Hair Care: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

ನಯವಾದ ಮತ್ತು ಹೊಳೆಯುವ ಮತ್ತು ದಟ್ಟ ಹಾಗೂ ಶೈನಿ ಕೂದಲು ಹೊಂದಲು ಬಯಸಿದರೆ, ನೀವು ಮಾಡಬೇಕಾದ ಮೊದಲ ಕೆಲಸ ಕೂದಲಿನ ಪೋಷಣೆ. ಜತೆಗೆ ಜಲಸಂಚಯನವೂ ಬೇಕಾಗುತ್ತದೆ. ಕೂದಲಿಗೆ ಪೋಷಣೆ ನೀಡುವುದು ಎಂದರೆ ಕೂದಲು ಕಿರುಚೀಲಗಳಿಗೆ ಆಮ್ಲಜನಕ ಮುಂತಾದ ಪ್ರಮುಖ ಪೋಷಕಾಂಶ ಒದಗಿಸುವುದು ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪರಿಸರ ಮಾಲಿನ್ಯ (Environment Pollution), ರಾಸಾಯನಿಕಯುಕ್ತ ಪದಾರ್ಥಗಳ ಬಳಕೆ, ಆಹಾರ ಸೇವನೆಯಲ್ಲಿ (Food Eating) ಪೋಷಕಾಂಶಗಳ (Nutrients) ಕೊರತೆ ಮತ್ತು ಆರೈಕೆಯ (Care) ಕೊರತೆ ಅಂಶಗಳು ನಿಮ್ಮ ಕೂದಲ ಆರೋಗ್ಯವನ್ನು (Hair Health) ಸಂಪೂರ್ಣವಾಗಿ ಹಾಳು ಮಾಡುತ್ತವೆ. ಇದರ ಪರಿಣಾಮ ನಿಮ್ಮ ಕೂದಲು ಕ್ರಮೇಣ ಅದರ ನೈಸರ್ಗಿಕ ಎಣ್ಣೆ ಮತ್ತು ಹೊಳಪನ್ನು ಕಳೆದುಕೊಳ್ಳಲು ಶುರು ಮಾಡುತ್ತದೆ. ನಿಮ್ಮ ಕೂದಲು ಉದುರಲು ಪ್ರಾರಂಭಿಸಿದರೆ, ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪೌಷ್ಟಿಕಾಂಶದ ಕೊರತೆಯಿಂದ ಕೂದಲು ಉದುರುವ ಕೆಲವು ಸ್ಪಷ್ಟ ಲಕ್ಷಣಗಳು ಗೋಚರಿಸುತ್ತವೆ. ಕೂದಲಿಗೆ ಪೋಷಣೆ ಏಕೆ ಬೇಕು ಎಂಬುದನ್ನು ಮೊದಲು ತಿಳಿಯುವುದು ಮುಖ್ಯ. ಕೂದಲಿನ ಪೋಷಣೆ ಅಥವಾ ಜಲಸಂಚಯನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.

  ಕೂದಲಿನ ಪೋಷಣೆ

  ನೀವು ನಯವಾದ ಮತ್ತು ಹೊಳೆಯುವ ಮತ್ತು ದಟ್ಟ ಹಾಗೂ ಶೈನಿ ಕೂದಲು ಹೊಂದಲು ಬಯಸಿದರೆ, ನೀವು ಮಾಡಬೇಕಾದ ಮೊದಲ ಕೆಲಸ ಕೂದಲಿನ ಪೋಷಣೆ. ಜತೆಗೆ ಜಲಸಂಚಯನವೂ ಬೇಕಾಗುತ್ತದೆ. ಕೂದಲಿಗೆ ಪೋಷಣೆ ನೀಡುವುದು ಎಂದರೆ ಕೂದಲು ಕಿರುಚೀಲಗಳಿಗೆ ಜೀವಸತ್ವ, ಖನಿಜ, ಪ್ರೋಟೀನ್, ಆಮ್ಲಜನಕ ಮುಂತಾದ ಪ್ರಮುಖ ಪೋಷಕಾಂಶ ಒದಗಿಸುವುದು ಆಗಿದೆ.

