ್ರಮ ತೂಕ ಮತ್ತು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಈ ಆಹಾರಗಳಲ್ಲಿ ಹೆಚ್ಚಿನ ಪದಾರ್ಥಗಳು ನಿಮ್ಮಲ್ಲಿರುವ ಕೊಬ್ಬು ಕರಗಿಸಿ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಸಸ್ಯಾಹಾರಿ ಆಹಾರ ಕ್ರಮ ಫಾಲೋ ಮಾಡಿದ್ರೆ ತೂಕ ಇಳಿಕೆ ಗ್ಯಾರಂಟಿ ಅಂತಾರೆ ಸಂಶೋಧಕರು
ಒಮ್ಮೆ ತೂಕ ಕಡಿಮೆ ಆದ ಕೂಡಲೇ ಜನರು ಮತ್ತೆ ತಮ್ಮ ಹಳೆಯ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಮರಳಿ ಬಿಡುತ್ತಾರೆ. ಹೀಗೆ ಮಾಡಿದಾಗ ದೇಹದ ತೂಕವು ಮತ್ತೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇತ್ತೀಚೆಗೆ ನೆದರ್ಲೆಂಡ್ಸ್‌ನ ಸಂಶೋಧಕರು ಸಸ್ಯಾಹಾರಿ ಆಹಾರ ಕ್ರಮವನ್ನು 3 ತಿಂಗಳವರೆಗೆ ಸರಿಯಾಗಿ ಫಾಲೋ ಮಾಡಿದರೆ ಸುಮಾರು 7.25 ಕೆಜಿ ಅಂದರೆ 16 ಪೌಂಡ್ ತೂಕ ಕಡಿಮೆ ಮಾಡಬಹುದು ಎಂದು ಕಂಡು ಹಿಡಿದಿದ್ದಾರೆ.
ತೂಕ ಇಳಿಕೆ ಫಲಿತಾಂಶವು 12 ವಾರಗಳಲ್ಲಿ ಗೋಚರಿಸುತ್ತದೆ
ನೈಪೋಸ್ಟ್ ಪ್ರಕಾರ, ಹೆಚ್ಚು ತೂಕ ಹೊಂದಿದವರು ಕೇವಲ 12 ವಾರ ಸಸ್ಯಾಹಾರಿ ಆಹಾರ ಕ್ರಮ ಫಾಲೋ ಮಾಡಿದ್ರೆ ಅಂತವರ ತೂಕ ಕಡಿಮೆ ಆಗುತ್ತದೆ. ಸಸ್ಯಾಹಾರಿ ಆಹಾರದಲ್ಲಿ ಹಸಿರು ತರಕಾರಿ ಸೇವನೆ ಹೆಚ್ಚು ಮಾಡಬೇಕಾಗುತ್ತದೆ. ಡೈರಿ ಉತ್ಪನ್ನಗಳು, ಪ್ರಾಣಿಯ ಮಾಂಸ ಸೇವನೆಗೆ ಹಾಗೂ ಕೆಲ ಪದಾರ್ಥಗಳ ಸೇವನೆ ಮಾಡಬಾರದಾಗಿದೆ.
ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು
ಈ ಪಥ್ಯವನ್ನು ಅನುಸರಿಸಿದರೆ ತಿಂಡಿ ತಿನ್ನುವ ಮತ್ತು ಮತ್ತೆ ಮತ್ತೆ ತಿನ್ನುವ ಬಯಕೆ ಮತ್ತ ಅಭ್ಯಾಸ ಕಡಿಮೆ ಆಗುತ್ತದೆ. ಇತ್ತೀಚೆಗೆ ಹಾಲಿವುಡ್ ನಟಿ ಮತ್ತು ರೂಪದರ್ಶಿ ಕಿಮ್ ಕಾರ್ಡಶಿಯಾನ್, 1962 ರಲ್ಲಿ ಮೆಟ್ ಗಾಲಾದಲ್ಲಿ ಮರ್ಲೀನ್ ಮನ್ರೋ ಧರಿಸಿದ್ದ ಉಡುಗೆಯಲ್ಲಿ ಪರಿಪೂರ್ಣವಾಗಿ ಕಾಣುತ್ತಿದ್ದರು. ಅದಕ್ಕಾಗಿ ಅವರು 7.25 ಕೆಜಿ ತೂಕ ಇಳಿಸಿಕೊಂಡಿದ್ದರು.
ಸಸ್ಯಾಹಾರಿ ಆಹಾರದಿಂದ ತಾನು ತೂಕ ಕಳೆದುಕೊಂಡಿದ್ದಾಗಿ ಕಿಮ್ ಕಾರ್ಡಶಿಯಾನ್ ಹೇಳಿದ್ದರು. ಅವಳು ಒಳ್ಳೆಯ ಕಾರ್ಬ್ ಆಹಾರ ಸೇವನೆ, ಕೆಟ್ಟ ಕಾರ್ಬ್ ಆಹಾರ ಕಡಿಮೆ ಸೇವನೆ, ದಿನಕ್ಕೆ ಎರಡು ಬಾರಿ ವ್ಯಾಯಾಮ ಮತ್ತು ಸಾಕಷ್ಟು ನಿದ್ದೆ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ.
11 ವೈಜ್ಞಾನಿಕ ಪ್ರಯೋಗ ಪರಿಶೀಲನೆ
ನೆದರ್‌ಲ್ಯಾಂಡ್‌ನ ಮಾಸ್ಟ್ರಿಚ್‌ನಲ್ಲಿನ ಬೊಜ್ಜಿನ ಮೇಲೆ ಯುರೋಪಿಯನ್ ಕಾಂಗ್ರೆಸ್‌ನಲ್ಲಿ ಪ್ರಸ್ತುತಪಡಿಸಿದ ಸಂಶೋಧನೆಗಳ ಪ್ರಕಾರ, ಇತರ ಆಹಾರ ಕ್ರಮಗಳಿಗೆ ಹೋಲಿಸಿದರೆ ಸಸ್ಯಾಹಾರಿ ಆಹಾರವನ್ನು ಸಂಶೋಧಿಸಲು 11 ವೈಜ್ಞಾನಿಕ ಪ್ರಯೋಗ ಪರಿಶೀಲನೆ ಮಾಡಲಾಯ್ತು. ಇದು ಅಧಿಕ ತೂಕ ಮತ್ತು ಟೈಪ್ 2 ಮಧುಮೇಹ ಹೊಂದಿರುವ 800 ವಯಸ್ಕರನ್ನು ಒಳಗೊಂಡಿತ್ತು.
ಸಂಶೋಧನೆಯಲ್ಲಿ ಕಂಡು ಬಂದದ್ದು ಏನು?
ಪಾಶ್ಚಾತ್ಯ ಆಹಾರದ ಬದಲಿಗೆ ಸಸ್ಯಾಹಾರಿ ಆಹಾರ ಕ್ರಮ ಫಾಲೋ ಮಾಡಿದವರು 7.25 ಕೆಜಿ ತೂಕ ಇಳಿಸಿಕೊಂಡಿದ್ದರು. ಇದನ್ನು ಸಂಶೋಧನೆ ಕಂಡು ಹಿಡಿದಿದೆ. ಕ್ರ್ಯಾಶ್ ಡಯಟ್ ಮಾಡಿದವರು ಸುಮಾರು 4.08 ಕೆ.ಜಿ ತೂಕ ಇಳಿಸಿಕೊಂಡಿದ್ದರು. ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.
ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?
ಆದರೆ ಸಸ್ಯಾಹಾರಿ ಆಹಾರ ಕ್ರಮ ಫಾಲೋ ಮಾಡಿದವರು ಆರೋಗ್ಯಕರ ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿದ್ದರು. ಕೋಪನ್ ಹ್ಯಾಗನ್ ಯೂನಿವರ್ಸಿಟಿ ಹಾಸ್ಪಿಟಲ್‌ನ ಮುಖ್ಯಸ್ಥ ಅನ್ನೆ-ಡಿಟ್ಟೆ ಟೆರ್ಮನ್ಸೆನ್ ಪ್ರಕಾರ, ಸಸ್ಯಾಹಾರಿ ಆಹಾರ ತೂಕ ನಷ್ಟಕ್ಕೆ ಕಾರಣವಾಗುವ ಸಾಮರ್ಥ್ಯ ಹೊಂದಿವೆ. ಏಕೆಂದರೆ ಅವುಗಳು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಫೈಬರ್ ಹೊಂದಿವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