  ಕೂದಲ ತೇವಾಂಶ ಮತ್ತು ಆರೈಕೆ

  ಕೂದಲಿಗೆ ತೇವಾಂಶ ಅಥವಾ ಆರೈಕೆಯ ಅಗತ್ಯವಿದೆ. ಹೆಲ್ತ್ ಶಾಟ್ಸ್ ಸೌಂದರ್ಯದ ಚಿಕಿತ್ಸಾಲಯದಲ್ಲಿ ಚರ್ಮದ ತಜ್ಞರಾದ ಹಾಗೂ ಕಾಸ್ಮೆಟಿಕ್ ಸ್ಕಿನ್ ಎಕ್ಸ್ಪರ್ಟ್ ಮತ್ತು ಡರ್ಮಟೊ ಸರ್ಜನ್ ಡಾ. ರಿಂಕಿ ಕಪೂರ್ ಹೇಳುವ ಪ್ರಕಾರ, ನಾವು ನಮ್ಮ ಕೂದಲನ್ನು ಪ್ರೀತಿಸುತ್ತೇವೆ ಮತ್ತು ಅದನ್ನು ಪೋಷಿಸಲು ಮತ್ತು ರಕ್ಷಿಸಲು ಎಲ್ಲಾ ರೀತಿಯ ಕೆಲಸ ಮಾಡುತ್ತೇವೆ.

  ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

  ಕೂದಲಿಗೆ ಹಲವು ಉತ್ಪನ್ನಗಳು ಮತ್ತು ತಂತ್ರಗಳಿವೆ, ಅವುಗಳ ಬಳಕೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲು ಉದುರುವುದು ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿಮ್ಮ ಕೂದಲು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದೆ ಎಂದು ಕಂಡು ಹಿಡಿಯುವ ಐದು ಸಂಕೇತಗಳು ಹೀಗಿವೆ..

  ಕೂದಲು ಒಡೆಯುವಿಕೆ ಅಥವಾ ಉದುರುವಿಕೆ

  ಕೂದಲಿನ ಕಳಪೆ ಆರೋಗ್ಯದಿಂದ ಕೂದಲು ಉದರುವುದು ಮತ್ತು ತುದಿ ಸೀಳುವಿಕೆ ಉಂಟಾಗುತ್ತದೆ. ಅತಿಯಾದ ಸ್ಟೈಲಿಂಗ್, ಬ್ಲೋ ಡ್ರೈಯಿಂಗ್, ಕರ್ಲಿಂಗ್ ರಾಡ್ಗಳು ಮತ್ತು ಕಳಪೆ ಪೋಷಣೆ ಕೂದಲನ್ನು ದುರ್ಬಲ ಮಾಡುತ್ತದೆ.

  ಕೂದಲು ಒಡೆಯಲು ಮತ್ತು ಬೀಳಲು ಇದು ಕೆಲಸ ಮಾಡುತ್ತದೆ. ಸಣ್ಣ ಪ್ರಮಾಣದಲ್ಲಿ ಕೂದಲು ಉದುರುವುದು ಸಹಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುವುದು ಆತಂಕಕ್ಕೆ ಕಾರಣ.

  ಒಣ ಮತ್ತು ಮಂದ ಕೂದಲು

  ನಿಮ್ಮ ಕೂದಲಿನೊಳಗೆ ಬೆರಳು ಹಾಕಿ ಲಘುವಾಗಿ ಮಸಾಜ್ ಮಾಡಿ. ಆದರೆ ಕೂದಲು ಒಣಗಿ ನಿರ್ಜೀವ ಅನಿಸಿದರೆ ಅದನ್ನು ಮಾಡುವುದು ಕೂದಲಿಗೆ ಒಳ್ಳೆಯದಲ್ಲ. ಪ್ರೋಟೀನ್ ಕೊರತೆಯಿಂದಲೂ ಇದು ಸಂಭವಿಸುತ್ತದೆ.

  ಶುಷ್ಕತೆಯಿಂದ ಕೂದಲು ಸಿಕ್ಕಾಗುವುದು

  ಇದು ಕೂದಲು ಉದುರುವಿಕೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ನಿಯಮಿತ ಬಾಚಣಿಗೆ ನಂತರ ಕೂದಲು ಮತ್ತೆ ಮತ್ತೆ ಸಿಕ್ಕಾಗುತ್ತದೆ. ಇದರಿಂದ ನಿಮ್ಮ ಕೂದಲು ಒಣಗಿದೆ ಎಂದು ಅರ್ಥ. ಒಣ ಕೂದಲಿನ ಹೊರಪೊರೆಗಳು ತೆರೆದುಕೊಳ್ಳುತ್ತವೆ. ಮತ್ತು ಕೂದಲು ಒಂದಕ್ಕೊಂದು ಜಟಿಲಗೊಳ್ಳುತ್ತವೆ. ರಾಸಾಯನಿಕ ಉತ್ಪನ್ನಗಳ ಬಳಕೆ ಇದಕ್ಕೆ ಕಾರಣ.

  ಒಡೆದ ಕೂದಲು

  ಒಡೆದ ತುದಿಗಳು ಕೂದಲ ಆರೈಕೆ ಕೆಟ್ಟಿದೆ ಎಂದರ್ಥ. ಆದರೆ ಚಿಕಿತ್ಸೆ ನೀಡಲು ಕಷ್ಟ. ಹೇರ್ ಕಟ್ ಮಾಡಿದರೂ ಕೂದಲು ಒಡೆಯುತ್ತಿದ್ದರೆ, ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಿ.

  ಸುಕ್ಕುಗಟ್ಟಿದ ಕೂದಲು

  ಕಂಡೀಶನಿಂಗ್, ವಾಲ್ಯೂಮಿಂಗ್, ಆ್ಯಂಟಿ ಫ್ರಿಜ್ ಉತ್ಪನ್ನಗಳು ಕೂದಲಿಗೆ ಪ್ರಯೋಜನ ನೀಡಲ್ಲ. ಪರಿಸರದಲ್ಲಿ ತೇವಾಂಶದ ಕೊರತೆ ಮತ್ತು ಕೂದಲಿನಲ್ಲಿ ತೇವಾಂಶದ ಕೊರತೆ ಕೂದಲು ಒಣಗಿ ನಿರ್ಜೀವವಾಗುತ್ತದೆ.

  ಕೂದಲು ಉದುರಲು ಹಲವು ಕಾರಣಗಳಿವೆ. ಒತ್ತಡ, ಜೆನೆಟಿಕ್ಸ್, ಹಾರ್ಮೋನ್ ಬದಲಾವಣೆ, ಪೌಷ್ಟಿಕಾಂಶ ಕೊರತೆ, ರೋಗ, ಮಧುಮೇಹ, ಮಾಲಿನ್ಯ, ದೈನಂದಿನ ಒಡೆಯುವಿಕೆ, ಆಗಾಗ್ಗೆ ಕೂದಲು ತೊಳೆಯುವುದು ಮುಂತಾದ ಕಾರಣಗಳಿಂದ ಕೆಡುತ್ತದೆ.

  ಕೂದಲು ಉದುರುವುದನ್ನು ತಡೆಯುವ ಪರಿಹಾರ

  ವಾರಕ್ಕೊಮ್ಮೆ ಮೊಟ್ಟೆಯ ಹೇರ್ ಮಾಸ್ಕ್ ಅನ್ವಯಿಸಿ

  ಕೂದಲನ್ನು ಆಗಾಗ್ಗೆ ತೊಳೆಯಬೇಡಿ.

  ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

  ಒಣ ಮತ್ತು ಸುಕ್ಕುಗಟ್ಟಿದ ಕೂದಲಿಗೆ ಬ್ಲೋ ಡ್ರೈಯರ್ ಬಳಕೆ ತಪ್ಪಿಸಿ.

  ಕೂದಲು ತೊಳೆಯಲು ಉಗುರು ಬೆಚ್ಚಗಿನ ನೀರು ಬಳಸಿ.

  ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ.
  Published by:renukadariyannavar
  First published: